Wednesday, 11th December 2024

ಸೂಪರ್‌ ನ್ಯಾಚುರಲ್‌ ಪವರ್‌ ಪಡೆದ ಆನ

ಪ್ರಶಾಂತ್‌ ಟಿ.ಆರ್‌.

ಗ್ಲಾಮರ್ ಬೆಡಗಿ ಅದಿತಿ ಪ್ರಭುದೇವ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈಗ ಸೂಪರ್ ನ್ಯಾಚುರಲ್ ಪವರ್ ವುಮೆನ್ ಆಗಿ ತೆರೆಗೆ ಬರಲು ಸಿದ್ಧವಾಗಿದ್ದಾರೆ. ಹೌದು, ಆನ ಚಿತ್ರದ ಮೂಲಕ ಅದಿತಿ ಹೊಸ ಅವತಾರದಲ್ಲಿ ಮಿಂಚಲು ರೆಡಿಯಾಗಿ ದ್ದಾರೆ. ಹಿಂದೆಂದೂ ಕಂಡಿರದ ಪಾತ್ರದಲ್ಲಿ ಅದಿತಿ ಕಾಣಿಸಿಕೊಳ್ಳಲಿದ್ದಾರೆ. ಮನೋಜ್.ಪಿ. ನಡಲುಮನೆ ಈ ಚಿತ್ರವನ್ನು ನಿರ್ದೇಶಿಸಿ ತೆರೆಗೆ ತರುತ್ತಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ಆನ, ಡಿಸೆಂಬರ್ 17 ರಂದು ತೆರೆಗೆ ಬರಲಿದೆ. ಆನ ಚಿತ್ರದ ಶಿರ್ಷಿಕೆ ವಿಭಿನ್ನವಾಗಿದೆ. ಚಿತ್ರದ ಕಥೆಯೂ ಅಷ್ಟೇ ವಿಭಿನ್ನವಾಗಿ ಮೂಡಿ ಬಂದಿದೆ. ಅಷ್ಟಕ್ಕೂ ಏನಿದು ಆನ ಎಂಬುದರ ಬಗ್ಗೆ ನಿರ್ದೇಶಕ ಮನೋಜ್ ವಿ.ಸಿನಿಮಾಸ್‌ನೊಂದಿಗೆ ಮಾತನಾಡಿ ದ್ದಾರೆ.

ವಿ.ಸಿ: ಆನ ಶೀರ್ಷಿಕೆಯೇ ವಿಭಿನ್ನವಾಗಿದೆಯಲ್ಲ, ಇದು ಹಾರರ್ ಕಥೆಯೇ ?
ಮನೋಜ್: ಹೌದು, ಅಂದುಕೊಂಡಂತೆ ಇದು ಹಾರರ್ ಕಥೆಯ ಚಿತ್ರವೇ. ಕ್ಯಾಚಿ ಇರಲಿ ಎಂದು ಆನ ಎಂಬ ಶೀರ್ಷಿಕೆಯನ್ನು ಇಟ್ಟಿದ್ದೇವೆ. ಚಿತ್ರದ ನಾಯಕಿಯ ಹೆಸರು ಅನರ್ಘ್ಯ ಎಂದು, ಮನೆಯಲ್ಲಿ ಎಲ್ಲರೂ ಆಕೆಯನ್ನು ಪ್ರೀತಿಯಿಂದ ಆನ ಎಂದು ಕರೆಯುತ್ತಾರೆ. ಆನ ಹಾರರ್ ಸಿನಿಮಾ ಎಂಬುದು ಈಗಾಗಲೇ ಟೀಸರ್ ನಿಂದ ಖಚಿತವಾಗಿದೆ. ಸಾಮಾನ್ಯ ಮಹಿಳೆಯೊಬ್ಬಳು ಹೇಗೆ ಸೂಪರ್ ನ್ಯಾಚು ರಲ್ ಪವರ್ ಪಡೆಯುತ್ತಾಳೆ. ಅದರ ಹಿಂದಿನ ವೃತ್ತಾಂತವೇನು ಎಂಬುದೇ ಚಿತ್ರದ ಸಸ್ಪೆನ್ಸ್.

ವಿ.ಸಿ: ಈ ಹಿಂದೆ ಹಲವು ಹಾರರ್ ಕಥೆಯ ಸಿನಿಮಾಗಳು ಬಂದಿವೆ. ಈ ಚಿತ್ರದಲ್ಲಿ ಯಾವ ವಿಶೇಷತೆ ಕಾಣಬಹುದು?
ಮನೋಜ್: ಆನ , ಈ ಹಿಂದಿನ ಸಿನಿಮಾಗಳಿಗಿಂತ ವಿಭಿನ್ನವಾಗಿ ಮೂಡಿಬಂದಿದೆ. ಇಲ್ಲಿ ಹಾರರ್ ಜತೆಗೆ ಸೂಪರ್ ನ್ಯಾಚುರಲ್
ಕಥೆಯೂ ಇದೆ. ಅದು ಒಬ್ಬ ಮಹಿಳೆ ಸೂಪರ್ ನ್ಯಾಚುರಲ್ ಪವರ್ ಪಡೆದು ಹೇಗೆ ಅನ್ಯಾಯದ ವಿರುದ್ಧ ಹೋರಾಡುತ್ತಾಳೆ ಎಂಬ ಕಥೆ ಚಿತ್ರದಲ್ಲಿದೆ. ಹಾರರ್ ಕಥೆಗೆ ತಕ್ಕಂತೆ ಹಿನ್ನೆಲೆ ಸಂಗೀತವಿದ್ದು. ತೆರೆಯಲ್ಲಿ ಸಿನಿಮಾ ನೋಡುತ್ತಿದ್ದರೆ ಹೊಸ ಅನುಭವ ನೀಡು ತ್ತದೆ. ಪ್ರತಿ ಸನ್ನಿವೇಶವೂ ಕೂಡ ಕುತೂಹಲ ಮೂಡಿಸುತ್ತಾ ಸಾಗುತ್ತದೆ. ಈ ಹಿಂದೆ ಗ್ಲಾಮರ್ ಲುಕ್‌ನಲ್ಲಿ ಕಂಗೊಳಿಸಿದ್ದ ಅದಿತಿ, ಈ ಚಿತ್ರದಲ್ಲಿ ತಮ್ಮ ಪಾತ್ರಕ್ಕೆ ಜೀವತುಂಬಿ ಅಭಿನಯಿಸಿದ್ದಾರೆ. ಹೊಸ ಲುಕ್‌ನಲ್ಲಿ ಕಂಗೊ ಳಿಸಿದ್ದಾರೆ. ಹಾಲಿವುಡ್ ಮಾದರಿಯಲ್ಲಿ ಚಿತ್ರ ಮೂಡಿಬಂದಿದೆ.

ವಿ.ಸಿ : ಚಿತ್ರದ ಕಥೆ ಹುಟ್ಟಿದ್ದು ಹೇಗೆ ?
ಮನೋಜ್: ನನಗೆ ಸಿನಿಮಾ ಎಂದರೆ ಬಲು ಪ್ರೀತಿ. ಪ್ರತಿ ವಾರ ತಪ್ಪದೇ ಸಿನಿಮಾ ಗಳನ್ನು ನೋಡುತ್ತೇನೆ. ಇತ್ತೀಚೆಗೆ ಕ್ರೈಂ, ಥ್ರಿಲ್ಲರ್ ಸಿನಿಮಾಗಳೇ ಹೆಚ್ಚಾಗಿ ತೆರೆಗೆ ಬರುತ್ತಿವೆ. ಹಾಗಾಗಿ ಪ್ರೇಕ್ಷಕರಿಗೆ ಹೊಸ ಕಥೆಯ ಮೂಲಕ ಹೊಸತನ ಕಟ್ಟಿಕೊಡಬೇಕು ಎನ್ನಿಸಿತು. ಆ ನಿಟ್ಟಿನಲ್ಲಿ ಯೋಚಿಸುತ್ತಿರುವಾಗ ಈ ಕಥೆ ಹೊಳೆಯಿತು. ಹಾರರ್ ಜತೆಗೆ ಸೂಪರ್ ನ್ಯಾಚುರಲ್ ಪವರ್ ಕಥೆಯನ್ನು ಸೇರಿಸಿ ಕಥೆ ಹೆಣೆದೆ. ಚಿತ್ರವೂ ಸೆಟ್ಟೇರಿತು. ಬೆಂಗಳೂರಿನ ಸುತ್ತಮುತ್ತ ಚಿತ್ರೀಕರಣ ನಡೆಸಿದೆವು. ಅಂದುಕೊಂಡಂತೆ ಚಿತ್ರವೂ ಮೂಡಿಬಂದಿದೆ, ಇನ್ನೇನು ಆನ ತೆರೆಗೂ ಬರಲಿದೆ.

ವಿ.ಸಿ : ಚಿತ್ರದ ಬಗ್ಗೆ ನಿರೀಕ್ಷೆ ಹೇಗಿದೆ?
ಮನೋಜ್: ಇದು ನನ್ನ ಮೊದಲ ಚಿತ್ರ. ಸಹಜವಾಗಿಯೇ ಚಿತ್ರದ ಬಗ್ಗೆ ಅಪಾರ ನಿರೀಕ್ಷೆಯಿದೆ. ಚಿತ್ರದಲ್ಲಿ ಹೊಸತನವಿದೆ. ಕಮರ್ಷಿಯಲ್ ಅಂಶಗಳಿಗೆ ಹಾರರ್ ಟಚ್ ನೀಡಲಾಗಿದೆ. ಸಿನಿಪ್ರಿಯರು ಬಯಸುವ ಎಲ್ಲಾ ಅಂಶಗಳು ಚಿತ್ರದಲ್ಲಿವೆ ಹಾಗಾಗಿ ಈ ಚಿತ್ರ ಖಂಡಿತವಾಗಿ ಮೆಚ್ಚುಗೆಯಾಗುತ್ತದೆ ಎಂಬ ನಂಬಿಕೆ ನನಗಿದೆ. ಈ ಚಿತ್ರದ ಬಳಿಕ ಇದೇ ರೀತಿಯ ಸರಣಿ ಕಥೆಯನ್ನು ತೆರೆಗೆ ತರಬೇಕು ಎಂಬ ಯೋಜನೆ ಇದೆ.