ಬದುಕಿನ ಸಾಗರದಲಿ ಪರಸ್ಪರ ಪರಿಚಯ ಆಕಸ್ಮಿಕದ ತಿರುವು. ಆದರೆ ಅನಿವಾರ್ಯವಾಗಿ ಬಂದೆರಗುವ ವಿದಾಯವು
ತರುವ ನೋವಿಗೆ ಎಲ್ಲೆ ಉಂಟೆ?
ಆದಿತ್ಯ ಹೆಗಡೆ
ಆ ನಿನ್ನ ಮುಖದಲ್ಲಿ ಅದೆಷ್ಟೋ ಪ್ರಶ್ನೆಗಳಿಗೆ ಉತ್ತರವೇ ಇರಲಿಲ್ಲ. ಆ ಎಲ್ಲ ಕನಸುಗಳನ್ನು ಮರೆಮಾಡುವ ಮುಗುಳುನಗೆ ನಿನ್ನದು. ನನಗಿನ್ನೂ ಚೆನ್ನಾಗಿ ನೆನಪಿದೆ. ಅವಳೇ ನನ್ನನ್ನ ಮೊದಲನೆಸಲ ಮಾತನಾಡಿಸಿದ್ದು. ಈ ನಡುವೆ ಏನೋ ಹೇಳುವ
ಕಾತರ, ಆದರೂ ಏನೂ ಹೇಳದ ಅಂಜಿಕೆ. ಎಲ್ಲಿ ಸ್ನೇಹವನ್ನು ಕಳೆದುಕೋಳ್ಳುತ್ತೇನೋ ಎಂಬ ಭಯ ಆವರಿಸಿತ್ತು.
ಇಬ್ಬರ ನಡುವೆ ಸ್ನೇಹ ಶುರುವಾಗಲು ಕಾರಣಯಾರದರೋ ಗೊತ್ತಿಲ್ಲ. ಇಬ್ಬರದೂ ಎಂದಿಗೂ ನಿಲ್ಲದ ಮಾತು. ಕ್ಲಾಸಿನಲ್ಲಿ
ಕಣ್ಣು ಸನ್ನೆಯ ಮುಗುಳುನಗೆಯ ನೋಟಗಳು ಯಾವಾಗಲೂ. ಕಾಲೇಜು ಜೀವನ, ಕಾಲೇಜಿನ ದಿನಗಳು ಒಂಥರಾ ಚೆಂದಾ ಎಂದು ಅನಿಸೋಕೆ ಶುರುವಾಗಿತ್ತು. ನಿನ್ನ ಸ್ನೇಹದ ಗಿಡದಲ್ಲಿ ಯಾವಾಗ ಪ್ರೀತಿಯ ಚಿಗುರೊಡೆಯಿತೋ ಗೊತ್ತಿಲ್ಲ. ಅಂತೂ ಧೈರ್ಯ ಮಾಡಿಯ ಪ್ರೇಮ ನಿವೇದನೆ ಮಾಡಿಯೆಬಿಟ್ಟೇ, ಮೌನಂ ಸಮ್ಮತಿ ಲಕ್ಷಣಮ್ ಎನ್ನುವ ಹಾಗೇ ಒಪ್ಪಿಯೆ ಬಿಟ್ಟಳು. ಆ ದಿನ
ಆನಂದ ಮುಗಿಲು ಮುಟ್ಟಿತ್ತು.
ಅವಳ ವ್ಯಕ್ತಿತ್ವವೇ ಬೇರೆ. ಜತೆಗೇ ಮಾತನ್ನು ಎಲ್ಲಿ ಹೇಗೆ ಮಾತನಾಡಬೇಕೆಂದು ಚೆನ್ನಾಗಿ ಬಲ್ಲವಳಾಗಿದ್ದಳು. ‘ಈ ಜನ್ಮದಲ್ಲಿ ಜತೆಯಾಗಿ ರ್ತೀಯಾ’ ಎನ್ನೋ ಪ್ರಶ್ನೆಯಲ್ಲಿ ಏಳೇಳು ಜನ್ಮದ ಜತೆಗಾರ್ತಿ ಆಗುವ ಭರವಸೆ ಅವಳ ಕಂಗಳಲಿತ್ತು. ಹೇಗೋ ಪ್ರೀತಿಯ ಯಾನ ಪ್ರಾರಂಭವಾಗಿ ರಾತ್ರಿಯಿಡೀ ಮೆಸಜ್ ಗಳು ಲಂಗು ಲಗಾಮು ಇಲ್ಲದ ಕುದುರೆಯು ಓಡುವ ಹಾಗೇ ಶುರುವಾಗಿತ್ತು. ಅವಳನ್ನು ರಾಣಿಯ ಥರ ನೋಡಿಕೊಳ್ಳುವ ಆಸೆ ಹಾಗು ಅವಳ ಕನಸನ್ನು ಪ್ರೀತಿ ಮಾಡುವ ಜವಾಬ್ದಾರಿ ಅವನದಾಗಿತ್ತು.
ಎರಡು ವರ್ಷದ ಕಾಲೇಜು ಮುಗಿಸಿ ಬೇರೆ ಕಾಲೇಜಿಗೆ ಹೋಗುವ ದಿನ ಬಂತು. ಇವ್ತತಲ್ಲಾ ನಾಳೆ ಬೈ ಹೇಳಲೇಬೇಕು. ಆ ಮಾತು ಹೇಳಲು ಇಬ್ಬರ ಗಂಟಲು ಕಟ್ಟುತ್ತಿತ್ತು.
ವಿದಾಯ ಕಣ್ಣೀರಿನಲ್ಲಿ ಕೊನೆಯಾಯಿತು. ಆದರೂ ತಿಂಗಳಿಗೆ ಒಮ್ಮೆಯಾದರೂ ಭೇಟಿ. ನೆನಪಿನ ಉಡುಗೊರೆ, ಸಿಹಿಯ ತಿನಿಸು ವಿನಿಮಯ.. ಹೀಗೆ ದಿನ ತಿಂಗಳು ಕಳೆದು ವರ್ಷಗಳೇ ಉರುಳಿದವು. ಯಾರ ಕಣ್ಣು ಬಿತ್ತೋ ಗೊತ್ತಿಲ್ಲ , ಆ ಪ್ರೀತಿ ಚೂರಾಗಿ
ನಂಬಿಕೆ ಕಳೆದು ಹೋಗಿ, ಕಣ್ಣೀರಿನಲ್ಲಿ ಕೈ ತೊಳೆಯುವ ಪರಿಸ್ಥಿತಿ ಬಂದೊದಗಿತು. ಅತಿಶಯದ ಮಾತು ಆಡದೆ, ಉಸಿರ ಶಾಖವ ತಡೆಯಲಾರದೆ, ಕಣ್ಣ ಕೊಳ ಕಾರಣವಿರದೆ ಕರಗಿಹೋಯಿತು.
ತಿಳಿಯದ ಸತ್ಯವ ತಿಳಿಯುವ ಹಂಬಲ, ತಿಳಿದಾಕ್ಷಣ ಸತ್ಯದ ಹಿಂದಿರುವ ನೋವಿಗೆ ಕಾರಣ ತಿಳಿಯುವ ಆತುರ. ಅಥವಾ ಮೌನವ ಹೊದ್ದು ನೋವ ನುಂಗಿ ಕುಳಿತುಬಿಡಲೆ? ಪರಿಚಯ ಆಕಸ್ಮಿಕ. ವಿದಾಯ ಅನಿವಾರ್ಯ.