Thursday, 3rd October 2024

ಮೊಬೈಲ್‌ ಯುಗದ ರಕ್ತ ಬೀಜಾಸುರ !

ಟೆಕ್ ನೋಟ

ವಿಕ್ರಮ ಜೋಶಿ

ಅನವಶ್ಯಕವಾಗಿ ಕರೆ ಮಾಡುವುದನ್ನು, ಮೆಸೇಜ್ ಕಳಿಸುವುದನ್ನು ಸ್ಪ್ಯಾಮ್ ಎನ್ನಬಹುದು. ಆದರೆ, ಇದರ ಮೂಲಕ ದೊಡ್ಡ ದೊಡ್ಡ ವಂಚನೆಗಳನ್ನು ಮಾಡುವ ಖದೀಮರೇ ಇದ್ದಾರೆ! ಅಂತಹವರು ಸೈಬರ್ ಕ್ರೈಮ್ ಮಾಡುತ್ತಿದ್ದಾರೆ.

ಮೊಬೈಲಿನ ದೇಖರೇಕೆ ಸುಲಭವಲ್ಲ. ಮನೆಯೊಂದನ್ನು ಕಟ್ಟಿಕೊಂಡು ವಾಸವಿದ್ದಂತೆ. ಕಳ್ಳಕಾಕರಿಂದ ಸದಾ ಎಚ್ಚರ ವಾಗಿರ ಬೇಕಾದ ಪರಿಸ್ಥಿತಿ ನಿರ್ಮಾಣ ಆಗಿದೆ. ಸ್ಮಾರ್ಟ್ ಫೋನ್ ಎಂದಾಕ್ಷಣ ನೂರಾ ಎಂಟು ಆಪ್‌ಗಳು ತುಂಬಿರುತ್ತವೆ. ಬೆಳಗಿನ ತಿಂಡಿಗೆ ಸ್ವಿಗ್ಗಿ, ಆಫೀಸಿಗೆ ಹೋಗಲು ಓಲಾ-ಉಬ್ಬರ್, ಮಧ್ಯಾಹ್ನದ ಊಟಕ್ಕೆ ಝೋಮ್ಯಾಟೋ, ರೈಲ್ವೆ ಮುಂಗಡ ಟಿಕೆಟ್ ಖರೀದಿಗೆ ಐಆರ್‌ಟಿಸಿ, ಬುಕ್ ಮೈ ಶೋ ಸಿನೇಮಾ ಟಿಕೇಟಿಗೆ, ಎರಡೋ ಮೂರೋ ಷೇರು ಮಾರುಕಟ್ಟೆಯ ಆಪ್ ಗಳು, ಇರುವ ಎಲ್ಲ ಇ-ಕಾಮರ್ಸ್ ಮಳಿಗೆಗಳು, ನಾಲ್ಕಾರು ಸುದ್ದಿ ಪತ್ರಿಕೆಗಳು, ಹತ್ತಾರು ನ್ಯೂಸ್ ಚಾನೆಲ್ ಗಳು, ಗೇಮ್ಸ್, ವಾಟ್ಸಾಪ್ ಹಾಗೂ ಇನ್ನಿತರೆ ಸಾಮಾಜಿಕ ಜಾಲತಾಣಗಳು.

ಇವೆಲ್ಲ ಮೊಬೈಲ್ ಸ್ಕ್ರೀನ್ ಮೇಲೆ ಚೆಪಿಲ್ಲಿಯಾಗಿ ಕಾಣಿಸುವ ಆಪ್‌ಗಳು. ಈ ಆಪ್‌ಗಳನ್ನು ದುಡ್ಡು ಕೊಟ್ಟು ಖರೀದಿ ಮಾಡ ಬೇಕಿಲ್ಲ, ಉಚಿತವಾಗಿ ಸಿಗುತ್ತವೆ. ಆದರೆ ಅದಕ್ಕೆ ಬದಲಾಗಿ ಅವರು ಇನ್ನೇನೋ ಕೇಳುತ್ತಾರೆ, ಏನದು? ನಿಮ್ಮ ಮೊಬೈಲ್ ನಂಬರ್ ಹಂಚಲು, ಫೋನ್ ಡೈರೆಕ್ಟರಿ ಹಾಗೂ ಓಟಿಪಿಯನ್ನು ಓದಲು, ಪಟಗಳನ್ನು ನೋಡಲು ಅನುಮತಿ ಕೇಳುತ್ತಾರೆ. ಒ ಅಂದರೆ ಆ ಆಪ್ ಬಳಸುವಂತಿಲ್ಲ. ಅದನ್ನು ಬಳಸದೇ ನಮ್ಮ ಜೀವನ ಸಾಗುವುದಿಲ್ಲ. ಹೀಗಾಗಿ ಆ ಕ್ಷಣ ನಾವು ದಾನ ಶೂರ ಕರ್ಣರಾಗಿ, ಅವರು ಕೇಳಿದ ಎಲ್ಲದಕ್ಕೂ ‘ಯೆಸ್, ಯೆಸ್’ ಎನ್ನುತ್ತಾ ಬಟನ್ ಒತ್ತಿ ಅನುಮತಿ ಕೊಟ್ಟು ಬಿಡುತ್ತೇವೆ! ಇದೇ ಟೆಲಿಮಾರ್ಕೆಟಿಂಗ್, ಹ್ಯಾಕರ್ಸ್, ಸೈಬರ್ ಕಳ್ಳರು ಕಳುಹಿಸುವ ಸ್ಪ್ಯಾಮ್ ಇಮೇಲ್, ಕಾಲ್ ಹಾಗೂ ಸಂದೇಶಕ್ಕೆ ನಾವು ಕೊಡುವ ಆಹ್ವಾನ.

ಅಪರಿಚಿತರ ಕರೆ ಕರೆ

ದಿನಕ್ಕೆ ನಾಲ್ಕಾದರೂ ಬೇಡವಾದ ಅಪರಿಚಿತರ ಕರೆ, ಬಯಸದ ಸಂದೇಶ ಬರುತ್ತದೆ. ಈ ಸ್ಪ್ಯಾಮ್ ಎನ್ನುವ ಕಿರಿಕಿರಿ ಮೊದಲು ಕರೆ, ಇಮೇಲ್ ಹಾಗೂ ಎಸ್‌ಎಮಎಸ್ ಮಾತ್ರವಾಗಿತ್ತು. ಇಂದು ವಾಟ್ಸಾಪ್, ಫೇಸ್ಬುಕ್, ಎಲ್ಲದರಲ್ಲೂ ಸ್ಪ್ಯಾಮ್ ಪ್ರವಾಹ ನಿಯಂತ್ರಣಕ್ಕೂ ಮೀರಿದ್ದು.

ಸ್ಪ್ಯಾಮ್ ಎನ್ನುವುದನ್ನ ಮೊಬೈಲ್ ಯುಗದ ರಕ್ತಬೀಜಾಸುರ ಅಂದರೆ ತಪ್ಪಲ್ಲ. ಒಬ್ಬರನ್ನು ಬ್ಲಾಕ್ ಮಾಡಿದರೆ ಹತ್ತು ಜನ
ಮತ್ತೆ ನಮ್ಮ ಮಾಹಿತಿ ಹಂಚಿಕೊಂಡಿರುತ್ತಾರೆ. ಇತ್ತೀಚೆಗೆ ಒಂದು ಸಮೀಕ್ಷೆಯಲ್ಲಿ ಕಂಡು ಬಂದ ವಿಷಯವೆಂದರೆ ೯೫% ಜನರಿಗೆ ದಿನಕ್ಕೆ ನಾಲ್ಕಕ್ಕಿಂತ ಹೆಚ್ಚು ಸ್ಪ್ಯಾಮ್ ಕರೆ ಹಾಗೂ ಸಂದೇಶ ಬರುತ್ತದೆಯಂತೆ. ಇದರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರು ವುದು ಚಿಂತಾಜನಕ ವಿಷಯ. ಮೊಬೈಲ್ ನೊಳಗೆ ಸ್ಪ್ಯಾಮ್‌ಗಳು ಎಷ್ಟು ಅಂದರೆ ಯಾವುದಾದರೂ ಮಹತ್ವದ ವಿಷಯ ವಿದ್ದರೆ ಅದು ಕಣ್ಣಿನಿಂದ ತಪ್ಪಿ ಅವಾಂತರ ಸೃಷ್ಟಿಯಾಗುತ್ತದೆ.

ಇಲ್ಲವೇ ನಮಗೆ ಅಗತ್ಯವಾದ ವಿಷಯವನ್ನು ಕೂಡ ಸ್ಪ್ಯಾಮ್ ಎಂದು ನಿರ್ಲಕ್ಷ್ಯ ಮಾಡಿ ದ್ದೂ ಇದೆ. ಸ್ಪ್ಯಾಮ್ ಎನ್ನುವ ಶಬ್ದ ಬಂದಿದ್ದು ಆಂಗ್ಲಭಾಷೆಯ ಒಂದು ಧಾರವಾಹಿ ಯಿಂದ. ಅದರ ಹೆಸರು Monty Python’s Flying Circus. ಆ ಧಾರವಾಹಿಯಲ್ಲಿರುವ ಹೋಟೆಲ್‌ನ ಮೆನು ಕಾರ್ಡಿನಲ್ಲಿ ಪ್ರತಿ ತಿಂಡಿಯ ಎದುರೂ ‘ಸ್ಪ್ಯಾಮ್’ ಎಂದು ಬರೆದಿರು ತ್ತದೆ. ಒಂದು ಹೊಸ ದನಿಯ ರೂಪವಾಗಿ ಪದ ಹುಟ್ಟಿದ್ದು. ನಂತರ ಅಂತರ್ಜಾಲ ಜಗತ್ತಿನಲ್ಲಿ ಕಿರಿಕಿರಿ ಕೊಡುವ, ಅಹ್ವಾನಿಸದ, ಸಾರ್ವಜನಿಕ ಸಂದೇಶಕ್ಕೆ ಅದರ ಬಳಕೆ ಯಾಯಿತು.

ಇಲ್ಲಿ ಮೂರು ಪದಗಳು ಬಹಳ ಮುಖ್ಯ: ಕಿರಿಕಿರಿ ಕೊಡುವ, ಆಹ್ವಾನಿಸದ ಹಾಗೂ ಸಾರ್ವತ್ರಿಕ. ಅಂತರ್ಜಾಲದ ಯುಗದ ಮೊದಲು, ಹೇಳದೆ ಕೇಳದೆ ಕರೆಯದೆಯೂ ಮನೆ ಮನೆಗೆ ಬಂದು ಕರಪತ್ರಗಳನ್ನು ಬಿಸಾಕಿ ಹೋಗುತ್ತಿದ್ದರಲ್ಲ, ಹಾಗೆ ಇದು. ಮೊದಲ ಸ್ಪ್ಯಾಮ್ ಇಮೇಲ್ ಬಳಸಿದ್ದು ಅಮೇರಿಕಾದ ಲಾರೆನ್ಸ್ ಹಾಗೂ ಮಾರ್ಥಾ ಎನ್ನುವ ವಕೀಲ ದಂಪತಿಗಳು. ತಾವು  ಕೊಡುವ ಸೇವೆಯ ಜಾಹೀರಾತನ್ನು ಕನಿಷ್ಠ ೫೫೦೦ ಜನರಿಗೆ ಸಾರ್ವಜನಿಕವಾಗಿ ಇಮೇಲ್ ಮೂಲಕ ಕಳುಹಿಸಿದ್ದರು.

ಇದೇ ಮೊದಲ ಸ್ಪ್ಯಾಮ್. ಇದನ್ನು ಗ್ರೀನ್ ಕಾರ್ಡ್ ಸ್ಪ್ಯಾಮ್ ಎಂದು ಕರೆಯಲಾಗಿದೆ. ಮುಂದೆ ಹೋಗಿ ಈ ದಂಪತಿಗಳೇ ’’How to
make a fortune on the information superhighway’ ಎನ್ನುವ ವಿವಾದಾತ್ಮಕ ಪುಸ್ತಕವನ್ನು ಸಹ ಬರೆದರು!

ಕಳ್ಳಕಿಂಡಿ
ಅಲ್ಲಿಂದ ಶುರುವಾಗಿ ಎಲ್ಲಿಯ ತನಕ ಬಂದಿದ್ದೇವೆ ನೋಡಿ. ಇಂದು ಸ್ಪ್ಯಾಮ್ ಕೇವಲ ಕಿರಿಕಿರಿ ಆಗಿ ಉಳಿದಿಲ್ಲ, ಬದಲಾಗಿ
ಕಳ್ಳರಿಗೆ ಮೊಬೈಲ್ ಒಳಗೆ ನುಗ್ಗಲು ಒಂದು ಕಿಡಕಿಯಾಗಿಬಿಟ್ಟಿದೆ. ಸೈಬರ್ ಕ್ರೈಮ, ಸೈಬರ್ ದಾಳಿ ಆಗುವುದೆಲ್ಲವೂ ಈ ಸ್ಪ್ಯಾಮ್
ಗಳಿಂದಲೇ. ಅತ್ತ ದೊಡ್ಡ ದೊಡ್ಡ ಟೆಕ್ ಕಂಪನಿಗಳು ತಮ್ಮ ಅತ್ಯಮೂಲ್ಯ ದಾಖಲೆಗಳನ್ನು, ಇತ್ತು ಮುಗ್ಧ ಜನರು ತಮ್ಮ ಖಾತೆಯಿಂದ ಹಣವನ್ನು ಕಳೆದುಕೊಳ್ಳುತ್ತಿzರೆ. ಇದೆ ಹೇಗೆ ನಡೆಯುತ್ತದೆ ಎನ್ನುವ ಪ್ರಶ್ನೆ ಈಗಾಗಲೇ ನಿಮಗೆ ಬಂದಿರಬೇಕು
ಅಲ್ಲವೆ? ಮೊದಲು ಇವರಿಗೆ ನಮ್ಮ ಮೊಬೈಲ್ ನಂಬರ್ ಹಾಗೂ ಇಮೇಲ್ ವಿಳಾಸ ಸಿಗುವುದು ಹೇಗೆ ಅಂತ ನೋಡಿ ಅದರ ಜತೆಗೆ
ಅದರ ದುರ್ಬಳಕೆಯನ್ನೂ ಚರ್ಚಿಸೋಣ.

ಎರಡು ಮೂಲಗಳ ಮುಖಾಂತರ ನಮ್ಮ ಮಾಹಿತಿಗಳು ಲಭ್ಯವಾಗುತ್ತದೆ 01 ಮೊದಲನೆಯದು ನಾವು ಬಳಸುವ ಮೊಬೈಲ್ ಮತ್ತು ಅಲ್ಲಿರುವ ಆಪ್‌ಗಳಿಂದ. ನಮ್ಮ ಮೊಬೈಲ್ ನಿಂದ ಮಾಹಿತಿ ಪಡೆದು ನಮ್ಮ ಮೊಬೈಲಿಗೇ ಸ್ಪ್ಯಾಮ್ ಕರೆ, ಮೆಸೇಜ್
ಮಾಡುತ್ತಾರೆ. ಕರೆಯಾದರೆ ಕಿರಿಕಿರಿ, ಮೆಸೇಜ್ ಉದ್ದೇಶ ಮಾತ್ರ ಚಾಲಾಕತನ. ಮೆಸೇಜಿನಲ್ಲಿ ಅಥವಾ ಅದು ಕರೆದುಕೊಂಡು
ಹೋಗುವ ವೆಬ್‌ಸೈಟ್‌ನಲ್ಲಿ ಒಂದು ಲಿಂಕ್ ಇಟ್ಟಿರುತ್ತಾರೆ, ಅದನ್ನು ಒತ್ತಿದ್ದೇ ತಡ ಗೌಪ್ಯದ, ಒಟಿಪಿಯನ್ನು ಓದಬಲ್ಲ ಒಂದು ಸಾಫ್ಟ್ ವೇರ್ ಡೌನ್ಲೋಡ್ ಆಗಿಬಿಡುತ್ತದೆ. ಅದು ನಮಗೆ ಗೊತ್ತಾಗುವುದೂ ಇಲ್ಲ.

ನಾವು ಬ್ಯಾಂಕಿನ ವಹಿವಾಟು ಮಾಡುವಾಗ ಗೌಪ್ಯದ, ಓಟಿಪಿ ಎಲ್ಲವೂ ಸೈಬರ್ ಕಳ್ಳರಿಗೆ ಸಿಗುತ್ತದೆ. ಈ ತಂತ್ರದಿಂದ ಅವರು ನಮ್ಮ ಬ್ಯಾಂಕಿನ ಹಣವನ್ನು ದರೋಡೆ ಮಾಡುವ ಸಾಧ್ಯತೆ ಹೆಚ್ಚು. ೦೨ಈಗ ನಮ್ಮ ಮಾಹಿತಿ ಹಂಚಿ ಹೋಗುವ ಇನ್ನೊಂದು ಮೂಲದ ಬಗ್ಗೆ ಅವಲೋಕನ ಮಾಡೋಣ. ಬಹಳಷ್ಟು ವ್ಯಾಪಾರ ಮಳಿಗೆಗಳಲ್ಲಿ ‘ಮೊಬೈಲ್ ನಂಬರ್ ಕೊಟ್ಟರೆ ಆಕರ್ಷಕ ರಿಯಾಯಿತಿ’ ಯೋಜನೆಯ ಬಗ್ಗೆ ನಿಮಗೆ ಗೊತ್ತಿರಬೇಕು ಅಲ್ಲವೆ? ಹೀಗೆ ನಾಲ್ಕು ಕಾಸಿನ ಆಸೆಗೆ ಬಿದ್ದು ನಾವು ನಂಬರ್ ಕೊಟ್ಟು ತೆರೆದ ಖಾತೆ ಎಷ್ಟೋ? ಅದೇ ನಮ್ಮ ಮಾಹಿತಿಯನ್ನು ತಗೊಂಡು ಇನ್ನೊಂದು ಕಂಪನಿಗೆ ಮಾರುತ್ತಾರೆ.

ಆ ಕಂಪನಿಯವರು ನಮಗೆ ತಿರುಗಿ ಗಾಳ ಹಾಕುತ್ತಾರೆ. ಹೀಗಾಗಿ ಇದರಲ್ಲೂ ನಾವೇ ನಮಗೆ ಹೊಂಡ ತೋಡಿಕೊಂಡಿದ್ದು. ಎರಡೂ ಕಾಣ ನೋಡಿದ ಮೇಲೆ ಹೇಳಿ – ದಿನವಿಡೀ ಸ್ಪ್ಯಾಮ್ ಬರುತ್ತದೆ ಎಂದು ದೂರಿದರೆ ಹೇಗೆ?

ಡಿಎನ್‌ಡಿ ಸೌಲಭ್ಯ: ಸ್ಪ್ಯಾಮ್ ಗಳನ್ನು ತಡೆಗಟ್ಟಲು ಸಂವಹನ ಹಾಗೂ ಮಾಹಿತಿ ತಂತ್ರಜ್ಞಾನ ಇಲಾಖೆಯು ತುಂಬಾ ಕಠಿಣ ನಿಯಮಗಳನ್ನು ತರುವುದು ಎನ್ನುವ ಭರವಸೆ ಕೊಟ್ಟಿದೆ. ಸ್ಪ್ಯಾಮ್ ಕರೆಗಳಿಂದ ತಪ್ಪಿಸಿಕೊಳ್ಳಲು ಪ್ರತಿಯೊಬ್ಬರೂ ಡಿಎನ್‌ಡಿ (Do not disturb) ಸವಲತ್ತನ್ನು ಆಯ್ಕೆ ಮಾಡಿಕೊಳ್ಳಬೇಕು. ಈಗಾಗಲೇ ಸುಮಾರು ಇಪ್ಪತ್ತು ಕೋಟಿ ಜನರು ಡಿಎನ್‌ಡಿ ಸೌಲಭ್ಯ ಬಳಸಿಕೊಂಡಿದ್ದಾರೆ. ಟೆಲಿಮಾರ್ಕೆಟಿಂಗ್ ವ್ಯಾಪಾರಕ್ಕೆ ನೋಂದಣಿ ಮಾಡಿಕೊಳ್ಳದ, ಡಿಎನ್‌ಡಿ ನಿಯಮ ಉಲ್ಲಂಘಿಸಿದ
ಕಂಪನಿ ಗಳ ಮೇಲೆ ಸರ್ಕಾರ ಕಠೋರ ದಂಡ ವಿಧಿಸುವುದು ಎಂದು ಮಂತ್ರಿಗಳು ಹೇಳಿದ್ದು ಇತ್ತೀಚಿಗೆ ಸುದ್ದಿಯಲ್ಲಿತ್ತು.

ಕೃತಕ ಬುದ್ದಿ

ಮತ್ತೆ ಸ್ಪ್ಯಾಮ್ ತಡೆಯಲು ತಂತ್ರeನ ಕಂಪನಿಗಳು ಕೃತಕ ಬುದ್ಧಿಮತ್ತೆಯನ್ನು ಬಳಸುತ್ತಿರುವುದು ಸಕಾರಾತ್ಮಕ ಭರವಸೆ ಮೂಡಿಸಿದೆ. ವಾಟ್ಸಾಪ್ ಈಗಾಗಲೇ ಕೃತಕ ಬುದ್ಧಿಮತ್ತೆ ಬಳಸಿ ಸುಮಾರು ಇಪ್ಪತ್ತು ಲಕ್ಷ ಖಾತೆ ಗಳನ್ನು ವಜಾಮಾಡಿದೆಯಂತೆ. ಟೆಲಿಗ್ರಾಂ ಕೂಡ ಇಂತಹದ್ದೇ ತಂತ್ರಜ್ಞಾನದ ಬಳಕೆಗೆ ಮುಂದಾಗಿದೆ. ಗೂಗಲ್ ಕೂಡ ತನ್ನ ಬಳಕೆದಾರರಿಗೆ ಸಹಾಯ ಮಾಡುವ ಸಲುವಾಗಿ ಆಂಡ್ರಾಯ್ಡ ಆಪರೇಟಿಂಗ್ ಸಿಸ್ಟಮ್ ಒಳಗೆ ಲಭ್ಯವಿರುವಂತಹ ಅಪ್ಲಿಕೇಶನ್ ತಂದಿದೆ. ಇದು ಸ್ಪ್ಯಾಮ್ ನಿಯಂತ್ರಿಸು ವಲ್ಲಿ ಸಹಕಾರಿ ಆಗಬಲ್ಲದು ಎನ್ನುವುದು ಆಶಯ.

ಬ್ಯಾಂಕ್ ಮಾಹಿತಿ ಕೊಡಬೇಡಿ
ಎಲ್ಲದಕ್ಕೂ ಮಿಗಿಲಾಗಿ ಸ್ಪ್ಯಾಮ್ ನಿಲ್ಲಬೇಕು ಅಂದರೆ ಮೊದಲು ನಾವು ಎಚ್ಚೆತ್ತು ಕೊಳ್ಳಬೇಕು. ಕಂಡ ಕಂಡ ಆಪ್ ಬಳಸುವ ಅಗತ್ಯವಿಲ್ಲ. ಬಂದ ಕೊಂಡಿಯನ್ನು ಕ್ಲಿಕ್ ಮಾಡುವ ಮೊದಲು ಸಾವಿರ ಸಲ ಯೋಚಿಸಬೇಕು. ಯಾರೂ ಪುಕ್ಕಟೆಯಾಗಿ ಏನೂ ಕೊಡುವುದಿಲ್ಲ, ಹೀಗಾಗಿ ನಿಮ್ಮ ಖಾಸಗಿ ಮೊಬೈಲ್ ಅಂಕೆಯನ್ನು ಹಂಚಿಕೊಳ್ಳಬಾರದು. ಮಹತ್ವದ ಕೆಲಸದಲ್ಲಿದ್ದೀರಿ, ಖಾತೆಯಲ್ಲಿ ಸಾಕಷ್ಟು ಹಣವಿದೆ ಅಂದಾಗ ಮೊಬೈಲ್ ಮೂಲಕ ಬ್ಯಾಂಕ್ ನಿರ್ವಹಣೆಯನ್ನೇ ಮಾಡಬಾರದು. ಎರಡು ಸಿಮ್‌ಗಳನ್ನು ಒಂದೇ ಮೊಬೈಲ್ ನಲ್ಲಿ ಬಳಸುವ ಬದಲು ಎರಡು ಫೋನ್ ಬಳಸಿ. ಎರಡನೇ ಸಾಧನವನ್ನು ಗೌಪ್ಯವಾಗಿಡಿ. ಯಾರೇ ಫೋನ್ ಮಾಡಲಿ, ಎಷ್ಟೇ ಆಪ್ತರೇ ಇದ್ದರೂ ಕೂಡ, ಬ್ಯಾಂಕಿಗೆ ಸಂಬಂಧಿಸಿದ ಮಾಹಿತಿ ಕೊಡಬೇಡಿ. ಇಷ್ಟನ್ನು ನಾವು ನಮ್ಮ ಸುರಕ್ಷತೆಗೆ ಮಾಡಬಹುದು ತಾನೆ?