Wednesday, 11th December 2024

ಚೀನಾದ ಡಿಜಿಟಲ್ ಲಾಟರಿ

-ಅಜಯ್ ಅಂಚೆಪಾಳ್ಯ

ಚೀನಾದಲ್ಲಿ ಸಾವಿರಾರು ಜನರಿಗೆ ಅಕ್ಷರಶಃ ಲಾಟರಿ ಹೊಡೆದಿದೆ!

ಸರಕಾರವೇ ಅಲ್ಲಿನ ಸುಮಾರು 50000 ಜನರಿಗೆ ಲಾಟರಿ ರೂಪದಲ್ಲಿ ಸುಮಾರು 1.5 ಮಿಲಿಯ ಡಾಲರ್ ಹಣವನ್ನು ಹಂಚಿದೆ. ಇದರ ಮುಖ್ಯ ಉದ್ದೇಶವೆಂದರೆ ಡಿಜಿಟಲ್ ಕರೆನ್ಸಿಯನ್ನು ಟೆಸ್ಟ್ ಮಾಡಿ, ಆ ಮೂಲಕ ಜನಪ್ರಿಯತೆ ಗಳಿಸುವುದು! ಚೀನಾದಲ್ಲಿ ವಾಸವಿರುವ 50000 ಜನರನ್ನು ರ‍್ಯಾಂಡಮ್ ಆಗಿ ಆಯ್ಕೆ ಮಾಡಿ, ಅವರ ವ್ಯಾಲೆಟ್‌ಗೆ ತಲಾ 30 ಡಾಲರ್ ಹಣವನ್ನು ಸರಕಾರವೇ ತುಂಬಿದೆ. ಈ ಹಣವನ್ನು ಷೆಂಜೆನ್ ಜಿಲ್ಲೆಯ ಸಾವಿರಾರು ಅಂಗಡಿಗಳಲ್ಲಿ ಪಾವತಿಸಿ, ತಮಗೆ ಬೇಕೆನಿಸಿದ ವಸ್ತುಗಳನ್ನು ಖರೀದಿಸ ಬಹುದು. ಇದರ ಮುಖ್ಯ ಉದ್ದೇಶಗಳು ಎರಡು. ಮೊದಲನೆಯದಾಗಿ, ಡಿಜಿಟಲ್ ತಂತ್ರಜ್ಞಾನದ ದಕ್ಷತೆ ಯನ್ನು ಪರೀಕ್ಷಿಸುವುದು. ಎರಡನೆಯದಾಗಿ, ಕೋವಿಡ್ ನಂತರದ ದಿನಗಳಲ್ಲಿ, ಜನರು ಹೆಚ್ಚು ಹೆಚ್ಚು ಅಂಗಡಿಗಳಿಗೆ ಹೋಗಿ, ಖರೀದಿಯನ್ನು ಮಾಡಲು ಆರಂಭಿಸಲಿ ಎಂದು ಪ್ರೋತ್ಸಾಹ ನೀಡುವ ಉದ್ದೇಶವೂ ಇದರಲ್ಲಿ ಸೇರಿದೆ.

ಈ ಲಾಟರಿಯ ವಿಜೇತರು ರೆನ್‌ಮಿನ್‌ಬಿ ಎಂಬ ಆಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ಆ ಆಪ್ ಮೂಲಕ ತಮ್ಮ ವೈಯಕ್ತಿಕ ವಿವರ ಮತ್ತು ವ್ಯಾಲೆಟ್ ವಿವರಗಳನ್ನು ಅಪ್‌ಲೋಡ್ ಮಾಡಿ, ಡಿಜಿಟಲ್ ಹಣವನ್ನು ತಮ್ಮ ಖಾತೆಗೆ ಡೌನ್‌ಲೋಡ್
ಮಾಡಿಕೊಳ್ಳಬಹುದು. ಇದನ್ನು ಬಳಸಿ, ಸ್ಥಳೀಯ ಮಾಲ್ ಗಳಲ್ಲಿ, ವಾಲ್‌ಮಾರ್ಟ್ ಅಂಗಡಿಗಳಲ್ಲಿ ತಮಗಿಷ್ಟ ಎನಿಸಿದ ವಸ್ತು ಗಳನ್ನು ಖರೀದಿಸಬಹುದು. ಈ ಡಿಜಿಟಲ್ ಕರೆನ್ಸಿಯ ವಿಶೇಷತೆ ಎಂದರೆ, ಇದರ ಸಂಪೂರ್ಣ ನಿಯಂತ್ರಣವನ್ನು ಚೀನಾ ಸರಕಾರವೇ ಹೊಂದಿರುತ್ತದೆ. ಬಿಟ್‌ಕಾಯಿನ್ ನಂತರ ಡಿಜಿಟಲ್ ಕರೆನ್ಸಿಗಳು ಅಂತಾರಾಷ್ಟ್ರೀಯ ಚಲಾವಣೆ ಹೊಂದಿದ್ದು,
ಸರಕಾರದ ನಿಯಂತ್ರಣದಲ್ಲಿಲ್ಲ. ಅದಕ್ಕೆ ಪರ್ಯಾಯವಾಗಿ, ಸರಕಾರದ ನಿಯಂತ್ರಣ ಹೊಂದಿರುವ ಡಿಜಿಟಲ್ ಕರೆನ್ಸಿಯನ್ನು ಚೀನಾವು ಈ ಮೂಲಕ ಪ್ರಯೋಗ ಮಾಡುತ್ತಿದೆ.

ಜತೆಯಲ್ಲೇ, ಚೀನಾವನ್ನು ಕ್ಯಾಷ್‌ಲೆಸ್ ಸಮಾಜವನ್ನಾಗಿ ರೂಪಿಸುವ ಸರಕಾರದ ದೀರ್ಘಕಾಲೀನ ಯೋಜನೆಯ ಒಂದು ಭಾಗ ವಾಗಿ ಈ ಲಾಟರಿ ಕಾರ್ಯನಿರ್ವಹಿಸುತ್ತದೆ. ಈಗಾಗಲೇ ಅಲ್ಲಿನ ಟೆನ್‌ಸೆಂಟ್ ಮತ್ತು ಅಲಿಪೇ ಮೂಲಕ ಡಿಜಿಟಲ್ ಪಾವತಿ
ಸಾಕಷ್ಟು ಜನಪ್ರಿಯ.