Wednesday, 11th December 2024

ಸರ್ವ ಸಮಾನತೆ ಸಾರುವ ಕ್ವಾಕರ್ಸ್ ಪಂಥ

*ಉದಯಕುಮಾರ ಹಬ್ಬು 9902761720

ಸರಳ ಜೀವನವನ್ನು ಸಾರುವ, ಸರ್ವರೂ ಸಮಾನರೆಂದು ಬೋಧಿಸುವ, ಸ್ಪಿಿರಿಟ್‌ನ್ನು ಬಹುವಾಗಿ ಗೌರವಿಸುವ ಕ್ವಾಾಕರ್ಸ್ ಪಂಥವು, ದೇವರು ಮತ್ತು ಮನುಷ್ಯರ ಮಧ್ಯೆೆ ಮಧ್ಯವರ್ತಿಯ ಅವಶ್ಯಕತೆ ಇಲ್ಲ ಎಂದು ಸಾರುತ್ತದೆ. ಇನ್ವರ್ಡ್ ಲೈಟ್ ಅಥವಾ ಆಂತರಿಕ ಜ್ಯೋೋತಿಯ ಮಹತ್ವವನ್ನು ಎತ್ತಿಿ ಹೇಳುವ ಈ ಸಾರ್ವಜನಿಕ ಸೇವೆಗಾಗಿ 1947ರ ನೋಬೆಲ್ ಶಾಂತಿ ಪಾರಿತೋಷಕಕ್ಕೆೆ ಭಾಜನವಾಗಿದೆ.

ಪ್ರೊೊಟೆಸ್ಟಂಟ್ ಕ್ರಿಿಶ್ಚಿಿಯಾನಿಟಿಯ ಒಂದು ತಾತ್ವಿಿಕ ಪಂಥ ಕ್ವ್ಯಾಾಕರ್ಸ್ ಎಂಬ ಪಂಥವು 17ನೆ ಶತಮಾನದಲ್ಲಿ ಇಂಗ್ಲೆೆಂಡಿನ ಲ್ಯಾಾಂಕ್ ಶಾಯರ್ ಪ್ರಾಾರಂಭಗೊಂಡಿತು. ಈ ಪಂಥವು ಇಂಗ್ಲೆೆಂಡಿನ ಚರ್ಚ್‌ನ ವಿರುದ್ಧ ದಂಗೆ ಎದ್ದ ಪಂಥವಾಗಿದ್ದರೂ, ಅವರು ಬೈಬಲ್‌ನ್ನು, ಟ್ರಿಿನಿಟಿಯನ್ನು ನಂಬುತ್ತಾಾರೆ. ಅವರು ದೇವರು ಮತ್ತು ಮನುಷ್ಯರ ನಡುವೆ ಯಾವುದೇ ಮಧ್ಯವರ್ತಿಯ ಅಗತ್ಯವಿಲ್ಲ. ದೇವರೊಂದಿಗೆ ನೇರವಾಗಿ ಮನುಷ್ಯರು ಸಂಪರ್ಕವನ್ನು ಸ್ಥಾಾಪಿಸಿಕೊಳ್ಳಲು ಸಾಧ್ಯ. ಪ್ರತಿಯೊಬ್ಬರಲ್ಲಿ ಅದು ಒಳಗಿನ ಬೆಳಕು. ಇವರು ಇನ್‌ವರ್ಡ್ ಲೈಟ್, ಲೈಟ್ ಆಫ್ ಕ್ರೈಸ್‌ತ್‌ ವಿದಿನ್ ಮತ್ತು ಅದನ್ನು ದೇವರ ಸ್ಪಿಿರಿಟ್, ಸ್ಪಿಿರಿಟ್ ಆಫ್ ಗಾಡ್, ಲೈಟ್ ವಿದಿನ್ – ಈ ಎಲ್ಲ ಪದ ಪುಂಜಗಳನ್ನು ರಿಲಿಜಿಯಸ್ ಆಫ್ ಸೊಸೈಟಿ ಆಫ್ ಫ್ರೆೆಂಡ್‌ಸ್‌ ಅಥವಾ ಕ್ವ್ಯಾಾಕರ್ಸ್ ಪಂಥದವರು ಬಳಸುತ್ತಾಾರೆ. ಕ್ರಿಿಸ್ತನ ಬೆಳಕು ಅವರೊಳಗೆ ಅಥವ ಅವರ ಮೇಲಿದೆ ಎಂದು ನಂಬುತ್ತಾಾರೆ.

ಈ ಧಾರ್ಮಿಕ ಚಳುವಳಿಯನ್ನು ಪ್ರಚುರಪಡಿಸಿದವನು ಜಾರ್ಜ್ ಫಾಕ್‌ಸ್‌ ಎಂಬ ಇಂಗ್ಲೆೆಂಡಿನ ಅವನು ಇನ್ವರ್ಡ್ ಲೈಟ್ ನಲ್ಲಿ ವಿಶ್ವಾಾಸ ಮತ್ತು ಅವಲಂಬನೆ (ಹೃದಯದಲ್ಲಿ ಕ್ರಿಿಸ್ತನ ಇರುವಿಕೆ)ಯನ್ನು ಬೋಧಿಸಿದ. ಮೊದಮೊದಲ ಕ್ವ್ಯಾಾಕರ್ಸ್, ಮೌನವಾಗಿ ಕುಳಿತಿರುತ್ತಿಿದ್ದರು ಮತ್ತು ಬೈಬಲ್ ಶಬ್ದಗಳ ಮೇಲೆ ಧ್ಯಾಾನಿಸುತ್ತಿಿದ್ದರು. ಅವರು ದೇವರ ಇನ್ವರ್ಡ್ ಲೈಟ್ – ಆಂತರಿಕ ಬೆಳಕು ಅವರ ಮೇಲೆ ಹೊಳೆಯುವುದನ್ನು ಅನುಭವಿಸುವವರೆಗೆ ಮತ್ತು ಹೊಲಿ ಸ್ಪಿಿರಿಟ್ ಮಾತಾಡುವವರೆಗೆ ಧ್ಯಾಾನ ಮಾಡುತ್ತಿಿದ್ದರು. ರಿಲಿಜಿಯಸ್ ಸೊಸೈಟಿ ಆಫ್ ಫ್ರೆೆಂಡ್‌ಸ್‌ – ಇವರ ನಂಬಿಕೆ ಮತ್ತು ಆಚರಣೆಯ ಕೀಲಿ ಕೈ ಎಂದರೆ ಬೆಳಕು – ಜೀವಂತ ಐತಿಹಾಸಿಕ ಕ್ರಿಿಸ್ತನ ಬೆಳಕು. ದೇವರ ಅನುಗ್ರಹವು ನಮಗೆ ಏಕಕಾಲದಲ್ಲಿ ನಮ್ಮ ಪಾಪಗಳ ಅರಿವನ್ನುಂಟು ಮಾಡಿಸುತ್ತದೆ ಮತ್ತು ನಮ್ಮ ಪಾಪಗಳನ್ನು ಕ್ಷಮಿಸುತ್ತದೆ ಮತ್ತು ನಮಗೆ ಶಕ್ತಿಿಯನ್ನು ಕೊಟ್ಟು ಅವುಗಳನ್ನು ಗೆಲ್ಲುವ ಇಚ್ಛಾಾಶಕ್ತಿಿಯನ್ನು ಕೊಡುತ್ತದೆ. ನಮಗೆ ಸರಿ ಮತ್ತು ತಪ್ಪುುಗಳ ನಡುವೆ, ಸತ್ಯ ಮತ್ತು ಅಸತ್ಯಗಳ ನಡುವೆ, ಒಳಿತು ಮತ್ತು ಕೆಡಕುಗಳ ನಡುವೆ ವ್ಯತ್ಯಾಾಸವನ್ನು ಬೋಧಿಸುತ್ತದೆ.

‘ಲೈಟ್’ ಎಂಬ ಪದವನ್ನು ಸಾಮಾನ್ಯವಾಗಿ ಕ್ರೈಸ್ತರು ಬಳಸುತ್ತಾಾರೆ. ಜಾನ್ ಪಿಕ್ ಬೈಬಲ್ಲಿನ ಪರಿಚ್ಛೇದಲ್ಲಿ ಹೇಳಲಾದ ‘‘ಐ ಎಮ್ ದಿ ಲೈಟ್ ಆಫ್ ದಿ ವರ್‌ಲ್ಡ್‌. ಹುವೆವರ್ ಫಾಲೊಸ್ ಮಿ ವಿಲ್ ನೆವೆರ್ ವಾಕ್ ಇನ್ ಡಾರ್ಕನೆಸ್, ಬಟ್ ವಿಲ್ ಹ್ಯಾಾವ್ ದಿ ಲೈಟ್ ಆಫ್ ಲೈಫ್. ನಾನು ಬದುಕಿನ ಬೆಳಕು. ನನ್ನನ್ನು ಯಾರು ಅನುಸಿಸುವರೊ ಅವರು ಕತ್ತಲೆಯಲ್ಲಿ ನಡೆಯುವುದಿಲ್ಲ, ಆದರೆ ಬದುಕಿನ ಬೆಳಕನ್ನು ಹೊಂದುವರು.‘‘

ಕ್ವ್ಯಾಾಕರ್ಸ್ ಕ್ರಿಿಸ್ತನ ಬೆಳಕಿನಲ್ಲಿ ನಡೆಯುವುದು ಎಂಬ ವಿಚಾರವನ್ನು ವ್ಯಕ್ತಿಿಯೊಳಗಿರುವ ದೇವರ ಅಸ್ತಿಿತ್ವಕ್ಕೆೆ ಅನ್ವಯಿಸುತ್ತಾಾರೆ. ಒಬ್ಬನೆ ಸರ್ವಾಂತರ್ಯಾಮಿ, ಆದ್ದರಿಂದ ಡಿವೈನ್ ಸ್ಪಿಿರಿಟ್ ಎಲ್ಲೆೆಡೆ ಇದೆ. ದೇವರ ನೇರವಾದ ಮತ್ತು ವೈಯಕ್ತಿಿಕ ಅನುಭವದ ಕುರಿತು ಒತ್ತು ನೀಡುತ್ತಾಾರೆ. ಆಂತರಿಕ ಬೆಳಕಿನಿಂದ ಪ್ರತಿಯೊಬ್ಬ ವ್ಯಕ್ತಿಿ ಮಾರ್ಗದರ್ಶನ ಪಡೆಯಬಲ್ಲನು ಎನ್ನುತ್ತದೆ ಈ ಪಂಥ. ಗೆಳೆಯರು ಒಟ್ಟಾಾಗಬಹುದು, ದೇವರಿಂದ ಸಾಮೂಹಿಕವಾಗಿ ಬೆಳಕಿನ ಅನುಭವವನ್ನು ಪಡೆಯಬಹುದು. ಮೀಟಿಂಗ್ ಆಫ್ ವರ್ಶಿಪ್ ಸಮಯದಲ್ಲಿ ಅಧ್ಯಾಾತ್ಮಿಿಕ ಜಿಜ್ಞಾಾಸೆ ಪ್ರಾಾರಂಭಗೊಳ್ಳಬಹುದು. ಜಿಜ್ಞಾಾಸೆಯು ಬಹುತೇಕವಾಗಿ ಕ್ವ್ಯಾಾಕರ್ ಗಳಲ್ಲಿ ಒಬ್ಬನ ಟೆಸ್ಟಿಿಮೋನಿಯಲ್‌ಸ್‌ ಗಳ ಮೇಲೆ ಆಧಾರಿತವಾಗಿರುತ್ತದೆ. ಆ ಮೇಲೆ ಅವರು ಸಮಯ ಮೌನವಾಗಿ ಕುಳಿತುಕೊಳ್ಳುತ್ತಾಾರೆ. ಆ ಸಮಯವು 20 ನಿಮಿಷಗಳಿಂದ ಒಂದುವರೆ ಗಂಟೆಯವರೆಗೆ ಮುಂದುವರಿಯಬಹುದು. ವ್ಯಕ್ತಿಿ ಎದ್ದು ನಿಂತು ತನ್ನ ಮನಸ್ಸಿಿನ ವಿಚಾರವನ್ನು ಹೇಳಬಹುದು. ‘ಒಮ್ಮೆೆ ಸ್ಪಿಿರಿಟ್ ನಿಮ್ಮನ್ನು ಕಂಡು ಹಿಡಿಯಿತು ಅಂತಾದರೆ’ ಅವರಿಗೆ ಮಾತಾಡಲು ಪ್ರೋೋತ್ಸಾಾಹಿಸಲಾಗುತ್ತದೆ.

ಸಾಂಪ್ರದಾಯಿಕ ಕ್ವ್ಯಾಾಕರ್ಸ್‌ಗಳು ಪ್ರತಿಯೊಬ್ಬನಲ್ಲಿ ದೇವರ ಸ್ಪಿಿರಿಟ್ ಇದೆ ಎಂದು ನಂಬುತ್ತಾಾರೆ ಮತ್ತು ಪ್ರತಿಯೊಬ್ಬನ ಇನರ್ ಸ್ಪಿಿರಿಟ್ ಅನ್ನು ಅವರೇ ತೋರಿಸಲು ಸಾಧ್ಯ ಎಂದು ನಂಬುತ್ತಾಾರೆ. ಮೀಟಿಂಗುಗಳಲ್ಲಿ ಜನರು ಹಾಡಬಹುದು ಅಥವಾ ಕವಿತೆಗಳನ್ನು ಪೀಯರ್ ಲ್ಯಾಾಂಕ್ ಔಟ್ ಎಂಬ ಸ್ವಿಿಸ್ ಕ್ವ್ಯಾಾಕರ್ ಹೇಳುತ್ತಾಾನೆ:‘ಸಕ್ರಿಿಯವಾದ ಮೌನವು ಅಂತರಿಕ ಬೆಳಕನ್ನು ಬೆಳಗಲು ಕಾರಣವಾಗುತ್ತದೆ.’

ಕೆಲವು ನಾನ್ ಇಥೀಯಿಷ್‌ಟ್‌ ಅಂದರೆ ದೇವರಲ್ಲಿ ನಂಬಿಕೆ ಇಲ್ಲದ ಕ್ವ್ಯಾಾಕರ್ಸಗಳೂ ಇದ್ದಾಾರೆ. ಅವರು ಶಾಂತಿ, ಸರಳತೆ, ಐಕ್ಯತೆ, ಸಮುದಾಯ, ಸಮಾನತೆ, ಪ್ರೀತಿ, ಆನಂದ, ಮತ್ತು ಸಾಮಾಜಿಕ ನ್ಯಾಾಯದಲ್ಲಿ ಆಸಕ್ತರು. ರಿಲಿಜಿಯಸ್ ಸೊಸೈಟಿ ಆಫ್ ಫ್ರೆೆಂಡ್‌ಸ್‌ ಅಥವಾ ಕ್ವ್ಯಾಾಕರ್ಸ್ ಚರ್ಚ್‌ನ್ನು ದೂರವಿಡುತ್ತಾಾರೆ. ಶ್ರೇಣೀಕೃತ ವ್ಯವಸ್ಥೆೆಯನ್ನು ಒಪ್ಪುುವುದಿಲ್ಲ. 2017ರಲ್ಲಿ ಜಗತ್ತಿಿನಾದ್ಯಂತ 3,77, 557 ಕ್ವ್ಯಾಾಕರ್ಸ್‌ಗಳಿದ್ದಾಾರೆ. ಪೈಕಿ 49% ಆಫ್ರಿಿಕಾದಲ್ಲಿ ಇದ್ದಾಾರೆ. 89% ಕ್ವ್ಯಾಾಕರ್ಸಗಳು ‘ಇವ್ಯಾಾಂಜಲಿಕಲ್’ ಮತ್ತು‘ಪ್ರೊೊಗ್ರಾಾಮಡ್ ಕ್ವ್ಯಾಾಕರ್ಸ್’ ಶಾಖೆಗೆ ಸಂಬಂಧಪಟ್ಟವರು. ಭಾರತದಲ್ಲಿ ಸುಮಾರು 5,000 ಮತ್ತು ನೇಪಾಳದಲ್ಲಿ ಸುಮಾರು 6,000 ಕ್ವಾಾಕರ್ಸ್ ಇದ್ದಾಾರೆ.

ಕ್ರಿಸ್ತನ ಬೋಧನೆ
ಅವರು ತಮ್ಮ ಸಂದೇಶವನ್ನು ‘ಕ್ರಿಿಸ್ತನು ತನ್ನನ್ನು ಬೋಧಿಸಲು ಬಂದಿದ್ದಾಾನೆ’ ಎಂಬ ಧಾರ್ಮಿಕ ನಂಬಿಕೆಯ ಆಧಾರದ ಮೇಲೆ ಕೊಡುತ್ತಾಾರೆ. ದೇವರೊಂದಿಗೆ ಜೀಸಸ್‌ನ ಮೂಲಕ ನೇರವಾದ ಸಂಬಂಧದ ಮಹತ್ವವನ್ನು ಒತ್ತಿಿ ಹೇಳುತ್ತಾಾರೆ. ಎಲ್ಲ ಧರ್ಮಗಳ ವೈಶ್ವಿಿಕ ಅರ್ಚಕತ್ವವನ್ನು ಎತ್ತಿಿ ಹಿಡಿಯುತ್ತಾಾರೆ. ಜೀಸಸ್ ನ ನೇರವಾದ ಒಂದು ವ್ಯಕ್ತಿಿಗತ ಅನುಭವ ಎಂದು ಹೇಳುತ್ತಾಾರೆ. ಈ ನೇರವಾದ ಕ್ರಿಿಸ್ತನ ಅನುಭವವು ನೇರ ಅಧ್ಯಾಾತ್ಮಿಿಕನುಭವ ಮತ್ತು ಬೈಬಲ್ ಓದು ಮತ್ತು ಅಧ್ಯಯನದಿಂದ ಗಳಿಸಬಹುದು ಎನ್ನುತ್ತಾಾರೆ.

ಇವರ ಒಂದು ದರ್ಶನವು ‘ಕ್ರಿಿಸ್ತನೊಂದಿಗೆ ನೇರವಾದ ಸಂಬಂಧವನ್ನು ಮನುಷ್ಯ ಸಂಬಂಧಗಳ ಅಧ್ಯಾಾತ್ಮೀಕರಣದಿಂದ ಸಾಧ್ಯ’ ಎದು ಹೇಳುತ್ತದೆ. ಹೆಣ್ಣು ಮಕ್ಕಳೂ ದೊಡ್ಡ ಸಮಾಜದ ಅಧ್ಯತ್ಮಿಿಕತೆಗೆ ಹೊಣೆಗಾರರು ಎಂದು ಹೆಂಗಸರ ಸ್ಥಾಾನಕ್ಕೆೆ ಗೌರವ ನೀಡಿದ್ದಾಾರೆ.

ಅಮೇರಿಕಾದಲ್ಲಿ ಪ್ರಜಾಪ್ರಭುತ್ವ ಮತ್ತು ಇಲ್ ಆಫ್ ಪರಿಚಯಿಸಿದವರೇ ಈ ಕ್ವ್ಯಾಾಕರ್ಸ್‌ಗಳು. ಅಮೇರಿಕಾದ ಲಿಬರ್ಟಿ ಬೆಲ್ ಇವರ ಕೊಡುಗೆ. ಇವರು ಭಾರತದ ಮಧ್ಯ ಪ್ರದೇಶ, ಬಿಹಾರ್ ಮತ್ತು ಇತರ ಪ್ರದೇಶಗಳಲ್ಲಿ ಮತಾಂತರ ಮಾಡಲು ಬಂದಿದ್ದರು.


ಕ್ವಾಕರ್ಸ್ ನಂಬಿಕೆಗಳು

* ದೇವರೆದುರಿಗೆ ಎಲ್ಲ ವ್ಯಕ್ತಿಿಗಳೂ ಅಮೂಲ್ಯರು ಮತ್ತು ಸಮಾನರು
* ಎಲ್ಲರಿಗೂ ದಿವ್ಯದೊಂದಿಗೆ ನೇರವಾದ ಅನುಭವವನ್ನು ವ್ಯಕ್ತಿಿಗತವಾಗಿಯೂ ಮತ್ತು ಸಾಮೂಹಿಕವಗಿಯೂ ಹೊದಂಲು ಸಾಧ್ಯ. ಅನುಭವಕ್ಕೆೆ ಅವರು ಕೊಡುವ ಹೆಸರುಗಳು ಹಲವು. ದೇವರು, ಕ್ರಿಿಸ್ತ, ಸ್ಪಿಿರಿಟ್ ಅಥವಾ ಚೈತನ್ಯ ಇನ್ವರ್ಡ್ ಟೀಚರ್, ಇನ್ವರ್ಡ್ ಲೈಟ್ ಮತ್ತು ಸೀಡ್ ಅಥವಾ ಬೀಜ – ಮುಂತಾದ ಹೆಸರುಗಳಿಂದ ಅಧ್ಯಾಾತ್ಮದ ಅನುಭವವನ್ನು ಹೆಸರಿಸಲಾಗಿದೆ.
* ಯೇಸುವಿನ ಬದುಕು ಮತ್ತು ಬೋಧನೆಗಳು ದೇವರಲ್ಲಿನ ವಿಶ್ವಾಾಸ ಮತ್ತು ಭಕ್ತಿಿಗೆ ಒಂದು ಉದಾಹರಣೆಯಾಗಿದೆ.
* ದಿವ್ಯಕ್ಕೆೆ ಲಕ್ಷ್ಯ ಕೊಡುವುದು ಮತ್ತು ಅನುಸರಿಸುವುದು ನಮ್ಮನ್ನು ಬದಲಾಯಿಸುತ್ತದೆ. ನಾವು ನಮ್ಮ ನಿತ್ಯದ ಕ್ರಿಿಯೆಗಳಲ್ಲಿ ನಮ್ಮ ನಂಬಿಕೆಗಳಲ್ಲಿ ಬದುಕಲು ಪ್ರಯತ್ನಿಿಸುತ್ತೇವೆ.
* ನಾವು ಭೇಟಿಯಾದ ಪ್ರತಿ ವ್ಯಕ್ತಿಿಯಲ್ಲಿ ದಿವ್ಯತೆಯನ್ನು ಕಾಣುತ್ತೇವೆ.
* ನಮಗೆ ಏನು ಮಾಡಲಿ ಎಂದು ಹೇಳುತ್ತಾಾನೆಯೊ ಅದನ್ನು ಮಾಡಲು ಒಬ್ಬರಿಗೆ ಇನ್ನೊೊಬ್ಬರು ಸಹಾಯ ಮಾಡುವುದು
* ಒಟ್ಟಿಿಗೆ ಶಾಂತವಾಗಿ ಕುಳಿತುಕೊಳ್ಳುವುದು, ಸ್ಪಿಿರಿಟ್ ನಿಂದ ಪ್ರೇರೇಪಿತನಾದ ಯಾವುದೇ ವ್ಯಕ್ತಿಿಯ ಮಾತನ್ನು ಆಲಿಸುವುದು
* ನಮ್ಮನ್ನು ಸೇರಿಕೊಳ್ಳಲು ಸ್ವಾಾಗತ ಎನ್ನುತ್ತಾಾರೆ. ಎಲ್ಲರನ್ನೂ ಸ್ಪಿಿರಿಟ್ ಪ್ರೀತಿಸುತ್ತದೆ ಎಂದು ಅವರು ನಂಬುತ್ತಾಾರೆ. ಕ್ವ್ಯಾಾಕರ್ಸ್‌ಗಳು ವಿಭಿನ್ನ ಧಾರ್ಮಿಕ ಹಿನ್ನೆೆಲೆಗಳಿಂದ ವಿವಿಧ ಜನಾಂಗದಿಂದ ಬಂದವರಾಗಿರಬಹುದು.

ಸರಳ ಜೀವನವೇ ಮೂಲಮಂತ್ರ
ಕ್ವ್ಯಾಾಕರ್ಸ್ ಗುಲಾಮಗಿರಿಗೆ ವಿರೋಧವನ್ನು ವ್ಯಕ್ತಪಡಿಸಿದ್ದರು. ಜೀವನ. ಅವರ ದೃಷ್ಟಿಿಯಲ್ಲಿ ಕುಡಿತ ಆತ್ಮವನ್ನು ಭ್ರಷ್ಟಗೊಳಿಸುತ್ತದೆ. ನೈಜ ಕ್ವಯಾಕರ್ ಮದ್ಯಪಾನ ಮಾಡಕೂಡದು. ಬಟ್ಟೆೆಯಲ್ಲಿ ಇತ್ತೀಚಿಗಿನ ಫ್ಯಾಾಶನ್ ಗೆ ವಿರೋಧ. ಇವರು ಚರ್ಚ್ ಅನ್ನು ವಿರೋಧಿಸಿದ್ದರಿಂದಾಗಿ ಶಿಕ್ಷೆಗೆ ಒಳಗಾದರು. ಕೆಲವರನ್ನು ಗಲ್ಲಿಗೇರಿಸಲಾಯಿತು. ಬ್ರಿಿಟಿಷ್ ಫ್ರೆೆಂಡ್‌ಸ್‌ ಕೌನ್ಸಿಿಲ್ ಮತ್ತು ಅಮೇರಿಕನ್ ಫ್ರೆೆಂಡ್ಸ ಕೌನ್ಸಿಿಲ್‌ಗಳಿಗೆ ಮಾಡಿದ ಸಮಜ ಸೇವೆಗಾಗಿ, ನೊಬೆಲ್ ಶಾಂತಿ ಪ್ರಶಸ್ತಿಿಯನ್ನು 1947ರಲ್ಲಿ ಕೊಡಲಾಯಿತು.