Saturday, 14th December 2024

ಚಿನ್ನದ ದಾರಿ ಬಣ್ಣದ ಲೋಕ

ಮೋಹನದಾಸ ಕಿಣಿ, ಕಾಪು

ಕಬ್ಬಿಣದ ಸೇತುವೆಯೊಂದು ಪ್ರವಾಸಿ ಆಕರ್ಷಣೆ ಆಗಬಲ್ಲದೆ? ಅಂತಹದ್ದೊೊಂದು ಅಪರೂಪದ ಸೇತುವೆಯೇ ಅಮೆರಿಕದ ಗೋಲ್ಡನ್ ಗೇಟ್.

ಸಾನ್‌ಫ್ರಾನ್ಸಿಸ್ಕೋ ನಗರದ ಪ್ರವಾಸಿ ಆಕರ್ಷಣೆಗಳಲ್ಲಿ ಗೋಲ್ಡನ್ ಗೇಟ್ ಸೇತುವೆ ಬಹು ಪ್ರಸಿದ್ಧ. ಇದು ಪೆಸಿಫಿಕ್ ಸಾಗರದ ಸಾನ್‌ಫ್ರಾನ್ಸಿಸ್ಕೋ ಅಳಿವೆ ಬಾಗಿಲಿಗೆ ಅಡ್ಡವಾಗಿ ನಿರ್ಮಿಸಲ್ಪಟ್ಟಿದೆ. ಈ ಪ್ರದೇಶವು ಪ್ರಬಲ ಗಾಳಿ ಮತ್ತು ಕಡಲ ಅಲೆಗಳ ಕಾರಣಕ್ಕೆ ಅತ್ಯಂತ ಪ್ರಕ್ಷುಬ್ಧ ಪ್ರದೇಶವಾಗಿರುವುದರಿಂದ ಇಲ್ಲಿ ಸೇತುವೆ ನಿರ್ಮಾಣವು ಅತ್ಯಂತ ಸವಾಲಿನದ್ದಾಗಿತ್ತು.

ಇಂತಹದೊಂದು ಸೇತುವೆ 1867ರಿಂದಲೇ ಇತ್ತೆಂದು ಹೇಳಲಾಗುತ್ತದೆ. ಆದರೆ 18.4. ಸಂಭವಿಸಿದ ರಿಕ್ಟರ್ ಮಾಪಕದಲ್ಲಿ 7.9 ರಷ್ಟು ಪ್ರಬಲವಾದ ಭೂಕಂಪದಿಂದ ಕುಸಿಯಿತು. ಇದರ ಮರುನಿರ್ಮಾಣದ ಅಗತ್ಯವನ್ನು ಮನಗಂಡ ಸ್ಥಳೀಯ ಆಡಳಿತ ಪೆಸಿಫಿಕ್ ಸಾಗರದ ನೀರಿನ ಒತ್ತಡ ಮತ್ತು ಪದೇಪದೇ ಸಂಭವಿಸುವ ಭೂಕಂಪ ವನ್ನು ತಡೆದುಕೊಳ್ಳುವಷ್ಟು ಶಕ್ತಿಶಾಲಿ ಸೇತುವೆಯ ನಿರ್ಮಾಣಕ್ಕೆ ನಿರ್ಮಾಣಕ್ಕೆ 25-5-1923ರಲ್ಲಿ ಆಡಳಿತಾತ್ಮಕ ಮಂಜೂರಾತಿ ಯನ್ನು ನೀಡಿದರೂ ನಿರ್ಮಾಣ ಆರಂಭ ವಾದದ್ದು ಮಾತ್ರ ಒಂದು ದಶಕದ ನಂತರ! ಇದರ ನಿರ್ಮಾಣವು ಪೂರ್ಣಗೊಂಡು ಸಂಚಾರಕ್ಕೆ ಮುಕ್ತಗೊಂಡಾಗ ಜಾಗತಿಕ ಮಟ್ಟದಲ್ಲಿ ಹಲವು ಪ್ರಥಮಗಳ ದಾಖಲೆಯನ್ನು ಹೊಂದಿತ್ತು.

ಎರಡಂತಸ್ತಿನ ಸೇತುವೆ
ಈ ಸೇತುವೆಯು ಸಮಾನ ಉದ್ದದ ಎರಡು ವಿಭಾಗಗಳನ್ನು ಹೊಂದಿದೆ. ವಿಲ್ಲಿ ಎಲ್.ಬ್ರೌನ್ (ಜೂ) ಸೇತುವೆಯೆಂದು ಕರೆಯ ಲ್ಪಡುವ ಇದರ ಪಶ್ಚಿಮ ವಿಭಾಗವು ಸ್ಯಾನ್ ಫ್ರಾನ್ಸಿಸ್ಕೊವನ್ನು ಯೆರ್ಬಾಬ್ಯೂನಾ ದ್ವೀಪಕ್ಕೆ ಹಾಗೂ ಪೂರ್ವ ವಿಭಾಗವು ಓಕ್ ‌ಲ್ಯಾಂಡನ್ನು ಸಂಪರ್ಕಿಸುತ್ತದೆ. ಪಶ್ಚಿಮ ವಿಭಾಗವು ಎರಡು ಡೆಕ್‌ಗಳನ್ನು ಹೊಂದಿರುವ ಡಬಲ್ ಸಸ್ಪೆನ್ಷನ್ ಸೇತುವೆ ಯಾಗಿದ್ದು, ಪಶ್ಚಿಮ ದಿಕ್ಕಿನ ದಟ್ಟಣೆಯನ್ನು ಮೇಲಿನ ಡೆಕ್ಕಿನಲ್ಲಿ ನಿಭಾಯಿಸಲು ಆಗದಿದ್ದರೆ ಕೆಳಭಾಗದಲ್ಲಿ ಸಾಗಿಸಲಾಗುತ್ತದೆ.

ಪೂರ್ವ ವಿಭಾಗವು ಅತಿದೊಡ್ಡ ಕ್ಯಾಂಟಿಲಿವರ್ ಸೇತುವೆ. 1989ರ ಲೋಮಾ ಪ್ರಿಯೆಟ ಭೂಕಂಪದ ಸಮಯದಲ್ಲಿ, ಪೂರ್ವ ವಿಭಾಗದ ಮೇಲ್ಭಾಗದ ಡೆಕ್‌ನ ಒಂದು ಭಾಗವು ಕೆಳ ಡೆಕ್‌ನಲ್ಲಿ ಕುಸಿದಾಗ ಒಂದು ತಿಂಗಳು ಮುಚ್ಚಲಾಯಿತು. ಸ್ವಯಂ-ಲಂಗರು ಹಾಕಿದ ತೂಗು ಸೇತುವೆಗೆ ಸಂಪರ್ಕ ಹೊಂದಿದ ಕಾಸ್‌ವೇ ಆಗಿ ಸೇತುವೆಯ ಪೂರ್ವ ಭಾಗವನ್ನು ಪುನರ್ನಿರ್ಮಾಣ 2002ರಲ್ಲಿ ಪ್ರಾರಂಭಿಸಿ 2013ರಲ್ಲಿ ಮುಗಿಸಲಾಯಿತು.

ಸೇತುವೆಯ ಪಶ್ಚಿಮ ವಿಭಾಗವು ಪೂರ್ವ ವಿಭಾಗಕ್ಕಿಂತ ಭಿನ್ನವಾಗಿದೆ. ಪೂರ್ವ ವಿಭಾಗವು ಪ್ರತಿಯೊಂದು ಬದಿಯಲ್ಲಿ ಪೂರ್ವ ದಿಕ್ಕಿನ ಮತ್ತು ಪಶ್ಚಿಮ ದಿಕ್ಕಿನ ಹಾದಿಗಳನ್ನು ಹೊಂದಿರುವ ಒಂದೇ ಡೆಕ್ ಆಗಿದೆ. ವಿಶ್ವದ ಅತಿ ಅಗಲವಾದ ಸೇತುವೆ ಇದೆಂದು ಗಿನ್ನೆಸ್ ವರ್ಲ್ಡ್‌‌ ರೆಕಾರ್ಡ್ಸ್‌‌ನಲ್ಲಿ ದಾಖಲಾಗಿದೆ. ರೇಡಿಯೋ ಮತ್ತು ಟೆಲಿವಿಷನ್ ಟ್ರಾಫಿಕ್ ಸೂಚನೆಗಳು, ಟೋಲ್ ಪ್ಲಾಜಾ, ಮೀಟರಿಂಗ್ ದೀಪಗಳು ರಸ್ತೆಯ ಮಧ್ಯದಲ್ಲಿ ವಾಹನ ನಿಲುಗಡೆ ಸ್ಥಳವನ್ನು ಸೂಚಿಸುತ್ತದೆ.

ರಾತ್ರಿ ಪ್ರಯಾಣ
ಸೇತುವೆಯನ್ನು ನೋಡಲು ಪ್ರವಾಸಿಗರು ಬರುವುದರಿಂದ, ಈ ಸೇತುವೆಯೇ ಪ್ರವಾಸಿ ತಾಣ ಎನಿಸಿದೆ. ಪಾಕಿರ್ಂಗ್ ಸ್ಥಳವು
ಸುಮಾರು 1,900 ಅಡಿ ಉದ್ದವಿದ್ದು, ಟೋಲ್ ಪ್ಲಾಜಾದ ಪೂರ್ವಕ್ಕೆ ಸುಮಾರು 800 ಅಡಿಯಿಂದ ದೀಪಗಳ ಪಶ್ಚಿಮಕ್ಕೆ
ಸುಮಾರು 100 ಅಡಿವರೆಗೆ ವಿಸ್ತರಿಸಿದೆ. ಬೆಳಗಿನ ಪ್ರಯಾಣದ ಸಮಯದಲ್ಲಿ, ಓಕ್ಲ್ಯಾಂಡ್‌ನಿಂದ ಪಶ್ಚಿಮ ದಿಕ್ಕಿನ ಮಾರ್ಗದಲ್ಲಿನ ದಟ್ಟಣೆ ಸೇತುವೆಯ ಪೂರ್ವ ತುದಿಯಲ್ಲಿರುವ ಮ್ಯಾಕ್‌ಆರ್ಥರ್ ಇಂಟರ್‌ ಚೇಂಜ್ ಮೂಲಕ ಮೂರು ಫೀಡರ್ ಹೆದ್ದಾರಿಗಳೆಡೆಗೆ ವಿಸ್ತರಿಸುತ್ತದೆ. ಸಂಜೆ ಸಮಯದಲ್ಲಿ ಪೂರ್ವ ದಿಕ್ಕಿನ ಬ್ಯಾಕ್‌ಅಪ್ ಗಳೂ ಆಗಾಗ್ಗೆ ಕಂಡುಬರುತ್ತವೆ.

ಸೇತುವೆಯ ಮೇಲಿನ ರಾತ್ರಿ ಪ್ರಯಾಣವಂತೂ ನಯನ ಮನೋಹರ. ಸಾಲಾದ ದೀಪಗಳು, ಕೆಳಗೆ ವಿಶಾಲ ನೀರಿನ ಹರವು, ಬೀಸುವ ಗಾಳಿ ಎಲ್ಲವೂ ಈ ಪಯಣವನ್ನು ಸುಂದರ ಅನುಭವವನ್ನಾಗಿಸುತ್ತವೆ.

18 ಲೇನ್
ಓಕ್‌ಲ್ಯಾಂಡ್ ಬದಿಯಲ್ಲಿರುವ ಟೋಲ್ ಪ್ಲಾಜಾ ಹದಿನೆಂಟು ಲೇನ್‌ಗಳನ್ನು ಹೊಂದಿದೆ. ಟೋಲ್ ಪ್ಲಾಜಾದ ಬಲ ಬದಿಯಲ್ಲಿ ಟೋಲ್ ಬೂತ್‌ಗಳು ಮತ್ತು ಮೀಟರಿಂಗ್ ದೀಪ ಹೊಂದಿರುವ, ಎರಡು ಬಸ್ ಲೇನ್‌ಗಳಿವೆ. ವಾರದ ದಿನಗಳಲ್ಲಿ ಬೆಳಿಗ್ಗೆ
ಮತ್ತು ಮಧ್ಯಾಹ್ನ ಪ್ರಯಾಣದ ಅವಧಿಯಲ್ಲಿ ಇತರ ವಾಹನಗಳು ಈ ಪಥಗಳನ್ನು ಬಳಸಬಹುದು.

ಸೇತುವೆಯ ಕೆಲವು ವಿಶೇಷತೆಗಳು
ಜಗತ್ತಿನ ಅತಿ ಸುಂದರ ಮತ್ತು ಅತಿ ಹೆಚ್ಚು ಫೋಟೋಗ್ರಾಫ್‌ಗೆ ವಸ್ತುವಾದ ಸೇತುವೆ ಎಂಬ ಪ್ರಚಾರ.

ಆಗಿನ ನಿರ್ಮಾಣ ವೆಚ್ಚ (1937ರಲ್ಲಿ) 3.50ಕೋಟಿ ಡಾಲರ್. ಈಗಿನ ಬೆಲೆಯಲ್ಲಿ 120 ಕೋಟಿ ಡಾಲರ್ (ಸುಮಾರು 9000 ಕೋಟಿ ರೂಪಾಯಿ)

ಸೇತುವೆಯ ಅಗಲ 90 ಅಡಿ, ಉದ್ದ 1.6 ಕಿಲೋಮೀಟರ್.

ಉಪಯೋಗಿಸಿದ ಉಕ್ಕು 83000 ಟನ್. 354 ಲಕ್ಷ ಚದರ ಕಿಲೋಮೀಟರ್ ಕಾಂಕ್ರೀಟ್.

145 ಕಿಲೋಮೀಟರ್ ವೇಗದ ಗಾಳಿ ಮತ್ತು 8.30 ಮಾಪನದ ಭೂಕಂಪ ತಡೆಯುವಷ್ಟು ಶಕ್ತವಾಗಿದೆ.

ಸೇತುವೆಯಲ್ಲಿ 128 ದಾರಿದೀಪ ಮತ್ತು 24 ಗೋಪುರಗಳಿದ್ದು ಪ್ರತಿಯೊಂದರಲ್ಲಿ ತಲಾ 12ದೀಪಗಳಿವೆ.

ದೀಪಗಳಿಗೆ ಉಪಯೋಗಿಸಿದ ಕೇಬಲ್ ಸುತ್ತಳತೆ 36 ಉದ್ದ 7650 ಅಡಿ.

1937ರಲ್ಲಿ ಇದರ ಉದ್ಘಾಟನಾ ಸಮಾವೇಶದಲ್ಲಿ ಸುಮಾರು 2ಲಕ್ಷ ಜನರು ಭಾಗವಹಿಸಿದ್ದರು.

ಇದರಲ್ಲಿ ಚಲಿಸುವ ವಾಹನಗಳ ದೈನಂದಿನ ಸರಾಸರಿ 1,10,000.

ಇದು ಸಮುದ್ರದ ಉಪ್ಪು ನೀರಿನ ಸಂಪರ್ಕದಲ್ಲಿರುವುದರಿಂದ ತುಕ್ಕು ಹಿಡಿಯದಂತೆ ಬಣ್ಣ ಬಳಿಯುವ ಕೆಲಸ ನಿರಂತರ ಚಾಲನೆಯಲ್ಲಿದೆ. ಪ್ರತಿ ದಿನ 13 ಕಬ್ಬಿಣದ ಕೆಲಸಗಾರರು ಮತ್ತು 28 ಪೈಂಟರುಗಳು ನಿರಂತರ ಒಂದು ಮೂಲೆಯಿಂದ ಬಣ್ಣ
ಬಳಿಯುತ್ತಾ ವರ್ಷದ ಆರು ತಿಂಗಳಲ್ಲಿ ಇನ್ನೊಂದು ಮೂಲೆ ತಲುಪಿ, ಪುನಃ ಆ ಮೂಲೆಯಿಂದ ಈ ಮೂಲೆಗೆ ಬಣ್ಣ ಬಳಿಯುತ್ತಲೇ ಇರುತ್ತಾರೆ!

ಈ ಸೇತುವೆ ನೀರಿನಿಂದ 500 ಅಡಿ ಮೇಲ್ಭಾಗದಲ್ಲಿದ್ದು, ಸೇತುವೆಯ ಎತ್ತರ 746 ಅಡಿ.

ಇದು ಹಗಲಲ್ಲಿ ಒಂದು ರೀತಿ ಕಾಣಿಸಿದರೆ, ಮಂಜು ಆವರಿಸಿದಾಗ ಇನ್ನೊಂದು ರೀತಿಯಲ್ಲಿ ಹಾಗೂ ರಾತ್ರಿ ಮತ್ತೊಂದು ರೀತಿ ಕಾಣಿಸುವ ಮೂಲಕ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ.