Wednesday, 11th December 2024

ಮೊದಲ ಪ್ರೀತಿಯ ಮೈಲಿಗಲ್ಲು

ಪ್ರೇಮಿಸಿದ ಜೀವವೊಂದು ತನ್ನ ಮುಷ್ಟಿಯ ಸೆರೆಯಾಗಬಯಸುವುದು ಅಜ್ಞಾನವಲ್ಲವೇ?

ರಾಧಿಕಾ ಹರ್ಡೀಕರ್ ಕೊಪ್ಪ

ಹುಡುಕಾಟದ ಸೆರೆಯೊಳಗೆ ಪಯಣಿಸುತ್ತಿದ್ದೆ. ಮುಂದಿನ ನಿಲ್ದಾಣವನರಿಯದೆ ನಾ. ಹೊಸ ಬದುಕ ಹುಡುಕುತಿರುವೆ. ಕುತೂಹಲ ಕೆಡಿಸುವ ಅಚ್ಚರಿಯನು ಶೋಧಿಸುತ್ತ. ಹಿಂದೆಂದೋ ಹಳೆಯ ನೆನಪು ಸಾಗುವ ದಾರಿಯಲ್ಲಿ ಮೆಲುಕು ಹಾಕುತ ಹೊರಟೆ, ನಾ
ಇರುವುದೆಲ್ಲವ ಬಿಟ್ಟು. ಅಂದು ನವ ಆರಂಭದ ಹೊಸ ಚಿಗುರು ಹಾತೊರೆಯುತ್ತಿತ್ತು ನನ್ನ ನಿನ್ನ ಸಂಗಮಕ್ಕಾಗಿ.

ಗೊತ್ತಿಲ್ಲದೇ ಹೆಜ್ಜೆ ಹಾಕುವ ವೇಳೆಗೆ ಇಳಿಸಂಜೆಯ ತಿಳಿಬಿಸಿಲು ಬೀಳುತ್ತಿತ್ತು, ನನ್ನ ಪ್ರತಿಬಿಂಬವು ಕಾಣುವಂತೆ. ತಂಗಾಳಿಗೆ ಮುಂಗುರುಳು ಏರ್ಪಡಿಸುತ್ತಿತ್ತು ಪ್ರತಿ ಸ್ಪರ್ಧೆಯನ್ನು, ಭಾಗಿಯಾದವು ಪಾದಗಳು ಪುಟಿಯುತ್ತ ಮಿಲನದೆಡೆಗೆ. ಮರದೆಲೆಗಳು ಉದುರುತ್ತಿದ್ದವು ಮಲ್ಲಿಗೆಯ ಮಳೆಯು ಸುರಿಯುವ ಹಾಗೆ, ಹಕ್ಕಿಗಳ ಕಲರವವು ಹಿಮ್ಮೇಳನ ವಾದ್ಯದಂತೆ, ನನ್ನ ನಿನ್ನ ಸುಮಧುರ ಸಂಗಮಕ್ಕಾಗಿ ಕಾದು ಕುಳಿತಿತ್ತು.

ಮುಗುಳ್ನಗೆಯ ಮೊಗವೊಂದು ಹುಣ್ಣಿಮೆಯ ಚಂದ್ರನಂತೆ ನೋಡುತ್ತಿತ್ತು ನಿನ್ನ ಕಣ್ರೆಪ್ಪೆಯ ಸ್ಥಗಿತಗೊಳಿಸಲೆಂದು. ಜಾಣ್ಮೆೆ ಯಿಂದ ನಿರ್ವಹಣೆಯತ್ತ ಸಾಗಿದೆ ನೀ ನನ್ನ ಕಂಡರೂ ಕಾಣದಿದ್ದಂತೆ. ಬಲ್ಲವಳಾಗಿದ್ದೆೆ ನಾನು, ಆ ನಿನ್ನ ಕಣ್‌ಗಳು ನನ್ನತ್ತ
ಹಾಯ್ದವೆಂದು. ನೋಡುಗರಿಗೆ ಆನಂದವೊದಗುತ್ತಿತ್ತು ನಮ್ಮೀ ಮಧುರ ಪ್ರೀತಿಯನ್ನು ಕಂಡಾಗ. ಆದರೆ ನಾ ಅರಿತಿರಲಿಲ್ಲ ಈ ಪ್ರೀತಿಯು ದೊಡ್ಡ ಬಂಧನವೆಂದು. ಮೊದಮೊದಲಿಗೆ ಎಲ್ಲವೂ ಸೌಖ್ಯವಾಗಿತ್ತು.

ಹೋದಹೋದಂತೆ ಅಲ್ಪಸ್ವಲ್ಪ ಕಲಹ, ಮಾತಿಗೆ ತಿರುಮಾತು ಸಹಜ ಬಿಡು. ಅದರಲ್ಲೂ ಪ್ರೀತಿ ಸಣ್ಣ ಪ್ರಮಾಣಕ್ಕೆ ಕ್ಷೀಣಿಸುತ್ತ ಹೋದಂತೆ… ಬೇಡ ಬಿಡು. ಹುಸಿಕೋಪವ ತಣಿಸಲು ಗಮನ ಹೆಚ್ಚುತ್ತ ಮುಂದುವರೆಯಿತು ಒಂದು ಅಪರಿಚಿತ ಲೋಕಕ್ಕೆ ಹೋಗುವಂತೆ! ನಾನೆಂದೂ ಅಂದುಕೊಂಡಿರಲಿಲ್ಲ, ಪ್ರೇಮ ಯಾತ್ರೆಯು ಇಷ್ಟು ಬೇಗನೆ ಅಂತ್ಯಗೊಳ್ಳುತ್ತದೆಂದು.

ಪ್ರತಿಷ್ಠೆಯ ಮೇರೆ ಮೀರಿತ್ತು ಯಾರು ಯಾರನ್ನು ಆಳುವರೆಂದು. ಪ್ರೇಮಿಸಿದ ಜೀವವೊಂದು ತನ್ನ ಮುಷ್ಠಿಯ  ಸೆರೆಯಾಗಬಯಸುವುದು ಅಜ್ಞಾನವಲ್ಲವೇ? ಈ ರೀತಿಯಲ್ಲಿ ಸಮಾಪ್ತಿಯಾಯಿತು ನನ್ನೀ ಮೈಲುಗಲ್ಲಿನ ವ್ಯಾಮೋಹದ ಪ್ರೀತಿ. ಇದೊಂದು ಭರವಸೆಯ ಪ್ರೀತಿಯಾಗಿತ್ತೋ, ವ್ಯಾಮೋಹದ ಆಕರ್ಷಣೆಯಾಗಿತ್ತೋ ನಾ ಅರಿತಿಲ್ಲ. ಆ ಮಧುರ ನೆನಪುಗಳನ್ನು ಅರ್ಥೈಸಲು ಸಹ ನನ್ನಿMದಾಗುತ್ತಿಲ್ಲ.