*ಸುರೇಶ ವೀ.ಗುದಗನವರ
ಬೆಳಗಾವಿ ಜಿಲ್ಲೆೆಯಲ್ಲಿ ಪುರಾತನ ಕೋಟೆಗಳು, ಜೈನ ಬಸದಿಗಳು, ಹೊಯ್ಸಳ, ಚಾಲುಕ್ಯ, ಕದಂಬರ ಕಾಲದ ವಾಸ್ತುಶಿಲ್ಪದಲ್ಲಿ ನಿರ್ಮಾಣವಾದ ದೇವಾಲಯಗಳನ್ನು ಕಾಣಬಹುದು. ಇಂಥದರಲ್ಲಿ ದಕ್ಷಿಣ ಕಾಶಿ ಎಂದೇ ಪ್ರಖ್ಯಾಾತಿ ಪಡೆದ ಶ್ರೀ ಕ್ಷೇತ್ರ ಸೊಗಲವೂ ಒಂದು.
ಬೆಳಗಾವಿಯಿಂದ 56 ಕಿ.ಮೀ. ಹಾಗೂ ಬೈಲಹೊಂಗಲದಿಂದ ಕಿ.ಮೀ. ಅಂತರದಲ್ಲಿರುವ ಸೊಗಲ ಕ್ಷೇತ್ರವು ಪೌರಾಣಿಕ ಹಿನ್ನೆೆಲೆಯಲ್ಲಿ ಪಾವನ ಕ್ಷೇತ್ರವಾಗಿದೆ. ಈ ಕ್ಷೇತ್ರವು ಸವದತ್ತಿಿ ತಾಲೂಕಿನಲ್ಲಿದ್ದು, ನಾಡಿನಾದ್ಯಂತ ಪ್ರಖ್ಯಾಾತಿ ಪಡೆದ ಸವದತ್ತಿಿ ಎಲ್ಲಮ್ಮ ಕ್ಷೇತ್ರದಿಂದ 35 ಕಿ.ಮೀ. ಅಂತರದಲ್ಲಿದೆ. ಪ್ರಾಾಕೃತಿಕ ಮಡಿಲಲ್ಲಿ ಎತ್ತರದ ಬೆಟ್ಟದಲ್ಲಿ ಪ್ರಶಾಂತವಾದ ವಾತಾವರಣದಲ್ಲಿ ಸೊಗಲ ಬಹಳ ಅಕರ್ಷಣಿಯವಾಗಿದೆ. ಭರತ ಕ್ಷೇತ್ರದ ಕುಂತಳದ ಕೂಹುಂಡಿ ನಾಡಿನಲ್ಲಿ 14 ವಿಭಾಗಗಳಿದ್ದು, ಅದರಲ್ಲಿ ಸೋಲು 30 ಒಂದು ವಿಭಾಗವಾಗಿದೆ. ಅಂದರೇ 30 ಹಳ್ಳಿಿಗಳಿಂದ ಕೂಡಿದ ಚಿಕ್ಕಸಂಸ್ಥಾಾನ ಎನಿಸಿಕೊಂಡಿದೆ. ಅಂದಿನ 30, ಇಂದಿನ ಸೊಗಲ ಆಗಿದೆ.
ಪ್ರಾಾರಂಭದಲ್ಲಿಯೇ ನಿಸರ್ಗದ ಮಡಿಲಲ್ಲಿ 100 ಅಡಿ ಎತ್ತರದಿಂದ ಧುಮುಕುವ ಜಲಪಾತ ಸರ್ವರನ್ನು ಸ್ವಾಾಗತಿಸುತ್ತದೆ. ಜಲಪಾತದ ಮಗ್ಗುಲಿನ ಮೆಟ್ಟಿಿಲುಗಳನ್ನು ಏರುತ್ತಾಾ ಹೋದಂತೆ ನಿಸರ್ಗರಮಣಿಯ ಸ್ಥಳದ ಮಹಿಮೆ ಅರಿವಾಗುತ್ತದೆ. ಇಲ್ಲಿ ಸೋಮೇಶ್ವರ ದೇವಾಲಯ, ಶಿವ ಪಾರ್ವತಿ ದೇವಾಲಯ, ಭ್ರಮರಾಂಭ ದೇವಾಲಯ, ವೀರಭದ್ರ ದೇವಾಲಯ, ಕಾಳಿಕಾ ಮಂದಿರ, ಸೂರ್ಯದೇವರ ಗುಡಿ, ಕಣ್ವಋಷಿ ಮಂದಿರ, ಅಜ್ಜನ ಗುಡಿ, ಮಾತಾನಂದಜಿ ಸಮಾಧಿ, ಕತ್ತನಕೋಟೆ, ಜಿಂಕೆವನ ಹಾಗೂ ಜಲಪಾತಗಳು ಎಲ್ಲವೂ ರಮಣಿಯವಾಗಿವೆ.
ಹಿನ್ನೆೆಲೆಯುಳ್ಳ ಸೊಗಲ ಕ್ಷೇತ್ರವು ಶಿವಪಾರ್ವತಿಯರ ವಿವಾಹಕ್ಕೆೆ ಸಾಕ್ಷಿ ಎನಿಸಿದೆ. ಪಾರ್ವತಿಯು ಉಗ್ರವಾದ ತಪಸ್ಸನ್ನು ಮಾಡಿ ಶಿವನನ್ನು ಒಲಿಸಿಕೊಂಡು ಈ ಕ್ಷೇತ್ರದಲ್ಲಿಯೇ ವಿವಾಹವಾದರೆಂದು ಹೇಳಲಾಗುತ್ತಿಿದೆ. ಇಲ್ಲಿ ಶಿವ ಪಾರ್ವತಿಯರು ಬಾಸಿಂಗ ಕಟ್ಟಿಿ ನಿಂತಿರುವ ವಿಗ್ರಹಗಳು ಹಾಗೂ ಶಿವಪಾರ್ವತಿಯರ ಹಿಂಬದಿಯಲ್ಲಿ ಲಗ್ನಕ್ಕಾಾಗಿ ಆಗಮಿಸಿದ ದೇವಾನುದೇವತೆಗಳ ವಿಗ್ರಹಗಳ ಕೆತ್ತನೆ ಮಾಡಲಾಗಿದೆ. ಈ ಸ್ಥಳದಲ್ಲಿ ಇಂದಿಗೂ ವಿವಾಹಗಳು ಜರುಗತ್ತಿಿರುವುದು ವಿಶೇಷವಾಗಿದೆ.
ಶಿವ ಪಾರ್ವತಿ ದೇವಾಲಯದ ಎದಿರುಗಡೆ 40 ಅಡಿ ಎತ್ತರದಿಂದ ಧುಮುಕುವ ಜಲಪಾತದಲ್ಲಿ ಪ್ರವಾಸಿಗರು ಮಾಡಿ, ಸೋಮೇಶ್ವರ ದೇವರ ದರ್ಶನ ಮಾಡಿಕೊಳ್ಳುತ್ತಾಾರೆ. ನಿಸರ್ಗದ ಮಡಿಲಿನಿಂದ, ಬೆಟ್ಟಗಳ ನಡುವಿನಿಂದ ಹರಿದು ಬರುವ ಇಲ್ಲಿನ ನೀರಿನಲ್ಲಿ ಸ್ನಾಾನ ಮಾಡುವದರಿಂದ ಹಲವು ರೋಗರುಜಿನಗಳು ವಾಸಿಯಾಗುತ್ತವೆ ಎಂದು ನಂಬಿಕೆ ಇದೆ.
ಚಾಲುಕ್ಯ ಶೈಲಿಯ ವಾಸ್ತು
ಶಿವ ಪಾರ್ವತಿಯರ ಕಲ್ಯಾಾಣ ಮಂಟಪದ ಬಲ ಭಾಗದಲ್ಲಿ ಚಾಲುಕ್ಯರ ಹಾಗೂ ರಾಷ್ಟ್ರಕೂಟರ ವಾಸ್ತುಶೈಲಿಯ ಸುಂದರವಾದ ಸೋಮೇಶ್ವರ ದೇವಾಲಯವಿದ್ದು, ಸೊಗಲ ಕ್ಷೇತ್ರದ ಪ್ರಮುಖ ಕೇಂದ್ರವಾಗಿದೆ. ಈ ದೇವಾಲಯವನ್ನು 10ನೇ ಶತಮಾನದಲ್ಲಿ ನಿರ್ಮಿಸಲಾಗಿದ್ದು, ಚಿಕ್ಕದಾದರೂ ಆಕರ್ಷಣೀಯವಾಗಿದೆ. ಗರ್ಭಗೃಹದ ಕದಂಬ ನಾಗರ ಶೈಲಿಯ ಶಿಖರವಿದೆ. ಗರ್ಭಗೃಹದ ಮಧ್ಯದಲ್ಲಿ ಬೃಹತ್ ಲಿಂಗವೊಂದಿದೆ. ಹಿಂಬದಿಯ ಗೋಡೆಗೆ ಶಿವನ ಮೂರ್ತಿಯನ್ನು ಇರಿಸಲಾಗಿದೆ. ಗರ್ಭಗೃಹಕ್ಕೆೆ ಹೊಂದಿಕೊಂಡಂತೆ ಚೌಕಾಕಾರದ ಅರ್ಧಮಂಟಪವಿದೆ. ಅರ್ಧಮಂಟಪಕ್ಕೆೆ ಹೊಂದಿಕೊಂಡಂತೆ ನವರಂಗವಿದೆ. ಅಲ್ಲದೇ ನವರಂಗಕ್ಕೆೆ ಮೂರು ಪ್ರವೇಶ ದ್ವಾಾರಗಳಿರುವದು ವಿಶೇಷ. ನವರಂಗದಲ್ಲಿ ನರಸಿಂಹ, ನಟರಾಜ, ಸೂರ್ಯ, ಅಪ್ಸರೆ, ವೀರಭದ್ರ, ಭೈರವ, ಬ್ರಹ್ಮ, ವಿಷ್ಣು ಮತ್ತು ಶಿವನ ಮೂರ್ತಿಗಳನ್ನು ಸುಂದರವಾಗಿ ಕೆತ್ತನೆ ಮಾಡಲಾಗಿದೆ. ನಿತ್ಯವು ವಿಶೇಷ ಪೂಜೆ, ರುದ್ರಾಾಭಿಷೇಕಗಳು ಭಕ್ತರಿಂದ ಜರುಗುತ್ತವೆ. ಸೋಮೇಶ್ವರ ದೇವಾಲಯದ ಹಿರೇಮಠ ಮನೆತನದವರು ವ್ಯವಸ್ಥಿಿತವಾಗಿ ಮಾಡಿಕೊಂಡು ಬರುತ್ತಿಿದ್ದಾಾರೆ.
ಸೋಮೇಶ್ವರ ದೇವಾಲಯದ ಬಲಬದಿಗೆ 10ನೇ ಶತಮಾನದ ಶಿಲಾಶಾಸನವಿದೆ. ಎಲ್ಲಿ ನೋಡಿದಲ್ಲಿ ಅಚ್ಚುಕಟ್ಟಾಾದ ಮೆಟ್ಟಿಿಲುಗಳಿದ್ದು, ಬೃಹತ್ ಆಕಾರದ ಪರಮೇಶ್ವರ, ಮೂರ್ತಿ ಮತ್ತು ಜಿಂಕೆ ವನ ಪ್ರವಾಸಿಗರನ್ನು ಆಕರ್ಷಿಸುತ್ತವೆ. ಅಲ್ಲದೇ ಈ ಕ್ಷೇತ್ರದಲ್ಲಿ ನೂರಾರು ವನಸ್ಪತಿಗಳ ಸಸ್ಯ ಸಂಕುಲವಿದೆ. ಈ ಕ್ಷೇತ್ರದ ಪ್ರಾಾಕೃತಿಕ ಸೊಬಗನ್ನು ಕಂಡು ಕನ್ನಡ ಚಲನಚಿತ್ರಗಳ ನಿರ್ದೇಶಕರು ಹಲವು ಚಲನಚಿತ್ರಗಳಲ್ಲಿ ದೃಶ್ಯಗಳನ್ನು ಸೆರೆಹಿಡಿದಿರುವದು ವಿಶೇಷ.
ಪ್ರತಿ ವರ್ಷ ಮಾರ್ಚ್ನಲ್ಲಿ ಸೋಮೇಶ್ವರ ಜಾತ್ರೆೆಯು ಜರಗುತ್ತದೆ. ದೇವಸ್ಥಾಾನದ ಟ್ರಸ್ಟ್ ಕಮೀಟಿ ಸೊಗಲ ಕ್ಷೇತ್ರದ ಅಭಿವೃದ್ಧಿಿಗೆ ಶ್ರಮಿಸುತ್ತಿಿದೆ. ಸೊಗಲ ಕ್ಷೇತ್ರಕ್ಕೆೆ ಬೆಳಗಾವಿ, ಬೈಲಹೊಂಗಲ, ಸವದತ್ತಿಿ, ಗೋಕಾಕ, ರಾಮದುರ್ಗ, ಯರಗಟ್ಟಿಿಗಳಿಂದ ಬಸ್ಸಿಿನ ವ್ಯವಸ್ಥೆೆ ಇರುತ್ತದೆ.