Friday, 13th December 2024

ವಾಟ್ಸಾಪ್ ಕೈಯಲ್ಲಿ ಬಳಕೆದಾರರ ಜುಟ್ಟು?

ಟೆಕ್ ಟಾಕ್‌

ಬಡೆಕ್ಕಿಲ ಪ್ರದೀಪ್

ತನ್ನ ಬಳಕೆದಾರರ ಬಹಳಷ್ಟು ಮಾಹಿತಿಯನ್ನು ಫೇಸ್‌ಬುಕ್ ಸಂಸ್ಥೆಗೆ ನೀಡಲು ಬಳಕೆದಾರರ ಒಪ್ಪಿಗೆಯನ್ನು ವಾಟ್ಸಾಪ್ ಕೇಳಿದೆ. ಇದು ಸರಿಯಲ್ಲ, ಇದು ಏಕಸ್ವಾಮ್ಯದ ತಂತ್ರ ಎಂದು ವಿಶ್ವದ ಎಲ್ಲೆಡೆ ಟೀಕೆ ವ್ಯಕ್ತವಾಗಿದೆ. ಈಗ ಎಚ್ಚೆತ್ತುಕೊಂಡ ವಾಟ್ಸಾಪ್ ಒಂದು ಸಮಜಾಯಿಷಿ ನೀಡಿ, ಬ್ಯುಸಿನೆಸ್ ನಡೆಸುವವರಿಗೆ ಮಾತ್ರ ಈ ನಿಯಮ ಎಂದರೂ, ಆಗುವ ಹಾನಿ ಆಗಿ ಹೋಗಿದೆ. ಎಲಾನ್ ಮಸ್ಕ್ ಸೇರಿದಂತೆ, ಬಹಳಷ್ಟು ಜನರು ಸಿಗ್ನಲ್ ಆ್ಯಪ್ ಉಪಯೋಗಿಸಲು ಆಸಕ್ತಿ ತೋರಿದ್ದಾರೆ. ವಾಟ್ಸಾಪ್‌ನ ಈ ಏಕಸ್ವಾಮ್ಯದ ತಂತ್ರದ ಹಿನ್ನೆಲೆ ಏನು? ಓದಿ ನೋಡಿ.

ತಾವು ಸದಾಕಾಲ ಬಳಕೆದಾರರ ಪರ ಎಂದೇ ವಾದಿಸುತ್ತಾ ಉಚಿತ ಸೇವೆಗಳನ್ನು, ಕೊಟ್ಟು ಅವರ ಜುಟ್ಟನ್ನು ತಮ್ಮ ಕೈಯಲ್ಲಿಟ್ಟು ಕೊಂಡು ಅವರ ಮಾಹಿತಿಯನ್ನೇೇ ಬಂಡವಾಳವಾಗಿಸಿಕೊಂಡು ಬದುಕು ಸಾಗಿಸುತ್ತಿರುವ ಮಾಹಿತಿ ತಂತ್ರಜ್ಞಾನ ದೈತ್ಯ ರಿಂದಾಗಿ, ಸಾಕಷ್ಟು ತೊಂದರೆಗಳಾಗ್ತುಲೇ ಇವೆ. ಇದರ ಹೊಸ ಮಜಲು ಈಗ ಫೇಸ್‌ಬುಕ್ ಹಾಕಿರುವ ದೊಡ್ಡ ಬಲೆ. ಇದೀಗ ವಾಟ್ಸಾಪ್ ತನ್ನ ಪ್ರೈವೆಸಿ ಪಾಲಿಸಿ (ಗೌಪ್ಯತೆಯ ನೀತಿ)ಯಲ್ಲಿನ ವ್ಯತ್ಯಾಸಗಳನ್ನು ಮಾಡುವ ಕುರಿತು ಸಂದೇಶ ಕಳುಹಿಸುತ್ತಿರುವು ದರ ಮೂಲಕ ದೊಡ್ಡದೊಂದು ಚರ್ಚೆಯನ್ನು ಹುಟ್ಟುಹಾಕಿದೆ.

ಇನ್ನು ಒಂದು ತಿಂಗಳೊಳಗಾಗಿ, ಅಂದರೆ ಫೆಬ್ರವರಿ 8ರ ಒಳಗೆ, ವಾಟ್ಸಾಪ್‌ನ ಈ ಹೊಸ ನೀತಿಗಳನ್ನು ನಾವು ಸ್ವೀಕಾರ ಮಾಡ ದಿದ್ದರೆ ವಾಟ್ಸಾಪ್ ಬಳಸುವುದು ಸಾಧ್ಯವಿಲ್ಲ ಎನ್ನುವುದು ಈ ಹೊಸ ಸಂದೇಶದ ಸಾರ. ಹಾಗಿದ್ದರೆ ಈ ಹೊಸ ನೀತಿಯಲ್ಲೇನಿದೆ? ಸರಿ, ಈ ಹೊಸ ಬಲಾವಣೆಗೆ ನಾನು ಒಗ್ಗಿಕೊಳ್ಳಲು ತಯಾರಿಲ್ಲ ಅನ್ನುವ ಗ್ರಾಹಕರಿಗೆ ಇತರೆ ಅವಕಾಶಗಳು ಯಾವುವಿವೆ? ಏನಿದು ಹೊಸ ಗೌಪ್ಯತೆಯ ನೀತಿ? ಯಾವುದೇ ಆನ್‌ಲೈನ್ ವ್ಯವಸ್ಥೆಯನ್ನು ಬಳಸುವು ದಕ್ಕೂ ನಾವು ನಮ್ಮ ಮಾಹಿತಿಯನ್ನು ಒಂದಿ ಲ್ಲೊಂದು ರೀತಿಯಲ್ಲಿ ನೀಡುತ್ತಲೇ ಇರುತ್ತೇವೆ, ಇದು ಕೇವಲ ವಾಟ್ಸಾಪ್, ಫೇಸ್‌ಬುಕ್ ಅಥವಾ ಗೂಗಲ್‌ನಂತಹ ಕಂಪೆನಿಗಳಿಗೆ ಮಾತ್ರ ಸೀಮಿತವಲ್ಲ. ಆದರೆ ಇಲ್ಲಿ ಕಳವಳ ಹುಟ್ಟಿರುವುದಕ್ಕೆ ಕಾರಣ, ಫೇಸ್‌ಬುಕ್ ಕೆಲ ವರ್ಷಗಳ ಹಿಂದೆ ವಾಟ್ಸಾಪ್ ಅನ್ನು ಖರೀದಿಸಿದ ನಂತರ ನಿಧಾನವಾಗಿ ವಾಟ್ಸಾಪ್ ಅನ್ನು ತನ್ನ ಭಾಗವಾಗಿಸಿಕೊಳ್ಳುವಲ್ಲಿ ಒಂದೊಂದೇ ಹೆಜ್ಜೆಯನ್ನಿಡುತ್ತಿದೆ.

ಈ ಬಾರಿಯ ಹೆಜ್ಜೆಯಲ್ಲಿ, ಉಚಿತ ಸೇವೆಗಳನ್ನು ನೀಡುವಲ್ಲಿ ಗೂಗಲ್ ನಂತರದ ಸ್ಥಾನದಲ್ಲಿರುವ ಫೇಸ್‌ಬುಕ್ ಜನರ ಮಾಹಿತಿ ಗಳನ್ನೇ ಬಂಡವಾಳವಾಗಿಸಿಕೊಂಡು ದಂಡಿಯಾಗಿ ಜಾಹೀರಾತುಗಳನ್ನು ನೀಡಿ ಅದರಲ್ಲೇ ಸುಮಾರು ಅಪಾರ ಲಾಭ ಪಡೆಯು ತ್ತಿರುವುದು ನಡೆದೇ ಇದೆ. ಆದರೀಗ, ಅದರ ಗಟ್ಟಿಯಾದ ಶತಕೋಟಿಗಟ್ಟಲೆ ಬಳಕೆದಾರರ ಪಟ್ಟಿಯಲ್ಲಿರುವ, ಹಾಗೂ ಇಲ್ಲದಿರುವ ವಾಟ್ಸಾಪ್ ಬಳಕೆದಾರರ ಪ್ರತಿಯೊಂದು ಮಾಹಿತಿಯನ್ನು ಅದು ಅಧಿಕೃತವಾಗಿ ತಾನು ತನ್ನೆಲ್ಲಾ ಕಂಪೆನಿಗಳೊಡನೆ ಹಂಚಿ ಕೊಳ್ಳುವುದಕ್ಕೆ ಒಪ್ಪಿಗೆಯನ್ನು ಕೇಳಿಕೊಳ್ಳುತ್ತಿದೆ.

ಈ ಮಾಹಿತಿಗಳಲ್ಲಿ ಅದು ಮೊದಲನೆಯದಾಗಿ ನಿಮ್ಮ ಹೆಸರು, ಮೊಬೈಲ್ ನಂಬರನ್ನು ಫೇಸ್‌ಬುಕ್ ನೊಂದಿಗೆ ಹಂಚಿ ಕೊಳ್ಳುವ ದಷ್ಟೇ ಅಲ್ಲದೆ, ನಿಮ್ಮ ಬಳಕೆಯ ಚಟುಟಿಕೆ, ನೀವು ಎಷ್ಟು ಬಾರಿ ವಾಟ್ಸಾಪ್ ಬಳಸುವಿರಿ, ಯಾವ ಫೀಚರ್‌ಗಳನ್ನು ಬಳಸುವಿರಿ, ನಿಮ್ಮ ಪ್ರೋಫೈಲ್ ಫೋಟೋ, ಸ್ಟೇಟಸ್, ಹಾಗೂ ನಿಮ್ಮ ಬಗ್ಗೆೆ ನೀಡುವ ಮಾಹಿತಿ ಸೇರಿದೆ.

ಇಷ್ಟೇ ಅಲ್ಲ, ವಾಟ್ಸಾಪ್ ತನ್ನ ಮಾಲಕರಿಗೆ ನಾವು ಬಳಸುವ ಡಿವೈಸ್ ಯಾವುದು, ನಮ್ಮ ಮೊಬೈಲ್ ನೆಟ್‌ವರ್ಕ್, ಐಪಿ ಅಡ್ರೆಸ್, ಹಾಗೂ ನಮ್ಮ ಒಪ್ಪಿಗೆ ಪಡೆದು ನಾವು ಎಲ್ಲಿದ್ದೀವಿ ಅನ್ನುವುದರ ನಿಖರವಾದ ಮಾಹಿತಿಯನ್ನೂ ಬಳಸುವುದೂ ನಡೆಯುತ್ತದೆ.
ಅದು ಮುಂದುವರಿದೆ, ಫೇಸ್‌ಬುಕ್ ಹಾಗೂ ವಾಟ್ಸಾಪ್ ಒಬ್ಬರಿಗೊಬ್ಬರು ಮಾಹಿತಿಗಳನ್ನೆಲ್ಲಾ ಹಂಚಿಕೊಳ್ಳುವುದಕ್ಕೂ ಈ ಮೂಲಕ ಒಪ್ಪಿಗೆಯನ್ನು ಕೇಳುತ್ತಿದೆ.

ಈ ಎಲ್ಲಾ ಒಪ್ಪಿಗೆಗಳ ಮೂಲಕ ಫೇಸ್‌ಬುಕ್ (ಹಾಗೂ ವಾಟ್ಸಾಪ್) ನಮ್ಮ ಬಳಕೆಯ ಅನುಭವವನ್ನು ಉತ್ತಮಗೊಳಿಸಿ, ಗ್ರಾಹಕರನ್ನು ಅರ್ಥೈಸಿಕೊಂಡು ಒಬ್ಬರಿಗೊಬ್ಬರ ಸೇವೆಗಳನ್ನು ಮಾರ್ಕೆಟ್ ಮಾಡುವುದು ಹಾಗೂ ಈ ಎರಡು ಕಂಪೆನಿಗಳ
ಉತ್ಪನ್ನಗಳನ್ನು ಮಾರ್ಕೆಟ್ ಮಾಡುವುದು ಅಲ್ಲದೇ ನಾವು ಮಾಡುವ ಖರೀದಿಗಳನ್ನು ಪೂರ್ತಿಗೊಳಿಸುವಂತಹ ಕೆಲಸವನ್ನು ಮಾಡಲು, ಫೇಸ್‌ಬುಕ್ ನ ಎಲ್ಲಾ ಕಂಪೆನಿಗಳಲ್ಲಿ ನಮನುಕೂಲ ಹಾಗೂ ಅನುಗುಣವಾದ ಆಫರ್‌ಗಳು ಮತ್ತು ಜಾಹೀರಾತು ಗಳನ್ನು ನೀಡೋದಕ್ಕೆ ಇದನ್ನು ಬಳಸಿಕೊಳ್ಳುನಮ್ಮ ಒಪ್ಪಿಗೆ ಕೇಳುತ್ತಿದೆ.

ಫೇಸ್‌ಬುಕ್‌ನ ಅಡಿಯಲ್ಲಿ ಇರುವ ಉತ್ಪನ್ನಗಳ ಪೈಕಿ ಕೆಲವೆಂದರೆ, ಫೇಸ್‌ಬುಕ್, ಮೆಸೆಂಜರ್, ಇನ್‌ಸ್ಟಾಗ್ರಾಮ್, ವಾಟ್ಸಾಪ್, ಆಕ್ಯುಲಸ್ ಪ್ರಾಡಕ್ಟ್ಸ್, ಫೇಸ್‌ಬುಕ್ ಶಾಪ್ಸ್, ಸ್ಪಾರ್ಕ್ ಏಆರ್ ಸ್ಟುಡಿಯೋ ಹೀಗೆ ಸಾಲು ಪಟ್ಟಿಯೇ ಇದೆ. ಇವೆಲ್ಲವನ್ನು ಹೇಳಿ ನಮ್ಮ ಒಪ್ಪಿಗೆ ಪಡೆಯಲು ಪ್ರಯತ್ನಿಸುತ್ತಿರುವ ಫೇಸ್‌ಬುಕ್ ತಾನು ಸಂದೇಶಗಳನ್ನು ಓದುವುದಿಲ್ಲ ಅಂದಿದೆ. ಆದರೆ ಅದು ಬಳಕೆ ದಾರರಿಗೆ ತಲುಪುವವರೆಗೆ ತನ್ನ ಸರ್ವರ್ ಗಳಲ್ಲಿ ಸ್ಟೋರ್ ಮಾಡಿಕೊಳ್ಳುವುದಾಗಿ ಹೇಳಿದೆ.

ಎಂಡ್ ಟು ಎಂಡ್ ಎಂಕ್ರಿಪ್ಟ್‌ (ಅಂದರೆ ಕಳುಹಿಸಿದಲ್ಲಿಂದ, ತಲುಪುವವರೆಗೆ ಗೂಢ ಲಿಪೀಕರಣಗೊಳ್ಳುವುದು) ಆಗಿರುತ್ತದೆ.
30 ದಿನಗಳವರೆಗೆ ಡೆಲಿವರಿ ಆಗದ ಸಂದೇಶಗಳು ವಾಟ್ಸಾಪ್‌ನ ಸರ್ವರ್‌ಗಳಲ್ಲಿದ್ದು, ನಂತರ ಡೆಲಿವರಿ ಆಗದಿದ್ದರೆ ಅಥವಾ ಅದಾಗಲೇ ಡೆಲಿವರಿ ಆಗಿದ್ದರೆ ಅವುಗಳನ್ನು ತನ್ನ ಸರ್ವರ್‌ಗಳಿಂದ ಡಿಲೀಟ್ ಮಾಡಲಾಗುತ್ತದೆ ಎಂದು ಫೇಸ್‌ಬುಕ್ ಹೇಳಿದೆ.

ಇವ್ಯಾವುದೇ ಮಾಹಿತಿಯನ್ನು ತಾನು ಅಥವಾ ತನ್ನ ಸಂಬಂಧಿತ ಸಂಸ್ಥೆಗಳು ಎಂದಿಗೂ ಓದುವುದಿಲ್ಲ ಅನ್ನುವುದನ್ನು ಖಡಾಖಂಡಿತವಾಗಿ ಹೇಳುತ್ತದೆ ಫೇಸ್‌ಬುಕ್. ಆದರೆ ಬೇರೆ ಜಾಹೀರಾತುದಾರರಿಗೆ ತನ್ನ ಸೇವೆಗಳಲ್ಲಿ ಅವಕಾಶ ನೀಡುವುದಿಲ್ಲ ಅಂದಿರುವ ಫೇಸ್ ಬುಕ್ ಮುಂದಿನ ದಿನಗಳಲ್ಲಿ ಒಂದು ವೇಳೆ ಕೊಟ್ಟರೂ ಗೌಪ್ಯತೆ ನೀತಿಯಲ್ಲಿ ಅದನ್ನು ಸೇರಿಸುವುದಾಗಿ ಹೇಳಿದೆ. ಅಂದರೆ ಅದು ಅದನ್ನು ಪೂರ್ತಿ ಅಲ್ಲಗಳೆಯುವುದಿಲ್ಲ ಎಂದಾಯ್ತು. ಇನ್ನು ಫೇಸ್ ಬುಕ್ ಬ್ಯುಸಿನೆಸ್‌ನಲ್ಲಿ ರೆಜಿಸ್ಟರ್ ಆದ ಸಂಸ್ಥೆಗಳಿಗೂ ತಾನು ಮಾಹಿತಿಯನ್ನು ಶೇರ್ ಮಾಡುವುದಿಲ್ಲ ಅನ್ನುತ್ತದೆ ಫೇಸ್‌ಬುಕ್.

ನಮಗಿರುವ ಆಯ್ಕೆ ಏನು?
ಒಂದೋ ಫೇಸ್‌ಬುಕ್‌ನ ಈ ಹೊಸ ಪಾಲಿಸಿಗಳಿಗೆ ಒಪ್ಪಿಗೆ ಸೂಚಿಸಬೇಕು. ಒಂದು ವೇಳೆ ಈಗಾಗಲೇ ಒಪ್ಪಿದ್ದರೆ ಅದನ್ನು ಹಿಂಪಡೆ ಯಲು 30 ದಿನಗಳ ಕಾಲಾವಕಾಶ ಹಾಗೂ ಅಕೌಂಟ್ ಡಿಲೀಟ್ ಮಾಡುವ ಅವಕಾಶವೂ ಇದೆ. ಒಂದು ವೇಳೆ ನಮಗೆ ಇನ್ನು ಮುಂದೆ ವಾಟ್ಸಾಪ್ ಬಳಸುವುದು ಇಷ್ಟವಿಲ್ಲದಿದ್ದರೆ ಆ್ಯಪ್ ಅನ್ ಇನ್‌ಸ್ಟಾಲ್ ಮಾಡುವುದು ಮಾತ್ರವಲ್ಲ, ಅಕೌಂಟ್‌ಅನ್ನು ಮೊದಲು ಡಿಲೀಟ್ ಮಾಡಿಕೊಳ್ಳುವುದು ಅತಿ ಮುಖ್ಯ.

ಸಿಗ್ನಲ್‌ಗೆ ಕೊಟ್ರು ಗ್ರೀನ್ ಸಿಗ್ನಲ್
ಭಾರತದಲ್ಲಿ ಫೇಸ್‌ಬುಕ್‌ನ ಈ ಹೊಸ ನೋಟಿಫಿಕೇಶನ್‌ಗೆ ತತ್ತರಿಸಿದ 20 ಕೋಟಿಯಷ್ಟಿರುವ ವಾಟ್ಸಾಪ್ ಬಳಕೆದಾರರ ಪೈಕಿ ಹಲವರು ಅದನ್ನು ಬಿಟ್ಟು ಬೇರೆ ಮೆಸೆಜಿಂಗ್ ಸೇವೆ ಪಡೆಯಲು ಆರಂಭಿಸಿದ್ದಾರೆ. ಈಗಾಗಲೇ ಮೆಸೆಜಿಂಗ್ ಕ್ಷೇತ್ರದ
ದೊರೆಯಾಗಿ ಮೆರೆಯುತ್ತಿರುವ ವಾಟ್ಸಾಪ್‌ಗೆ ಇದು ತಕ್ಷಣಕ್ಕೆ ಪೆಟ್ಟಾಗದಿದ್ದರೂ ಕೆಲ ದಿನಗಳಲ್ಲಿ ತನ್ನ ನೀತಿಯನ್ನು, ರೀತಿಯನ್ನು ಸ್ವಲ್ಪವಾದರೂ ಬದಲಿಸದಿದ್ದರೆ ಒಟ್ಟಾರೆ ವಹಿವಾಟಿಗೆ ತೊಂದರೆ ಯಾಗುವುದು ಖಂಡಿತ.

ಇದುವರೆಗೆ ಅಷ್ಟೊಂದು ಪ್ರಚಲಿತದಲ್ಲಿರದ, 2014ರಲ್ಲಿ ಶುರುವಾದ, ಗೌಪ್ಯತೆಯನ್ನು ಮೇಲ್ಪಂಕ್ತಿಯಲ್ಲಿರಿಸಿದ ಮೆಸೆಜಿಂಗ್ ಸೇವೆ ‘ಸಿಗ್ನಲ್’ ಭಾರತದಲ್ಲಿ ಅಷ್ಟೇ ಅಲ್ಲದೆ ವಿಶ್ವದ ಹಲ ದೇಶಗಳಲ್ಲಿ ಸಾಕಷ್ಟು ಡೌನ್‌ಲೋಡ್ ಆದ ಮೆಸೆಜಿಂಗ್ ಆ್ಯಪ್ ಆಗಿ ಸ್ಥಾನ ಗಳಿಸಿದೆ. ನಮ್ಮ ದೇಶದ ಬಹಳಷ್ಟು ಜನರು ವಾಟ್ಸಾಪ್ ತೊರೆದು, ‘ಸಿಗ್ನಲ್’ ಆ್ಯಪ್‌ನ್ನು ಬಳಸಲು ಆಸಕ್ತಿ ತೋರುತ್ತಿರುವುದು ಸಹ ಗಮನಾರ್ಹ.

ಬದಲಿ ಆಯ್ಕೆಗಳು

ಹೆಚ್ಚು ಕಮ್ಮಿ ವಾಟ್ಸಾಪ್ ರೀತಿಯೇ, ಗೌಪ್ಯತೆಗೆ ಹೆಚ್ಚು ಒತ್ತು, ಬ್ರಾಡ್‌ಕಾಸ್ಟಿಂಗ್ ಸೌಲಭ್ಯ ಇಲ್ಲ, ವಿಡಿಯೋ ಕಾಲಿಂಗ್, ಗ್ರೂಪ್ ಕಾಲಿಂಗ್ ರೀತಿಯ ಎಲ್ಲಾ ಸೌಲಭ್ಯ ಲಭ್ಯ. ಸಿಗ್ನಲ್ ಕೇವಲ ಬಳಕೆದಾರರ ಮೊಬೈಲ್ ಸಂಖ್ಯ ಮಾತ್ರ ಪಡೆದುಕೊಳ್ಳುತ್ತದೆ.
ಟೆಲೆಗ್ರಾಮ್ ಒಂದೇ ಗ್ರೂಪ್‌ನಲ್ಲಿ 2 ಲಕ್ಷ ಕಾಂಟ್ಯಾಕ್ಟ್‌‌ಗಳನ್ನು ಆಡ್ ಮಾಡಬಹುದು! ವಾಟ್ಸಾಪ್‌ನಲ್ಲಿ ಆಗೋದು 256. ಹಲವಾರು ವೈವಿಧ್ಯಮಯ ಫೀಚರ್‌ಗಳನ್ನೂ ಇದು ನೀಡುತ್ತದೆ. 1.5 ಜಿಬಿಯಷ್ಟು ದೊಡ್ಡ ಫೈಲ್‌ಗಳನ್ನು ಶೇರ್ ಮಾಡಬಹುದು.

ವಾಟ್ಸಾಪ್ ನೀಡೋದು ಹೆಚ್ಚು ಎಂದರೆ ಕೆಲವೇ ನೂರು ಎಂಬಿಗಳನ್ನು. ಮೊಬೈಲ್ ನಂಬರ್ ಬದಲು ಯೂಸರ್ ಐಡಿ
ಬಳಸುವ ಇದು ಕಾಂಟ್ಯಾಕ್ಟ್ಟ್‌‌ಗಳು ಹಾಗೂ ಕಾಂಟ್ಯಾಕ್ಟ್‌ ಇನ್ಫೋವನ್ನು ಬಳಸಿಕೊಳ್ಳುತ್ತದೆ. ಗೌಪ್ಯತೆಯಲ್ಲಿ ಸಿಗ್ನಲ್‌ನ ನಂತರ ಸ್ಥಾನ ಇದರದ್ದೇ.