Friday, 13th December 2024

ಥ್ರಿಲ್ಲರ್‌ ಕಥೆ ಹೆಣೆದ ಕಲಾ ಸಾಮ್ರಾಟ್‍

ಶೀರ್ಷಿಕೆಯಲ್ಲಿಯೇ ಕಥೆ ಇದೆ. ಅದು ಮುಂದಿನ ದಿನಗಳಲ್ಲಿ ರಿವೀಲ್ ಆಗಲಿದೆ.

ಕಲಾ ಸಾಮ್ರಾಟ್ ಎಸ್.ನಾರಾಯಣ್ ಗ್ಯಾಪ್ ಬಳಿಕ ಚಿತ್ರರಂಗಕ್ಕೆ ಮರಳಿದ್ದು, ನಿರ್ದೇಶನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

ಇಷ್ಟು ದಿನ ಕೌಟುಂಬಿಕ ಕಥೆಯನ್ನು ಹೆಚ್ಚಾಗಿ ತೆರೆಗೆ ತರುತ್ತಿದ್ದ ನಾರಾಯಣ್, ಈ ಬಾರಿ ಕೊಂಚ ಬದಲಾವಣೆ ಮಾಡಿಕೊಂಡಿ ದ್ದು, ಸಸ್ಪೆನ್ಸ್‌, ಥ್ರಿಲ್ಲರ್ ಕಥೆಯನ್ನು ತೆರೆಗೆ ತರಲು ಸಜ್ಜಾಗಿದ್ದಾರೆ. ಚಿತ್ರದ ಶೀರ್ಷಿಕೆಯೂ ವಿಭಿನ್ನವಾಗಿದ್ದು, ‘ಡಿ’ ಎಂಬ ಟೈಟಲ್‌ ನಲ್ಲಿಯೇ ಚಿತ್ರೀಕರಣ ಭರದಿಂದ ಸಾಗಿದೆ. ವಿಶೇಷ ಎಂದರೆ ಈ ಬಾರಿ ನಾರಾಯಣ್ ಅವರಿಗೆ ಆ್ಯಕ್ಷನ್ ಹೀರೋ ಆದಿತ್ಯ ಜತೆ ಯಾಗಿದ್ದಾರೆ. ಇವರೊಂದಿಗೆ ನಾಯಕಿಯಾಗಿ ಅದಿತಿ ಪ್ರಭುದೇವ ನಟಿಸುತ್ತಿದ್ದಾರೆ.

ಚಿತ್ರದ ಟೈಟಲ್ ಅನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ‘ಡಿ’ ಯಲ್ಲೇ ಚಿತ್ರದ ಕಥೆ ಇದೆ. ಅದನ್ನು ಮುಂದಿನ ದಿನಗಳಲ್ಲಿ ರಿವೀಲ್ ಮಾಡುವುದಾಗಿ ನಾರಾಯಣ್ ಹೇಳಿದರು. ಸದ್ಯ ಬಿಡುಗಡೆಯಾಗಿರುವ ಪೋಸ್ಟರ್ ಕುತೂಹಲ ಕೆರಳಿಸುತ್ತಿದ್ದು, ಆದಿತ್ಯ ವಿಭಿನ್ನ ಲುಕ್‌ನಲ್ಲಿ ಕಂಗೊಳಿಸಿದ್ದಾರೆ. ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂನಲ್ಲೂ ‘ಡಿ’ ತೆರೆಗೆ ಬರಲಿದೆಯಂತೆ ಹಾಗಾಗಿ ಈ ಚಿತ್ರವೂ ಕೂಡ ಪ್ಯಾನ್ ಇಂಡಿಯಾ ಸಿನಿಮಾವಾಗುವುದರಲ್ಲಿ ಅನುಮಾನವೇ ಇಲ್ಲ.

ಹೇಳಿಕೆ

ಆದಿತ್ಯ ಕುರಿಗಳು ಸಾರ್ ಕುರಿಗಳು ಚಿತ್ರಕ್ಕೆ ಕಾರ್ಯಕಾರಿ ನಿರ್ಮಾಪಕರಾಗಿದ್ದರು. ಚಿತ್ರದ ನಾಯಕನಾಗುವ ಎಲ್ಲಾ ಲಕ್ಷಣಗಳು ಅವರಿಗಿದ್ದವು. ಈ ಹಿಂದೆಯೇ ನಾನು ನಿರ್ದೇಶಿಸಿದ್ದ ‘ಚಂದ್ರಚಕೋರಿ’ ಚಿತ್ರದಲ್ಲಿಯೇ ಆದಿತ್ಯ ನಾಯಕನಾಗಿ ನಟಿಸಬೇಕಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಅದಾಗಲೇ ಅವರು ‘ಆದಿ’ ಚಿತ್ರಕ್ಕೆ ಭರ್ಜರಿ ತಯಾರಿ ನಡೆಸಿದ್ದರು. ನನಗೆ ಅಂದಿನಿಂದಲೂ ಆದಿತ್ಯ
ಅವರಿಗಾಗಿ ಚಿತ್ರವೊಂದನ್ನು ನಿರ್ದೇಶನ ಮಾಡಬೇಕು ಎಂಬ ಆಸೆಯಿತ್ತು. ಅದಕ್ಕೆ ಈಗ ಕಾಲ ಕೂಡಿಬಂದಿದೆ. ಈ ಚಿತ್ರದ ಕಥೆಗೆ ಆದಿತ್ಯ ಹೇಳಿ ಮಾಡಿಸಿದಂತೆ ಹೊಂದಿಕೊಳ್ಳುತ್ತಾರೆ.

-ಎಸ್.ನಾರಾಯಣ್