ಹಾಹಾಕಾರ್
ಶಶಿಧರ ಹಾಲಾಡಿ
ಕಾರೆನ್ಸ್ ಎಂದರೆ ಪ್ರೀತಿ, ವಾತ್ಸಲ್ಯ ಎಂಬರ್ಥವಿದೆ. ದಕ್ಷಿಣ ಕೊರಿಯಾದ ಕಿಯಾ ಸಂಸ್ಥೆಯು ತನ್ನ ಹೊಸ ಮಾದರಿಯ ಕಾರ್‌ಗೆ ಕಿಯಾ ‘ಕಾರೆನ್ಸ್’ ಎಂಬ ಹೆಸರನ್ನಿಟ್ಟು, ಕುಟುಂಬ ಪ್ರಿಯರ ಗಮನ ಸೆಳೆಯುತ್ತಿದೆ. ಕುಟುಂಬದ ನಿಮ್ಮೆಲ್ಲಾ ಆಪ್ತರನ್ನು ಒಟ್ಟಿಗೇ ದೂರ ಪ್ರಯಾಣಕ್ಕೆ ಕರೆದೊಯ್ದು, ನಿಮ್ಮ ಕಾಳಜಿಯನ್ನು, ಪ್ರೀತಿಯನ್ನು ತೋರಿಸಲು ಸೂಕ್ತ ಎನಿಸಿದ ಕಾರ್ ಇದು.
ಏಕೆಂದರೆ, ಇದರಲ್ಲಿ ಆರರಿಂದ ಏಳು ಜನರು ಕುಳಿತುಕೊಳ್ಳಬಹುದು, ಅದೇ ಸಮಯ ದಲ್ಲಿ ಸಾಕಷ್ಟು ಲೆಗ್‌ಸ್ಪೇಸ್‌ನ ಸೌಕರ್ಯ ವನ್ನೂ ಅನುಭವಿಸಬಹುದು. ಜತೆಗೆ, ಆಕಸ್ಮಿಕ ಸಂದರ್ಭಗಳಲ್ಲಿ ಸುರಕ್ಷತೆಗೂ ಇದರಲ್ಲಿ ಒತ್ತು ಕೊಡಲಾಗಿದೆ ಎಂದು ಕಿಯಾ ಸಂಸ್ಥೆ ಹೇಳಿಕೊಂಡಿದೆ. ಕಿಯಾ ಕಾರೆನ್ಸ್ , ದೊಡ್ಡ ಗಾತ್ರದ ಮಲ್ಟಿ ಯುಟಿಲಿಟಿ ವೆಹಿಕಲ್. ಈ ವಾಹನದಲ್ಲಿ ಹಲವು ಅವರತಣಿಕೆಗಳಿದ್ದು, ಪೆಟ್ರೋಲ್ ಮ್ಯಾನುಅಲ್, ಡೀಸೆಲ್ ಮ್ಯಾನುವಲ್, ಡೀಸೆಲ್ ಆಟೊಮ್ಯಾಟಿಕ್, ಪೆಟ್ರೋಲ್ ಟರ್ಬೊ ಆಟೊಮ್ಯಾಟಿಕ್ ಮಾದರಿಗಳು ಹೆಚ್ಚು ಜನಪ್ರಿಯ ಎನಿಸಿವೆ.
ಗೇರ್ ಬದಲಿಸುವ ಗೋಜು ಬೇಡ ಎನ್ನುವವರಿಗೆ ಆಟೊಮ್ಯಾಟಿಕ್ ಗೇರ್ ಹೊಂದಿರುವ ಕಾರು ಹೆಚ್ಚು ಅನುಕೂಲ ಎನಿಸಬಹುದು. ೭ ಸ್ಪೀಡ್ ಡಿಟಿಸಿ ಟ್ರಾನ್ಸ್‌ಮಿಷನ್ ಇರುವ ಈ ಮಾದರಿಯು, ಮ್ಯಾನುವಲ್ ಮಾದರಿಗೆ ಹೋಲಿಸಿದರೆ ತುಸು ದುಬಾರಿ ಎನಿಸಬಹು ದಾದರೂ, ಸಿಟಿ ಡ್ರೈವಿಂಗ್‌ಗೆ ಹೆಚ್ಚು ಅನುಕೂಲ ಮತ್ತು ದೂರ ಡ್ರೈವಿಂಗ್‌ನಲ್ಲಿ ಪೆಟ್ರೋಲ್ ಉಳಿತಾಯಕ್ಕೆ ಅವಕಾಶ ಮಾಡಿಕೊಡುತ್ತದೆ. ಇದರಲ್ಲಿ ಡೀಸೆಲ್ ಮಾದರಿ ಯೂ ಇದೆ.
ಉತ್ತಮ ಕೌಟುಂಬಿಕ ಕಾರ್
ಈ ಕಾರನ್ನು ಪರಿಶೀಲಿಸಿ, ಚಲಾಯಿಸಿದ ಹಲವು ವಾಹನ ಪ್ರಿಯರು, ಇದನ್ನು ಈ ವರ್ಷದ ಅತ್ಯುತ್ತಮ ‘ಕೌಟುಂಬಿಕ ಕಾರು’ ಎಂದೇ ಹೇಳಿದ್ದಾರೆ. ನೋಡಲು ಚಂದವಿದ್ದು, ಮಧ್ಯದ ಸೀಟಿನಲ್ಲಿ ಇಬ್ಬರು ಅಥವಾ ಮೂವರು ಕುಳಿತುಕೊಳ್ಳುವ ಸೌಲಭ್ಯ ವನ್ನು ಮಾಡಿಸಿಕೊಳ್ಳುವ ಆಯ್ಕೆಯಿದೆ. ಹಿಂಭಾಗದ ಸೀಟಿನಲ್ಲಿ ಇಬ್ಬರು ಜಾಗ ಹೊಂದಿಸಿಕೊಂಡು ಕುಳಿತುಕೊಳ್ಳಬಹುದು.
ಅಕಸ್ಮಾತ್ ಹಿಂಭಾಗದ ಸೀಟಿನಲ್ಲಿ ಪಯಣಿಸುವವರು ಯಾರೂ ಇಲ್ಲದೇ ಇದ್ದ ಪಕ್ಷದಲ್ಲಿ, ಅದನ್ನು ಮಡಚಿಟ್ಟಾಗ, ವಿಶಾಲವಾದ ಲಗೇಜ್ ಸ್ಪೇಸ್ ಲಭ್ಯವಾಗಲಿದೆ. ದೂರ ಪಯಣಕ್ಕೆ ಬೇಕೆನಿಸಿದ ವಿವಿಧ ತಿನಿಸು, ಗೃಹೋಪಯೋಗಿ ಮತ್ತು ವೈಯಕ್ತಿಕ ಬಳಕೆಯ ವಸ್ತುಗಳನ್ನು ಇಲ್ಲಿ ಇಡಲು ಸಾಧ್ಯ. ಆದ್ದರಿಂದಲೇ ಇದು ಕೌಟುಂಬಿಕ ಕಾರು ಎಂದು ಹಲವರು ಗುರುತಿಸಿದ್ದಾರೆ.
ಮೈಲೇಜ್
ಹೆಚ್ಚು ಸುರಕ್ಷಿತ ಎನಿಸಲು ಸಾಕಷ್ಟು ಫಿಚರ್‌ಗಳನ್ನು ಈ ಕಾರಿನಲ್ಲಿ ಅಳವಡಿಸಿರುವುದರಿಂದ, ತೂಕ ಹೆಚ್ಚಿದೆ. ಆರಂಭದಲ್ಲಿ, ಅಂದರೆ ಸರ್ವಿಸ್ ಮಾಡಿಸುವ ಮುಂಚೆ ಕಡಿಮೆ ಮೈಲೇಜ್ ಕೊಡುತ್ತದೆ ಎಂದು ಖರೀದಿಸಿದವರ ಅನುಭವ. ಆದರೆ, ಸರ್ವಿಸ್ ಆದ ನಂತರ ೧೬ರಿಂದ ೨೧ ಕಿ.ಮೀ. ಮೈಲೇಜ್ ಕೊಡುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ.
ಇಂಟೀರಿಯರ್
ಡ್ಯಾಶ್‌ಬೋರ್ಡ್‌ನಲ್ಲಿ ಒದಗಿಸಿರುವ ಸೌಲಭ್ಯವು ಕಾರ್ ಪ್ರಿಯರ ಮೆಚ್ಚುಗೆ ಗಳಿಸಿದೆ. ಕಿಯಾ ಸಂಸ್ಥೆಯ ಅತಿ ಜನಪ್ರಿಯ ಮಾದರಿ ಯಾದ ಸೆಲ್ಟೋಸ್‌ನ ಪ್ಲಾಟ್ ಫಾರಂನ್ನು ಕಾರೆನ್ಸ್ ಹಂಚಿಕೊಂಡಿದ್ದರೂ, ಕಿಯಾ ಕರೆನ್ಸ್‌ನಲ್ಲಿ ಅನನ್ಯತೆ ಮೂಡಿಸಲು ಪ್ರಯತ್ನಿಸ ಲಾಗಿದೆ. ಪ್ರಬಲ ಎ.ಸಿ., ೧೦.೨೫ ಇಂಚು ಟಚ್‌ಸ್ಕ್ರೀನ್, ಡಿಜಿಟಲ್ ಡಿಸ್ಪ್ಲೇ, ಎಂಟು ಸ್ಪೀಕರ್‌ನ ಆಡಿಯೋ, ಪರ್ಫ್ಯೂಮ್ ಡಿಸ್ಪೆನ್ಸರ್ ಮೊದಲಾದವು ಇದರ ಫೀಚರ್ಸ್.
ಕೌಟುಂಬಿಕ ಆರೋಗ್ಯ ಕಾಪಾಡಲು ಈ ಕಾರಿನಲ್ಲಿ ಏರ್ ಪ್ಯೂರಿಫೈರ್ ಅಳವಡಿಸಲಾಗಿದ್ದು, ಅದರ ಸಹಾಯದಿಂದ ಬ್ಯಾಕ್ಟೀರಿ ಯಾ ಮತ್ತು ವೈರಸ್‌ಗಳನ್ನು ನಿಯಂತ್ರಸಬಹುದು ಎಂದಿದೆ ಕಿಯಾ ಸಂಸ್ಥೆ!