Saturday, 14th December 2024

ನಮಸ್ತೆ ಕಾಶಿ

Kashi

ಶಶಾಂಕ್ ಮುದೂರಿ

ಕಾಶಿಗೆ ಹೋದಾಗ ಅಲ್ಲಿನ ಪರಂಪರೆಯನ್ನು, ಸಂಸ್ಕೃತಿಯನ್ನು ತಿಳಿದುಕೊಳ್ಳಲು ಪ್ರವಾಸಿಗ ಮನವರಿತು ಸಹಕರಿಸುವ ಸ್ಥಳೀಯ ಮಾರ್ಗ ದರ್ಶಿ ತೀರಾ ಅಗತ್ಯ. ಕಾಶಿಯಲ್ಲೇ ಹುಟ್ಟಿಬೆಳೆದು, ಅಲ್ಲಿಗೆ ಬರುವ ಹೊರರಾಜ್ಯದವರಿಗೆ ಸೂಕ್ತ ಮಾರ್ಗದರ್ಶನ ನೀಡುವ ಉತ್ಸಾಹಿಯೊಬ್ಬರ ಪರಿಚಯ ಇಲ್ಲಿದೆ.

ಒಮ್ಮಿಂದೊಮ್ಮೆಗೇ ಎಲ್ಲರಿಗೂ ಕಾಶಿ ಯಾತ್ರೆಯ ಆಸೆಯಾಗಿದೆ, ವಾರಾಣಾಸಿ ಪ್ರವಾಸ ಮಾಡುವ ಉತ್ಸಾಹ ಬಂದಿದೆ. ಕಳೆದ ಒಂದು ವಾರದಿಂದ ಕಾಶಿಯ ಕುರಿತ ಚರ್ಚೆ ಎಲ್ಲೆಡೆ ನಡೆಯುತ್ತಿದೆ. ‘ಮೊದಲು ನೋಡಿದ್ದೆವು, ಈಗ ಮತ್ತೊಮ್ಮೆ ಕಾಶಿಗೆ ಹೋಗಬೇಕೆನಿಸಿದೆ, ಅಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯ ಗಳನ್ನು ನೋಡಬೇಕೆನಿಸಿದೆ’ ಎಂದು ಮಾತನಾಡುತ್ತಾ, ಹಲವರು ಈಗ ಕಾಶಿಗೆ ಹೋಗುವ ಸನ್ನಾಹದಲ್ಲಿದ್ದಾರೆ.

ಇದಕ್ಕೆಲ್ಲಾ ಕಾರಣ, ಈ ವಾರ ಉದ್ಘಾಟನೆಗೊಂಡ ಕಾಶಿ ಕಾರಿಡಾರ್ (ಮೊದಲ ಹಂತ). ಮೊನ್ನೆ ಮೊನ್ನೆ ತನಕ ಕಾಶಿ ವಿಶ್ವನಾಥನ ದೇಗುಲವನ್ನು ನೋಡಲು ಬರುವವರಿಗೆ ಸುಮಾರು ೫,೦೦೦ ಚದರ ಅಡಿಯ ವಿಸ್ತೀರ್ಣದ ಆವರಣದಲ್ಲಿ ದೇಗುಲ, ಗೋಪುರ, ಪೌಳಿ ಎಲ್ಲವನ್ನೂ ನೋಡುವ ಅನಿವಾರ್ಯತೆ. ಇತಿಹಾಸದಲ್ಲಿ ನಡೆದ ಕೆಲವು ವಿದ್ಯಮಾನಗಳಿಂದಾಗಿ, ಇಕ್ಕಟ್ಟಾದ ಒಂದು ಜಾಗದಲ್ಲಿ ಕಾಶಿ ವಿಶ್ವನಾಥ ದೇಗುಲದ ಮರುನಿರ್ಮಾಣ ನಡೆದದ್ದ ರಿಂದಾಗಿ, ಅಷ್ಟು ಪುಟ್ಟ ಜಾಗದಲ್ಲಿ ವಿಶ್ವೇಶ್ವರನ ದರ್ಶನ ಮಾಡುವ ಅವಕಾಶ.

1780ರಲ್ಲಿ ಇಂದೋರಿನ ರಾಣಿ ಅಹಲ್ಯಾ ಬಾಯಿ ಹೋಳ್ಕರ್ ಅವರು ಅಷ್ಟು ಜಾಗವನ್ನು ಖರೀದಿಸಿ ಮಧ್ಯಮ ಗಾತ್ರದ ವಿಶ್ವನಾಥನ ದೇಗುಲವನ್ನು ನಿರ್ಮಿಸಿದ ನಂತರ, ಅದೇ ಸ್ಥಿತಿ ಕಳೆದ 240 ವರ್ಷಗಳಿಂದ ಮುಂದು ವರಿದಿತ್ತು.

ಹೊಸತನ ತುಂಬಿದ ಕಾಶಿ 
ಈಗ ಕಾಶಿಯಲ್ಲಿ, ದೇಗುಲದ ಸುತ್ತಮುತ್ತ ಸುಮಾರು 500000 ಚದರ ಅಡಿ ವಿಸ್ತೀರ್ಣದ ಆವರಣವನ್ನು, ಹೊಸ ಕಟ್ಟಡಗಳನ್ನು, ಸೌಲಭ್ಯಗಳನ್ನು ನಿರ್ಮಾಣ ಮಾಡಲಾಗಿದೆ. ಮೊದಲ ಹಂತದ ‘ಕಾಶಿ ಕಾರಿಡಾರ್’ ಇದೇ ೧೩ರಂದು ಲೋಕಾರ್ಪಣೆಗೊಂಡಿದ್ದು, ಪವಿತ್ರ ಗಂಗಾ ನದಿಯಿಂದ ನೇರವಾಗಿ ಕಾಶಿಯ ವಿಶ್ವನಾಥನ ದೇಗುಲಕ್ಕೆ ಸಾಗಲು ವಿಶಾಲವಾದ ಪಥವನ್ನು ಹೊಂದಿದೆ.

ಯಾತ್ರಿಗಳಿಗೆ ಸೌಲಭ್ಯಗಳಿವೆ. ಇನ್ನಷ್ಟು ಹೊಸ ಕಟ್ಟಡಗಳು, ಸೌಲಭ್ಯಗಳು, ಸೌಕರ್ಯಗಳು ನಿರ್ಮಾಣದ ಹಂತದಲ್ಲಿವೆ. ಎಲ್ಲಕ್ಕೂ ಮುಖ್ಯ ಎನಿಸುವು ದೆಂದರೆ, ಗಂಗಾನದಿಯಿಂದ ವಿಶ್ವನಾಥ ದೇಗುಲಕ್ಕೆ ನಿರ್ಮಾಣಗೊಂಡಿರುವ ನೇರ ದಾರಿ, ಗಂಗಾ ನದಿಯಲ್ಲಿ ಸ್ನಾನ ಮಾಡಲು ಅನುಕೂಲ ಎನಿಸುವ ಹೊಸ ಸೌಲಭ್ಯಗಳು ಇವೆಲ್ಲವೂ ಕಾಶಿಯ ನೋಟದ ಪರಿಕಲ್ಪನೆಯನ್ನೇ ಬದಲಿಸಿವೆ. ಆದ್ದರಿಂದಲೇ, ಈಗ ಕಾಶಿಯನ್ನು ನೋಡಬಯಸುವವರ ಸಂಖ್ಯೆ ಒಮ್ಮೆಗೇ ಹತ್ತುಪಟ್ಟು ಹೆಚ್ಚಳಗೊಂಡಿದೆ.

ಸ್ಥಳೀಯ ಜ್ಞಾನದ ಸದುಪಯೋಗ

ಕರ್ನಾಟಕದಿಂದ ಅಥವಾ ದಕ್ಷಿಣ ಭಾರತದಿಂದ ಹೋಗುವ ಪ್ರವಾಸಿಗರಿಗೆ ಉತ್ತರ ಭಾರತದಲ್ಲಿ ಸಣ್ಣ ಮಟ್ಟದ ಭಾಷಾ ಸಮಸ್ಯೆ ಎದುರಾಗಬಹುದು. ಅದನ್ನಾದರೂ ಸರಿಹೊಂದಿಸಿಕೊಳ್ಳಬಹುದು, ಆದರೆ ಕಾಶಿಯ ಸ್ಥಳೀಯ ಪರಂಪರೆ, ಸಂಸ್ಕೃತಿ, ಇತಿಹಾಸ, ಪದ್ಧತಿ, ಸಾಮಾಜಿಕ ಹಿನ್ನೆಲೆಯನ್ನು ತಿಳಿಯುವುದು ದೂರದ ನಮ್ಮ ರಾಜ್ಯ ದವರಿಗೆ ತುಸು ಕಷ್ಟವೇ. ಆಗ ಸ್ಥಳೀಯರು ಯಾರಾದರೂ ಜತೆಯಲ್ಲಿದ್ದು, ಅಲ್ಲಿನ ಸಾಂಸ್ಕೃತಿಕ ಪರಂಪರೆ ಯನ್ನು ಆಳವಾಗಿ ಅರಿತವರು ಕಾಶಿಯ ದರ್ಶನ ಮಾಡಿಸಿದರೆ, ಅದೆಷ್ಟೋ ಲಾಭವಾದೀತು.

ಅಂತಹ ಒಬ್ಬರು ಪ್ರವಾಸೀ ಮಾರ್ಗದರ್ಶಿ ಎಂದರೆ ಕಾಶಿಯವರೇ ಆದ ದಿನೇಶ್ ಆರ್. ಮಿಶ್ರಾ. ಅವರು ನುರಿತ ಮಾರ್ಗದರ್ಶಿ ಮಾತ್ರವಲ್ಲ, ವಾರಣಾಸಿ, ಕಾಶಿ, ಪ್ರಯಾಗ ಮೊದಲಾದ ಪ್ರದೇಶಗಳಿಗೆ ಹೋಗಬಯಸುವವರಿಗೆ ಪ್ರವಾಸಿ ಸೌಲಭ್ಯಗಳನ್ನೂ ಏರ್ಪಡಿಸುವ ಅನುಭವಿ. ದಿನೇಶ್ ಆರ್.ಮಿಶ್ರಾ ಅವರು ಕಾಶಿಯಲ್ಲೇ ಹುಟ್ಟಿ ಬೆಳೆ ದವರು. ಎಂಎಸ್‌ಸಿ ಪದವೀಧರರು. ಕಾಶಿಗೆ ಬರುವ ಯಾತ್ರಿಕರಿಗೆ, ಪ್ರವಾಸಿಗರಿಗೆ, ಸಂಶೋಧಕರಿಗೆ ಸ್ಥಳೀಯ ಪರಂಪರೆಯನ್ನು, ಇತಿಹಾಸವನ್ನು ಪರಿಚಯಿಸುವ ನಿಟ್ಟಿನಲ್ಲಿ, ಉತ್ಸಾಹಿ ಯುವಕರ ಪಡೆಯನ್ನೇ ಕಟ್ಟಿದ್ದಾರೆ. ಹೊರರಾಜ್ಯಗಳಿಂದ ಬರುವ ಪ್ರವಾಸಿಗರಿಗೆ, ಯಾತ್ರಿಗಳಿಗೆ ಸ್ಥಳೀಯ ಸಂಸ್ಕೃತಿಯ ಪರಿಚಯ ಮಾಡಿಕೊಡಬೇಕು ಎನ್ನುವ ಸದುದ್ದೇಶದಿಂದ ರೂಪಿಸಿರುವ ಇವರ ಪ್ರವಾಸಿ ಸಂಸ್ಥೆಯು, ವ್ಯವಹಾರಿಕ ಲಾಭಕ್ಕಿಂತ
ಮುಖ್ಯವಾಗಿ ಶ್ರದ್ಧೆಯನ್ನು ತನ್ನ ಧ್ಯೇಯವನ್ನಾಗಿಸಿಕೊಂಡಿದೆ.

ಸಹಾಯ ಮಾಡುವ ತುಡಿತ
ಯಾತ್ರಿಕರಿಗೆ ಈಗಾಗಲೇ ಉತ್ತಮ ಸೇವೆಯನ್ನು ಒದಗಿಸುತ್ತಿರುವ ದಿನೇಶ್ ಆರ್. ಮಿಶ್ರಾ ಅವರು ‘ನಮಸ್ತೇ ಕಾಶಿ ಟೂರ‍್ಸ್ ಅಂಡ್ ಟ್ರಾವೆಲ್ಸ್’ ಸಂಸ್ಥೆಯನ್ನು ಉತ್ಸಾಹದಿಂದ ನಡೆಸುತ್ತಿದ್ದಾರೆ. ‘ಇಂತಹ ದೊಂದು ಸಂಸ್ಥೆ ಕಟ್ಟಬೇಕೆಂದು, ಜತೆಗೆ ಎಲ್ಲಾ ಪ್ರವಾಸಿಗರಿಗೂ ಉತ್ತಮ ಸೇವೆ ನೀಡಬೇಕೆಂದು ನಿಮ್ಮ
ಮನಸ್ಸಿನಲ್ಲಿ ಹುಟ್ಟಿದ್ದಾದರೂ ಹೇಗೆ?’ ಎಂದು ಅವರನ್ನು ಪ್ರಶ್ನಿಸಿದಾಗ, ಅವರು ನೀಡಿದ ಉತ್ತರ ಕುತೂಹಲಕಾರಿ.

‘ನಾನು ಕಾಶಿಯಲ್ಲೇ ಹುಟ್ಟಿ ಬೆಳೆದವನು. ಈ ಊರಿನ ಇಂಚು ಇಂಚು ನನಗೆ ಪರಿಚಿತ, ಜತೆಗೆ ಇಲ್ಲಿನ ಸಂಸ್ಕೃತಿ ಮತ್ತು ಪದ್ಧತಿಗಳು ಸಹ ನನಗೆ ಮೊದಲಿ ನಿಂದಲೂ ಪರಿಚಿತ. ಹೊರರಾಜ್ಯಗಳಿಂದ, ಅದರಲ್ಲೂ ದಕ್ಷಿಣ ಭಾರತದಿಂದ ಬರುವ ಪ್ರವಾಸಿಗರು ಮತ್ತು ಯಾತ್ರಿಕರು ಇಲ್ಲಿ ಪೂಜೆ ಮೊದಲಾದ
ಕೈಂಕರ್ಯಗಳನ್ನು ನೆರವೇರಿಸಿದರೂ, ಇಲ್ಲಿನ ಸಂಸ್ಕೃತಿಯ ಪೂರ್ಣ ಪರಿಚಯ ಮಾಡಿಕೊಳ್ಳಲು ಕೆಲವೊಮ್ಮೆ ವಿಫಲರಾಗುತ್ತಾರೆ. ಅದಕ್ಕೆ ಮುಖ್ಯ ಕಾರಣ ಭಾಷೆ ಮತ್ತು ಸೂಕ್ತ ಮಾರ್ಗದರ್ಶಿಯ ಕೊರತೆ. ಆ ಕೊರತೆಯನ್ನು ತುಂಬಲೆಂದೇ, ನಮಸ್ತೆ ಕಾಶಿ ಎಂಬ ಪ್ರವಾಸಿ ಸಂಸ್ಥೆಯನ್ನು ಕಟ್ಟಿದೆ.

ಇಲ್ಲಿ ಜನರಿಗೆ ಸೇವೆ ಮಾಡುವ ಮನೋಭಾವವೂ ಸೇರಿರುವುದರಿಂದ, ಹಲವು ಜನ ನಮ್ಮ ಸಂಸ್ಥೆಯನ್ನು ಇಷ್ಟಪಟ್ಟಿದ್ದಾರೆ, ನಾವು ನಡೆಸುವ
ಯಾತ್ರೆಯನ್ನು ಇಷ್ಟಪಟ್ಟಿದ್ದಾರೆ’ ಎಂದರು ವಿನಮ್ರರಾಗಿ ದಿನೇಶ್ ಆರ್.ಮಿಶ್ರಾ. ನಮಸ್ತೆ ಕಾಶಿ ಟೂರ‍್ಸ್ ಅಂಡ್ ಟ್ರಾವೆಲ್ಸ್ ಅವರು ನಡೆಸುವ ಪ್ರವಾಸಗಳು ನಮ್ಮ ಸಂಸ್ಕೃತಿಯ ಪರಿಚಯ ಮಾಡಿಕೊಡುವತ್ತ ಹೆಚ್ಚು ಗಮನ ವಹಿಸಿವೆ. ಕಾಶಿ, ಅಯೋಧ್ಯಾ, ಪ್ರಯಾಗರಾಜ್, ಗಯಾ – ಈ ಸರ್ಕ್ಯೂಟ್ ಹೆಚ್ಚು ಜನಪ್ರಿಯ.

ಇದರಲ್ಲಿ ಮೂರು, ನಾಲ್ಕು ದಿನಗಳ ಪ್ಯಾಕೇಜ್ ಇದೆ. ಜತೆಗೆ, ಅಯೋಧ್ಯಾ, ಚಿತ್ರಕೂಟ ಮತ್ತು ರಾಮಾಯಣಕ್ಕೆ ಸಂಬಂಧಿಸಿದ ಇತರ ಸ್ಥಳಗಳ ಪ್ರವಾಸ ವನ್ನೂ ಅವರು ನಡೆಸಿಕೊಡುತ್ತಾರೆ. ಇಂತಹ ಪ್ರವಾಸಗಳನ್ನು ಏರ್ಪಡಿಸುವ ಮೂಲಕ ದಿನೇಶ್ ಆರ್.ಮಿಶ್ರಾ  ಅವರು, ನಮ್ಮ ದೇಶದ ಪರಂಪರೆಯ ಬಗ್ಗೆ ತಮಗೆ ಇರುವ ಗೌರವವನ್ನು ಬಿಂಬಿಸಿದ್ದಾರೆ ಎಂದೇ ಹೇಳಬಹುದು.

ದಿನೇಶ್ ಆರ್.ಮಿಶ್ರಾ ಸಂಪರ್ಕ:
+೯೧೮೧೬೯೨೧೯೨೨೬, +೯೧೯೩೨೦೩೬೨೬೩೪