Friday, 13th December 2024

ಹಸಿರು ಸಿರಿಯನು ಹೊದ್ದ ಬರೇಕಲ್‌ ಫಾರ್ಮ್‌ ಸ್ಟೇ

ಶಶಿಧರ ಹಾಲಾಡಿ

ಸುತ್ತಲೂ ಹಸಿರಿನಿಂದ ತುಂಬಿದ ಬೆಟ್ಟಗುಡ್ಡಗಳು, ಅನತಿ ದೂರದಲ್ಲಿ ಶರಾವತಿ ಹಿನ್ನೀರಿನ ಜಲರಾಶಿ, ಅಲ್ಲಿ ದೋಣಿ ಯಾನ ಮಾಡುವ ಅವಕಾಶ, ಸುತ್ತಲಿನ ಬೆಟ್ಟಗುಡ್ಡಗಳಲ್ಲಿ ಚಾರಣ ಮಾಡುವ ಅವಕಾಶ, ಮಲೆನಾಡಿನ ತಿಂಡಿ, ತಿನಿಸು, ಊಟ – ಇವೆಲ್ಲವನ್ನೂ ಸವಿಯಬೇಕೆನಿಸಿದವರು ಇಲ್ಲಿ ತಂಗಬಹುದು.

ಪ್ರಕೃತಿಯ ಮಡಿಲಲ್ಲಿ, ಬೆಟ್ಟ ಗುಡ್ಡಗಳ ನಡುವೆ, ಹಸಿರು ಮರಗಳ ನಡುವೆ ಇರುವ ತೋಟದ ಮನೆಯಲ್ಲಿ ರಜಾ ಕಳೆಯುವ ಆಸೆ ಇದೆಯೆ? ಕಾಡಿನಿಂದ ತುಂಬಿರುವ ಪರ್ವತಗಳನ್ನು ನೋಡುತ್ತಾ, ಶರಾವತಿ ಹಿನ್ನೀರಿನ ಮೇಲೆ ಬೀಸಿ ಬರುವ ತಂಗಾಳಿಗೆ ಮೈಒಡ್ಡಿ, ಬಿಸಿ ಬಿಸಿ ಕಾಫಿ ಕುಡಿಯುತ್ತಾ ಸೂರ್ಯೋದಯವನ್ನು ವೀಕ್ಷಿಸುವ ಬಯಕೆ ಇದೆಯೆ? ತೊರೆಯಿಂದ ಹರಿದು ಬರುವ ಶುದ್ಧ ನೀರನ್ನು ಸೇವಿಸಿ, ಬೆಳದಿಂಗಳಿನಲ್ಲಿ ಕ್ಯಾಂಪ್ ಫೈರ್ ಮಾಡಿ, ಕುಟುಂಬದೊಂದಿಗೆ, ಸಹೃದಯರೊಂದಿಗೆ ರಾತ್ರಿ ಕಳೆಯುವ ತುಡಿತ
ಇದೆಯೆ? ಪರಿಸರದಲ್ಲಿ ರಜಾದಿನಗಳನ್ನು ಕಳೆಯಲು ಉತ್ತಮ ತಾಣಗಳಲ್ಲಿ ಒಂದೆಂದರೆ ಬರೇಕಲ್ ಫಾರ್ಮ್ ಸ್ಟೇ.

ಮಲೆನಾಡಿನ ಹೊಸನಗರ ಪಟ್ಟಣದಿಂದ ಸುಮಾರು 9 ಕಿಮೀ ದೂರದಲ್ಲಿರುವ, ಮುಖ್ಯ ರಸ್ತೆಯ ಮಾಲಿನ್ಯದಿಂದ ತಪ್ಪಿಸಿ ಕೊಂಡು, ತೋಟದ ಮಧ್ಯೆ, ಕಾಡಿನ  ಸೆರಗಿನಲ್ಲಿರುವ ಬರೇಕಲ್ ಫಾರ್ಮ್ ಸ್ಟೇಯಲ್ಲಿ ಕಾಲ ಕಳೆಯುವುದೆಂದರೆ, ಮನಸಿನ ಜಂಜಡಗಳಿಂದ ದೂರಾಗಿ, ಹಸಿರನ್ನೇ ಕಣ್ಣಲ್ಲಿ ತುಂಬಿಕೊಳ್ಳುತ್ತಾ, ಉಲ್ಲಾಸದ ದಿನಗಳನ್ನು ಕಳೆಯುವುದೆಂದೇ ಅರ್ಥ.

ವಿಶಾಲವಾದ ಕೊಠಡಿಗಳು, ಸ್ಥಳೀಯ ಬಾಣಸಿಗರು ತಯಾರಿಸಿದ ರುಚಿಕರ ಆಹಾರ, ಕ್ಯಾಂಪ್ ಫೈರ್ ಮಾಡಲು ಹೊರಾಂಗಣದಲ್ಲಿ ವಿಶಾಲವಾದ ಬಯಲು ಇವೆಲ್ಲವುಗಳಿಂದ ಕೂಡಿರುವ ಈ ಫಾರ್ಮ್ ಸ್ಟೇ, ಕುಟುಂಬದೊಂದಿಗೆ ಕಾಲ ಕಳೆಯಲು ಹೇಳಿ ಮಾಡಿಸಿದ ತಾಣ. ಜತೆಗೆ, ಈ ಫಾರ್ಮ್‌ಸ್ಟೇಯನ್ನು ವ್ಯವಸ್ಥಿತ ವಾಗಿ ಸಜ್ಜುಗೊಳಿಸಿರುವ ವಿಕ್ರಮ ಉಡುಪ ಅವರ ಅಭಿಲಾಷೆ ಎಂದರೆ, ಹೆಚ್ಚು ಹೆಚ್ಚು ಕುಟುಂಬಗಳು ಇಲ್ಲಿ ಬಂದು ತಂಗಬೇಕು ಎಂದು. ಈ ಜಾಗದ ಸುತ್ತಲೂ ಮರಗಿಡಗಳು, ಹಸಿರು ಹಾಸಿದ ನೆಲ, ಕಾಡಿನಿಂದ ತುಂಬಿದ ಬೆಟ್ಟ ಗುಡ್ಡಗಳು ಇರುವುದರಿಂದಾಗಿ, ಇಲ್ಲಿಂದ ಎತ್ತ ಕಣ್ಣು ಹಾಯಿಸಿದರೂ, ಹಸಿರಿನ ಸಿರಿಯೇ ಕಾಣಸಿಗುವುದು ವಿಶೇಷ.

ಹಸಿರಿನ ಬೆಟ್ಟಗಳಲ್ಲಿ ಚಾರಣ 
ಬರೇಕಲ್ ಫಾರ್ಮ್‌ಸ್ಟೇಯಲ್ಲಿ ತಂಗಿದವರಿಗೆ ವಿವಿಧ ರೀತಿಯ ಚಾರಣ, ದೋಣಿವಿಹಾರ, ಸ್ಥಳೀಯ ಪ್ರೇಕ್ಷಣೀಯ ಸ್ಥಳಗಳ ದರ್ಶನ
ಎಲ್ಲವನ್ನು ಒದಗಿಸಲು ಅವಕಾಶ ಮಾಡಿಕೊಟ್ಟಿರುವುದು ವಿಶೇಷ. ಹತ್ತಿರದ ಬರೇಕಲ್ ಬೆಟ್ಟ ಮತ್ತು ಇತರ ಬೆಟ್ಟಗಳಿಗೆ ಚಾರಣ ಮಾಡಲು ಇಲ್ಲಿ ತಂಗಿದ ಅತಿಥಿಗಳು ಅಭೀಲಾಷೆ ಪಟ್ಟರೆ, ಉತ್ತಮ ಮಾರ್ಗದರ್ಶಿ ದೊರೆಯುವುದು ಮತೊಂದು ವಿಶೇಷ.

ಫಾರ್ಮ್‌ಸ್ಟೇಯನ್ನು ಸಜ್ಜುಗೊಳಿಸಿರುವ ವಿಕ್ರಮ್ ಉಡುಪ ಅವರೇ ಹಲವು ಬಾರಿ ಚಾರಣದ ಗುರುವಾಗಿ ಜತೆಗೂಡುತ್ತಾರೆ. ಅವರೊಂದಿಗೆ ಚಾರಣ ಮಾಡುವುದೆಂದರೆ, ಸ್ಥಳೀಯ ಸಂಸ್ಕೃತಿಯ ಎಲ್ಲಾ ವೈಶಿಷ್ಟ್ಯಗಳನ್ನು ಅವರ ಬಾಯಿಯಿಂದಲೇ ಕೇಳುವ ಅವಕಾಶ.

ರುಚಿಕರ ಭೋಜನ
ಮಲೆನಾಡಿನ ವಿಶೇಷ ಅಡುಗೆಗಳನ್ನು ತಯಾರಿಸುವ ಬಾಣಸಿಗರು ಬರೇಕಲ್ ಫಾರ್ಮ್‌ಸ್ಟೇಯಲ್ಲಿ ಇರುವುದರಿಂದ, ಅತಿಥಿಗಳು ಇಷ್ಟಪಟ್ಟರೆ ಸ್ಥಳೀಯ ತಿಂಡಿ ತಿನಿಸುಗಳನ್ನು, ಖಾದ್ಯಗಳನ್ನು ತಯಾರಿಸಿ ಕೊಡುವ ಸೌಲಭ್ಯವೂ ಇಲ್ಲಿದೆ. ರಜಾ ದಿನಗಳಲ್ಲಿ ಇಲ್ಲಿ ತಂಗುವ ಅವಕಾಶ ದೊರೆತಾಗ, ಆರೋಗ್ಯಕರ ಊಟವೂ ದೊರೆಯುವುದರಿಂದ, ರಜಾ ಕಾಲದ ಅನುಭವ ಮತ್ತಷ್ಟು ಶ್ರೀಮಂತವಾಗುವುದು.

ಈ ಎಲ್ಲಾ ಸೌಲಭ್ಯಗಳನ್ನು ಗುರುತಿಸಿರುವ ಪ್ರವಾಸಿಗರು ಇಲ್ಲಿ ತಂಗಲು ಇಷ್ಟ ಪಡುತ್ತಾರೆ. ಜತೆಗೆ, ಇದೇ ಕಾರಣದಿಂದಾಗಿ, ಮಲೆನಾಡಿಗೆ ಭೇಟಿ ನೀಡುವ ಕೆಲವು ಸೆಲೆಬ್ರಿಟಿಗಳು ಮತ್ತು ಚಲನಚಿತ್ರ ನಟರು ಸಹ ಬರೇಕಲ್ ಫಾರ್ಮ್ ಸ್ಟೇಯಲ್ಲಿ ತಂಗುವುದು ವಿಶೇಷ. ಈಚಿನ ದಿನಗಳಲ್ಲಿ ದರ್ಶನ್, ಪ್ರಕಾಶ್ ರೈ, ನಾಗತಿಹಳ್ಳಿ ಚಂದ್ರಶೇಖರ್ ಮೊದಲಾದವರು ಇಲ್ಲಿ ತಂಗಿ, ಇಲ್ಲಿನ ಆತಿಥ್ಯವನ್ನು ಮೆಚ್ಚಿಕೊಂಡಿದ್ದಾರೆ. ನೇಚರ್ ಮತ್ತು ಯೋಗ ರಿಟ್ರೀಟ್ ಅಭಿಯಾನದಲ್ಲಿ ಈ ಫಾರ್ಮ್‌ಸ್ಟೇಯಲ್ಲಿ ಯೋಗಾಭ್ಯಾಸ ತರಗತಿಗಳನ್ನೂ ಸಹ ನಡೆಸಲಾಗುತ್ತದೆ. ಬರೇಕಲ್ ಫಾರ್ಮ್‌ಸ್ಟೇ ಸಂಪರ್ಕ : 9900405067

ಸುತ್ತಲೂ ತುಂಬಿವೆ ಸುಂದರ ತಾಣಗಳು
ಬರೇಕಲ್ ಫಾರ್ಮ್‌ಸ್ಟೇಯ ಸುತ್ತಮುತ್ತ ಹಲವು ಸುಂದರ ಪ್ರವಾಸಿ ತಾಣಗಳು ಇರುವುದು ವಿಶೇಷ. ನಗರ ಕೋಟೆ, ರಾಮಚಂದ್ರ ಪುರ ಮಠ, ಕೊಡಚಾದ್ರಿ, ಕಟ್ಟಿನ ಕೈ ಜಲರಾಶಿ, ತಲಾಸಿ ಅಬ್ಬಿ ಜಲಪಾತ, ಜೋಗ ಜಲಪಾತ, ಕವಲೇದುರ್ಗ, ದೇವ ಗಂಗೆ, ಹಿಡ್ಲು ಮನೆ ಜಲಪಾತ ಮೊದಲಾದ ಸ್ಥಳಗಳನ್ನು ನೋಡಿದ ನಂತರ ತಂಗಲು ಈ ಫಾರ್ಮ್‌ಸ್ಟೇ ಹೇಳಿಮಾಡಿಸಿದ ಜಾಗ.

ದೋಣಿ ವಿಹಾರ 
ಸ್ಪೀಡ್ ಬೋಟ್ ಮತ್ತು ಲಾಂಚ್‌ಗಳಲ್ಲಿ ಪಯಣಿಸುವ ಆಸೆ ಇದೆಯೆ? ಬರೇಕಲ್ ಫಾರ್ಮ್‌ಸ್ಟೇ ಹತ್ತಿರವೇ, ಶರಾವತಿ ಹಿನ್ನೀರಿನ
ವಿಶಾಲ ಹರವು ಚಾಚಿಕೊಂಡಿದೆ. ಶರಾವತಿ ನದಿಯ ಅಂಚಿನಲ್ಲಿರುವ ಬಿಲ್ಲುಸಾಗರ ಎಂಬ ಸ್ಥಳದಲ್ಲಿ ಬಾಡಿಗೆಗೆ ದೊರೆಯುವ
ಯಾಂತ್ರೀಕೃತ ದೋಣಿಯಲ್ಲಿ ಕುಳಿತರೆ, ವಿಶಾಲ ಜಲರಾಶಿಯಲ್ಲಿ ನಿಶ್ಚಿಂತೆಯಿಂದ ಸಂಚರಿಸುವ ಅವಕಾಶ. ಈ ಜಲರಾಶಿಯ
ವಿಶೇಷವೆಂದರೆ, ಬೇಸಗೆಯ ದಿನಗಳಲ್ಲೂ ಇಲ್ಲಿ ನೀರು ತುಂಬಿರುತ್ತದೆ, ಆದ್ದರಿಂದ ವರ್ಷದ ಎಲ್ಲಾ ತಿಂಗಳುಗಳಲ್ಲೂ ದೋಣಿ
ಸಂಚಾರದ ಅನುಭವವನ್ನು ಲಭ್ಯ.

ದೋಣಿ ಪಯಣದ ಸಂದರ್ಭದಲ್ಲಿ ಸುತ್ತಲೂ ಕಾಡಿನಿಂದ ತುಂಬಿರುವ ಭೂದೃಶ್ಯವನ್ನು ನೋಡಬಹುದು. 32 ಕಿಮೀ ದೂರ ದಲ್ಲಿರುವ ಕೊಡಚಾದ್ರಿಗೆ ಚಾರಣ ಅಥವಾ ಜೀಪ್ ರೈಡ್ ಮಾಡಲು ಸಹ ಅವಕಾಶವಿದೆ.