Saturday, 14th December 2024

ಸ್ಪೆಷಲ್‌ ಹಾಡಿಗೆ ಹೆಜ್ಜೆ ಹಾಕಿದ ಸಿಂಧೂ

ಈ ಹಿಂದೆ ಒನ್ ಲವ್ ಟೂ ಸ್ಟೋರಿ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಿತರಾದ ನಿರ್ದೇಶಕ ವಸಿಷ್ಠ ಬಂಟನೂರು ನಿರ್ದೇಶನದಲ್ಲಿ ೧೯೭೫ ಚಿತ್ರ ತಯಾರಾಗಿದೆ.

ಕ್ರೈಮ್ ಥ್ರಿಲ್ಲರ್ ಕಥೆಯ ಈ ಸಿನಿಮಾದಲ್ಲಿ ಚಕ್ರವರ್ತಿ ಚಂದ್ರಚೂಡ್, ಜಯ್ ಶೆಟ್ಟಿ, ಮಾನಸಾ, ವೆಂಕಟೇಶ್ ಪ್ರಸಾದ್ ಸೇರಿದಂತೆ ಹಲವರು ನಟಿಸಿದ್ದಾರೆ. ೧೯೭೫ ಸಿನಿಮಾದಲ್ಲಿ ಮೆಲೋಡಿ ಪಬ್ ಸಾಂಗ್ ಇದ್ದು ಈ ಹಾಡಿನಲ್ಲಿ ಸಿಂಧೂ ಲೋಕನಾಥ್ ಭರ್ಜರಿಯಾಗಿ ಸ್ಟೆಪ್ ಹಾಕಿದ್ದಾರೆ. ಇತ್ತೀಚೆಗಷ್ಟೇ ಬೆಂಗಳೂರಿ ನಲ್ಲಿ ಈ ಹಾಡಿನ ಚಿತ್ರೀಕರಣ ನಡೆದಿದೆ.

ನನ್ನ ಸಿನಿಮಾ ಜರ್ನಿಯಲ್ಲಿ ಈ ರೀತಿ ಸ್ಪೆಷಲ್ ಸಾಂಗ್ ಗೆ ಹೆಜ್ಜೆ ಹಾಕಿರುವುದು ಇದೇ ಮೊದಲು. ಹಾಡು ತುಂಬಾ ಚೆನ್ನಾಗಿದೆ. ಈ ಸಾಂಗ್ ಪ್ರತಿಯೊಬ್ಬರಿಗೂ ಇಷ್ಟವಾಗುತ್ತದೆ ಎಂದು ಸಿಂಧೂ ಲೋಕನಾಥ್ ಹೇಳಿದ್ದಾರೆ. ಈ ಚಿತ್ರದಲ್ಲಿ ನನಗೆ ಒಳ್ಳೆಯ ಪಾತ್ರವೇ ಸಿಕ್ಕಿದೆ.

ಸಿನಿಮಾದಲ್ಲಿ ಸಮಾಜಕ್ಕೆ ಒಳ್ಳೆಯ ಸಂದೇಶವೂ ಇದೆ ಎಂದು ಚಕ್ರವರ್ತಿ ಚಂದ್ರಚೂಡ್ ಹೇಳಿದರು. ಸಿಲ್ವರ್ ಸ್ಕ್ರೀನ್ ಫಿಲ್ಮಂ ಫ್ಯಾಕ್ಟರಿ ಬ್ಯಾನರ್ ನಲ್ಲಿ ದಿನೇಶ್ ರಾಜನ್ ಈ ಸಿನಿಮಾಗೆ ಬಂಡ ವಾಳ ಹೂಡಿದ್ದಾರೆ.

ಬೆಂಗಳೂರು,ಉಡುಪಿಯ ಕರಾವಳಿ ತೀರ ಪ್ರದೇಶದಲ್ಲಿ ಚಿತ್ರದ ಚಿತ್ರೀಕರಣ ನಡೆದಿದೆ. ಈಗಾಗಲೇ ಶೂಟಿಂಗ್ ಮುಗಿಸಿ ಕುಂಬಳ ಕಾಯಿ ಒಡೆದಿರುವ ಚಿತ್ರತಂಡ ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ೧೯೭೫ ಇನ್ನೇನು ಸೆನ್ಸಾರ್ ಅಂಗಳಕ್ಕೆ ಹೊಗಲಿದೆ.