* ಬಡೆಕ್ಕಿಲ ಪ್ರದೀಪ
ವಾಟ್ಸಪ್ ಮೂಲಕ ನಾನಾ ರೀತಿಯ ಸುಳ್ಳು ಸುದ್ದಿಗಳನ್ನು ಹರಡುವ ಕಿಡಿಗೇಡಿಗಳು, ಸಮಾಜದ ಶಾಂತಿಯನ್ನು ಕದಡಲು ಪ್ರಯತ್ನಿಿಸಿದ್ದೂ ಉಂಟು. ತಡೆಯಲು ವಾಟ್ಸಪ್ ವಿವಿಧ ರೀತಿಯ ಭದ್ರಾಾ ವ್ಯವಸ್ಥೆೆಗಳನ್ನು ಅಳವಡಿಸುತ್ತಿಿದೆ. ಅಗತ್ಯ ಎನಿಸಿದಲ್ಲಿ ಸದಸ್ಯರನ್ನು ಸಂಪೂರ್ಣ ಬ್ಯಾಾನ್ ಮಾಡುವ ಸಾಧ್ಯತೆಯೂ ಇದೆ. ಈ ವ್ಯವಸ್ಥೆೆಯನ್ನು ದುರಪಯೋಗಪಡಿಸಿಕೊಳ್ಳುವ ಕಿಡಿಗೇಡಿಗಳು, ನಿಮ್ಮ ಸಂಖ್ಯೆೆಯು ವಾಟ್ಸಪ್‌ನಿಂದ ಬ್ಯಾಾನ್ ಆಗುವಂತೆ ಮಾಡಬಹುದು, ಗೊತ್ತಾಾ?
ಸದಾ ಒಂದಿಲ್ಲೊಂದು ರೀತಿಯಲ್ಲಿ ಸುದ್ದಿಯಲ್ಲಿರುವ ವಾಟ್ಸ್ಯಾಾಪ್‌ನಿಂದ ಎಷ್ಟು ಉಪಯೋಗ ಇದೆಯೋ ಅಷ್ಟೇ ಕಿರಿಕಿರಿಗಳೂ ಇರುತ್ತವೆ. ಒಂದೆಡೆ ಹೊಸ ಹೊಸ ಫೀಚರ್‌ಗಳನ್ನು ನೀಡುತ್ತಾಾ ಎಲ್ಲರ ಗಮನ ಸೆಳೆಯುವ ವಾಟ್ಸ್ಯಾಾಪ್ ಇನ್ನೊೊಂದೆಡೆ ಹಲವಾರು ತೊಂದರೆಗೀಡಾಗುತ್ತಾಾ, ಉಪಯೋಗಿಸುವವರಿಗೂ ತೊಂದರೆ ಕೊಡುತ್ತಿಿರುವುದೂ ನಡೆದೇ ಇದೆ. ಅದರಲ್ಲೂ ಗ್ರೂಪ್‌ಗಳು, ಅದರ ಆಡ್ಮಿಿನ್‌ಗಳಂತೂ ನಿದ್ದೆಗೆಡುವ ದಿನಗಳು ಆಗಾಗ ಬರುತ್ತಿಿರುತ್ತವೆ. ಅಂತದ್ದೇ ವಿಚಾರ ಇನ್ನೊೊಂದು ನಡೆದಿದೆ ನೋಡಿ.
ಎಲ್ಲರೂ ಬ್ಯಾನ್…
ಕಳೆದ ತಿಂಗಳಿಡೀ ಬೇಹುಗಾರಿಕೆ ವಿಚಾರದಿಂದಾಗಿ ಸುದ್ದಿಯಲ್ಲಿದ್ದ ವಾಟ್ಸ್ಯಾಾಪ್ ಇದೀಗ ಇನ್ನೊೊಂದು ರೀತಿಯಲ್ಲಿ ಸುದ್ದಿ ಮಾಡುತ್ತಿಿದೆ. ತಮ್ಮ ಗೌಪ್ಯತೆ ರಿಸ್‌ಕ್‌ನಲ್ಲಿ ಇರುವ ಭಯದಿಂದ ವಾಟ್ಸ್ಯಾಾಪ್ ಬದಲು ಬೇರೆ ಚಾಟ್ ಆ್ಯಪ್ ಗಳನ್ನು ಡೌನ್ ಲೋಡ್ ಮಾಡುವವರಿರಬಹುದು. ಆದರೆ ನೀವು ವಾಟ್ಯ್ಸಾಾಪ್ ಇರಲಾರಿರಿ, ಹಾಗೂ ಅದರ ಗ್ರೂಪ್‌ಗಳ ಸದಸ್ಯರಾಗಿದ್ದರೆ ನೋಡಿ ಎಂಥಾ ಸುದ್ದಿ ಇದೆ ಅಂತ. ಈ ಬಾರಿ ನೀವು ವಾಟ್ಸ್ಯಾಾಪ್ ನಿಂದ ಬ್ಯಾಾನ್ ಆಗಬೇಕಂದ್ರೆೆ ಹೆಚ್ಚು ಕಷ್ಟ ಪಡಬೇಕಾಗಿಲ್ಲ.
ವಾಟ್ಸ್ಯಾಾಪ್ ತಪ್ಪುು ಸಂದೇಶ ರವಾನಿಸುವಂತಹ ಹೆಸರಿರುವ ಗ್ರೂಪ್‌ಗಳನ್ನು ಏಕಾಏಕಿಯಾಗಿ ಬ್ಯಾಾನ್ ಮಾಡುತ್ತಿಿದೆ ಎನ್ನುವ ಸುದ್ದಿ ಬಂದಿದೆ. ಇದು ಎಲ್ಲಿಯವರೆಗೆ ಅಂದರೆ ಆ ಗ್ರೂಪ್ ಮಾತ್ರ ಅಲ್ಲ, ಗ್ರೂಪ್‌ನಲ್ಲಿರುವ ಸದಸ್ಯರೆಲ್ಲರನ್ನೂ ಅದು ಬ್ಯಾಾನ್ ಮಾಡುತ್ತಿಿದೆ ಅನ್ನುವುದೇ ಶಾಕಿಂಗ್ ವಿಚಾರ.
ನೀವು ಕೂಡ ಅಂಟಿಕೊಂಡಿದ್ದರೆ, ನಿಮ್ಮ ವಾಟ್ಸ್ಯಾಾಪ್ ನಂಬರ್ ಗ್ರೂಪ್‌ಗಳಿಗೆ ಅಂಟಿಕೊಂಡಿದ್ದರೆ ನಿಮ್ಮ ನಂಬರ್ ಬ್ಯಾಾನ್ ಆಗುವುದರಿಂದ ತಪ್ಪಿಿಸಿಕೊಳ್ಳುವುದಕ್ಕೆೆ ಕೂಡಲೇ ದಾರಿ ಕಂಡುಕೊಳ್ಳುವುದು ಉತ್ತಮ. ಯಾಕೆಂದರೆ, ಕೆಲವೊಂದು ಸೂಕ್ಷ್ಮ ವಿಷಯಗಳನ್ನು ಗ್ರೂಪ್‌ನ ಹೆಸರಾಗಿ ಇಟ್ಟುಕೊಂಡಿದ್ದೇ ಆದರೆ ಅಂತಹ ಗ್ರೂಪ್ ಹಾಗೂ ಅದರ ಎಲ್ಲಾ ಸದಸ್ಯರನ್ನೂ ಪೂರ್ತಿ ಬ್ಯಾಾನ್ ಮಾಡುತ್ತಿಿದೆಯಂತೆ ವಾಟ್ಸ್ಯಾಾಪ್.
ಈ ಚಾಟ್ ಆ್ಯಪ್ ನಲ್ಲಿ ನಾವು ಕಳುಹಿಸುವ ಸಂದೇಶಗಳನ್ನು ವಾಟ್ಸ್ಯಾಾಪ್ ನೋಡುವುದು ಸಾಧ್ಯವಿಲ್ಲ, ಅದು ಸಂಪೂರ್ಣ ಗೌಪ್ಯ ಎನ್ನುವುದರ ಬಗ್ಗೆೆ ಎಷ್ಟೇ ನೀಡಿದರೂ ಅದು ಬಳಕೆದಾರರ ವಿವರಗಳನ್ನು ತೆಗೆದುಕೊಂಡಂತೆ, ಗ್ರೂಪ್‌ಗಳ ವಿವರಗಳನ್ನು (ಅಂದರೆ ಅದರ ಹೆಸರು, ಶುರುಮಾಡಿದ ದಿನ, ಅದರಲ್ಲಿರುವ ಸದಸ್ಯರ ವಿವರ) ಮಾತ್ರ ನಿರಂತರವಾಗಿ ಪಡೆದುಕೊಳ್ಳುತ್ತಿಿದೆ.
ಇದು ಒಂದು ರೀತಿಯಲ್ಲಿ ಒಳ್ಳೆೆಯ ವಿಚಾರವೇ ಆದರೂ ಈಗಾಗಲೇ ಕಿಡಿಗೇಡಿಗಳು ಹಾಗೂ ಯಾರಿಗಾದರೂ ತೊಂದರೆ ಕೊಡಬಯಸುವವರು ಬೇಕೆಂದೇ ಗ್ರೂಪ್‌ಗಳ ಹೆಸರನ್ನು ಬದಲಾಯಿಸುವ ಮೂಲಕ ಅವುಗಳನ್ನು, ಮತ್ತು ಅದರಲ್ಲಿರುವ ಸದಸ್ಯರನ್ನು ಬ್ಯಾಾನ್ ಆಗುವಂತೆ ನೋಡಿಕೊಳ್ಳುತ್ತಿರುವುದು ನಡೆದಿದೆ ಎನ್ನಲಾಗಿದೆ.
ವಾಟ್ಸ್ಯಾಾಪ್ ಬಗ್ಗೆೆ ಲೇಟೆಸ್‌ಟ್ ಮಾಹಿತಿಗಳನ್ನು ನೀಡುವ ಇನ್ಫೋೋ ಅನ್ನುವ ವೆಬ್ ಸೈಟ್ ಈ ಕುರಿತು ಮಾಹಿತಿ ನೀಡಿದ್ದು, ಅಲ್ಲಿ ಮಕ್ಕಳ ಮೇಲೆ ಲೈಂಗಿಕ ಕಿರುಕುಳ ನೀಡುವ ವಿಚಾರಕ್ಕೆೆ ಪ್ರಚೋದಿಸುವ ಹೆಸರನ್ನು ಒಂದು ಗ್ರೂಪ್‌ಗೆ ನೀಡುವ ಮೂಲಕ ಅದನ್ನು ಮತ್ತದರ ಸದಸ್ಯರನ್ನು ವಾಟ್ಸ್ಯಾಾಪ್ ಬ್ಯಾಾನ್ ಮಾಡುವಂತೆ ಮಾಡಿರುವ ಘಟನೆಯ ಬಗ್ಗೆೆ ಯೂನಿವರ್ಸಿಟಿಯೊಂದರ ವಿದ್ಯಾಾರ್ಥಿ ತನ್ನ ಸಹಪಾಠಿಗಳೊಂದಿಗಿನ ಗ್ರೂಪ್ ಹಾಗೂ ಅದರ ಸದಸ್ಯರು ಅನುಭವಿಸಿರುವ ಪಾಡನ್ನು ವಿವರಿಸಿದ್ದನ್ನು ‘ರೆಡಿಟ್’ ಅನ್ನುವ ಜಾಲತಾಣದಲ್ಲಿ ದಾಖಲಿಸಿರುವ ಬಗ್ಗೆೆ ವರದಿ ಮಾಡಿದೆ.
ಅದಷ್ಟೇ ಬ್ಯಾಾನ್ ಮಾಡಲು ಕಾರಣವನ್ನೂ ವಾಟ್ಸ್ಯಾಾಪ್ ತಕ್ಷಣ ನೀಡುತ್ತಲೂ ಇಲ್ಲ ಎನ್ನಲಾಗಿದೆ. ಈ ರೀತಿಯ ಅನುಭವ ವೈಯಕ್ತಿಿಕ ನೆಲೆಯಲ್ಲಿಯೂ ನಡೆಯುತ್ತಿಿದ್ದು, ತಮಗಾಗದ ವ್ಯಕ್ತಿಿಗಳ ಸಂಖ್ಯೆೆಯನ್ನು ಬ್ಯಾಾನ್ ಮಾಡುವ ಅಥವಾ ಬ್ಲಾಾಕ್ ಮಾಡಿಸುವುದಕ್ಕೆೆ ಬೇರೆ ಬೇರೆ ರೀತಿಯ ವಿಧಾನಗಳನ್ನು ಕಿಡಿಗೇಡಿಗಳು ಉಪಯೋಗಿಸುತ್ತಿಿರುವುದರ ಬಗ್ಗೆೆಯೂ ಆಗಾಗ ಸುದ್ದಿಗಳನ್ನು ಕೇಳುತ್ತಿಿರುತ್ತೇವೆ.
ಇನ್ನು ಈ ಗ್ರೂಪ್‌ಗಳ ಮೂಲಕ ನೀವು ಏನೋ ಉತ್ತಮ ಕೆಲಸ, ಅಥವಾ ಅನಿವಾರ್ಯ ಸಂಪರ್ಕಗಳನ್ನು ಒಂದೆಡೆ ಜೋಡಿಸುವ ಕಾರ್ಯಕ್ಕೆೆ ಕೈಹಾಕಿರುವ ಆಡ್ಮಿಿನ್ ಆಗಿದ್ದರೆ ಎಚ್ಚೆೆತ್ತುಕೊಳ್ಳಿಿ. ಈ ರೀತಿ ಹೆಸರು ಬದಲಾಯಿಸುವುದರಿಂದ ತಪ್ಪಿಿಸಿಕೊಳ್ಳಲು ನಿಮಗೆ ಮಾತ್ರ ಸಾಧ್ಯ. ಅಥವಾ ನೀವು ಅನಗತ್ಯ ಗ್ರೂ ಗಳಲ್ಲಿದ್ದು ಅಲ್ಲಿ ನಡೆಯುತ್ತಿಿರುವ ಅನಗತ್ಯ ಚ್ಯಾಾಟ್‌ಗಳಿಂದ ಬೇಸತ್ತಿಿದ್ದು, ಅಲ್ಲಿ ಕೂಡ ಇಂತಹ ವ್ಯಕ್ತಿಿಗಳಿರುವ ಬಗ್ಗೆೆ ನಿಮಗೆ ಭಯ ಇದ್ದರೆ ಕೂಡ ಅಂತಹ ಗ್ರೂಪ್‌ಗಳಿಂದ ಹೊರಬರುವುದೊಳಿತು.
ಎರಡು ಫೋನ್, ಒಂದೇ ವಾಟ್ಸ್ಯಾಪ್
ಡಾರ್ಕ್ ಮೋಡ್ (ಅಂದರೆ ಕಣ್ಣಿಿಗೆ ರಾಚದಂತೆ ಕಪ್ಪಗಿನ ಸ್ಕ್ರೀನ್ ನಲ್ಲಿ ವಾಟ್ಸ್ಯಾಾಪ್ ಅನ್ನು ಬಳಸುವ ವ್ಯವಸ್ಥೆೆ) ಅನ್ನು ಫೇಸ್ ಸ್ವಾಾಮ್ಯದ ವಾಟ್ಸ್ಯಾಾಪ್ ಇನ್ನೇನು ಪರಿಚಯಿಸಲಿದ್ದು, ಇತ್ತೀಚಿನ ದಿನಗಳಲ್ಲಿ ಕೇವಲ ಚಾಟ್ ಮಾತ್ರವಲ್ಲದೇ ಹಲವು ರೀತಿಯಲ್ಲಿ ಮಾಹಿತಿ ರವಾನೆಯ ಸಾಧನವಾಗಿ ವಾಟ್ಸ್ಯಾಾಪ್ ಬಳಕೆಯಾಗುವಂತೆ ಮಾಡುವತ್ತ ಕಂಪೆನಿ ನಡೆಯುತ್ತಿಿರುವ ಹಾದಿಯಲ್ಲಿ ಇದೂ ಒಂದು ಅನ್ನಬಹುದಾಗಿದೆ.
ಇದರೊಂದಿಗೆ ಇನ್ನೊೊಂದು ಅತಿ ಮುಖ್ಯ ವಿಚಾರ ವಾಟ್ಸ್ಯಾಾಪ್ ಅನ್ನು ನಾವು ಒಂದೇ ಫೋನ್ ನಲ್ಲಿ ಅಥವಾ ಡಿವೈಸ್‌ನಲ್ಲಿ ಬಳಸಲು ಸಾಧ್ಯವಾಗುತ್ತಿಿತ್ತು. ಅದಲ್ಲದೇ, ಅದೇ ಫೋನ್ ನಲ್ಲಿ ಇತ್ತೀಚಿನ ದಿನಗಳಲ್ಲಿ ಎರಡೆರಡು ನಂಬರ್‌ಗಳನ್ನು ಬಳಸುವವರು ಎರಡೆರಡು ವಾಟ್ಸ್ಯಾಾಪ್ ಮಾಡುವುದಕ್ಕೂ ಸಾಧ್ಯವಿತ್ತು. ಆದರೆ ಒಂದೇ ನಂಬರ್‌ಅನ್ನು ಇನ್ನೊೊಂದೆಡೆ ಉಪಯೋಗಿಸಲು ಪ್ರಯತ್ನಿಿಸಿದರೆ ಹಿಂದಿನ ಸಾಧನದಲ್ಲಿ ಅದು ಲಾಗೌಟ್ ಆಗುತ್ತಿಿತ್ತು. ಮತ್ತದು ನಮ್ಮ ಮಾಹಿತಿಯನ್ನು ಗೌಪ್ಯವಾಗಿಡುವುದಕ್ಕೆೆ ಸಹಾಯಕವೂ ಆಗಿತ್ತು.
ಆದರೆ ಕೆಲವೊಮ್ಮೆೆ ಒಂದೇ ಸಂಖ್ಯೆೆಯನ್ನೇ ಬೇರೆ ಬೇರೆಡೆಗಳಲ್ಲಿ ಲಾಗಿನ್ ಮಾಡುವ ಅನಿವಾರ್ಯತೆ ಇರುವುದೂ ಸಹಜ. ಅದಕ್ಕೆೆಂದೇ ಕೆಲವು ವರ್ಷ ಹಿಂದೆ ವಾಟ್ಸ್ಯಾಾಪ್ ವೆಬ್ ಶುರುಮಾಡುವ ಮೂಲಕ ಕಂಪ್ಯೂೂಟರ್ ಪರದೆಗೆ ವಾಟ್ಸ್ಯಾಾಪ್ ನ ಪದಾರ್ಪಣೆಯೂ ಆಗಿತ್ತು. ಅದಕ್ಕೆೆ ಅದರದೇ ಆದ ಮಿತಿಯೂ ಕೂಡ ನಮ್ಮ ಫೋನ್ ಅದರ ಪಕ್ಕದಲ್ಲೇ ಇರಬೇಕಿತ್ತು, ಮತ್ತು ಅದರ ಇಂಟರ್ನೆಟ್ ಆನ್ ಆಗಿಯೂ ಇರಬೇಕಿತ್ತು.
ಆದರೆ ಅದು ಸಾಲದು ಒಂದೇ ಸಂಖ್ಯೆೆಯನ್ನು ಬೇರೆ ಬೇರೆ ಫೋನ್ ಅಥವಾ ಟ್ಯಾಾಬ್, ಕಂಪ್ಯೂೂಟರ್ ಇತ್ಯಾಾದಿಗಳಲ್ಲಿ ಲಾಗಿನ್ ಮಾಡುವ ಸಾಧ್ಯತೆಗಳಿದ್ದರೆ ಉತ್ತಮ ಎನ್ನುವ ಮಾತು ಆಗಾಗ ಬಳಕೆದಾರರಿಂದ ಕೇಳಿಬರುತ್ತಿಿತ್ತು.
ಅದಕ್ಕಾಾಗಿಯೇ ವಾಟ್ಸ್ಯಾಾಪ್ ಇನ್ನೇನು ಕೆಲವೇ ದಿನಗಳಲ್ಲಿ ಒಂದೇ ನಂಬರ್‌ಅನ್ನು ಬೇರೆ ಬೇರೆ ಡಿವೈಸ್ ಗಳಲ್ಲಿ ಲಾಗಿನ್ ಮಾಡುವ ರೀತಿ ವ್ಯವಸ್ಥೆೆಯನ್ನು ಅಭಿವೃದ್ಧಿಿಪಡಿಸುತ್ತಿಿದೆ ಎಂಬ ಮಾಹಿತಿ ಇದೆ. ಇದಿನ್ನೂ ಡೆವಲಪ್ ಆಗುವ ಹಂತದಲ್ಲಿದ್ದು, ಬೀಟಾ (ಟೆಸ್ಟಿಿಂಗ್) ಬಳಕೆದಾರರಿಗೆ ಇದರ ಆರಂಭಿಕ ಮಾಹಿತಿಯೆಂಬಂತೆ ಕೆಲ ಲಾಗಿನ್ ಫೀಚರ್‌ಗಳು ಬದಲಾದ ಬಗ್ಗೆೆ ಮಾಹಿತಿಯಿದೆ. ಪ್ರತಿ ಬಾರಿ ಲಾಗಿನ್ ಆಗಬೇಕಿದ್ದರೂ ವೆರಿಫಿಕೇಶನ್ ಸಂಖ್ಯೆೆಯನ್ನು ಕೇಳುವಂತೆ, ಹೊಸತೊಂದು ಡಿವೈಸ್‌ನಲ್ಲಿ ಲಾಗಿನ್ ಆಗುವ ಅದಕ್ಕೆೆ ಬೇರೆಯದೇ ಕೋಡ್ ಅನ್ನು ಹಾಕುವಂತೆ ಹಾಗೂ ಅದಕ್ಕೂ ಇನ್ನೊೊಂದು ಡಿವೈಸ್‌ಗೂ ಗೌಪ್ಯತೆಯ ವಿಚಾರದಲ್ಲಿ ಬೇಕಾದ ವ್ಯತ್ಯಾಾಸಗಳನ್ನೂ ಮಾಡುವತ್ತ ಸಂಸ್ಥೆೆ ಗಮನ ವಹಿಸಿದೆ.
ಒಟ್ಟಾಾರೆ ಒಂದೆಡೆ ವ್ಯಾಾಪಕವಾಗಿ ಈ ಚಾಟ್ ಆ್ಯಪ್ ಇಲ್ಲದೇ ಬದುಕುವುದೇ ದುಸ್ತರ ಎನ್ನುವ ಮಟ್ಟಿಗೆ ಅದು ಹೆಚ್ಚಿಿನವರ ಜೀವನದ ಭಾಗವಾಗುತ್ತಿರುವುದು ಒಂದೆಡೆಯಾದರೆ, ತಮ್ಮದಲ್ಲದ ತಪ್ಪಿಗೆ, ಬ್ಲಾಾಕ್ ಅಥವಾ ಬ್ಯಾಾನ್ ಆಗುವ ಮೂಲಕ ಅದರಿಂದ ತೊಂದರೆ ಅನುಭವಿಸುತ್ತಿರುವುದೂ ನಡೆದಿರುವುದರ ಬಗ್ಗೆೆ ಕಂಪೆನಿ ಗಮನ ಹರಿಸಬೇಕಾದ ಅನಿವಾರ್ಯತೆಯೂ ಇನ್ನೊೊಂದೆಡೆ ಇದೆ.
ಅಡ್ಮಿನ್ ಆಗಿದ್ದೀರಾ?
ನೀವು ವಾಟ್ಸಪ್ ಗ್ರೂಪ್ ಆಡ್ಮಿಿನ್‌ಗಳಾಗಿದ್ದರೆ ಈ ಕೂಡಲೇ ಗ್ರೂಪ್‌ನ ಸೆಟಿಂಗ್‌ಸ್ ಗೆ ಹೋಗಿ ಗ್ರೂಪ್ ಇನ್ಫೋೋ (ಗ್ರೂಪ್ ನ ಎಡಿಟ್ ಮಾಡುವ ಅವಕಾಶವನ್ನು ಕೇವಲ ಆಡ್ಮಿಿನ್‌ಗಳಿಗೆ ಮಾತ್ರ ಸೀಮಿತವಾಗಿಸುವ ಆಪ್ಶನ್ ಅನ್ನು ಆಯ್ಕೆೆ ಮಾಡಿ. ಅಲ್ಲದೇ ಕುಚೋದ್ಯ, ತಮಾಷೆ, ಕಿಡಿಗೇಡಿ ಕೃತ್ಯಕ್ಕೆೆ ಕೈ ಹಾಕಬಲ್ಲವರು ಆಡ್ಮಿಿನ್‌ಗಳಾಗಿದ್ದರೆ ಅವರನ್ನು ಕೂಡಲೇ ಆಡ್ಮಿಿನ್ ಲಿಸ್‌ಟ್‌ನಿಂದ ತೆಗೆದು ಹಾಕಿ.