Wednesday, 11th December 2024

ಆನ್‌ಲೈನ್‌ ಗೇಮ್‌ಗಳಿಗೆ ಬೇಕು ನಿಯಂತ್ರಣವೆಂಬ ಬೌಂಡರಿ

ಯಾವುದೇ ಕ್ಷೇತ್ರದ ಅಭಿವೃದ್ಧಿ ಮತ್ತು ದೀರ್ಘಕಾಲೀನ ಪ್ರಗತಿಗೆ ಸರಕಾರದ ಬೆಂಬಲ ಮತ್ತು ಸರಿಯಾದ ಕಾನೂನುಗಳು ಸದಾ
ಅತ್ಯವಶ್ಯ. ಇದರಿಂದಾಗಿ ಬಂಡವಾಳ ಹೂಡಿಕೆ ಹೆಚ್ಚಳ ಆಗಲಿದ್ದು, ಇದರಿಂದ ರಾಜ್ಯ ಸರಕಾರದ ಆದಾಯವೂ ಹೆಚ್ಚಲಿದೆ.

ಇದರ ಜತೆಗೆ, ಆನ್ ಲೈನ್ ಗೇಮಿಂಗ್ ಕಂಪನಿಗಳೂ ಕೂಡ ಸರಕಾರದ ಕಾಯಿದೆಗಳನ್ನು ಸರಿಯಾಗಿ ಪಾಲನೆ ಮಾಡುವುದರಿಂದ ಲಾಭಗಳೇ ಹೆಚ್ಚಲಿವೆ. ಸರಕಾರಕ್ಕೆ ತೆರಿಗೆ ರೂಪದಲ್ಲಿ ಆದಾಯ ಮತ್ತು ಉದ್ಯೋಗಾವಕಾಶಗಳ ಸೃಷ್ಟಿಯಿಂದ ರಾಜ್ಯದ
ಅಭಿ ವೃದ್ಧಿಗೂ ಕೂಡ ವೇಗ ಸಿಗಲಿದೆ.

ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ಆನ್ ಲೈನ್ ಆಟಗಳು ಜನಪ್ರಿಯವಾಗುತ್ತಿವೆ. ಮತ್ತು ಇದರಲ್ಲಿ ಹಣ ಹೂಡುವವರ ಸಂಖ್ಯೆಯೂ ಅಧಿಕವಾಗುತ್ತಿದೆ. ಹೀಗೆ ಹಣ ತೊಡಗಿಸುವವರಲ್ಲಿ ಭಾರತ ಎರಡನೇ ಸ್ಥಾನದಲ್ಲಿ ನಿಲ್ಲುತ್ತದೆ. ಜನಸಂಖ್ಯೆಯ ಸೂಚ್ಯಂಕದ ಪ್ರಕಾರ ಭಾರತದಲ್ಲಿ ಶೇ. 75 ರಷ್ಟು ಯುವ ಸಮೂಹವಿದೆ. ಅವರೆಲ್ಲ 45 ವರ್ಷ ಹಾಗೂ ಅದಕ್ಕಿಂತ ಕೆಳಗಿನವರು.
ಏಕೆ ಈ ಹಣ ಹೂಡುವವರ ಸಂಖ್ಯೆ ಉಲ್ಬಣವಾಗಿದೆ ಎನ್ನುವುದಕ್ಕೆ ಇದೊಂದು ಉದಾಹರಣೆ ಆಷ್ಟೆ. ಈ ವಯೋಮಾನದ ಎಲ್ಲರ ಕೈಯಲ್ಲೂ ಈಗ ಇಂಟರ್‌ನೆಟ್ ಒಳಗೊಂಡ ಸ್ಮಾರ್ಟ್ ಫೋನ್ ಸಾಮಾನ್ಯವಾಗಿ ಇದ್ದೇ ಇರುತ್ತದೆ. ಅಲ್ಲದೆ ಇವರಿಗೆ ಆದಾಯವೂ ಇಲ್ಲದೆ ಇರುವುದಿಲ್ಲ. ಇಂತವರು ಆನ್‌ಲೈನ್ ಆಟಗಳ ಮೇಲೆ ಹಣ ಹೂಡಲು ಮುಂದೆ ಬರುತ್ತಿದ್ದಾರೆ.

ಮತ್ತೆ ಅದರಲ್ಲಿ ತಮ್ಮ ಜಾಣತವನ್ನು ಪ್ರದರ್ಶಿಸುತ್ತಾರೆ. ಇದರಲ್ಲಿ ಕೇವಲ ಪುರುಷರು ಮಾತ್ರವೇ ಅಲ್ಲ, ಬದಲಿಗೆ ಭಾರತದ ಹೆಣ್ಣು ಮಕ್ಕಳು ಹಣ ಹೂಡಿಕೆಯಲ್ಲಿ ಆಸಕ್ತಿ ಹೊಂದಿದ್ದಾರೆ. ಇನ್ನೂ ಕೆಲವರಿರ ಹಣ ಹೂಡುವುದು ಮತ್ತು ತಮ್ಮ ಅದೃಷ್ಟ ಪರೀಕ್ಷೆಯನ್ನು ಮಾಡಲು ಇಚ್ಚಿಸುವುದಿಲ್ಲ. ಅದೆಷ್ಟೋ ನಿಯಮಗಳಿದ್ದರೂ ಆಸಕ್ತಿ ಇರುವವರು ತಾವು ಆಟ ಆಡಲು ಬಯಸಿ,
ಅದನ್ನು ಆನ್‌ಲೈನ್‌ನಲ್ಲಿ ಪ್ರಚಾರ ಮಾಡಲು ಬಯಸುತ್ತಾರೆ. ಇದರಿಂದ ಆನ್‌ಲೈನ್ ಆಟಗಳ ಉದ್ಯಮವು ಇಂದು ಹೊಸ ನಿಯಮ ರೂಪಿಸಲು ಮತ್ತು ಅದಕ್ಕೆ ತಕ್ಕಂತೆ ಆಟಗಾರರನ್ನು ತೊಡಗಿಸಲು ಆಸಕ್ತವಾಗಿದೆ.

ಭಾರತದ ವಿವಿಧ ರಾಜ್ಯಗಳಲ್ಲಿ ಕೌಶಲ್ಯ ಆಟದ ನಿಯಮಗಳು ಕೂಡ ವಿಧವಿಧವಾಗಿವೆ. ಇನ್ನು ಕೆಲವು ರಾಜ್ಯಗಳಲ್ಲಿ ಹಲವು ಆನ್‌ಲೈನ್ ಆಟಗಳನ್ನು ನಿಷೇಧಿಸಲಾಗಿದೆ. ಇಂತಹ ನಿಷೇಧ ಹೇರುವಾಗ, ಅವು ಗೇಮ್ ಆಫ್ ಚಾನ್ಸ್‌ ಆಟಗಳೇ ಅಥವಾ ಕೌಶಲ್ಯ ಆಟಗಳೇ ಎಂಬುದನ್ನೂ ಪರಿಗಣನೆ ಮಾಡುವುದಿಲ್ಲ. ಇದರಿಂದಾಗಿಯೇ ಆನ್‌ಲೈನ್ ಗೇಮಿಂಗ್ ಬಗ್ಗೆ ಸ್ಪಷ್ಟವಾದ ಕಾಯಿದೆಗಳು ರೂಪಿಸಲೇಬೇಕಾದ ಅಗತ್ಯವಿದೆ.

ಇತ್ತೀಚೆಗೆ ನೀತಿ ಆಯೋಗ ನೀಡಿದ ಕಾಯಿದೆಗಳ ಕರಡು ಪ್ರತಿಯಲ್ಲಿ, ಫ್ಯಾಂಟಸಿ ಗೇಮ್‌ಗಳ ಅಡಿಯಲ್ಲಿ, ಗೇಮ್ ಆಫ್ ಸ್ಕಿಲ್
ಗಳನ್ನು ಸೇರಿಸಲು ಸಲಹೆ ನೀಡಿರುವುದು ಆಶಾದಾಯಕ ಬೆಳವಣಿಗೆ. ಈ ಮಾರ್ಗಸೂಚಿಗಳು ಆಟಗಳ ಬಗೆಗಿನ ಸ್ಪಷ್ಟ ಚಿತ್ರಣಗಳ ಜತೆಗೆ ನಿಯಂತ್ರಣಾ ಕ್ರಮಗಳು ಏಕೆ ಬೇಕು ಎಂಬುದರ ಪ್ರಾಮುಖ್ಯ ಹೇಳಿವೆ. ಆಟವಾಡುವವರ ವಯಸ್ಸು 18 ದಾಟಿರಬೇಕು, ಆಟದಲ್ಲಿ ಕೌಶಲ್ಯತೆ ಇರಲೇಬೇಕು ಎಂಬುದನ್ನು ತಿಳಿಸಿದೆ.

ಆನ್‌ಲೈನ್ ಗೇಮಿಂಗ್ ಕ್ಷೇತ್ರ ಬೆಳವಣಿಗೆ ಕಾಣುತ್ತಿರುವ ವೇಗದ ಅಂದಾಜು ಗಮನಿಸಿ ಹೇಳುವುದಾದರೆ, ಕನಿಷ್ಟ 50 ಸಾವಿರಕ್ಕೂ ಹೆಚ್ಚು ತಂತ್ರಜ್ಞರು ಮುಂದಿನ ದಿನಗಳಲ್ಲಿ ಈ ಕ್ಷೇತ್ರದಲ್ಲಿ ಕೆಲಸದಲ್ಲಿ ತೊಡಗಲಿದ್ದಾರೆ. ಇನ್ನೊಂದು ವರದಿಯ ಪ್ರಕಾರ ಭಾರತ ದಲ್ಲಿ 400 ಮಿಲಿಯನ್ ಗೇಮರ‍್ಸ್್ಸಗಳಿದ್ದು, ಇದು ಅಮೆರಿಕ 75%ಗೆ ಸಮನಾಗಿದ್ದು, 1.2 ಬಿಲಿಯನ್ ಆದಾಯ ತರಲಿದೆ.
ಭಾರತದಲ್ಲಿ ಸುಮಾರು 400ಕ್ಕೂ ಹೆಚ್ಚು ಗೇಮಿಂಗ್ ಸ್ಟಾರ್ಟ್‌ಅಪ್‌ಗಳು ಕಾರ್ಯ ನಿರ್ವಹಿಸುತ್ತಿದ್ದು, ಸಿಲಿಕಾನ್ ವ್ಯಾಲಿ ಎಂದೇ
ಖ್ಯಾತವಾಗಿರುವ ಬೆಂಗಳೂರಿನಲ್ಲೇ ಸುಮಾರು 71 ಸ್ಟಾರ್ಟ್‌ಅಪ್‌ಗಳು ಇದ್ದು, ಇವುಗಳ ಅಭಿವೃದ್ಧಿ ವರ್ಷದಿಂದ ವರ್ಷಕ್ಕೆ 41.6% ರಷ್ಟು ಏರಿಕೆ ಕಾಣುತ್ತಿರುವುದು ಈ ಕ್ಷೇತ್ರದ ಸಾಮರ್ಥ್ಯವನ್ನು ತೋರಿಸಿತ್ತದೆ.

356 ಮಿಲಿಯನ್ ಬಳೆಕೆದಾರಿಂದಾಗಿ 2019ರಲ್ಲಿ 65 ಬಿಲಿಯನ್ ಆದಾಯ ಬಂದಿದ್ದು, 19000 ಕೋಟಿಯಷ್ಟು ವಹಿವಾಟಿನ ಅಂದಾಜು ಮಾಡಲಾಗಿದ್ದು, ಜತೆಗೆ 40 ಸಾವಿರ ಉದ್ಯೋಗಗಳ ಸೂಕ್ತ ಕಾನೂನು ರೂಪಿಸುವ ಮೂಲಕ 2025ರ ಹೊತ್ತಿಗೆ ಬರೋ ಬ್ಬರಿ ತೆರಿಗೆ ರೂಪದಲ್ಲಿ 10000 ಕೋಟಿ ಆದಾಯವು ಸರಕಾರಕ್ಕೆ ಹರಿದು ಬರಲಿದೆ.

ಇದರ ಜತೆಗೆ ಸಾವಿರಾರು ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ಅಂದಾಜಿಸಲಾಗಿದೆ. ಆದ್ದರಿಂದ ಶೀಘ್ರವೇ ಕರ್ನಾಟಕ ಸರಕಾರ ಕಾನೂನು ರೂಪಿಸಬೇಕಾದ ಅವಶ್ಯ ಹೆಚ್ಚಿದೆ. ಇದರಿಂದಾಗಿ ಭವಿಷ್ಯದಲ್ಲಿ ಸೃಷ್ಟಿಯಾಗಲಿರುವ ಉದ್ಯೋಗ ಗಳ ನಷ್ಟ ತಪ್ಪಿಸಬಹುದಾಗಿದೆ.

ಕಾನೂನುಗಳ ಅಗತ್ಯವೇನು?
*ಬಹಳಷ್ಟು ಭಾರತೀಯರು ಆನ್‌ಲೈನ್ ಗೇಮ್ ಎಂದರೆ ಬೆಟ್ಟಿಂಗ್ ಎಂಬ ತಪ್ಪು ಕಲ್ಪನೆಯಿದ್ದು, ಎಲ್ಲ ಆನ್‌ಲೈನ್ ಆಟಗಳು ಗೇಮ್ ಆಫ್ ಚಾನ್ಸ್‌ ಆಗಿರುವುದಿಲ್ಲ ಎಂಬುದರ ಅರಿವು ಮೂಡಲಿದೆ.
*ಗೇಮ್ ಆಫ್ ಸ್ಕಿಲ್ ವಿಜೇತರು ಟ್ರೋಫಿ ಹಣ ಪಡೆಯುತ್ತಾರೆ. ಆದರೆ, ರಿಯಲ್ ಮನಿ ಗೇಮ್‌ಗಳಲ್ಲಿ ಮೊದಲೇ ಹಣ ಕಟ್ಟಿರು ತ್ತಾರೆ, ಅದರಲ್ಲಿ ಗೆದ್ದವರಿಗೆ ಪ್ರೈಜ್ ಹಣ ಸಿಗುತ್ತದೆ.
*ಗೇಮ್ ಆಫ್ ಸ್ಕಿಲ್ ಆಟಗಳಲ್ಲಿ ಪ್ರಧಾನವಾಗಿ ಅನುಭವ, ತಾಳ್ಮೆ, ಬುದ್ಧಿಶಕ್ತಿ, ಕೌಶಲಗಳೇ ಮುಖ್ಯವಾಗುತ್ತವೆ.
*ಕಾನೂನು ರೂಪಿಸುವುದರಿಂದ ಗೇಮ್ ಆಫ್ ಸ್ಕಿಲ್‌ಗಳ ಬಗೆಗಿನ ತಪ್ಪು ತಿಳುವಳಿಕೆಗಳು ತಗ್ಗಲಿದ್ದು, ಆಟದತ್ತ ಇನ್ನಷ್ಟು ಜನರು ಒಲವು ಬೆಳೆಸಿಕೊಳ್ಳಲು ಸಹಕಾರಿ ಆಗಲಿದೆ.

*ಆನ್‌ಲೈನ್ ಗೇಮಿಂಗ್ ಕ್ಷೇತ್ರ ಜಾಗತಿಕವಾಗಿ ಬೆಳೆದಿದ್ದು, ಸೂಕ್ತ ಕಾನೂನುಗಳು ಇಲ್ಲದಿದ್ದರೆ ಸ್ಥಳೀಯ ಗೇಮ್‌ಗಳಿಗೆ ವಿದೇಶಿ ಕಂಪನಿಗಳಿಂದ ಭಾರಿ ಪೈಪೋಟಿ ಹೆಚ್ಚಲಿದ್ದು, ದೇಶೀಯ ಕಂಪನಿಗಳಿಗೆ ನಷ್ಟದ ಸಂಭವ ಹೆಚ್ಚಲಿದೆ.

*ಸೂಕ್ತ ಕಾಯಿದೆಗಳಿಂದಾಗಿ ಇನ್ನಷ್ಟು ಸಂಶೋಧನೆ, ಅಭಿವೃದ್ಧಿಗೆ ರಹದಾರಿ ತೆರೆದುಕೊಳ್ಳಲಿದೆ. ಹಾಗೆಯೇ ಭಾರತೀಯ ಕಂಪನಿಗಳು ಇನ್ನಷ್ಟು ಪ್ರಗತಿ ಹೊಂದಲು ಅನುವು ಮಾಡಿಕೊಡಲಿದೆ.