Saturday, 23rd November 2024

ಮಾತ್ರೆ ಆಯ್ದು ರೋಗಿಗೆ ನೀಡುವ ರೋಬಾಟ್

ತಂತ್ರಜ್ಞಾಾನದ ಈ ಯುಗದಲ್ಲಿ ಮಾನವನ ದಿನಚರಿಯ ಎಲ್ಲಾಾ ವಲಯಗಳಲ್ಲೂ ಹೊಸ ಹೊಸ ಗೆಜೆಟ್‌ಗಳು, ರೋಬಾಟ್‌ಗಳು ಪ್ರವೇಶಿಸುತ್ತಿಿವೆ. ಇನ್ನು ಮನುಷ್ಯನ ಮೂಲಭೂತ ಅವಶ್ಯಕತೆಗಳಲ್ಲಿ ಒಂದಾದ ವೈದ್ಯಕೀಯ ಕ್ಷೇತ್ರದಲ್ಲಿ ತಂತ್ರಜ್ಞಾಾನದ ಬಳಕೆಯನ್ನು ದೂರವಿಡಲಾದಿತೆ? ಹಾಗೆ ನೋಡಹೋದರೆ, ಇಂದಿನ ಎಲ್ಲಾಾ ಆವಿಷ್ಕಾಾರಗಳು ನಮ್ಮ ಸಮಾಜದ ಸ್ವಾಾಸ್ಥ್ಯವನ್ನು ಕಾಪಾಡುವುದನ್ನೇ ಮುಖ್ಯ ಗುರಿಯಾಗಿಸಿಕೊಂಡರೆ ಅದರಲ್ಲಿ ಯಾವುದೇ ತಪ್ಪಿಿಲ್ಲ.

ಆಧುನಿಕ ಆಸ್ಪತ್ರೆೆಗಳಲ್ಲಿ ತಂತ್ರಜ್ಞಾಾನಾಧಾರಿತ ಸೇವೆಗಳು ಕ್ರಮೇಣ ಜನಪ್ರಿಿಯತೆ ಗಳಿಸುತ್ತಿಿವೆ. ಕ್ಯಾಾಲಿಫೋರ್ನಿಯಾದ ಸ್ಟಾಾನ್‌ಫೋರ್ಡ್ ವಿಶ್ವವಿದ್ಯಾಾಲಯ ಆರಂಭಿಸಿರುವ ಹೊಸ ಆಸ್ಪತ್ರೆೆಯಲ್ಲಿ ತಂತ್ರಜ್ಞಾಾನದ ಉನ್ನತ ಮಟ್ಟದ ಬಳಕೆಯನ್ನು ಅಳವಡಿಸಲಾಗಿದೆ. ರೋಗಿಗಳು ಮತ್ತು ಅವರ ಸಂಬಂಧಿಕರು ತಮ್ಮ ಸ್ಮಾಾರ್ಟ್‌ಫೋನ್ ಮೂಲಕ ನಾನಾ ರೀತಿಯ ಸೌಲಭ್ಯಗಳನ್ನು, ಆರೋಗ್ಯ ಉತ್ತಮಪಡಿಸುವ ಸೇವೆಗಳನ್ನು ಪಡೆಯುವ ಅವಕಾಶ ಈ ಅತ್ಯಾಾಧುನಿಕ ಆಸ್ಪತ್ರೆೆಯಲ್ಲಿದೆ. ರೋಗಿಯ ಕೊಠಡಿಯ ಬೆಳಕಿನ ನಿಯಂತ್ರಣ, ಆ್ಯಪ್‌ಗಳ ಮೂಲಕ ದೇಹದ ವಿವಿಧ ಭಾಗಗಳ ಸ್ಥಿಿತಿಗತಿ, ನೇರವಾಗಿ ನುರಿತ ವೈದ್ಯರ ಸಂಪರ್ಕ ಮೊದಲಾದವುಗಳನ್ನು ಇಲ್ಲಿ ಮಾಡಬಹುದು.

ಇನ್ನೂ ಸಾಗಿ, ರೋಗಿಯೊಬ್ಬರಿಗೆ ನಿಗದಿ ಪಡಿಸಿದ ಮಾತ್ರೆೆಗಳನ್ನು ಆಯ್ಕೆೆ ಮಾಡಲು ರೋಬಾಟ್‌ಗಳು ಈ ಆಸ್ಪತ್ರೆೆಯಲ್ಲಿ ಕಾರ್ಯನಿರ್ವಹಿಸುತ್ತವೆ! ವೈದ್ಯರು ಸೂಚಿಸ ಮಾತ್ರೆೆಗಳನ್ನು ಆನ್‌ಲೈನ್ ಮೂಲಕ ಗ್ರಹಿಸುವ ರೋಬಾಟ್‌ಗಳು, ನಿಖರವಾದ ಮಾತ್ರೆೆಗಳನ್ನು ಆಯ್ದು, ಅವುಗಳನ್ನು ರೋಗಿ ಇರುವ ಕೊಠಡಿಗೆ ತಲುಪಿಸಬಲ್ಲವು. ರೋಬಾಟ್ ರೀತಿಯಲ್ಲೇ ಕಾರ್ಯನಿರ್ವಹಿಸಬಲ್ಲ ಸ್ವಯಂಚಾಲಿತ ವಾಹನಗಳು, ರೋಗಿಗಳ ಬಟ್ಟೆೆಗಳನ್ನು ಲಾಂಡ್ರಿಿಗೆ ತಲುಪಿಸುವುದು, ಕಸವನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವುದೇ ಮೊದಲಾದ ಜವಾಬ್ದಾಾರಿಯನ್ನು ನಿಭಾಯಿಸಬಲ್ಲವು. ಇದರಿಂದಾಗಿ ಸಮಯದ ಉಳಿತಾಯ, ನಿಖರತೆ, ಮಾನವ ಸಿಬ್ಬಂದಿಗಳ ಒತ್ತಡ ನಿವಾರಣೆ ಸಾಧ್ಯ. ರೋಗಿಯ ಸುರಕ್ಷತೆಗಾಗಿ ಕೃತಕ ಬುದ್ಧಿಿಮತ್ತೆೆಯನ್ನು ಬಳಸುವ ಸಾಧನಗಳನ್ನು ಅಳವಡಿಸಲಾಗಿದ್ದು, ಥರ್ಮಲ್ ಸೆನ್ಸರ್‌ಗಳನ್ನೂ ಉಪಯೋಗಿಸಲಾಗುತ್ತಿಿದೆ.

ಈ ಆಸ್ಪತ್ರೆೆಯಲ್ಲಿ ವೈದ್ಯರು ಮತ್ತು ಡ್ಯೂಟಿ ನರ್ಸ್‌ಗಳು ಒಂದೇ ಜಾಗದಲ್ಲಿ ಕುಳಿತು ವಿವಿಧ ರೋಗಿಗಳ ಆರೋಗ್ಯದ ಸ್ಥಿಿತಿಯನ್ನು ಗಮನಿಸಬಹುದು. ಈಗ 4ಜಿ ಸೌಲಭ್ಯ ಬಳಸಿ ತಂತ್ರಜ್ಞಾಾನಾಧಾರಿತ ಸೇವೆಗಳನ್ನು ನೀಡುತ್ತಿಿರುವ ಈ ಆಸ್ಪತ್ರೆೆ, ಸುಲಭವಾಗಿ 5ಜಿಗೆ ಮೈಗ್ರೇಟ್ ಆಗಬಲ್ಲದು.
ವೈದ್ಯಕೀಯ ಕ್ಷೇತ್ರವೇ ಆಗಲಿ, ಇತರ ಕ್ಷೇತ್ರವೇ ಆಗಲಿ, ಅತ್ಯಾಾಧುನಿಕ ಸೇವೆ ಎಂದಾಕ್ಷಣ ಹಣ ವೆಚ್ಚವಾದೀತು ಎಂಬ ಪ್ರಶ್ನೆೆ ಬರುತ್ತದೆ. ಸ್ಟಾಾನ್‌ಫೋರ್ಡ್‌ನ ಈ ಅತ್ಯಾಾಧುನಿಕ ಆಸ್ಪತ್ರೆೆಯ ನಿರ್ಮಾಣ ಮತ್ತು ತಂತ್ರಜ್ಞಾಾನದ ಅಳವಡಿಕೆಗೆ ಸುಮಾರು 2.1 ಬಿಲಿಯ ಡಾಲರ್ ವೆಚ್ಚವಾಗಿದೆ. ಇದರಿಂದಾಗಿ ರೋಗಿಗಳ ಆರೋಗ್ಯವನ್ನು ಇನ್ನಷ್ಟು ದಕ್ಷವಾಗಿ ನಿರ್ವಹಿಸುವ ಅವಕಾಶ ದೊರೆಯವುದು ಒಂದೆಡೆಯಾದರೆ, ವಿವಿಧ ಪಾಳಿಯಲ್ಲಿ ವೃತ್ತಿಿನಿರ್ವಹಿಸುವ ಸಿಬ್ಬಂದಿಯ ಮೇಲಿನ ಒತ್ತಡ ಕಡಿಮೆ ಮಾಡುವ ಸಾಧ್ಯತೆಯೂ ಇಲ್ಲಿದೆ. ಈ ಮೂಲಕ ರೋಗಿಗಳಿಗೆ ನೀಡುವ ಸೇವೆಯ ಮಟ್ಟ ಇನ್ನಷ್ಟು ಎತ್ತರಕ್ಕೆೆ ಏರಿಸುವ ಇರಾದೆ ಹೊಂದಿದೆ ಈ ಆಸ್ಪತ್ರೆೆ.