Wednesday, 11th December 2024

ನಗು ಉಕ್ಕಿಸುವ ತೋತಾಪುರಿ

ನವರಸ ನಾಯಕ ಜಗ್ಗೇಶ್ ಹಾಗೂ ನಿರ್ದೇಶಕ ವಿಜಯ್  ಪ್ರಸಾದ್ ಮತ್ತೆ ಒಂದಾಗಿದ್ದು, ಇವರಿಬ್ಬರ ಕಾಂಬಿನೇಷನ್ ನಲ್ಲಿ ತೋತಾಪುರಿ ಸಿನಿಮಾ ಮೂಡಿಬರುತ್ತಿದೆ. ಚಿತ್ರದ ಟೈಟಲ್ ಕೇಳಲು ಹಿತವಾ ಗಿದೆ. ಅಂತೆಯೇ ಟ್ರೇಲರ್‌ನಲ್ಲಿ ನಗು ಉಕ್ಕಿಸುವ ಪಂಚಿಂಗ್ ಡೈಲಾಗ್‌ಗಳೂ ಇವೆ. ಸದ್ಯ ಚಿತ್ರದ ಟ್ರೇಲರ್ ರಿಲಿಸ್ ಆಗಿದ್ದು, ಕಿಚ್ಚ ಸುದೀಪ್ ತೋತಾಪುರಿಯ ಟ್ರೇಲರ್ ರಿಲೀಸ್ ಮಾಡಿ ಶುಭ ಕೋರಿ ದರು.

ಡಬ್ಬಲ್ ಮೀನಿಂಗ್ ಡೈಲಾಗ್ ಗಳು ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತವೆ. ಜಗ್ಗೇಶ್ ಸಿನಿಮಾ ಎಂದ ಮೇಲೆ ಪ್ರೇಕ್ಷಕರು ಏನೆಲ್ಲಾ ಬಯಸುತ್ತಾರೋ ಅದೆಲ್ಲವೂ ತೋತಾಪುರಿ ಚಿತ್ರದಲ್ಲಿದೆ. ಟ್ರೇಲರ್ ನೋಡುತ್ತಿದ್ದರೆ, ಇದು ಪಕ್ಕಾ ಕಾಮಿಡಿ ಸಿನಿಮಾ ಅನ್ನುವುದು ಖಚಿತವಾಗುತ್ತದೆ. ಹಾಗಂತ ತೋತಾಪುರಿ ಹಾಸ್ಯಕ್ಕೆ ಸೀಮಿತವಾಗಿಲ್ಲ. ಇಲ್ಲಿ ಸರ್ವ ಧರ್ಮ ಸಮನ್ವಯ ಸಾರುವ ಕಥೆಯೂ ಇದೆ. ಒಳ್ಳೆಯ ಸಾಮಾಜಿಕ ಸಂದೇಶವೂ ಚಿತ್ರದಲ್ಲಿ ಅಡಕವಾಗಿದೆ.

ಜಗ್ಗಣ್ಣನಿಗೆ ಜತೆಯಾಗಿ ಅದಿತಿ ಪ್ರಭುದೇವ ನಟಿಸಿದ್ದು, ಮುಸಲ್ಮಾನ ಹುಡುಗಿಯಾಗಿ ಕಾಣಿಸಿ ಕೊಂಡಿದ್ದಾರೆ. ಡಾಲಿ ಧನಂಜಯ ವಿಭಿನ್ನ ಪಾತ್ರದಲ್ಲಿ ಬಣ್ಣಹಚ್ಚಿದ್ದಾರೆ. ಸುಮನ್ ರಂಗನಾಥ್ ಕೂಡ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಉಳಿದಂತೆ ವೀಣಾ ಸುಂದರ್, ದತ್ತಣ್ಣ, ಹೇಮಾದತ್ ಮತ್ತಿತರರು ಚಿತ್ರದ ತಾರಾಬಳಗದಲ್ಲಿದ್ದಾರೆ. ಮೋನಿ ಫ್ಲಿಕ್ಸ್ ಬ್ಯಾನರ್‌ನಲ್ಲಿ ಕೆ.ಎ.ಸುರೇಶ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.