Wednesday, 11th December 2024

ದೂರ ತೀರದಲ್ಲೂ ಕನ್ನಡದ ನೆನಪು

ನಾಗೇಶ್ ಜೆ. ನಾಯಕ ಉಡಿಕೇರಿ

ಉದ್ಯೋಗ ನಿಮಿತ್ತ ಅಮೆರಿಕದಂತಹ ಬಹುದೂರದ ಸ್ವಾವಲಂಬನೆಯ ಪಾಠ ದೇಶಗಳನ್ನು ಸೇರಿದವರಲ್ಲಿ ಹಲವರು ಕನ್ನಡದ ಅಭಿಮಾನವನ್ನು ಪೋಷಿಸಿಕೊಂಡು ಬರುತ್ತಿದ್ದಾರೆ. ಅಂತಹವರಲ್ಲಿ ಸರಿತಾ ನವಲಿ ಕೂಡ ಒಬ್ಬರು.

ಎಲ್ಲಾದರೂ ಇರು, ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು….ಎಂದು ಮೈ ರೋಮಾಂಚನಗೊಳ್ಳುವಂತೆ ಬರೆದು ಕನ್ನಡ ಪ್ರೀತಿ ಸಾರಿದರು ಕುವೆಂಪು. ಜಗತ್ತಿನ ಯಾವುದೇ ದೇಶದಲ್ಲಿ ನೆಲೆ ಕಂಡುಕೊಂಡರೂ ಹುಟ್ಟಿ ಬೆಳೆದ ಮಾತೃಭೂಮಿ,
ಅನ್ನ-ಅಕ್ಷರ ನೀಡಿದ ಕನ್ನಡ ಭಾಷೆ, ನೆಲ-ಜಲದ ಮೇಲಿನ ಅಭಿಮಾನ, ಸಂಸ್ಕೃತಿ ಮರೆಯದ ಅಪಾರ ಕನ್ನಡ ಪ್ರೀತಿಯ ಅಭಿಮಾನಿಗಳನ್ನು ವಿಶ್ವದುದ್ದಗಲಕ್ಕೂ ನಾವು ಕಾಣಬಹುದು.

ಅಂತಹ ಅಪ್ಪಟ ಕನ್ನಡ ಪ್ರೀತಿಯ ಕಳಕಳಿಯುಳ್ಳ, ದೂರದ ಅಮೇರಿಕಾದ ನ್ಯೂಜೆರ್ಸಿಯಲ್ಲಿ ನೆಲೆಸಿರುವ ಸರಿತಾ ನವಲಿ ಕೂಡ ಒಬ್ಬರು. ಬಹುಮುಖ ಪ್ರತಿಭೆಯ ವ್ಯಕ್ತಿತ್ವ ಮೂಲತಃ ಕಲ್ಯಾಣ ಕರ್ನಾಟಕದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ನವಲಿ
ಗ್ರಾಮದ ಇವರು 2004 ರಲ್ಲಿ ಅಮೆರಿಕಕ್ಕೆ ತೆರಳಿದ್ದು, ತಮ್ಮ ಪತಿ ಮತ್ತು ಮಗ ನೊಂದಿಗೆ ನ್ಯೂಜೆರ್ಸಿಯಲ್ಲಿ ನೆಲೆಸಿದ್ದಾರೆ.

ಶಾಲಾ ದಿನಗಳಿಂದಲೇ ಸಾಹಿತ್ಯದ ಒಡನಾಡಿಯಾಗಿರುವ ಸರಿತಾ ಕಥೆ, ಕವಿತೆ, ಪ್ರಬಂಧ, ಅಂಕಣ ಬರಹ ಮುಂತಾದ ಪ್ರಕಾರ ಗಳಲ್ಲಿ ಕೃಷಿ ಮಾಡಿದ್ದಾರೆ. ಇವರು ರಚಿಸಿದ ಹಲವು ಬರಹಗಳು ಪ್ರಕಟಗೊಂಡಿವೆ. ಇವರ ‘ಅವನಾವನು ಕಾಯ್ವ’ ಕಥಾ ಸಂಕಲನ ಕಳೆದ ವರ್ಷ ಅಮೇರಿಕಾದಲ್ಲಿ ನಡೆದ ವಸಂತ ಸಾಹಿತ್ಯೋತ್ಸವದಲ್ಲಿ ಬಿಡುಗಡೆಯಾಗಿದೆ. ನೃತ್ಯ ರೂಪಕಗಳ ಪರಿಕಲ್ಪನೆ-ಸಂಭಾ ಷಣೆ, ನಿರೂಪಣೆ, ನಾಟಕ ಅನುವಾದ, ನಟನೆ ಮತ್ತು ನಿರ್ದೇಶನದಲ್ಲಿಯೂ ಆಸಕ್ತಿಯಿಂದ ಕೆಲಸ ಮಾಡುತ್ತಿದ್ದಾರೆ. ನಿಮಗೆ ದೂರದೇಶದಲ್ಲಿ ಕನ್ನಡದ ಮೇಲೆ ಹೆಚ್ಚು ಒಲವು ಅರಳಲು ಕಾರಣ ಏನು ಎಂಬ ಪ್ರಶ್ನೆಗೆ, ‘ನನ್ನ ಮಾತೃಭೂಮಿಯನ್ನು ಬಿಟ್ಟು ಬಂದ ಮೇಲೆ ಅಂತರಾಳದಲ್ಲಿ ಕಿತ್ತು ಕಾಡಿದ ಒಂಟಿತನವೇ ಅಮೇರಿಕೆಯಲ್ಲಿ ಕನ್ನಡ ಸಾಹಿತ್ಯದ ಓದನ್ನು ಮುಂದುವರೆಸು ವಂತೆ, ಬರವಣಿಗೆಯಲ್ಲಿ ತೊಡಗಿಕೊಳ್ಳುವಂತೆ ಮಾಡಿತು’ ಎಂಬುದು ಇವರ ಮನದಾಳದ ಮಾತು.

ಕನ್ನಡ ಕಟ್ಟುವ ಕೆಲಸ
ನ್ಯೂಜೆರ್ಸಿಯ ಬೃಂದಾವನ ಕನ್ನಡ ಕೂಟದಲ್ಲಿ ತೊಡಗಿಸಿಕೊಂಡು ಕನ್ನಡಪರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ದ್ದಾರೆ. 2014 ರಲ್ಲಿ ಸಾಹಿತ್ಯ ಬೃಂದಾವನ ಕೂಟ ಪ್ರಾರಂಭಿಸಿದ ದ್ವೈಮಾಸಿಕ ಪತ್ರಿಕೆ ‘ಬೃಂದಾವನ ವಾಣಿ’ಯ ಮೊದಲ ಸಂಪಾ ದಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. 2016 ರಲ್ಲಿ ನ್ಯೂಜೆರ್ಸಿಯಲ್ಲಿ ನಡೆದ ಅಕ್ಕ ವಿಶ್ವಕನ್ನಡ ಸಮ್ಮೇಳನದಲ್ಲಿ ಸ್ಮರಣ ಸಂಚಿಕೆ ಯ ಸದಸ್ಯರಾಗಿ ಕಾರ್ಯನಿರ್ವಹಣೆ.

ಬೃಂದಾವನ ಕನ್ನಡ ಕೂಟದ ಕನ್ನಡ ಶಾಲೆಯಲ್ಲಿ ಸ್ವಯಂ ಸೇವಕ ಶಿಕ್ಷಕಿಯಾಗಿ ಮಕ್ಕಳಿಗೆ ಕನ್ನಡ ಕಲಿಸುವ ಕೆಲಸ ಮಾಡು ತ್ತಿದ್ದಾರೆ. ಕನ್ನಡ ಸಾಹಿತ್ಯದ ಹಿರಿಮೆಯನ್ನು ತಿಳಿಸಿಕೊಡುವ ಸಾಂಸ್ಕೃತಿಕ ಕಾರ್ಯಕ್ರಮಗಳ ಪರಿಕಲ್ಪನೆ ಮತ್ತು ನಿರ್ದೇಶನದ ಜವಾಬ್ದಾರಿ ಹೊತ್ತು ಇವರು ನಿರ್ದೇಶಿಸಿದ ‘ರೈತ ನಿನಗೆ ನಮೋ ನಮಃ’ ಎಂಬ ನೃತ್ಯ ರೂಪಕ ಅಪಾರ ಜನಮನ್ನಣೆ ಗಳಿಸಿದೆ.
ನಾಟಕಗಳಲ್ಲಿ ವಿಶೇಷ ಆಸಕ್ತಿಯಿರುವ ಇವರು ಕನ್ನಡದ ನಾಟಕಗಳನ್ನು ಅಮೆರಿಕದವರಿಗೆ ಪರಿಚಯಿಸಬೇಕೆಂಬ ನಿಟ್ಟಿನಲ್ಲಿ ಹಲವು ನಾಟಕಗಳಲ್ಲಿ ಅಭಿನಯಿಸಿದ್ದಾರೆ.

ಇವರು ಅಭಿನಯಿಸಿದ ಕೆ.ಎಸ್.ನ. ಅವರ ಕವನಾಧಾರಿತ ‘ಮೈಸೂರು ಮಲ್ಲಿಗೆ’ ನಾಟಕ ಮೆಚ್ಚುಗೆ ಗಳಿಸಿದೆ. ಉದ್ಯೋಗ, ಶಿಕ್ಷಣ ಅರಸಿ ಬೇರೆ ದೇಶಗಳಿಗೆ ವಲಸೆ ಹೋಗುವ ಕನ್ನಡಿಗರು ಕಾಲಾನಂತರದಲ್ಲಿ ಕನ್ನಡವನ್ನೇ ಮರೆತು ಬಿಡುವ ಸಂದರ್ಭದಲ್ಲಿ, ಸರಿತಾ ನವಲಿ ಅಪರೂಪದ ಕನ್ನಡ ಕಾಳಜಿ ಇಟ್ಟುಕೊಂಡು ಕನ್ನಡಪರ ಕೆಲಸ ಮಾಡುತ್ತಿರುವುದಕ್ಕೆ ಮೆಚ್ಚಲೇಬೇಕು. ಪ್ರತಿ ಸಲ ಭಾರತಕ್ಕೆ ಬಂದಾಗಲೂ ತೆಕ್ಕೆಗಟ್ಟಲೇ ಕನ್ನಡ ಸಾಹಿತ್ಯದ ಪುಸ್ತಕಗಳನ್ನು ಹೊತ್ತೊಯ್ಯುವ ಇವರು ಅಲ್ಲಿನ ಕನ್ನಡಿಗರಿಗೆ ಮಾದರಿ ಯಾಗಿದ್ದಾರೆ. ಅವರ ಈ ಕನ್ನಡಪ್ರೀತಿ ಎಂದಿಗೂ ಬತ್ತದಿರಲಿ.

ಎರಡು ಸಾವಿರಕ್ಕೂ ಹೆಚ್ಚಿನ ಕನ್ನಡ ಪುಸ್ತಕಗಳ ಸಂಗ್ರಹ ಸರಿತಾ ನವಲಿ ಅವರ ಪತಿ ಅಹೀಶ್ ಭಾರದ್ವಾಜ ನ್ಯೂಜೆರ್ಸಿಯ ಖಾಸಗಿ ಕಂಪನಿಯಲ್ಲಿ ಸಾಫ್ಟವೇರ್ ಇಂಜಿನಿಯರ್ ಆಗಿದ್ದು, ಅವರೂ ಕೂಡ ಲೇಖಕರು. ಇವರಿಬ್ಬರ ಕನ್ನಡ ಪುಸ್ತಕಗಳ ಮೇಲಿನ
ಪ್ರೀತಿ ನ್ಯೂಜೆರ್ಸಿಯ ಇವರ ಮನೆಯಲ್ಲಿ ಎರಡು ಸಾವಿರಕ್ಕೂ ಹೆಚ್ಚಿನ ಕನ್ನಡ ಸಾಹಿತ್ಯದ ಪುಸ್ತಕಗಳ ಸಂಗ್ರಹಕ್ಕೆ ಕಾರಣವಾಗಿದೆ. ಕನ್ನಡದ ಒಲವು ಮೂಡಿಸಲು ಕನ್ನಡ ಪುಸ್ತಕಗಳನ್ನು ಉಡುಗೊರೆಯಾಗಿ ನೀಡುವುದು, ಸ್ಪರ್ಧೆಗಳನ್ನು ಏರ್ಪಡಿಸಿ ಕನ್ನಡ ಪುಸ್ತಕಗಳನ್ನು ಬಹುಮಾನವಾಗಿ ನೀಡುತ್ತಿದ್ದಾರೆ.

ಸ್ಥಳೀಯ ಕನ್ನಡ ಸಂಘಗಳ ಕಾರ್ಯಕ್ರಮಗಳಲ್ಲಿ ಕನ್ನಡ ಪುಸ್ತಕ ಪ್ರದರ್ಶನ ನಡೆಸುವ, ಮಳಿಗೆಗಳನ್ನು ಹಾಕಿ ಆಸಕ್ತರಿಗೆ ಕನ್ನಡದ ಅರಿವು ಮೂಡಿಸುವ ಪ್ರಯತ್ನವನ್ನು ಮಾಡುತ್ತಾರೆ. ಮೇ 2019 ರಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ನಡೆಸಿದ ನಿಮ್ಮ ಮನೆಗೆ ನಮ್ಮ ಪುಸ್ತಕ ಕಾರ್ಯಕ್ರಮವನ್ನು ಅಂದಿನ ಅಧ್ಯಕ್ಷರಾಗಿದ್ದ ಡಾ.ವಸುಂಧರಾ ಭೂಪತಿ ಅವರ ನೇತೃತ್ವದಲ್ಲಿ ನ್ಯೂಜೆರ್ಸಿಯ ಇವರ ಮನೆಯಲ್ಲಿ ಹಮ್ಮಿಕೊಂಡಿದ್ದು ಇವರ ಕನ್ನಡ ಪ್ರೀತಿಗೆ ಸಾಕ್ಷಿ.