Saturday, 14th December 2024

ಕೈಲಾಸ ಮಾನಸ

ಸಿರಿ ಮೂರ್ತಿ

ಬೇರೆ ಏನೇ ಆಯಾಮಗಳಿರಲಿ, ಕೋವಿಡ್ 19 ವಿಧಿಸಿದ ಗೃಹಬಂಧನದಲ್ಲಿ ಹಲವರಿಗೆ ನಾನಾ ರೀತಿಯ ಹವ್ಯಾಸಗಳನ್ನು ಮುಂದು ವರಿಸಲು ಅನುಕೂಲವಾಗಿದ್ದಂತೂ ನಿಜ. ನಾನು ಈ ಲಾಕ್ ಡೌನಿನಲ್ಲಿ ಓದಿದ ಪುಸ್ತಕಗಳಿಗೆ ಲೆಕ್ಕವಿಲ್ಲ. ಒಂದಕ್ಕಿಂತಾ ಒಂದು ಚೆನ್ನಾಗಿದ್ದವು.

ಸಹನಾ ವಿಜಯ ಕುಮಾರ್ ಅವರ ‘ಅವಸಾನ’, ಗಜಾನನ ಶರ್ಮ ಅವರ ‘ಪುನರ್ವಸು’ ನನ್ನನ್ನು ಗಹನವಾಗಿ ಕಾಡಿದವು. ಗಜಾನನ ಶರ್ಮರ ‘ಪುನರ್ವಸು’ ಓದಿದಾಗ ಅವರು ಬರೆದ ಬೇರೆ ಪುಸ್ತಕಗಳನ್ನು ಓದಬೇಕೆನಿಸಿತು. ಅವರ ಯಾತ್ರಾನುಭವ ಕಥನವಾದ ‘ಕೈಲಾಸ ಮಾನಸ ದೇವಭೂಮಿಗೊಂದು ಪಯಣ’ ತರಿಸಿಕೊಂಡೆ.

‘ಕೈಲಾಸ ಮಾನಸ’ ಓದಿ ಮುಗಿಸಿದಾಗ ಅದರ ಪ್ರಭಾವಕ್ಕೆ ಎಷ್ಟು ಗಾಢವಾಗಿ ಒಳಗಾಗಿದ್ದೇನೆಂದರೆ ಪ್ರವಾಸಾಸಕ್ತಳಾದ ನಾನು ಹಲವಾರು ದೇಶಗಳನ್ನೂ ಭಾರತದ ಅನೇಕ ಸ್ಥಳಗಳನ್ನು ನೋಡಿದ್ದರೂ, ಮಾನಸ ಸರೋವರವನ್ನು ನೋಡದ ನಷ್ಟವನ್ನು ತುಂಬಲಾರದೇನೋ ಅನಿಸಿತು.

ಗಜಾನನ ಶರ್ಮರ ಕೈಲಾಸ ಮಾನಸ ಬರೀ ಪ್ರವಾಸ ಕಥನವಾಗಿದ್ದರೆ ನನ್ನನ್ನು ಅಷ್ಟು ಆಕರ್ಷಿಸುತ್ತಿತ್ತೆಂದು ಹೇಳಲಾರೆ. ಇಂದಿನ
ದಿನಗಳಲ್ಲಿ ಯಾವುದೇ ವಿವರವನ್ನು ಜಾಲತಾಣದಲ್ಲಿ ತಿಳಿದುಕೊಳ್ಳಬಹುದು. ಶರ್ಮರು ತಾವು ನೋಡಿದ ಒಂದೊಂದು ಸ್ಥಳವನ್ನು ಆ ಗಳಿಗೆಯಲ್ಲಿ ತಮ್ಮ ಮನಸ್ಸಿಗೆ ಬರುವ ಭಾವಗಳನ್ನು ಹೇಳಿಕೊಂಡಿದ್ದಿದೆಯ, ಅದು ನಾನೇ ಆ ಜಾಗದಲ್ಲಿ ನಿಂತಿ ದ್ದೇನೆ, ಹೀಗೇ ಯೋಚಿಸುತ್ತಿದ್ದೇನೆ ಎನಿಸುವಷ್ಟು ನನ್ನನ್ನು ಆವರಿಸಿತು.

ಕೈಲಾಸ ಮಾನಸಕ್ಕೆ ಹೊರಡುವಾಗಲೇ ಅವರಲ್ಲಿ ಜಿeಸೆಯಿತ್ತು. ತಾನು ಹೋಗುವ ಉದ್ದೇಶ ಯಾತ್ರೆಯಾ? ಪ್ರವಾಸವಾ? ಯಾತ್ರೆ ಯಿಂದ ಪಾಪಗಳು ಪರಿಹಾರವಾಗುವುದೆಂಬ ಅಚಲ ಶ್ರದ್ಧೆ ತನ್ನದಲ, ನಿರಾಕರಿಸಿ ವಾದಿಸುವ ಇಚ್ಛೆಯೂ ತನ್ನದಲ್ಲ, ಪಾಪ ಪುಣ್ಯಗಳು, ನಮ್ಮ ನಿತ್ಯಜೀವನದ ಸತ್ಕರ್ಮಗಳ -ಲವೆಂಬ ಭಾವ ಅವರದ್ದು.

ಸ್ನೇಹಿತರೊಬ್ಬರು ‘ಇಷ್ಟೊಂದು ಹಣ ಖರ್ಚುಮಾಡಿ ಅಲ್ಲಿ ಹೋಗುವ ಬದಲು ಯುರೋಪ್ ಪ್ರವಾಸಕ್ಕೆ ಹೋಗಬಹುದಿತ್ತು’ ಎಂದಾಗ ‘ಕೈಲಾಸ ಮಾನಸಗಳೆಂದರೆ ನಮ್ಮ ಸಂಸ್ಕೃತಿಯ ಮೂಲನೆಲೆ, ಪರಂಪರೆಯ ಜನ್ಮಸ್ಥಾನ. ಇಂತಹ ಅದ್ಭುತ ಪ್ರದೇಶ ನೀಡುವ ದಿವ್ಯಾನುಭವ ಅಲ್ಲಿ ಸಿಕ್ಕೀತು?’ ಎನಿಸಿತಂತೆ.

ದೆಹಲಿಯಿಂದ ನೇಪಾಳ, ನೇಪಾಳದಿಂದ ಚೀನಾ ಗಡಿ. ಹೀಗೆ ಸಾಗುವ ಪ್ರವಾಸದಲ್ಲಿ ಅಲ್ಲಿಯ ಸ್ಥಳ ಪುರಾಣಗಳನ್ನೂ, ಜನಜೀವನ ವನ್ನೂ ವಿವರಿಸುತ್ತಾ ಆಗ ತಮ್ಮ ಮನಸ್ಸಿಗೆ ಬರುವ ಭಾವ, ನೆನಪಿಗೆ ಬರುವ ಕವಿವಾಣಿಗಳು. ಎಲ್ಲಿಂದೆಲ್ಲಿಗೊ ಹೋಲಿಕೆ! ಅವು ಓದುಗರಲ್ಲಿ ಆಸಕ್ತಿ ಹುಟ್ಟಿಸುತ್ತವೆ. ಟಿಬೆಟ್ಟಿಗೆ ಹೋಗುವಾಗ ದಾಟುವ ಸ್ನೇಹ ಸೇತು. ಆರಂಭದಲ್ಲಿ ನೇಪಾಳ, ನಂತರ ಚೀನದೇಶದ ಆರಂಭ. ಚೀನಾ ಟಿಬೆಟ್ಟಿಯನ್ನರ ಮೇಲೆ ನಡೆಸಿದ ದೌರ್ಜನ್ಯದಿಂದ ಪಾರಾಗಲು ಇದೇ ಸೇತುವೆಯ ಮೂಲಕ ಬಂಧನದಿಂದ ಬಿಡುಗಡೆಯಡೆಗೆ ಎಲ್ಲರೂ ನಡೆದು ಬಂದ ಸೇತುವೆಯ ಹೆಸರು ಸ್ನೇಹಸೇತುವೆ.

ಸ್ನೇಹ ಸೇತುವೆಯ ಅಡಿ ಬೋಟಕೇಶಿ ನದಿ ಹರಿಯುತ್ತಿರುವ ವೇಗವನ್ನು ಗಮನಿಸಿದರೆ ಅದರ ಗರ್ಭದಲ್ಲಿ ಚೀನೀಯರ ಎಲ್ಲಾ
ಕ್ರೌರ್ಯಗಳನ್ನೂ ಹೊತ್ತೊಯ್ದು ಸಾಗರದಲ್ಲಿ ಅದ್ದಿ ಬಿಡಿವ ಕೋಪವಿದೆಯೇನೋ ಅನಿಸಿತು ಎಂದಿದ್ದಾರೆ. ಪ್ರ ವಾಸ ತಂಡ ದವರಲ್ಲಿ ಕೆಲವರ ಮನೋಭಾವಗಳನ್ನು ನವಿರಾದ ಹಾಸ್ಯದ ಮೂಲಕ ವಿವರಿಸುವ ಲೇಖಕರು, ಅವು ಬರೀ ಹಾಸ್ಯವಾಗಿರದೆ ಬದುಕಿನಲ್ಲಿ ಬಿಡಬೇಕಿದ್ದ ಸಣ್ಣ ಬುದ್ಧಿ, ಹೊಂದಾಣಿಕೆಯ ಕೊರತೆ, ಇಂತಹ ಸ್ಥಳಕ್ಕೆ ಬಂದೂ ಸಂಕುಚಿತ ಮನೋಭಾವ ಕಂಡದ್ದನ್ನು ನೋವಿನಿಂದ ಹೇಳುತ್ತಾ, ಮೂವತ್ತು ಮಂದಿ ಕೂರುವ ಆಸನದಲ್ಲಿ ನಲವತ್ತು ಮಂದಿ ಅನಿವಾರ್ಯವಾಗಿ ಕುಳಿತು ನಮ್ಮ ಸಹಕಾರ ಮನೋಭಾವವನ್ನು ಪ್ರದರ್ಶಿಸಿದ್ದನ್ನು ಹೇಳುವಾಗ ಅನಿವಾರ್ಯ ಎನ್ನುವ ಮಾತನ್ನು ಪ್ರಾಮಾಣಿಕವಾಗಿ ಒಪ್ಪಿಕೊಂಡಿದ್ದಾರೆ.

ಕುಬೇರನ ಅಲಕಾವತಿ
ಯಾವ ಸರೋವರವು ತನ್ನ ದಡದಲ್ಲಿ ನಿಸರ್ಗ, ಸ್ವರ್ಗ, ಕುಬೇರನ ಅಲಕಾವತಿಯೆಂದು ನಂಬಲಾಗಿದೆಯೋ ಅಂತಹ
ಸರೋವರವನ್ನು ಕಣ್ಣಾರೆ ಕಾಣುತ್ತಿದ್ದಂತೇ ಭಾವೋದ್ವೇಗಕ್ಕೆ ಒಳಗಾಗಿ ಧನ್ಯತಾಭಾವದಿಂದ ಕಣ್ಮುಚ್ಚಿ ಆನಂದಿಸಿದ ಕ್ಷಣ ಗಳನ್ನು ಓದುವಾಗ ಮನ ರೋಮಾಂಚನಗೊಳ್ಳುವುದು ಸತ್ಯ. ಇದಕ್ಕೆ ‘ಮಾನಸ ಸರೋವರ’ವೆಂಬ ಹೆಸರಿನ ಮೂಲಕ ಸರೋವರವು ನಮ್ಮೊಳಗಿನ ಮನಸ್ಸಿನ ಪ್ರತೀಕವೇ ಎಂಬ ಭಾವ ಉದ್ಭವಿಸಿತು ಎಂದುಕೊಂಡಿದ್ದಾರೆ.

ಯಮದ್ವಾರವೆಂಬ ಪರಿಕ್ರಮದ ಹೆಬ್ಬಾಗಿಲು, ಬೌದ್ಧರು ಬೇರೆ ಹೆಸರಿನಿಂದ ಕರೆದುಕೊಳ್ಳುವ ಸ್ಥಳವಾಗಿದ್ದರೂ, ಮಹಾ ಭಾರತ ವನ್ನು ನೆನಪಿಸಿ ಧರ್ಮರಾಯನ ಸ್ವರ್ಗಾವರೋಹಣದ ಕಥೆಯನ್ನು ಕಣ್ಮುಂದೆ ನಿಲ್ಲಿಸುತ್ತದೆ. ಬೆಟ್ಟ ಹತ್ತುವ ಸಾಹಸಕ್ಕೆ ಹೊರಡುವ ಮುನ್ನ, ನನಗ್ಯಾವ ಲೆಕ್ಕ ಎನ್ನುವ ಅಹಂಕಾರ, ಹತ್ತುತ್ತಿದ್ದಂತೇ ನಮ್ಮ ಸಾಮರ್ಥ್ಯದ ಕುರಿತು ನಮಗಿದ್ದ ಅಹಂ ಕಳಚಿ ತಲೆಯೆತ್ತಿ ಬೆಟ್ಟವನ್ನು ನೋಡಿದಾಗ ಅದರಡಿಯಲ್ಲಿ ನಾನು ಎನ್ನುವ ಈ ಜೀವ ಅತಿಚಿಕ್ಕದೆನಿಸುವ, ಬದುಕು ಕಲಿಸುವ ಪಾಠವನ್ನು ಸರಳವಾಗಿ ಅರ್ಥೈಸುತ್ತಾರೆ.

ಪ್ರಕೃತಿಯಲ್ಲಿ ದೇವರನ್ನು ಕಾಣುವ ಶರ್ಮರು ದೈವತ್ವವನ್ನು ವಾಸ್ತವತೆಯಲ್ಲಿ ಕಾಣುತ್ತಾರೆ. ಪರಿಕ್ರಮ ಮಾಡುವಾಗ ತಮ್ಮ ಬ್ಯಾಗುಗಳನ್ನು ಹೊರುವ ಟಿಬೆಟಿಯನ್ ದಂಪತಿಗಳು ಕೊಳಕರಾಗಿದ್ದು, ತಾವು ದಾಟಲಾಗದ ನದಿಯನ್ನು ಕೈ ಹಿಡಿದು ದಾಟಿಸಿ ದಾಗ, ‘ಶಿವ ಪಾರ್ವತಿಯರೇ ಈ ರೂಪದಲ್ಲಿ ಬಂದಿರಬಹುದಾ!’ ಎಂಬ ಭಾವ ಬಂದಿದ್ದೇ ಆ ದಂಪತಿಗಳಲ್ಲಿ ಗೌರವ ಮೂಡಿತೆಂದಿ ದ್ದಾರೆ. ಈ ಪ್ರವಾಸ ಕಥನದ ವೈಶಿಷ್ಟ್ಯ ಹಲವು.

ಯಾವುದೋ ಸನ್ನಿವೇಶಕ್ಕೆ ಹೊಂದುವಂತೆ ತಮ್ಮ ಬಾಲ್ಯ, ತಾಯಿಯಿಲ್ಲದ ಅನಾಥಭಾವಗಳನ್ನು ಹೇಳುವುದೂ, ‘ಎಷ್ಟು ದೂರ ಹೋದರೂ ನಿನ್ನ ದೇಹ ಭಾದೆ ತೀರಿಸುವುದು ಕಾಲುಬುಡದ’ ಎನ್ನುವ ಅಜ್ಜನ ಮಾತು ಮನಷ್ಯನ ಜೀವನದ ತಿರುಳಿನ ರೂಪ ದಲ್ಲಿ ತಿಳಿದುಕೊಳ್ಳಲೇಬೇಕಾದ ಸಂದೇಶ. ತಾನೆಷ್ಟು ಮೇಲೇರಿದರೂ ಮಾಡಿದ ಕರ್ಮ ತಾನೇ ಅನುಭವಿಸಲೇಬೇಕೆಂಬ ತತ್ವವನ್ನು ಉಣಬಡಿಸುವ ಪರಿ ಅತ್ಯದ್ಭುತ!