Saturday, 23rd November 2024

ವಿಡಿಯೋ ಮೂಲಕ ಮೊಬೈಲ್ ಹ್ಯಾಕ್

ವಾಟ್ಸಪ್ ಬಳಕೆದಾರರು ತಕ್ಷಣ ತಮ್ಮ ಮೊಬೈಲ್‌ನಲ್ಲಿ ವಾಟ್ಸಪ್‌ನ್ನು ಅಪ್‌ಟೇಟ್ ಮಾಡಿಕೊಳ್ಳಬೇಕೆಂದು ಇಂಡಿಯನ್ ಕಂಪ್ಯೂೂಟರ್ ಎಮರ್ಜೆನ್ಸಿಿ ರೆಸ್ಪಾಾನ್‌ಸ್‌ ಟೀಮ್ (ಸಿಇಆರ್‌ಟಿ ಇನ್) ಸಲಹೆ ನೀಡಿದೆ. ಏಕೆಂದರೆ, ವಾಟ್ಸಪ್ ಮೂಲಕ ಒಂದು ವಿಡಿಯೋ ಫೈಲ್ ಕಳಿಸುವ ಮೂಲಕ ಮೊಬೈಲ್‌ನ್ನು ಹ್ಯಾಾಕ್ ಮಾಡುವ ಸಾಧ್ಯತೆಯನ್ನು ಗುರುತಿಸಲಾಗಿದೆ. ಈ ರೀತಿ ಹ್ಯಾಾಕ್ ಮಾಡುವವರು ಎಂಪಿ4 ಮೀಡಿಯಾ ಫೈಲ್ ಒಂದನ್ನು ವಾಟ್ಸಪ್ ಮೂಲಕ ಕಳಿಸುತ್ತಾಾರೆ. ಇದು ಇತರ ವಿಡಿಯೋಗಳಂತೆಯೇ ಚಿತ್ರವನ್ನು ತೋರಿಸುತ್ತಾಾ ಹೋಗುತ್ತದೆ – ಅದೇ ಸಮಯದಲ್ಲಿ ಆ ಮೊಬೈಲ್‌ನ ಡಾಟಾವನ್ನು ಹ್ಯಾಾಕ್ ಮಾಡಲಾಗುತ್ತದೆ. ವಾಟ್ಸಪ್‌ನ್ನು ಅಪ್‌ಡೇಟ್ ಮಾಡುವ ಮೂಲಕ ಈ ಅಪಾಯವನ್ನು ತಪ್ಪಿಿಸಬಹುದು ಎಂದು ಸಿಇಆರ್‌ಟಿಇನ್ ಸಲಹೆ ನೀಡಿದೆ.