Wednesday, 11th December 2024

ಜೀವನ ಮೌಲ್ಯದ ಗಣಿ ಬಸವಣ್ಣನ ವಚನಗಳು

* ಮಾಲಾ ಅಕ್ಕಿಶೆಟ್ಟಿ

ಹನ್ನೆೆರಡನೆಯ ಶತಮಾನದಲ್ಲಿ ಈ ನಾಡಿನಲ್ಲಿ ಸಂಚರಿಸಿದ ಬಸವಣ್ಣ ಓರ್ವ ಕ್ರಾಾಂತಿಕಾರಕ ಮಹಾನುಭಾವ. ವಚನಗಳ ಮೂಲಕ ಜನಸಾಮಾನ್ಯರಿಗೆ ಅರಿವಾಗುವಂತೆ ಅವರು ಬೋಧಿಸಿದ ಮೌಲ್ಯಗಳು ಸಾರ್ವಕಾಲಿಕ. ತಾರತಮ್ಯ, ಅಸಮಾನತೆ, ಅಶಾಂತಿ ತುಂಬಿದ ಇಂದಿನ ಜಗತ್ತಿಿಗೆ ಅಪೂರ್ವ ಒಳನೋಟಗಳನ್ನು ಹೊಂದಿರುವ ಬಸವಣ್ಣನ ವಚನಗಳ ಪಾಲನೆ ಅಗತ್ಯ ಎನಿಸುತ್ತದೆ.

ಬಸವಣ್ಣ ತನ್ನ ವಚನಗಳ ಮೂಲಕ ಜಗತ್ತಿಿನಲ್ಲಿ ಪ್ರಸಿದ್ಧನಾಗಿದ್ದಾನೆ. ಮಾನವೀಯ ಮೌಲ್ಯಗಳ ಸಾರ ಪ್ರತಿ ವಚನದಲ್ಲಿ ಅಡಕವಾಗಿದೆ. ಮನುಷ್ಯ ಸ್ವಾಾರ್ಥಿಯಾಗಿರದೇ ಸರ್ವರ ಏಳಿಗೆಯನ್ನು ಬಯಸಬೇಕೆಂದು ಕರೆನೀಡುವ ವಚನಗಳು ಮಂತ್ರ ಎಂದರೆ ವಚನಗಳು. ಬಸವಣ್ಣ ಹೇಳದ ವಿಚಾರಗಳೇ ಇಲ್ಲ. ಸಕಲ ಜೀವಾತ್ಮರಿಗೆ ಲೇಸನೇ ಬಯಸುವ ಉತ್ಕೃಷ್ಟ ಸಂದೇಶವನ್ನು ಪಾಲಿಸಿ, ಅದನ್ನೇ ಅಳವಡಿಸಲು ಕರೆಕೊಟ್ಟ ಮಹಾನ್ ಸಂತ ಬಸವಣ್ಣ.
‘ತನುವಕೊಟ್ಟು ಗುರುವನೊಲಿಸಬೇಕು’ ಎಂಬ ವಚನದಲ್ಲಿ ಗುರುವಿಗೆ ತನುವನ್ನು ಅರ್ಪಿಸ ಬೇಕೆಂದಾಗ ಅದರ ನೇರ ತೆಗೆದುಕೊಳ್ಳದೇ, ಭಕ್ತ ತನ್ನ ತನುವಿನ ಮದವ ಕಳೆದುಕೊಂಡು, ನಿರಹಂಕಾರಿಯಾದ ಗುರುವಿನ ಸೇವೆಯಲ್ಲಿ ತೊಡಗಿಸಿಕೊಂಡು ಜ್ಞಾನವನ್ನು ಸಾಧಿಸುವುದಾಗಿದೆ.

ಗುರುವಚನವಲ್ಲದೆ ಲಿಂಗವೆಂದೆನಿಸದು
ಗುರುವಚನವಲ್ಲದೆ ಜಂಗಮವೆಂದೆನಿಸದು
ಗುರುವಚನವಲ್ಲದೆ ನಿತ್ಯವೆಂದೆನಿಸದು
ಗುರುವಚನವಲ್ಲದೆ ನೇಮವೆಂದೆನಿಸದು
ತಲೆಯಿಲ್ಲದ ಅಟ್ಟೆೆಗೆ ಪಟ್ಟವ ಕಟ್ಟುವ

ಉಭಯ ಭ್ರಷ್ಟರ ಮೆಚ್ಚುವನೆ
ನಮ್ಮ ಕೂಡಲ ಸಂಗಮದೇವ….. ಈ ವಚನದಲ್ಲಿ ಗುರುವಿಲ್ಲದೆ ಲಿಂಗವೆನಿಸದು, ಜಂಗಮವೆನಿಸದು, ನಿತ್ಯವೆಂದೆನಿಸದು, ನೇಮವೆಂದೆನಿಸದು ಎಂದು ಗುರುವನ್ನು ಬೆಟ್ಟದ ತುತ್ತ ತುದಿಯವರೆಗೂ ಪ್ರಶಂಸಿಸಿದ ಬಸವಣ್ಣ ಕ್ರಿಿಯಾಚಾರವಿಲ್ಲದ ಗುರುವಿನ ಕೈಯಿಂದ ದೀಕ್ಷೆ ಉಪದೇಶವ ಎನ್ನುತ್ತಾಾರೆ. ಕ್ರಿಿಯೆ ಮತ್ತು ಆಚಾರ ಗುರುವಿನಲ್ಲಿ ಬೇಕಾದ ಅತಿ ಮುಖ್ಯ ಗುಣಗಳು. ಮತ್ತೊೊಂದೆಡೆ ಗುರುವಿನಲ್ಲಿ ಗುಣವಿಲ್ಲದಿರ್ದಡೆ ಪೂಜ್ಯನಾಗಿ ಪೊಡಮಡಿಸಿಕೊಳ್ಳಲೇಕೆ ಎಂದು ಗುರುವಿಗೆ ಗುಣವಿರಬೇಕು, ಇದಿಲ್ಲದಿದ್ದರೆ ಅಂಥವರಿಗೆ ನಮಿಸುವುದು ಏಕೆ ಎಂದು ಪ್ರಶ್ನಿಿಸುತ್ತಾಾರೆ. ಗುರು ಆದವನು ಅಂಧಕಾರವನ್ನು ಮೀರಿ ನಿಂತವ ಹಾಗೂ ಶಿಷ್ಯನ ಅಂಧಕಾರವನ್ನು ಹೋಗಿಸುವವ. ಲಿಂಗ ದೀಕ್ಷೆಯ ನಂತರ ಶಿಷ್ಯ ಗುರುವಿನಲ್ಲಿ ಭೇದವಿಲ್ಲ. ಆದರೆ ಇದನ್ನೇ ಶೈವ ಧರ್ಮ ಒಪ್ಪುುವುದಿಲ್ಲ. ತನ್ನ ಜ್ಞಾನ ಮತ್ತು ಅರಿವಿನ ಉನ್ನತಿಯಿಂದ ಶಿಷ್ಯ ಗುರುವಾಗಬಹುದು. ಇಂದಿನ ದಿನಗಳಲ್ಲಿ ಗುರು ಶಿಷ್ಯರ ಕೊಂಡಿಯೇ ಕಳಚಿ ಬಿದ್ದಿರುವಾಗ ಸಾಮರಸ್ಯದ ಸಂಬಂಧಕ್ಕೆೆ ದಾರಿ ಎಂಬಂತೆ ಬಸವಣ್ಣನ ಗುರು ಶಿಷ್ಯರ ಬಗ್ಗೆೆ ಇರುವ ವಚನಗಳು ಸದಾ ಕಾಲ ಪ್ರಸ್ತುತ ಎನಿಸುವುದರಲ್ಲಿ ಸಂಶಯವಿಲ್ಲ.

ಎನ್ನ ಚಿತ್ತ ಅತ್ತಿಿಯ ಹಣ್ಣು ನೋಡಯ್ಯಾಾ
ವಿಚಾರಿಸಿದಡೆ ಏನೂ ಹುರುಳಿಲ್ಲವಯ್ಯ
ಪ್ರಪಂಚಿನ ಡಂಬಿನಲ್ಲಿ ಎನ್ನನೊಂದು ರೂಪು ಮಾಡಿ
ನೀವಿರಿಸಿದಿರಿ ಕೂಡಲಸಂಗಮದೇವಾ…….

ಮನಸ್ಸು ಅತ್ತಿಿಯ ಹಣ್ಣು ಇದ್ದ ಹಾಗೆ. ಮೇಲೆ ಆಕರ್ಷಕವಾದ ಬಣ್ಣ ಹೊಂದಿದ್ದರೂ ಒಳಗೆಲ್ಲ ಬರೀ ಮನಸ್ಸು ಚಂಚಲತೆ ಮತ್ತು ದುರುಳ ಆಲೋಚನೆಗಳಿಂದ ಕೂಡಿದೆ. ಇದು ಮನಸ್ಸಿಿನ ಸ್ವಭಾವದ ವೈರುಧ್ಯಗಳನ್ನು ಸೂಚಿಸುತ್ತದೆ. ಎಲ್ಲರಿಗೂ ಪರಿಶುದ್ಧವಾದ ಮನಸ್ಸು ಬೇಕಾಗಿದೆ. ಇಷ್ಟಲಿಂಗದಲ್ಲಿ ಮನಸ್ಸು ತಲ್ಲೀನವಾದರೆ ಅದುವೇ ಮನ ಮಗ್ನ ಯೋಗ.

ಛಲಬೇಕು ಶರಣಂಗೆ ಪರಧನವನೊಲ್ಲೆನೆಂಬ,
ಛಲಬೇಕು ಶರಣಂಗೆ ಪರಸತಿಯನೊಲ್ಲೆನೆಂಬ,
ಛಲಬೇಕು ಶರಣಂಗೆ ಪರದೈವವನೊಲ್ಲೆನೆಂಬ,
ಛಲಬೇಕು ಶರಣಂಗೆ ಲಿಂಗಜಂಗಮನೊಂದೆಂಬ,
ಛಲಬೇಕು ಶರಣಂಗೆ ಪ್ರಸಾದ ದಿಟವೆಂಬ,

ಛಲವಿಲ್ಲದವರ ಮೆಚ್ಚ ಕೂಡಲ ಸಂಗಮದೇವ…….. ಪರಧನ, ಪರಸತಿ ಪರದೈವ ಬೇಡವೆಂದು, ಲಿಂಗ ಜಂಗಮ ಒಂದೇ ಪ್ರಸಾದ ದಿಟವೆನ್ನಬೇಕು. ಇಲ್ಲದಿದ್ದರೆ ಕೂಡಲ ಸಂಗಮ ದೇವ ಮೆಚ್ಚಲಾರ.
ನೆಲನೊಂದೆ: ಹೊಲಗೇರಿ ಶಿವಾಲಯಕ್ಕೆೆ

ಜಲವೊಂದೆ: ಶೌಚಶಮನಕ್ಕೆೆ
ಕುಲವೊಂದೆ: ತನ್ನ ತಾನರಿದವಂಗೆ
ಫಲವೊಂದೆ: ಷಡುದರುಶನ ಮುಕ್ತಿಿಗೆ

ನಿಲವೊಂದೆ: ಕೂಡಲಸಂಗಮದೇವಾ ನಿಮ್ಮನರಿದವಂಗೆ……… ಜಾತಿ, ಕುಲ, ಮೇಲು ಕೀಳು, ವರ್ಣ, ವರ್ಗ ಎಂಬ ಭೇದವಿಲ್ಲ. ಎಲ್ಲರೂ ಸಮಾನರು, ಜಾತಿ ಭೇದ ಸಲ್ಲದು ಎಂಬುದನ್ನು ಹನ್ನೆೆರಡನೇ ಶತಮಾನದಲ್ಲಿ ಸಾಬೀತು ಪಡಿಸಿ ಇದರಡಿಯಲ್ಲಿಯೇ ಹಲವು ಅಂತರ್ಜಾತಿ ವಿವಾಹಗಳನ್ನು ಏರ್ಪಡಿಸಿದ ದಾಖಲೆಯೂ ಅಮರವಾಗಿ ಉಳಿದಿದೆ.

ದಯವಿಲ್ಲದ ಧರ್ಮವದೇವುದಯ್ಯ?
ಸಕಲ ಪ್ರಾಾಣಿಗಳೆಲ್ಲರಲ್ಲಿ
ದಯವೇ ಧರ್ಮದ ಮೂಲವಯ್ಯ
ಕೂಡಲಸಂಗಯ್ಯಾಾನಂತಲ್ಲಿದೊಲ್ಲನಯ್ಯಾಾ

ದಯೆ ಮತ್ತು ಸಕಲ ಪ್ರಾಾಣಿ ಪಕ್ಷಿಗಳ ಒಳಿತನ್ನು ಬಯಸುವ ಮಹೋನ್ನತ ಆಶಯವನ್ನು ಈ ವಚನದಲ್ಲಿ ಕಾಣಬಹುದು. ಯಾವುದೇ ತರಹದ ಹಿಂಸೆಗೆ ಆಸ್ಪದವನ್ನು ನೀಡದೇ, ದಯೆಯ ಗುಣವನ್ನು ಎಲ್ಲರೂ ಅಳವಡಿಸಿಕೊಳ್ಳಲು ಈ ವಚನ ಕರೆ ನೀಡುತ್ತದೆ. ಮೃತ್ಯು ಲೋಕದ ಶಿಕ್ಷೆ ಹಾಗೂ ಸ್ವರ್ಗಲೋಕದ ಸುಖದ ಕಲ್ಪನೆಯೂ ಸಹ ಅಸ್ತಿಿತ್ವರಹಿತ ಎಂದಿದ್ದಾರೆ ವಚನಕಾರರು. ಸ್ವರ್ಗಲೋಕದ ತಪ್ಪುು ಕಲ್ಪನೆಯನ್ನು ಕೊಟ್ಟು ಮತಾಂತರಗೊಳ್ಳಲು ಉತ್ತೇಜಿಸಿ, ದಾರಿ ಒತ್ತಾಾಯ ಮಾಡುವ ಧರ್ಮಗಳು ಒಂದೆಡೆಯಾದರೆ ಇವುಗಳ ಕಲ್ಪನೆಯನ್ನೂ ತಿರಸ್ಕರಿಸಿದ ವಚನಗಳ ಕರೆ ಉದಾತ್ತ ಎನಿಸಿದೆ. ಜಗತ್ತು ಕ್ಲೇಷಗಳಿಂದ ತುಂಬಿದ ಇಂದಿನ ಸಂದರ್ಭಗಳಲ್ಲಿ ಬಸವಣ್ಣ ಇಗಿರಬೇಕಿತ್ತು ಎಂದೆನಿಸುತ್ತದೆ.

ನುಡಿಯಲ್ಲಿ ಎಚ್ಚೆೆತ್ತು, ನಡೆಯಲ್ಲಿ ತಪ್ಪಿಿದಡೆ,
ಹಿಡಿದಿದ್ದ ಲಿಂಗವು ಘಟಸರ್ಪನಯ್ಯಾಾ
ನಡೆ ನುಡಿಗಳಲ್ಲಿ ತಾಳ ಮೇಳ ಸರಿ

ಹೊಂದಾಣಿಕೆ ಆಗದಿದ್ದಲ್ಲಿ ಕೈಯಲ್ಲಿ ಹಿಡಿದ ಲಿಂಗವು ಘಟ ಸರ್ಪ ಎಂದ ಬಸವಣ್ಣ ಸತ್ಯ ಕಹಿ ಇದ್ದರೂ ಅದರ ದಾರಿಯಲ್ಲೇ ನಡೆಯಿರಿ ಎನ್ನುತ್ತಾಾರೆ.
ಹೀಗೆ ಬಸವಣ್ಣನವರ ಆಶಯಗಳು, ನೀತಿ ಪಾಠಗಳು ಪ್ರತಿ ವಚನದಲ್ಲಿ ಅಡಕವಾಗಿವೆ. 12 ನೇ ಶತಮಾನದಲ್ಲಿ ಬರೆದ ವಚನಗಳ ಅಗತ್ಯ ಈಗಲೂ ಇರಬೇಕಾದರೆ ಅವುಗಳ ಪ್ರಸ್ತುತತೆ ಅಮೂಲ್ಯ, ಅಗಾಧ. ಇಂದಿನ ವೇಗದ, ಆಧುನಿಕ ಜೀವನದ ಝಂಜಾಟದಲ್ಲಿ ಇವುಗಳ ಅವಶ್ಯಕತೆ ತುಂಬಾನೇ ಇದೆ. ಜೀವನದ ಪ್ರತಿ ಹೆಜ್ಜೆೆಗೂ , ಪ್ರತಿ ನಡೆಗೂ ವಚನಗಳು ಮಾರ್ಗದರ್ಶಿಗಳಾಗಿವೆ.