Saturday, 14th December 2024

ಇಷ್ಟಾರ್ಥ ಪ್ರಾಪ್ತಿರಸ್ತು ಎಂದ ಭಾವನಾರಾವ್

ಹಿರಿಯರ, ಕಿರಿಯರಿಗೆ ’ಇಷ್ಟಾರ್ಥ ಪ್ರಾಪ್ತಿರಸ್ತು’ ಎಂದು ಅಕ್ಷತೆಕಾಳು ಹಾಕುತ್ತಾ ಹರಸುತ್ತಾರೆ. ಈಗ ಇದೇ ಶುಭನುಡಿಯು ಚಿತ್ರಕ್ಕೆ ಶೀರ್ಷಿಕೆಯಾಗುತ್ತಿದೆ.

ಸಂಪೂರ್ಣ ಹೊಸಬರ ತಂಡದಲ್ಲಿ ಭಾವನಾರಾವ್ ನಾಯಕಿಯಾಗಿ ನಟಿಸಲಿ ದ್ದಾರೆ. ಅದರಂತೆ ಡಿಂಗ್ರಿನಾಗರಾಜ್ ಪುತ್ರ ವರ್ಧನ್, ಕರಣ್‌ ಶ್ರೀವತ್ಸ ನಾಯಕ ರಾಗುವ ನಿರೀಕ್ಷೆಯಿದೆ. ರವಿಶಂಕರ್, ಶರತ್‌ಬಾಬು, ಸಾಧುಕೋಕಿಲ, ಚಿಕ್ಕಣ್ಣ, ರಮೇಶ್‌ಭಟ್, ಶೃತಿ, ಅಪೂರ್ವಾ, ಪವಿತ್ರಲೋಕೇಶ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಮನುಷ್ಯ ತನ್ನ ಜೀವನದಲ್ಲಿ ದೈನಂದಿನ ಚಟುವಟಿಕೆ ಗಳಲ್ಲಿ ಹಲವು ಸಮಸ್ಯೆಗಳನ್ನು ಎದುರಿಸುತ್ತಾನೆ. ತನ್ನ ಪರಿಸ್ಥಿತಿ ಕೈಮೀರಿ ಹೋದಾಗ ದೈವಿಕತೆಯ ಮೊರೆ ಹೋಗು ತ್ತಾನೆ ಎಂಬುದು ಚಿತ್ರದ ಒನ್‌ಲೈನ್ ಸ್ಟೋರಿ.

ಇದಕ್ಕೆ ತಕ್ಕಂತೆ ಧಾರ್ಮಿಕ, ಸಾಮಾಜಿಕ, ಕೌಟಂಬಿಕ ಅವತರಣಿಕೆಗಳನ್ನು ಹಂತ ಹಂತವಾಗಿ ತೋರಿಸುವ ಪ್ರಯತ್ನ ಮಾಡಲಾಗುತ್ತದೆ ಎನ್ನುತ್ತಾರೆ ನಿರ್ದೇಶಕರು. ತಮನ್ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಹೊಸಪೇಟೆ, ಹಂಪಿ, ಬಳ್ಳಾರಿ, ಬೆಂಗಳೂರು ಮತ್ತಿತರೆಡೆ ಚಿತ್ರಿದ ಚಿತ್ರೀಕರಣ ನಡೆಯಲಿದೆ. ಸಂಗೀತ, ಛಾಯಾಗ್ರಾಹಕ, ಸಂಕಲನ ಹೀಗೆ ತಾಂತ್ರಿಕ ವಿಭಾಗದಲ್ಲಿ ನುರಿತ ತಂತ್ರಜ್ಞರಾಗಿದ್ದಾರೆ. ಭಾವನಾಶ್ವಿನಿ ಪ್ರೊಡಕ್ಷನ್ಸ್‌ ಹಾಗೂ ಸೊಬಗು ಪ್ರೊಡಕ್ಷನ್ಸ್ ಮುಖಾಂತರ ಅರ್ಚನಾ.ಎಸ್.ಚಿಕ್ಕಬಳ್ಳಾಪುರ ಬಂಡವಾಳ ಹೂಡಿ ದ್ದಾರೆ. ಸದ್ಯದಲ್ಲಿಯೇ ಚಿತ್ರದ ಮಹೂರ್ತ ನೆರವೇರಲಿದ್ದು, ಚಿತ್ರೀಕರಣ ಆರಂಭವಾಗಲಿದೆ.