Saturday, 23rd November 2024

ಅಂತರ್ಜಾಲ ಬಳಕೆಯಲ್ಲಿ ಅನುಸರಿಸಬೇಕು ಎಚ್ಚರಿಕೆ

* ಎಲ್.ಪಿ.ಕುಲಕರ್ಣಿ, ಬಾದಾಮಿ

ಇಂದು ಅಂತರ್ಜಾಲ ಸರ್ವವ್ಯಾಾಪಿ ಆಗಿದೆ. ಗ್ಯಾಾಸ್ ಖರೀದಿಯಿಂದ ಹಿಡಿದು, ಆನ್‌ಲೈನ್ ಶಾಪಿಂಗ್, ಹೊಟೇಲ್ ಬುಕಿಂಗ್‌ನಂತಹ ಅಂತರ್ಜಾಲದ ಉಪಯೋಗ ಅನಿವಾರ್ಯ ಎನಿಸುವ ಕಾಲ ಬಂದಿದೆ. ಅಂತರ್ಜಾಲ ಎಂಬ ಮಹಾ ಹೆದ್ದಾಾರಿಯಲ್ಲಿ, ಸುಲಲಿತ ಸೌಲಭ್ಯಗಳು ದೊರೆಯುವ ಸಮಯದಲ್ಲೇ, ಕಳ್ಳ-ಕಾಕರು, ಪಾಸ್‌ವರ್ಡ್ ಕದ್ದು ದುರಪಯೋಗ ಪಡಿಸಿಕೊಳ್ಳುವವರು ಇದ್ದಾಾರೆ. ಅಂತಹವರ ಜಾಲದಿಂದ ತಪ್ಪಿಿಸಿಕೊಂಡು, ವ್ಯವಹಾರ ನಡೆಸುವುದು ಇಂದಿನ ಆದ್ಯತೆ ಎನಿಸಿದೆ.

ಸದ್ಯ, ಉದ್ಯೋೋಗ ಹುಡುಕಲು, ಟ್ರೈನ್ ಟಿಕೆಟ್ ಬುಕ್ ಮಾಡಲು, ಮನೆಯ ವಿದ್ಯುತ್ ಬಿಲ್ ತುಂಬಲು….ಇಂತಹ ನಮ್ಮ ದೈನಂದಿನ ಚಟಿವಟಿಕೆಗಳಿಗೆ ಇಂಟರ್‌ನೆಟ್‌ನ ಉಪಯೋಗಕ್ಕೆೆ ಒಗ್ಗಿಿಹೋಗಿಬಿಟ್ಟಿಿದ್ದೇವೆ. ಒಂದು ದಿನ ನಮ್ಮ ನಲ್ಲಿ ಇಂಟರ್‌ನೆಟ್ ಪ್ಯಾಾಕ್ ಮುಗಿದುಹೋಯಿತೆಂದರೆ ಆಕಾಶವೇ ಕಳಚಿಕೊಂಡು ಬಿದ್ದಹಾಗೆ ಆಡುತ್ತೇವೆ. ಇಂದು ನಾವು ನಮ್ಮ ಜೀವನದ ಅವಿಭಾಜ್ಯ ಅಂಗವೇ ಆಗುವ ಮಟ್ಟಿಿಗೆ ಇಂಟರ್‌ನೆಟ್ ನ್ನು ಬಳಸುತ್ತಿಿದ್ದೆವೆ. ಮೊಬೈಲ್, ಕಂಪ್ಯೂೂಟರ್‌ಗಳಲ್ಲಿ ಎಲ್ಲರೂ ಇಂಟರ್‌ನೆಟ್ ಬಳಸುತ್ತಿಿದ್ದಾರೆ. ಇಲ್ಲಿ ಹ್ಯಾಾಕರ್‌ಗಳು ನಮ್ಮ ಮಾಹಿತಿ, ಬ್ಯಾಾಂಕ್ ಪಾಸ್ ವರ್ಡ್, ಕ್ರೆೆಡಿಟ್ ಕಾರ್ಡ್ ನಂಬರ್, ತೆರಿಗೆ ದಾಖಲೆಗಳ ಮಾಹಿತಿಯನ್ನು ಕದಿಯಲು ಹೊಂಚು ಹಾಕುತ್ತಿಿರುತ್ತಾಾರೆ. ಕಾರಣ ನಾವು ಇಂರ್ಟ ನೆಟ್ ನಲ್ಲಿ ನಮ್ಮ ಮಾಹಿತಿಗಳನ್ನು ಸುರಕ್ಷಿತವಾಗಿಟ್ಟುಕೊಳ್ಳುವುದು ಹೇಗೆ ಎಂಬ ಪ್ರಶ್ನೆೆಗೆ ಈ ಕೆಳಗಿನ ಕೆಲವು ಸಲಹೆಗಳನ್ನು ಪಾಲಿಸಿದರೆ ಸಾಕು.

ಕಠಿಣ ಪಾಸ್ ವರ್ಡ್
*ದೊಡ್ಡಕ್ಷರ , ಚಿಕ್ಕ ಅಕ್ಷರಗಳು, ಸಿಂಬಲ್‌ಗಳು, ಅಂಕಿಗಳು. ಅದರಲ್ಲೂ ಅಟ್, ಹ್ಯಾಾಷ್, ಕೊಶ್ಚನ್ ಮಾರ್ಕ್, ಪರ್ಸಂಟೇಜ್, ರೂಪಿ ( ₹ ), ಪೌಂಡ್ ಮುಂತಾದವುಗಳನ್ನು ಬಳಸಿ ಸ್ಮಾಾರ್ಟ್ ಆದ ಪಾಸ್ ವರ್ಡ್ ರಚಿಸಿಕೊಳ್ಳೋೋಣ. ಇಂತಹ ಪಾಸ್‌ವರ್ಡ್ ಗಳನ್ನು ಹ್ಯಾಾಕರ್ ಗಳು ಸುಲಭವಾಗಿ ಕದಿಯಲು ಸಾಧ್ಯವಿಲ್ಲ.
* ನಮ್ಮ ಪಾಸ್ ವರ್ಡ್ ಅನ್ನು ಪುಸ್ತಕದಲ್ಲೋ, ಒಂದು ಕಾದದ ಮೇಲೋ ಬರೆದಿಡುವುದು ಸೂಕ್ತವಲ್ಲ. ಕೆಲವರಂತೂ ಎಟಿಎಂ ಕಾರ್ಡ್‌ನ ಹಿಂಬದಿಯಲ್ಲೇ ಬರೆದಿಡುತ್ತಾಾರೆ. ಇದರಿಂದ ಎಟಿಎಂ ಕಾರ್ಡ್ ಕಳೆದು ಹೋದಾಗ ಅದರ ಹಣವು ಸುಲಭವಾಗಿ ಕಳ್ಳರ ಪಾಲಾಗಿ ಹೋಗಿರುತ್ತದೆ.
* ಪಾಸ್‌ವರ್ಡ್‌ಗಳನ್ನು ಮೊಬೈಲ್ ಕಂಟ್ಯಾಾಕ್‌ಟ್‌‌ಗಳಲ್ಲಿ ಸೇವ್ ಮಾಡುವುದು ಅಪಾಯಕಾರಿ. ಯಾಕೆಂದರೆ ನಮ್ಮ ಕಂಟ್ಯಾಾಕ್‌ಟ್‌‌ಗಳನ್ನು ಬಹುತೇಕ ಆ್ಯಪ್‌ಗಳು ಆಕ್ಸೆೆಸ್ ಮಾಡುತ್ತವೆ.

* ಬ್ಯಾಾಂಕ್ ಅಕೌಂಟ್ ಇತ್ಯಾಾದಿಗಳ ಪಾಸ್‌ವರ್ಡ್ ಬರೆಯುವಾಗ ಹೆಚ್ಚಿಿನ ಎಚ್ಚರಿಕೆ ವಹಿಸುವುದು ಉತ್ತಮ. ಹಣದ ವಹಿವಾಟು ನಡೆಸುವಾಗ ಒಟಿಪಿ ಒನ್ ಟೈಪ್ ಪಾಸ್ ವರ್ಡ್ ) ಸೌಲಭ್ಯ ಇಲ್ಲದ ತಾಣಗಳನ್ನು ಬಳಸುವುದು ಬೇಡ.

* ಸ್ಮಾಾರ್ಟ್ ಫೋನ್ ಗಳಲ್ಲಿ ಬ್ಯಾಾಂಕಿಂಗ್ ಇತ್ಯಾಾದಿಗಳಿಗೆ ಅಧಿಕೃತ ಆ್ಯಪ್‌ಗಳನ್ನು ಬಳಸುವುದು ಸೂಕ್ತ. ಜತೆಗೆ ಎಲ್ಲಾ ಆ್ಯಪ್ ಗಳಿಗೆ ಒಂದೇ ಪಾಸ್ ವರ್ಡ್ ನೀಡುವುದು ಕೂಡ ಅಸುರಕ್ಷಿತ. ಹಣಕಾಸು ವ್ಯವಹಾರಕ್ಕೆೆ ಸದ್ಯ, ಬಳಸುತ್ತಿಿರುವ ಫೋನ್ ಪೇ, ಗೂಗಲ್‌ಪೇ… ಮುಂತಾದ ಆ್ಯಪ್‌ಗಳು ಖಾಸಗಿ ಕಂಪನಿಗಳ ನಿಯಂತ್ರಣದಲ್ಲಿರುವುದರಿಂದ ಇವುಗಳನ್ನು ಬಳಸುವುವಾಗ ಸಾಕಷ್ಟು ಎಚ್ಚರಿಕೆ ವಹಿಸಬೆಕು.

 

ಇಮೇಲ್‌ನಲ್ಲಿ ಪ್ರಮುಖ ರವಾನೆ ಸುರಕ್ಷಿತವಲ್ಲ :

ನಮ್ಮ ಕಂಪ್ಯೂೂಟರರ್, ಸ್ಮಾಾರ್ಟ್‌ಫೋನ್ ಗಳಲ್ಲಿ ಅತ್ಯುತ್ತಮ ಸುರಕ್ಷಿತ ಸಾಫ್‌ಟ್‌‌ವೇರ್ ಇನ್‌ಸ್ಟಾಾಲ್ ಆಗಿದ್ದರೂ ಕೂಡ, ನಮ್ಮ ಇಮೇಲ್ ಸ್ವೀಕರಿಸುವವರಲ್ಲಿ ಅಂತಹ ವ್ಯವಸ್ಥೆೆ ಇಲ್ಲದೆ ಇರಬಹುದು. ಹೀಗಾಗಿ ಪಾಸ್‌ವರ್ಡ್ , ಬ್ಯಾಾಂಕ್ ಖಾತೆ ಮಾಹಿತಿ, ಕ್ರೆೆಡಿಟ್ ಕಾರ್ಡ್ , ಡೆಬಿಟ್ ಕಾರ್ಡ್ ವಿವರ ಇತ್ಯಾಾದಿಗಳನ್ನು ಇಮೇಲ್ ಮೂಲಕ ರವಾನೆ ಮಾಡುವುದನ್ನು ಮಾಡುವುದು ಅಷ್ಟೇನೂ ಸುರಕ್ಷಿತವಲ್ಲ.
‘ಮೆಕಾಫಿ’ ಇತ್ಯಾಾದಿ ಭದ್ರತಾ ಸಾಫ್‌ಟ್‌‌ವೇರ್‌ಗಳನ್ನು ಕಂಪ್ಯೂೂಟರ್‌ಗಳಲ್ಲಿ ಅಳವಡಿಸಿಕೊಳ್ಳುವುದು ಸೂಕ್ತ. ನಿಯಮಿತವಾಗಿ ನಮ್ಮ ಅನ್ನು ಇಂತಹ ಆ್ಯಂಟಿ ವೈರಸ್ ಸಾಫ್‌ಟ್‌‌ವೇರ್ ಗಳಿಂದ ಸ್ಕ್ಯಾಾನ್ ಮಾಡುತ್ತಾಾನೇ ಇರೋಣ. ಜತೆಗೆ ಆನ್ ಲೈನ್ ನಲ್ಲಿ ಸುರಕ್ಷಿತವಾಗಿ ವ್ಯವಹರಿಸೋಣ.

ಆನ್ ಲೈನ್ ಶಾಪಿಂಗ್
ಇತ್ತೀಚೆಗಂತೂ ಆನ್ ಲೈನ್ ಶಾಪಿಂಗ್ ಹೆಚ್ಚಾಾಗುತ್ತಿಿದೆ. ಕಂಪ್ಯೂೂಟರ್, ಟಿವಿ, ರೆಫ್ರಿಿಜರೇಟರ್ ಮುಂತಾದ ದೊಡ್ಡ ವಸ್ತುಗಳನ್ನು ಹಿಡಿದು ಸ್ಮಾಾರ್ಟ್ ಫೋನ್, ದಿನ ಬಳಕೆಯ ಉಪ್ಪುು, ಕೊತ್ತಂಬರಿ ಸೊಪ್ಪುು ಮೊದಲಾದ ಕನಿಷ್ಟ ಬೆಲೆಯ ವಸ್ತುಗಳ ಖರೀದಿಗೂ ಸಹ ಆನ್ ಲೈನ್ ಶಾಪಿಂಗ್‌ನ ಮೊರೆ ಹೋಗುತ್ತಿಿದ್ದೇವೆ. ಇಂತಹ ಶಾಪಿಂಗ್ ತಾಣಗಳಲ್ಲಿ ವಸ್ತುಗಳನ್ನು ಖರೀದಿಸುವಾಗ ಎಚ್ಚರವಹಿಸುವುದು ಉತ್ತಮ. ಆನ್‌ಲೈನ್ ಮೂಲಕ ಹಣ ಪಾವತಿ ಮಾಡುವಾಗ ಯು.ಆರ್.ಎಲ್.ನಲ್ಲಿ, ಎಚ್‌ಟಿಟಿಪಿಎಸ್ (ಠಿಠಿ) ಇದೆಯೇ ನೋಡಿಕೊಳ್ಳುವುದು ಸೂಕ್ತ. ಮೇಲ್ನೋೋಟಕ್ಕೆೆ ನೀವು ಬಳಸುತ್ತಿಿರುವ ಆನ್‌ಲೈನ್ ಶಾಪಿಂಗ್ ವೆಬ್‌ಸೈಟ್ ಅಸುರಕ್ಷಿತವೆಂದೆನಿಸಿದರೆ ಖರೀದಿಸಲು ಹೋಗುವುದು ಅಪಾಯಕಾರಿ.

ಹೇಗೆ ಬಳಸಬೇಕೆಂದು ವೆಬ್‌ಪೇಜ್‌ನಲ್ಲೇ ಕೊಟ್ಟಿಿರುವಾಗ, ಅವರಿವರನ್ನು ಏಕೆ ಕೇಳಬೇಕು – ಎಂದು ನಮಗೆ ತಿಳಿದ ಹಾಗೆ ಇಂಟರ್‌ನೆಟ್ ಬಳಸುವುದು ಸರಿಯಲ್ಲ. ಸಮಸ್ಯೆೆಗಳು ಎದುರಾಗುವ ಮುಂಚೆ ಯಾವುದಕ್ಕೂ ತಜ್ಞರ ಸಲಹೆ ಪಡೆದುಕೊಳ್ಳುವುದು ಜತೆಗೆ, ಅಂತರ್ಜಾಲ ಎಂಬುದು ಒಂದು ಹೆದ್ದಾಾರಿ, ಇಲ್ಲಿ ಎಲ್ಲಾಾ ರೀತಿಯ ಜನರು ಚಲಿಸುತ್ತಲೇ ಇದ್ದು, ಬೇರೆಯವರನ್ನು ಮೋಸ ಮಾಡುವವರೂ ಅಲ್ಲಲ್ಲಿ ಹೊಂಚುಹಾಕುತ್ತಿಿರುತ್ತಾಾರೆ ಎಂಬ ತಿಳುವಳಿಕೆ ಇಟ್ಟುಕೊಂಡೇ ವ್ಯವಹರಿಸಿವುದು ಒಳ್ಳೆೆಯದು.

ಜನಸಾಮಾನ್ಯರಲ್ಲಿ ತಿಳಿವಳಿಕೆ ಅಗತ್ಯ
ಪಾಸ್‌ವರ್ಡ್ ಬಳಕೆಯ ಕುರಿತು ಸಾಕಷ್ಟು ಎಚ್ಚರ ವಹಿಸಬೇಕು ಎಂದು ಬಹು ಹಿಂದಿನಿಂದಲೂ ಎಚ್ಚರಿಕೆ ನೀಡಲಾಗುತ್ತಿಿದೆ. ಆದರೆ, ಜನಸಾಮಾನ್ಯರು ಮಾತ್ರ ತಕ್ಕ ಎಚ್ಚರಿಕೆ ತೆಗೆದುಕೊಳ್ಳದೇ ಇರುವುದರಿಂದಾಗಿ, ಆನ್‌ಲೈನ್ ಮೋಸಗಳು ನಡೆಯುತ್ತಲೇ ಇವೆ. ಜತೆಗೆ, ಆನ್‌ಲೈನ್ ಮೋಸಗಾರರು ಎಷ್ಟು ಖದೀಮರು ಎಂದರೆ, ಸಾಕಷ್ಟು ವಿದ್ಯಾಾವಂತರನ್ನು ಸಹ ಮೋಸದ ಬಲೆಗೆ ಕೆಡವಿದ್ದಾಾರೆ. ಒಟಿಪಿಯನ್ನು ಫೋನ್‌ನಲ್ಲಿ ಹೇಳುವುದು, ಅನವಶ್ಯಕ ಲಿಂಕ್‌ಗಳನ್ನು ಕ್ಲಿಿಕ್ ಮಾಡಿ ಮೋಸಹೋಗುವುದು, ಆನ್‌ಲೈನ್‌ನಲ್ಲಿ ಹಣ ದೊರೆಯುವುದೆಂಬ ಮೆಸೇಜ್‌ಗಳನ್ನು ನಂಬಿ ವಿವರ ನೀಡುವುದು, ಎಟಿಎಂ ಕಾರ್ಡುಗಳ ವಿವರಗಳನ್ನು ಇತರರಿಗೆ ನೀಡುವುದು ಮೊದಲಾದ ತಪ್ಪುುಗಳ ಮೂಲಕ, ಸಾವಿರಾರು ಜನ ಹಣ ಕಳೆದುಕೊಂಡಿದ್ದಾಾರೆ. ಬೆಂಗಳೂರಿನ ಸೈಬರ್ ಕ್ರೈಂ ವಿಭಾಗದಲ್ಲಿ ಆನ್‌ಲೈನ್ ಮೂಲಕ ಮೋಸ ಹೋದ ಸಾವಿರಾರು ಜನ ದೂರು ತಿಂಗಳಿನಿಂದ ತಿಂಗಳಿಗೆ ಈ ರೀತಿ ಮೋಸ ಹೋಗುವವರ ಸಂಖ್ಯೆೆ ಹೆಚ್ಚುತ್ತಲೇ ಇದೆ. ಇದನ್ನು ತಡೆಯಲು ಗ್ರಾಾಹಕರು, ಜನರು ತಮ್ಮ ಆನ್‌ಲೈನ್ ವ್ಯವಹಾರದಲ್ಲಿ ಹೆಚ್ಚಿಿನ ಎಚ್ಚರಿಕೆ ವಹಿಸುವುದರ ಜತೆ, ತಂತ್ರಜ್ಞಾಾನದ ಪ್ರಾಾಥಮಿಕ ವಿಚಾರಗಳ ಕುರಿತು ತಿಳಿವಳಿಕೆಯನ್ನೂ ಬೆಳೆಸಿಕೊಳ್ಳಬೇಕಾಗುತ್ತದೆ.