Saturday, 14th December 2024

ಗೂಗಲ್‌ ಐಒ 2021 ಹೊಸತನದ ಹರಿಕಾರ

ಟೆಕ್ ಫ್ಯೂಚರ್‌

ವಸಂತ ಗ ಭಟ್‌

ಮುಂದಿನ ದಿನಗಳಲ್ಲಿ 3ಡಿ ವಿಡಿಯೋ ಕಾಲ್, ಗೂಗಲ್ ಲ್ಯಾಮ್ಡಾನಂತಹ ಹೊಸ ಹೊಸ ಸೌಲಭ್ಯಗಳನ್ನು ಗೂಗಲ್ ಪರಿಚಯಿಸಲಿದೆ.

ಪ್ರತಿ ವರ್ಷ ಮೇ ತಿಂಗಳಿನಲ್ಲಿ ಗೂಗಲ್ ಸಂಸ್ಥೆ ‘ಗೂಗಲ್ ಐಒ’ ಎನ್ನುವ ವಾರ್ಷಿಕ ಸಮ್ಮೇಳನವನ್ನು ನಡೆಸುತ್ತದೆ. ಈ ಸಮ್ಮೇಳನ ದಲ್ಲಿ ಗೂಗಲ್ ಒಂದು ವರ್ಷದಲ್ಲಿ ಏನೆ ಹೊಸ ಅನ್ವೇಷಣೆಗಳನ್ನು ಮಾಡಿದೆ ಎಂದು ತನ್ನ ಬಳಕೆದಾರರ ಬಳಿ ಹಂಚಿಕೊಳ್ಳುತ್ತದೆ. ಈ ವರ್ಷದ ಗೂಗಲ್ ಐಒ ಮೇ 18 ರಿಂದ 20 ರ ವರೆಗೆ ಆನ್ ಲೈನ್‌ನಲ್ಲಿ ನಡೆಯಿತು. ಏನೇನು ಹೊಸತನ್ನು ನೀಡಲಿದೆ ಗೂಗಲ್?

ಗೂಗಲ್ ಲ್ಯಾಮ್ಡಾ
ವಿಶ್ವದ ಎಲ್ಲ ವಸ್ತು ಅಥವಾ ಜೀವಿಗಳ ಬಗ್ಗೆ ತಿಳಿಯಲು ಬಳಕೆಯಾಗಬಹುದಾದಂತಹ ಸೇವೆ ಗೂಗಲ್ ಲ್ಯಾಮ್ಡಾ. ಉದಾಹರಣೆಗೆ ಪ್ಲೂಟೊ ಗ್ರಹದ ಬಗ್ಗೆ ಏನಾದರೂ ವಿಷಯವನ್ನು ತಿಳಿಯಬೇಕು ಎಂದೆಣಿಸಿದರೆ ಲ್ಯಾಮ್ಡಾ ಆಪ್ ಸಹಾಯದಿಂದ ಪ್ಲೂಟೊ ಗ್ರಹದ ಚಿತ್ರ ನಿಮ್ಮೊಡನೆ ಮಾತನಾಡಲಿದೆ. ಪ್ಲೂಟೊ ಗ್ರಹದ ವಾತಾವರಣವನ್ನು ಅರಿಯಬೇಕೆಂದರೆ ಲ್ಯಾಮ್ಡಾ ಆಪ್ ನಲ್ಲಿರುವ ಪ್ಲೂಟೊ ಭಾವಚಿತ್ರಕ್ಕೆ ಆ ಪ್ರಶ್ನೆಗಳನ್ನು ಕೇಳಬಹುದು ಮತ್ತು ಆಪ್ ನಿಮಗೆ ಉತ್ತರಿಸಲಿದೆ. ಈ ಆಪ್ ಈಗ ಪರೀಕ್ಷಾ ಹಂತದಲ್ಲಿದೆ.

ಸ್ಮಾರ್ಟ್ ಕ್ಯಾನ್ವಸ್

ಗೂಗಲ್ ಬಳಕೆದಾರರಿಗೆ ಗೂಗಲ್‌ನ ಡಾಕ್ಸ್, ಶೀಟ್ಸ್ ಮತ್ತು ಮೀಟಿಂಗ್ ಆಪ್‌ಗಳ ಪರಿಚಯ ಇದ್ದೇ ಇರುತ್ತದೆ. ಇಲ್ಲಿಯವರೆಗೂ ಇವೆಲ್ಲವೂ ಬೇರೆ ಬೇರೆ ಆಪ್ ಗಳಾಗಿದ್ದವು. ಇನ್ನು ಮುಂದೆ ಒಂದೇ ಆಪ್ ನಲ್ಲಿ ಇನ್ನೊಂದನ್ನು ಬಳಸಬಹುದಾಗಿದೆ. ಉದಾ ಹರಣೆಗೆ ಗೂಗಲ್ ಶೀಟ್ಸ್‌ಅನ್ನು ಸ್ನೇಹಿತರೊಡನೆ ಹಂಚಿಕೊಂಡು, ವೀಡಿಯೋ ಕರೆ ಮಾಡಬೇಕೆಂದರೆ, ಗೂಗಲ್ ಶೀಟ್ಸ ಆಪ್ ಮೂಲಕವೇ ಕರೆಯನ್ನು ಮಾಡಬಹುದಾಗಿದೆ. ಎಲ್ಲ ಸೇವೆಗಳು ಜೋಡನೆಯಾಗಿರುವುದು ಹೆಚ್ಚಿನ ಬಳಕೆದಾರನಿಗೆ ಸಹಕಾರಿಯಾಗಲಿದೆ.

ಆಟೋ ಡಿಲೀಟ್
ಸುಂದರ್ ಪಿಚೈ ಗೂಗಲ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಬಂದಾಗಿನಿಂದಲೂ ಈ ವಿಷಯದ ಬಗ್ಗೆ ಬಹಳಷ್ಟು ಬಾರಿ ಪ್ರಸ್ತಾಪಿಸಿದ್ದಾರೆ. ಬಳಕೆದಾರನ ಅನಾವಶ್ಯಕವಾದ ಮಾಹಿತಿಯನ್ನು ಗೂಗಲ್ ತನ್ನ ಸಂಗ್ರಹದಲ್ಲಿ ಇಡಬಾರದು ಎನ್ನು ವುದು ಸುಂದರ್ ಪಿಚೈ ವಾದ. ಈ ನಿಟ್ಟಿನಲ್ಲಿ, ಬಳಕೆದಾರನ ಮಾಹಿತಿ ಸಂಗ್ರಹವಾದ ಹದಿನೆಂಟು ತಿಂಗಳ ನಂತರ ಅದನ್ನು ತನ್ನ ಸಂಗ್ರಹಣಾ ವ್ಯವಸ್ಥೆಯಿಂದ ತೆಗೆಯಲಾಗುವುದಾಗಿ ಘೋಷಿಸಿದೆ.

ಇಲ್ಲಿ ಸಾಮಾನ್ಯ ಜನರಿಗೆ ಅರ್ಥವಾಗದ ಒಂದು ಬುದ್ಧಿವಂತ ನಡೆಯಿದೆ. ಇಂದು ಗೂಗಲ್ ಸಂಗ್ರಹಿಸಿದ ನಿಮ್ಮ ಮಾಹಿತಿ 18 ತಿಂಗಳ ನಂತರ ಗೂಗಲ್ ಸಂಗ್ರಹದಿಂದ ತೆಗೆಯಲ್ಪಡಲಿದೆ. ಆದರೆ ನಾಳೆಯ ಮಾಹಿತಿ ಇನ್ನೂ ಗೂಗಲ್ ಸಂಗ್ರಹದ ಇರಲಿದೆ.
18 ತಿಂಗಳ ಹಳೆಯ ಮಾಹಿತಿ ಗೂಗಲ್ ಸಂಗ್ರಹದಿಂದ ತೆರವುಗೊಂಡರೂ, ಹೊಸ ಮಾಹಿತಿ ಅಥವಾ ಅವಶ್ಯವಿರುವ ಹೊಸ ಮಾಹಿತಿ ಸದಾ ಗೂಗಲ್ ಸಂಗ್ರಹದ ಇರುತ್ತದೆ!

ಗೂಗಲ್ ಲೆನ್ಸ್
ಹೆಚ್ಚಿನ ಅನ್ದ್ರೋಯಿಡ್ ಫೋನ್‌ಗಳಿಗೆ ಈ ಅಪ್ಡೇಟ್ ಅದಾಗಲೇ ಬಂದಿದೆ. ನೀವು ಭಾಷೆ ಬಾರದ ಊರಿನಲ್ಲಿ ಇರುತ್ತೀರಿ. ಅಲ್ಲಿರುವ ನಾಮಫಲಕ ಓದಲು ಕಷ್ಟವಾದರೆ , ಕ್ಯಾಮೆರದ ಲಭ್ಯವಿರುವ ಗೂಗಲ್ ಲೆನ್ಸ್‌ಅನ್ನು ಆಯ್ಕೆ ಮಾಡಿ ಅಕ್ಷರದ ಮೇಲೆ ಇಟ್ಟರಾ ಯಿತು, ಆ ಫಲಕದ ರೂಪಾಂತರ ಲಭ್ಯ. ಅಷ್ಟೇ ಅಲ್ಲ, ಪುಸ್ತಕಲ್ಲಿರುವ ಒಂದು ಸಾಲನ್ನು ಇಷ್ಟಪಟ್ಟರೆ ಗೂಗಲ್ ಲೆನ್ಸ್ ಮೂಲಕ ಅದನ್ನು ಸ್ಕ್ಯಾನ್ ಮಾಡಿ ಚಿತ್ರದಿಂದ ಬರಹವಾಗಿ ರೂಪಾಂತರಿಸಿ ಬಳಸಿಕೊಳ್ಳಬಹುದು. ಪ್ರವಾಸಿ ತಾಣದ ಚಿತ್ರವನ್ನು ಸ್ಕ್ಯಾನ್ ಮಾಡಿ, ಗೂಗಲ್ ಲೆನ್ಸ್ ಮೂಲಕ ಅದರ ಮಾಹಿತಿ ಓದಬಹುದು.

ಹೊಸ ಗೂಗಲ್ ಮ್ಯಾಪ್ಸ್
ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗುವಾಗ, ಕೆಲವೊಮ್ಮೆ ಹಲವಾರು ರಸ್ತೆಗಳು ಒಂದು ಕಡೆ ಸೇರಿದರೆ ಎಲ್ಲಿ ಹೋಗ ಬೇಕು ಎಂದು ಚಾಲಕರಿಗೆ ಗೊಂದಲವಾಗುತ್ತದೆ. ಇದನ್ನು ಬಗೆಹರಿಸಲು ಹೊಸ ಗೂಗಲ್ ಮ್ಯಾಪ್ಸ್, ಮೊಬೈಲ್ ಕ್ಯಾಮೆರಾ ಸಹಾಯದಿಂದ ಮುಂದಿರುವ ರಸ್ತೆಗಳಲ್ಲಿ ಯಾವ ರಸ್ತೆಯಲ್ಲಿ ಸಾಗಬೇಕು ಎನ್ನುವುದನ್ನು ಚಿತ್ರ ಸಮೇತ ತೋರಿಸಲಿದೆ. ಹೊರಾಂಗಣದಿಂದ ಒಳಾಂಗಣಕ್ಕೂ ಎಂಟ್ರಿ ಕೊಟ್ಟಿರುವ ಗೂಗಲ್ ಮ್ಯಾಪ್ಸ್, ಮಾಲ್ ಅಥವಾ ಶಾಪಿಂಗ್ ಕಾಂಪ್ಲೆಕ್ಸ್ ಒಳಗಿನ ಅಂಗಡಿಯನ್ನು ಹುಡುಕಲು ಸಹಾಯಮಾಡಲಿದೆ.

ಪ್ರಾಜೆಕ್ಸ್ ಸ್ಟಾರ್‌ಲೈನ್
ಲಾಕ್ ಡೌನ್ ಆದಾಗಿನಿಂದಲೂ ವೀಡಿಯೋ ಕರೆ ಮೂಲಕ ಮಾತಾಡುವುದು ಎಲ್ಲರಿಗೂ ಜೀವನದ ಕ್ರಮವೇ ಆಗಿ ಹೋಗಿದೆ. ಈ ವೀಡಿಯೋ ಕರೆಗಳನ್ನು ಇನ್ನಷ್ಟು ಸುಂದರಗೊಳಿಸಲು ಸಿದ್ಧವಾಗಿರುವುದು ಗೂಗಲ್ ಸ್ಟಾರ್ ಲೈನ್ ಎನ್ನುವ ಹೊಸ ಪ್ರಾಜೆಕ್ಟ್. ಇದರ ಮೂಲಕ ಗೂಗಲ್ ವ್ಯಕ್ತಿಗಳ 3ಡಿ ಚಿತ್ರವನ್ನು ಶೇಖರಿಸಿಕೊಂಡು, ಮಾತನಾಡವವರ ವೀಡಿಯೋವನ್ನು 3ಡಿ ಮೂಲಕ
ತೋರಿಸಲಿದೆ. ಸದ್ಯ ಗೂಗಲ್ ಸಂಸ್ಥೆಯ ಕೆಲವೇ ನೌಕರರು ಇದನ್ನು ಬಳಸುತ್ತಿದ್ದು ಮುಂಬರುವ ದಿನಗಳಲ್ಲಿ ಇದು ಬಳಕೆ ದಾರರಿಗೆ ಲಭ್ಯವಾಗಲಿದೆ.

ಗೂಗಲ್ ನಮಗೆ ಏನು ನೀಡುತ್ತಿದೆಯೋ ಅವುಗಳ ಬಗ್ಗೆ ಗೂಗಲ್ ಹತ್ತು ವರ್ಷದ ಹಿಂದೆಯೇ ಅಧ್ಯಯನ ಆರಂಭಿಸಿರುತ್ತದೆ. ಇಂದು ಅಸಾಧ್ಯ ಎಂದು ನಂಬಿದ ಎಷ್ಟೋ ವಿಷಯಗಳನ್ನು ಗೂಗಲ್ ಸಾಧಿಸಿ ತೋರಿಸಲಿದೆ. ಮುಂಬರುವ ಗೂಗಲ್ ಐಒ ಗಳು ಇನ್ನಷ್ಟು ಹೊಸತನ್ನು ಪರಿಚಯಿಸಲಿವೆ.