Wednesday, 9th October 2024

ಹವ್ಯಾಸವೇ ಆದಾಯದ ಮೂಲ

ಆಕರ್ಷ ಆರಿಗ

ಚಿತ್ರ ರಚಿಸುವುದು ಹವ್ಯಾಸ. ಲಾಕ್‌ಡೌನ್ ಸಮಯದಲ್ಲಿ ಎಲ್ಲೆಡೆ ತಲ್ಲಣ. ಅದೇ ಸಮಯವನ್ನು ಆನ್‌ಲೈನ್ ಮೂಲಕ ಚಿತ್ರಗಳನ್ನು ಮಾರಾಟ ಮಾಡಲು
ಉಪಯೋಗಿಸಿಕೊಂಡ ಉದಾಹರಣೆ ಇಲ್ಲಿದೆ.

ಪ್ರತಿಭೆಗೆ ಮಿತಿಯಿಲ್ಲ ಈ ಮಾತು ಅಕ್ಷರಶಃ ಸತ್ಯ. ಕಲೆಯಲ್ಲಿ ಆಸಕ್ತಿ ಒಂದು ಇದ್ದರೆ ಸಾಕು ಏನು ಬೇಕಾದರೂ ಆಗಬಹುದು ಎಂಬ ಉತ್ತಮ ಉದಾಹರಣೆ
ಅರ್ಪಿತಾ ಆಚಾರ್ಯ. ಈಕೆ ಕಾಲಿಗೆ ಗೆಜ್ಜೆ ಕಟ್ಟಿ ಹೆಜ್ಜೆ ಹಾಕಿದರೆ ನೃತ್ಯಕಿ, ಹಾಡಲು ನಿಂತರೆ ಜಗವನ್ನೇ ಮರೆಸುವ ಗಾಯಕಿ, ಇನ್ನು ಚಿತ್ರ ಬಿಡಿಸಿದರೆ ಹೊಸ ರೂಪ ಕೊಡುವ ಚಿತ್ರಕಲಾವಿದೆ.

ದಕ್ಷಿಣ ಕನ್ನಡ ಜಿಯ ವಿಟ್ಲ ಸಮೀಪದ ಆಲಂಗಾರು ನಿವಾಸಿ, ತಂದೆ ಚಿದಾನಂದ ವಿ ಹಾಗೂ ಹೇಮಲತಾ ಪುತ್ರಿ. ಪ್ರಸ್ತುತ ಮಂಗಳೂರಿನ ಮಹಾಲಸಾ ಕಾಲೇಜ್ ಆಫ್ ವಿಷುಯಲ್ ಆಟ್ಸ ಚಿತ್ರಕಲೆ ವ್ಯಾಸಂಗ ನಡೆಸುತ್ತಿದ್ದಾರೆ. ಇವರಿಗೆ ಬಾಲ್ಯದಿಂದಲೇ ಕಲೆಯ ಮೇಲೆ ಬಹಳಷ್ಟು ಆಸಕ್ತಿ. ಚಿತ್ರ ಬಿಡಿಸುವ ಮೂಲಕ ತಮ್ಮ ಪ್ರತಿಭೆ ತೋರಿದ್ದಾರೆ. ನೃತ್ಯ, ಯಕ್ಷಗಾನ, ಸಂಗೀತ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿzರೆ. ಹೆಚ್ಚಿನ ಸಮಯವನ್ನು ಚಿತ್ರಕಲೆಯಲ್ಲಿ ಮುಡಿಪಾಗಿಟ್ಟಿದ್ದಾರೆ.

ಆನ್‌ಲೈನ್ ಮಾರಾಟ
ಕೋವಿಡ್ ಲಾಕ್ ಡೌನ್ ಅವಧಿಯಲ್ಲಿ ಕಲಾಕೃತಿಗಳನ್ನು ಮಾರಾಟ ಮಾಡುವ ಜೊತೆಗೆ ಆರ್ಥಿಕ ಸ್ವಾವಲಂಬನೆಯ ಹೊಸ ಸಾಧ್ಯತೆಗಳ ಪರಿಚಯಿಸಿದ್ದಾರೆ. ಎರಡನೇ ಅಲೆಯ ಸಮಯ ದಿಂದ ಆನ್ಲೈನ್ ಮುಖಾಂತರ ಕಲಾಕೃತಿಗಳನ್ನು ಮಾರಾಟ ಮಾಡಿದ್ದಾರೆ. ವಿಶೇಷವಾಗಿ ಅಲಂಕಾರಿಕ ಚಿತ್ರಕಲೆಗಳಿಗೆ ಹೆಚ್ಚು ಬೇಡಿಕೆಯಿದೆ. ಈಗಾಗಲೇ ೧೫ಕ್ಕೂ ಹೆಚ್ಚು ಚಿತ್ರಕಲೆಗಳನ್ನು ಚಿತ್ರಿಸಿ ಹತ್ತು ಸಾವಿರ ರೂಪಾಯಿ ವರಮಾನಗಳಿಸುವ ಮೂಲಕ ಯುವಜನೆತೆಗೆ ಮಾದರಿ ಯಾಗಿ ದ್ದಾರೆ.

‘ಕಲೆಗೆ ಬೆಲೆ ಕೊಟ್ಟಾಗ ಕಲೆಯು ನಮ್ಮನ್ನು ಕೈ ಹಿಡಿಯುತ್ತದೆ. ಜನರು ನನ್ನನ್ನು ಕಲೆಯ ಮೂಲಕ ಗುರುತಿಸು ತ್ತಾರೆ. ಸಂಕಷ್ಟದ ಈ ಸಮಯದಲ್ಲಿ ಕಲೆಯೂ ವರಮಾನದ ಮಾರ್ಗವಾಗಬಹುದು. ಚಿತ್ರ ಬಿಡಿಸುವಾಗ ಸೃಜನಾತ್ಮಕವಾಗಿ ಯೋಚಿಸಬೇಕು. ಯಾವುದೇ ಮಾರಾಟ ಯೋಗ್ಯ ಚಿತ್ರ ಬಿಡಿಸಲು ಕನಿಷ್ಠ ನಾಲ್ಕು ದಿನಗಳು ಬೇಕಾಗುತ್ತವೆ ಈ ಕೆಲಸದಲ್ಲಿ ಏಕಾಗ್ರತೆ ಅತೀ ಮುಖ’ ಎನ್ನುತ್ತಾರೆ ಅರ್ಪಿತಾ.

ಇವರು ಬಾಟಲ್, ವಾಲ, ಹ್ಯಾಂಡ್, ಮರದ ಪೇಂಟಿಂಗ್ ಹಾಗೂ ಕಲ್ಲಿನ ಚಿತ್ರಕಲೆಗಳನ್ನು ಬಿಡಿಸಿದ್ದಾರೆ. ಇಷ್ಟಲ್ಲದೇ ದಿನನಿತ್ಯ ಬಳಕೆಯಾಗುವ ನಾವೀನ್ಯತೆಯ ವಸ್ತುಗಳನ್ನೂ ಇವರು ಸಿದ್ಧಪಡಿಸುತ್ತಾರೆ. ನಿರ್ಲಕ್ಷಿತ ತ್ಯಾಜ್ಯ ವಸ್ತುಗಳಿಗೆ ಹೊಸ ರೂಪ ಕೊಟ್ಟು ಆಕರ್ಷಣೀಯ ಸುಂದರ ಕಲಾಕೃತಿಗಳನ್ನು ರಚಿಸುವ ಕಲೆಯನ್ನೂ ರೂಢಿಸಿಕೊಂಡು ಕಲಾಸಕ್ತರ ಮೆಚ್ಚುಗೆಗೆ ಪಾತ್ರರಾಗಿzರೆ ಅರ್ಪಿತಾ ಆಚಾರ್ಯ.