Saturday, 14th December 2024

ನೆಪಗಳನ್ನು ನಿಲ್ಲಿಸೋಣ…

*ಮಹಾದೇವ ಬಸರಕೋಡ

ನಮ್ಮ ಬಹುತೇಕರ ಸ್ವಭಾವವೇ ಹೀಗೆ. ಹತ್ತು ಹಲವು ಸಂದರ್ಭಗಳಲ್ಲಿ, ಯಾವುದಾದರೊಂದು ನೆಪ ಹೇಳಿ ನಮ್ಮ ಜವಾಬ್ದಾಾರಿಯಿಂದ ತಪ್ಪಿಿಸಿಕೊಳ್ಳಲು ಬಯಸುತ್ತೇವೆ. ಎಲ್ಲ ಕೆಲಸಗಳನ್ನು ಅತ್ಯುತ್ತಮವಾಗಿ ನಿರ್ವಹಿಸುವ ಸಾಮರ್ಥ್ಯಗಳು ನಮ್ಮಲ್ಲಿದ್ದಾಾಗಲೂ, ಸಫಲತೆ ಕಾಣುವ ನೂರೆಂಟು ಸಾಧ್ಯತೆಗಳಿದ್ದಾಾಗಲೂ ಇಲ್ಲ ಸಲ್ಲದ ನೆಪಗಳ ನೆರವು ಅವುಗಳನ್ನು ನಯವಾಗಿಯೇ ದೂರಕ್ಕೆೆ ಸರಿಸಿಬಿಡುತ್ತೇವೆ. ಹೊಸ ಜವಾಬ್ದಾಾರಿಗಳನ್ನು ಸ್ವೀಕರಿಸುವಲ್ಲಿ ಹಿಂಜರಿಯುತ್ತೇವೆ. ನಮ್ಮ ಪ್ರಗತಿಯ ದಾರಿಗೆ ನಾವೇ ಬೇಲಿ ಹಾಕಿಕೊಳ್ಳುತ್ತೇವೆ.

ಕಾಡಿನ ಮಧ್ಯೆೆ ಇರುವ ದೇವಸ್ಥಾಾನದ ಹತ್ತಿರ ನಿಧಿಯೊಂದಿದೆ ಎಂಬ ಖಚಿತ ಮಾಹಿತಿ ಇತ್ತು. ಅದನ್ನು ತೆಗೆದುಕೊಂಡು ಬರಲು ರಾಜನು, ಜಯ ಮತ್ತು ವಿಜಯ ಎಂಬ ಯುವಕರಿಬ್ಬರಿಗೆ ಆದೇಶಿಸಿದ. ಜಯ ಒಲ್ಲದ ಮನಿಸ್ಸಿಿನಿಂದ ಸಿದ್ಧನಾದರೆ ವಿಜಯ ಅದು ನನ್ನ ಕರ್ತವ್ಯವೆಂದು ಭಾವಿಸಿ ಸಿದ್ಧನಾದ. ಕಾಡಿನ ಪ್ರಾಾರಂಭದ ಹಾದಿಯಲ್ಲಿ ಮತ್ತೊೊಂದು ದೇವಸ್ಥಾಾನ ಅಲ್ಲಿಯ ಅರ್ಚಕರ ಅನುಮತಿ ಪಡೆದ ನಂತರವೇ ಕಾಡನ್ನು ಪ್ರವೇಶಿಸಬಹುದಾಗಿತ್ತು. ದೇವಸ್ಥಾಾನದ ಅರ್ಚಕರ ಹತ್ತಿರ ಬಂದ ಯುವಕರು ತಮ್ಮ ವಿಚಾರವನ್ನು ತಿಳಿಸಿದರು. ಆಗ ದೇವಸ್ಥಾಾನದಲ್ಲಿನ ಹಿರಿಯ ಅರ್ಚಕ ಸರಿ ಇಬ್ಬರೂ ಹೋಗಬಹುದು, ಆದರೆ ನನ್ನಲ್ಲಿ ಎರಡು ಲಾಂದ್ರಗಳಿವೆ. ಅದರಲ್ಲಿ ಒಂದು ದೊಡ್ಡದು ಮತ್ತೊೊಂದು ಚಿಕ್ಕದು. ಆಗ ಜಯ ತನಗೆ ದೊಡ್ಡ ಲಾಂದ್ರ ಕೊಡಬೇಕು ಅರ್ಚಕರನ್ನು ಒತ್ತಾಾಯಿಸತೊಡಗಿದ. ಅದಕ್ಕೆೆ ಒಪ್ಪದ ಅರ್ಚಕರು, ತಮ್ಮಲ್ಲಿದ್ದ ಕವಡೆಯೊಂದನ್ನು ತೆಗೆದುಕೊಂಡು ಅದನ್ನು ಒಂದಷ್ಟು ಕುಲುಕಿ ಮುಷ್ಠಿಿಯಲ್ಲಿ ತಮ್ಮ ಕೈ ಮುಟ್ಟಲು ಯುವಕರಿಬ್ಬರಿಗೂ ಹೇಳಿದರು. ಜಯ ಅವರ ಬಲಗೈ ಮುಟ್ಟಿಿದ. ಅದರಲ್ಲಿಯೇ ಕವಡೆ ಇರಲಿಲ್ಲ. ಹಾಗಾಗಿ ಜಯನಿಗೆ ಮೊದಲ ಆದ್ಯತೆ ನೀಡಿ ಅವನಿಗೆ ದೊಡ್ಡ ಲಾಂದ್ರವನ್ನು, ವಿಜಯನಿಗೆ ಚಿಕ್ಕ ಲಾಂದ್ರವನ್ನು ಹಚ್ಚಿ ಕೊಟ್ಟು ಇದೇ ಲಾಂದ್ರದ ಬೆಳಕಿನಲ್ಲಿ ನೀವು ಕಾಡನ್ನು ಪ್ರವೇಶಿಸಬೇಕು ಎಂದರು.

ಅವರಿಬ್ಬರೂ ಅಲ್ಲಿಂದ ಹೊರಟರು. ನಾಲ್ಕಾಾರು ಹೆಜ್ಜೆೆ ಸವೆಸಿದ ನಂತರ ಜಯ ತಾನು ಸಾಗಿ ಹೋಗಬೇಕಾದ ದಾರಿ ದುರ್ಗಮ. ಹೊತ್ತು ಕಳೆದಂತೆ ಇನ್ನಷ್ಟು ಕಗ್ಗತ್ತಲು ಆಗ ಲಾಂದ್ರದ ಬೆಳಕು ಸಾಕಾಗದು ಎಂಬ ನೆಪದಿಂದ ಅವನು ಅಲ್ಲಿಯೇ ನಿಂತು ಬಿಟ್ಟ. ವಿಜಯ ಇದಾವುದನ್ನು ಯೋಚಿಸದೇ ಚಿಕ್ಕ ಲಾಂದ್ರದ ಸಹಾಯದಿಂದ ಕಾಡನ್ನು ಪ್ರವೇಶಿಸಿ. ಅದೇ ಬೆಳಕಿನಲ್ಲಿ ನಡೆದು, ನಿಧಿ ಇರುವ ಜಾಗವನ್ನು ಪತ್ತೆೆ ಹಚ್ಚಿಿ, ನಿಧಿಯನ್ನು ತಂದು ಬಿಟ್ಟ. ಜಯನು ‘ನಾನು ಇಷ್ಟು ದೊಡ್ಡ ಲಾಂದ್ರವಿದ್ದರೂ ಕಗ್ಗತ್ತಲಿನಲ್ಲಿ ಬೆಳಕು ಸಾಕಾಗದು ಎಂದು ಇಲ್ಲಿಯೇ ನಿಂತು ಬಿಟ್ಟೆೆ. ನೀನು ಅದ್ಹೇಗೆ ನನಗಿಂತಲೂ ಚಿಕ್ಕ ಲಾಂದ್ರದ ಬೆಳಕಿನಲ್ಲಿ ಹೋಗಿ ಬಂದೆ?’ ಆಗ ವಿಜಯ ‘ನನ್ನ ಲಾಂದ್ರ ಚಿಕ್ಕದಾಗಿದ್ದರೂ ನಾನು ಒಂದು ಹೆಜ್ಜೆೆ ಇಟ್ಟಾಾಗ ಮುಂದಿನ ಹೆಜ್ಜೆೆ ಇಡಲು ಬೇಕಾದ ಬೆಳಕನ್ನು ನನ್ನ ಲಾಂದ್ರ ನಿರಂತರವಾಗಿ ಬೀರುತ್ತಲೇ ಹೋಯಿತು. ಅಷ್ಟು ಬೆಳಕು ನನ್ನ ಪಯಣಕ್ಕೆೆ ಸಾಕಾಗಿತ್ತು’ ಎಂದ.

ನೆಪಗಳು ಸ್ವಯಂಕೃತ ಭ್ರಮೆಗಳಲ್ಲದೇ ಇನ್ನೆೆನೂ ಅಲ್ಲ ಎಂಬುದು ಗಮನೀಯ. ನೆಪಗಳ ತಳಹದಿಯ ಮೇಲೆ ಯಾವುದೇ ಯಶಸ್ವಿಿ ಕೆಲಸವನ್ನು ಕಟ್ಟಲು ಸಾಧ್ಯವಾಗದು ಎಂಬುದು ಸತ್ಯವಾದ ಮಾತು. ನಾವು ಹಲವು ಬಾರಿ ನಾನು ನತದೃಷ್ಟ, ನನ್ನ ಚೆನ್ನಾಾಗಿಲ್ಲ, ನನ್ನ ಬಳಿ ಸಮಯವೇ ಇಲ್ಲ. ನಾನು ಅನಕ್ಷರಸ್ಥ. ನನಗೆ ಸಮಯ ಸಾಕಾಗದು ಹೀಗೆಯೇ ನೂರೆಂಟು ನೆಪಗಳ ನಾವೆಯಲ್ಲಿ ಸಾಗುತ್ತ ಹೋಗುವುದರಿಂದ ನಮ್ಮನ್ನು ನಾವೇ ಅಶಕ್ತರನ್ನಾಾಗಿಸಿಕೊಳ್ಳುತ್ತೇವೆ. ನೆಪಗಳ ಕಾಲಡಿಯಲ್ಲಿ ಹಿಂಜರಿಕೆ ಅಡಗಿ ಕುಳಿತಿರುತ್ತದೆ. ನೆಪಗಳು ನಮ್ಮನ್ನು ಯಾವುದೇ ಉತ್ತಮ ಕಾರ್ಯ ಮಾಡದಂತೆ ನಿಯಂತ್ರಿಿಸಿಬಿಡುತ್ತವೆ. ನೆಪಗಳನ್ನು ನಿಲ್ಲಿಸಿ, ಕಾರಣಗಳನ್ನು ನಿರ್ಲಕ್ಷಿಸಿ ಫಲಿತಾಂಶದತ್ತ ಮಾತ್ರ ನಮ್ಮ ಗಮನ ಕೇಂದ್ರಿಿಕರಿಸುವುದರಿಂದ ನಾವು ಯಶಸ್ಸಿಿನ ಮೆಟ್ಟಿಿಲನ್ನು ಹತ್ತಬಹುದಾಗಿದೆ.