Wednesday, 11th December 2024

ಎಲ್ಲರನ್ನೂ ಹರಸುವ ಸೂಫಿ ಸಂತ

* ಫಿರೋಜ ಮೋಮಿನ್

ಸಂಕಷ್ಟದಲ್ಲಿರುವ ಇಷ್ಟಾಾರ್ಥಗಳನ್ನು ಇಡೇರಿಸುವ ಸಿದ್ದಿ ಪುರುಷರ ಪುಣ್ಯ ಸ್ಥಳ, ಹಿಂದೂ, ಮುಸಲ್ಮಾಾನರ ಭಾವೈಕ್ಯತೆಯ ಸಂಗಮದಂತಿರುವ ಬಾಗಲಕೋಟೆ ಜಿಲ್ಲೆೆಯ ಹುನಗುಂದ ತಾಲೂಕಿನ ಬಲಕುಂದಿ ಗ್ರಾಾಮದ ಹಜರತ್ ದಾವಲ್ ಮಲೀಕ್ ದರ್ಗಾ ಜಾತಿಬೇಧವಿಲ್ಲದ ಭಕ್ತಿಿ ಕೇಂದ್ರವಾಗಿ ಜನಜನಿತವಾಗಿದೆ. ಸೂಫಿ, ಸಂತರು, ಶರಣರು ನೆಲೆಸಿದ ಸ್ಥಳಗಳು ಶಕ್ತಿಿ ಕೇಂದ್ರವಾಗುವುದಲ್ಲದೇ, ನೆಮ್ಮದಿಯ ತಾಣಗಳು ಆಗಿವೆ. ಇಂಥಹ ಸಾಲಿಗೆ ಸೇರುವ ಬಲಕುಂದಿ ಗ್ರಾಾಮದ ಹಜರತ್ ದಾವಲ ಮಲೀಕ್ ದರ್ಗಾಕ್ಕೆೆ ಬಂದು ಇಲ್ಲಿ, ಹರಕೆ ಕಟ್ಟಿಿಕೊಂಡರೆ ಸಾಕು ಜಾತಿಭೇದವಿಲ್ಲದೆ ಕೆಲವೇ ದಿನಗಳಲ್ಲಿ ಆ ಕೆಲಸ ಫಲಿಸುತ್ತದೆ ಎಂಬ ನಂಬಿಕೆ ಇದೆ.

ಸೂಫಿ, ಸಂತರ ಪುಣ್ಯ ಕ್ಷೇತ್ರ
ನೂರಾರು ವರ್ಷಗಳ ಹಿಂದೆ ಊರೂರು ಅಲೆಯುತ್ತಾಾ ಶಾಂತಿ ಸಂದೇಶ ಸಾರುತ್ತಾಾ ಸಾಗುತ್ತಿಿದ್ದ ಸೂಫಿ, ಸಂತರು ತಮ್ಮ ಜೀವಿತದ ಅವಧಿಯಲ್ಲಿ ಬಲಕುಂದಿಯ ಈ ಪ್ರದೇಶಕ್ಕೆೆ ಬಂದಿದ್ದರು. ಗ್ರಾಾಮದ ಎಲ್ಲಾಾ ಜನಾಂಗದವರೊಂದಿಗೆ ಬೆರೆತು ಅವರ ಕಷ್ಟಕಾರ್ಪಣ್ಯಕ್ಕೆೆ ಸಲಹೆ ನೀಡುತ್ತಾಾ ಜನತೆಯಲ್ಲಿ ಸೌಹಾರ್ದತೆ ಬೆಳೆಸಿದ್ದರು. ಸದಾ ದೇವರ ಧ್ಯಾಾನದಲ್ಲಿ ಮಗ್ನರಾಗಿರುತ್ತಿಿದ್ದ ಅವರನ್ನು ಜನ ಪೂಜ್ಯ ಭಾವನೆಯಿಂದ ಕಾಣುತ್ತಿಿದ್ದರು. ಈ ಹಿನ್ನಲೆಯಲ್ಲಿ ಆ ಪ್ರದೇಶದಲ್ಲಿ ಗದ್ದುಗೆಯನ್ನು (ಮಜರ್) ಸ್ಥಾಾಪಿಸಲಾಗಿದೆ. ಆ ಸಂತರ ದರ್ಶನ ಭಾಗ್ಯ ಪಡೆದರೆ ಜೀವನ ಪಾವನವಾಗುತ್ತದೆ ಎಂಬುದು ಭಕ್ತರ ನಂಬಿಕೆ.

ಹಿಂದು-ಮುಸ್ಲಿಿಂರಿಂದ ಪೂಜೆ
ದಾವಲ ಮಲೀಕ್ ದರ್ಗಾದಲ್ಲಿಯೇ ಹಿಂದೂ ದೇವತೆಯ ಮೂರ್ತಿಯೂ ಸಹ ಇದೆ. ಗೋರಿಗೆ ನಿತ್ಯವೂ ದೂಪ ಹಾಕಿ ಪೂಜೆ ಸಲ್ಲಿಸಿದರೆ, ಇತ್ತ ಹಿಂದೂ ದೇವರಿಗೆ ಕುಂಕುಮ ಮತ್ತು ಕಾಯಿ ಸಮರ್ಪಿಸಿ, ಪೂಜೆ ಸಲ್ಲಿಸಲಾಗುತ್ತಿಿದೆ. ಹಿಂದು ಮುಸ್ಲಿಿಂ ಎಂಬ ಬೇಧ ಭಾವವಿಲ್ಲದೇ, ಭಕ್ತಿಿಯ ಪರಾಕಾಷ್ಟೆೆ ಮೆರೆದು, ಇಷ್ಟಾಾರ್ಥವನ್ನು ಬೇಡಿಕೊಳ್ಳುತ್ತಾಾರೆ.
ನೂರಾರು ವರ್ಷಗಳ ಐತಿಷ್ಯವಿರುವ ಈ ದರ್ಗಾದಲ್ಲಿ ಪ್ರತಿ ಗುರುವಾರ, ರವಿವಾರ ಮತ್ತು ಅಮವಾಸ್ಯೆೆ ದಿನದಂದು ಭಕ್ತರು ಇಷ್ಟಾಾರ್ಥ ಸಿದ್ಧಿಿಗಾಗಿ ಹರಕೆ, ಪೂಜೆ ಸಲ್ಲಿಸುತ್ತಾಾರೆ. ನೆರೆಯ ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ರಾಜ್ಯಗಳಿಂದಲೂ ಭಕ್ತರು ಆಗಮಿಸಿ, ದಾವಲ ಮಲೀಕ್ ದರ್ಶನಾಶಿರ್ವಾದ ಪಡೆಯುತ್ತಾಾರೆ.
ಐತಿಹಾಸಿಕ ಹಿನ್ನೆೆಲೆಯನ್ನು ಹೊಂದಿರುವ ದಾವಲ ಮಲೀಕ್ ದರ್ಗಾ ಸಹಸ್ರಾಾರು ಭಕ್ತರನ್ನು ತನ್ನತ್ತ ಸೇಳೆಯುತ್ತಿಿದೆ. ಬಲಕುಂದಿಯಲ್ಲಿನ ದಾವಲ ಮಲೀಕ್ ದರ್ಗಾಕ್ಕೆೆ ಹೋಗಬೇಕಾದರೆ ಬಾಗಲಕೋಟೆ ಜಿಲ್ಲೆೆಯ ಇಲಕಲ್ ಪಟ್ಟಣದಿಂದ ಕಾರವಾರ ರಾಷ್ಟ್ರೀಯ ಹೆದ್ದಾಾರಿ ಮೂಲಕ 6 ಕೀ. ಮೀ. ಸಂಚರಿಸಿದರೆ, ಬಲಕುಂದಿ ಗ್ರಾಾಮಕ್ಕೆೆ ತಲುಪಿ, ಅಲ್ಲಿಂದ 1 ಕೀ.ಮಿ ಕ್ರಮಿಸಿದರೆ ದಾವಲ ಮಲೀಕ್ ದರ್ಗಾ ಸಿಗುತ್ತದೆ.

ಭಾತೃತ್ವದ ಮಧುರ ಬಾಂಧವ್ಯದ ಬೆಸುಗೆಯನ್ನು ಗಟ್ಟಿಿಗೊಳಿಸುವ ಅಪರೂಪದ ತಾಣಗಳೊಲ್ಲೊೊಂದಾದ ಬಲಕುಂದಿಯ ದಾವಲ ಮಲೀಕ್ ದರ್ಗಾ ಎರಡು ಎಕರೆ ಪ್ರದೇಶದಲ್ಲಿದೆ. ಇಲ್ಲಿಗೆ ನಿತ್ಯ ಸಾವಿರಾರು ಭಕ್ತರು ಬಂದು ಹೋಗುತ್ತಾಾರೆ. ದರ್ಗಾಕ್ಕೆೆ ಆಗಮಿಸುವ ಭಕ್ತರಿಗೆ ಸರಿಯಾದ ರಸ್ತೆೆ ವ್ಯವಸ್ಥೆೆ ಕಲ್ಪಿಿಸಬೇಕೆನ್ನುವುದು ಭಕ್ತರ ಅನಿಸಿಕೆ.