ಜಗತ್ತಿನ ಖ್ಯಾತ ಸಾಹಸಿ ಉದ್ಯಮಿ ಇಲೋನ್ ಮಸ್ಕ್‌ಗೆ ಒಂದು ಗೀಳಿದೆ. ಆಗಾಗ ಟ್ವೀಟ್ ಮಾಡಿ ಕ್ರಿಪ್ಟೊಕರೆನ್ಸಿ ಕುರಿತು ತನ್ನದೇ ಅಭಿಪ್ರಾಯ ತೇಲಿಬಿಡುವುದು. ಆ ರೀತಿ ಅವರ ಅಭಿಪ್ರಾಯ ವೈರಲ್ ಆದ ಕೂಡಲೆ ಕ್ರಿಪ್ಟೊಕರೆನ್ಸಿ ದರ ಪಾತಾಳಕ್ಕೆ ಜಾರುತ್ತದೆ ಅಥವಾ ಮೇಲೇರುತ್ತದೆ.
ಈಚೆಗೆ ಅವರ ಒಂದು ಟ್ವೀಟ್ ನಿಂದಾಗಿ ಬಿಟ್‌ಕಾಯಿನ್ ದರ ಸರಸರನೆ ಕೆಳಗಿಳಿಯಿತು. ಹಣ ಮಾಡುವ ಉದ್ದೇಶದಿಂದ ಬಿಟ್
ಕಾಯಿನ್‌ನಲ್ಲಿ ಹೂಡಿಕೆ ಮಾಡಿದ್ದವರು ತಲೆ ಮೆಲೆ ಕೈ ಹೊತ್ತು ಕೂತರು. ತೀರಾ ಅಂದರೆ ತೀರಾ ಕಡಿಮೆ ಬೆಲೆಯಲ್ಲಿ ದೊರೆಯು ತ್ತಿದ್ದ ಡೋಜೆಕಾಯಿನ್ ಬೆಲೆ ಏರಿತು! ಅದಕ್ಕೂ ಅವರ ಟ್ವೀಟ್ ಕಾರಣ. ಬಿಟ್ ಕಾಯಿನ್ ಕುರಿತು ಅವರು ಯಾಕೆ ಆಗಾಗ ಟ್ವೀಟ್ ಮಾಡುತ್ತಾ ಇರುತ್ತಾರೆ ಎಂದು ಊಹೆ ಮಾಡುವವರ ಸಂಖ್ಯೆಯೇ ಬಹಳ! ಆದರೆ ಉತ್ತರ ದೊರಕಿಲ್ಲ.
ಅವರ ಟ್ವೀಟ್ ಪ್ರೇಮಕ್ಕೆ ಬೆದರಿಕೆ ಒಡ್ಡಿದ ಘಟನೆ ಎರಡು ದಿನಗಳ ಹಿಂದೆ ನಡೆಯಿತು. ‘ನೀವು ಜಗತ್ತಿನ ಅತಿ ಚಾಣಾಕ್ಷ ಎಂದು
ತಿಳಿದಿರಬಹುದು.ಆದರೆ ನಿಮ್ಮನ್ನೆದುರಿಸಲು ನಾವು ಈಗ ಬಂದಿದ್ದೇವೆ. ನಾವು ಅನಾನಿಮಸ್ ಮತ್ತು ನಾವೊಂದು ದೊಡ್ಡ ಗ್ಯಾಂಗ್!’ ಈ ರೀತಿ ಇಲಾನ್ ಮಸ್ಕ್ ಅವರನ್ನು ಬೆದರಿಸುವ ಒಂದು ವಿಡಿಯೋವನ್ನು ಅನಾನಿಮಸ್ ಎಂಬ ಗ್ಯಾಂಗ್ ತೇಲಿ ಬಿಟ್ಟಿದ್ದು, ಇದನ್ನು ಎರಡೇ ದಿನದಲ್ಲಿ 20 ಲಕ್ಷ ಜನ ನೋಡಿದ್ದಾರೆ. ಈ ವಿಡಿಯೋ ವೈರಲ್ ಆಗಲು ಇಲೋನ್ ಮಸ್ಕ್ ಅವರು ಬಿಟ್ ಕಾಯಿನ್ ಕುರಿತು
ತೇಲಿಬಿಟ್ಟ ಟ್ವೀಟ್‌ಗಳೇ ಕಾರಣ ಎನ್ನಲಾಗಿದೆ. ಅಂದ ಹಾಗೆ ಈ ಅನಾನಿಮಸ್ ಎಂದರೆ ಯಾರು? ಅದು ದು ಕುಖ್ಯಾತ ಹ್ಯಾಕಿಂಗ್ ಗುಂಪು! ಸಾಕಷ್ಟು ಭದ್ರ ಎನಿಸಿದ ಸರ್ವರ್‌ಗಳನ್ನು ಹ್ಯಾಕ್ ಮಾಡಿದ ಕುಖ್ಯಾತಿ ಈ ಗುಂಪಿನ ಸದಸ್ಯರಿಗೆ ಇದೆ! ಮೇಲ್ನೋಟಕ್ಕೆ ಬೆದರಿಕೆಯ ಧ್ವನಿ ಹೊಂದಿರುವ ಈ ವಿಡಿಯೋದಿಂದ ಇಲೋನ್ ಮಸ್ಕ್ ಅವರು ಸಣ್ಣದಾಗಿ ಬೆದರಿದ್ದಾರಾ? ಉಹುಂ, ಬಿಲ್ ಕುಲ್
ಇಲ್ಲ! ಅವರ ಈ ಫೋಟೋ ನೋಡಿದರೇ ಗೊತ್ತಾಗುವುದಿಲ್ಲವೇ!