Friday, 13th December 2024

ಭಾರತೀಯರ ಸ್ವಾಭಿಮಾನದ ಪ್ರತೀಕ ಲಾಲ್ ಬಹದ್ದೂರ್ ಶಾಸ್ತ್ರಿ

ಇದೇ ಅಕ್ಟೋಬರ್ 2ರಂದು, ಭಾರತದ ಇಬ್ಬರು ಮಹಾನ್ ನಾಯಕರ ಜನ್ಮದಿನ. ಒಬ್ಬರು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು. ಮತ್ತೊಬ್ಬರು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರು. ದೇಶ ಕಂಡ ಅತ್ಯಂತ ಸರಳ ಸಜ್ಜನಿಕೆಯ ಪ್ರಧಾನಿ ಶಾಸ್ತ್ರೀಜಿ. ಅವರು ಪ್ರಧಾನಿ ಯಾಗಿದ್ದ ಸಮಯದಲ್ಲಿ ಪಾಕಿಸ್ತಾನ ದೊಂದಿಗೆ ಯುದ್ಧ ನಡೆಸುವ ಅನಿವಾರ್ಯತೆ ಒದಗಿ ಬಂತು. ಅದರಲ್ಲಿ ಭಾರತಕ್ಕೆ ಜಯ ದೊರಕಿಸಿ ಕೊಟ್ಟ ಹಿರಿಮೆ ಶಾಸ್ತ್ರಿಯವರದ್ದು. ಆದರೆ, ಅದರ ಮುಂದು ವರಿಕೆಯ ಭಾಗವಾಗಿ, ಮಾತುಕತೆಗಾಗಿ ತಾಷ್ಕೆೆಂಟ್‌ಗೆ ಹೋಗಿದ್ದಾಗ, ಅವರ ದೇಹಾಂತ್ಯ ವಾಯಿತು. ಸಂಶಯಾಸ್ಪದ ಸನ್ನಿವೇಶಗಳಲ್ಲಿ ನಡೆದ ಆ ಸಾವು ಮತ್ತು ಅದರ ಹಿನ್ನೆಲೆಯಲ್ಲಿ ಎದ್ದ ಪ್ರಶ್ನೆಗಳಿಗೆ ಇಂದಿಗೂ ಸ್ಪಷ್ಟ ಉತ್ತರ ದೊರಕಿಲ್ಲ. ಸರಳಾತಿ ಸರಳ ಪ್ರಧಾನಿಯಾಗಿದ್ದ ಶಾಸ್ತ್ರಿಯವರು ಜನರ ಪ್ರೀತಿ ಗಳಿಸಿದ್ದರು. ಅವರ ಬದುಕೇ ಒಂದು ತೆರದ ಪುಸ್ತಕ. ಅದರ ಕೆಲವು ಅಧ್ಯಾಯಗಳ ಅವಲೋ ಕನ ಮಾಡೋಣ. ಆ ಮೂಲಕ ದೇಶದ ಮಹಾನ್ ಚೇತನಕ್ಕೆ ನಮನ ಸಲ್ಲಿಸೋಣ.

ಎಸ್.ಉಮೇಶ್ ಮೈಸೂರು

ಕೆಲವು ವ್ಯಕ್ತಿಗಳು ಬಾಳಿ ಬದುಕುವ ರೀತಿಯೇ ಭಿನ್ನವಾಗಿರುತ್ತದೆ. ಕೇವಲ ಅವರ ಒಂದು ಸ್ಮರಣೆಯಷ್ಟೇ ನಮ್ಮಲ್ಲಿ ಹೊಸ ಹುಮ್ಮಸ್ಸು, ಚೈತನ್ಯ ಮತ್ತು ಲವಲವಿಕೆಯನ್ನು ಮೂಡಿಸುತ್ತದೆ. ಅವರ ಧೀಮಂತ ವ್ಯಕ್ತಿತ್ವ
ನಮ್ಮಲ್ಲಿರುವ ಆತ್ಮಶಕ್ತಿಯನ್ನು ಬಡಿದೆಬ್ಬಿಸುತ್ತದೆ. ಅವರು ತಮ್ಮ ಜೀವಿತಾವಧಿಯಲ್ಲಷ್ಟೇ ಅಲ್ಲ, ಶತಶತಮಾನಗಳ ಕಾಲ ಜನರಲ್ಲಿ ಸ್ಪೂರ್ತಿಯ ಸೆಲೆಯನ್ನು ಉಕ್ಕಿಸುತ್ತಲೇ ಇರುತ್ತಾರೆ. ಅಂತಹ ಧೀಮಂತ ವ್ಯಕ್ತಿಗಳಲ್ಲಿ ಲಾಲ್ ಬಹದ್ದೂರ್ ಶಾಸ್ತ್ರೀಜಿ ಒಬ್ಬರು.

ಹಾಗೆ ನೋಡಿದರೆ ಬಡತನದಲ್ಲೇ ಹುಟ್ಟಿ, ಬೆಳೆದು, ಬದುಕು ಸೆವೆಸಿ, ಬಡತನದಲ್ಲೇ ನಿಧನರಾದ ಭಾರತದ ಏಕೈಕ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ. ಅವರು ಹುಟ್ಟಿದ್ದು ಬೆಳೆದದ್ದು ಉತ್ತರಪ್ರದೇಶದ ವಾರಾಣಸಿಯ ಮೊಘಲ್ ಸರಾಯ್‌ನಲ್ಲಿ. ತಂದೆ ಶಾರದಾ ಪ್ರಸಾದ್.

ವೃತ್ತಿಯಲ್ಲಿ ಶಾಲಾ ಮೇಷ್ಟ್ರು. ನಂತರ ರೆವೆನ್ಯೂ ಇಲಾಖೆಯಲ್ಲಿ ಗುಮಾಸ್ತರಾಗಿದ್ದವರು. ಶಾಸ್ತ್ರೀಜಿಯವರು ಒಂದೂವರೆ ವರ್ಷವಿರು ವಾಗಲೇ ತಂದೆಯನ್ನು ಕಳೆದುಕೊಂಡರು. ಅವರ ತಾಯಿ ರಾಮ್ ದುಲಾರಿ. ತನ್ನ ತವರಿನಲ್ಲೇ ಮಕ್ಕಳನ್ನು ಸಾಕಬೇಕಾಯಿತು. ಮನೆಯಿಂದ ಶಾಲೆಗೆ ಹೋಗಬೇಕಾದರೆ ಶಾಸ್ತ್ರೀಜಿಯವರು ಗಂಗಾ ನದಿಯನ್ನು ದಾಟಬೇಕಾಗಿತ್ತು. ಹಾಗೆ ದಾಟಲು ದೋಣಿಯೇನೋ ಇತ್ತು. ಆದರೆ ಅಂಬಿಗನಿಗೆ ಹಣ ಕೊಡಲು ಶಾಸ್ತ್ರೀಜಿ ಯವರ ಬಳಿ ಹಣವಿರುತ್ತಿರಲಿಲ್ಲ. ಹಾಗಾಗಿ ನಿತ್ಯ ಈಜಿ ಒಂದು ದಡದಿಂದ ಮತ್ತೊೊಂದು ದಡಕ್ಕೆ ಹೋಗು ತ್ತಿದ್ದರು. ಶಾಸ್ತ್ರೀಜಿಯವರ ಕಾಲೇಜು ವಿದ್ಯಾಭ್ಯಾಸವೆಲ್ಲಾ ಮೊಘಲ್‌ಸರಾಯ್‌ನ ಪೂರ್ವ ಕೇಂದ್ರ ರೈಲ್ವೆ ಕಾಲೇಜಿನಲ್ಲಿ. ಪದವಿ ಕಾಶಿ ವಿದ್ಯಾಪೀಠದಲ್ಲಿ. ಶಾಸ್ತ್ರೀಜಿಯವರ ಮೂಲ ಹೆಸರು ಲಾಲ್ ಬಹದ್ದೂರ್ ಶ್ರೀವಾತ್ಸವ. ಆದರೆ ಶ್ರೀವಾತ್ಸವ ಎನ್ನುವುದು ಜಾತಿ ಸೂಚಕ ಎಂದು ಶಾಸ್ತ್ರೀಜಿಯವರು ಅದನ್ನು ತಮ್ಮ ಹೆಸರಿನಿಂದ ತೆಗೆದುಬಿಟ್ಟರು.

ಅವರು ಪದವಿ ಮುಗಿಸಿದಾಗ ಕಾಶಿ ವಿದ್ಯಾಪೀಠ ಅವರಿಗೆ ನೀಡಿದ ಬಿರುದು ‘ಶಾಸ್ತ್ರಿ’ ಎಂದು. ಮುಂದೆ ಅದು ಅವರ ಹೆಸರಿನಲ್ಲೇ ಸೇರಿಕೊಂಡಿತು. ಮೊದಲಿಗೆ ಶಾಸ್ತ್ರೀಜಿಯವರು ಗುರುನಾಕರಿಂದ ಪ್ರಭಾವಿತರಾಗಿದ್ದರು. ಅವರ ಸಂದೇಶಗಳನ್ನು ನಿತ್ಯ ಓದುತ್ತಿದ್ದರು. 1915ರಲ್ಲಿ ವಾರಾಣಸಿಯಲ್ಲಿ ಗಾಂಧೀಜಿಯವರ ಭಾಷಣ ಕೇಳಿ ಆಕರ್ಷಿತರಾದರು. ಅದು ಅವರ ಜೀವನದ ದಿಕ್ಕನ್ನೇ ಬದಲಿಸಿಬಿಟ್ಟಿತು.

ದೇಶಸೇವೆಗೆ ಮನಸ್ಸು ಹಾತೊರೆಯಲಾರಂಭಿಸಿತು. 1921ರಲ್ಲಿ ಗಾಂಧೀಜಿ ಅಸಹಕಾರ ಚಳುವಳಿ ಕೈಗೊಂಡಾಗ ಅದರಲ್ಲಿ ಸಕ್ರಿಯ ವಾಗಿ ಪಾಲ್ಗೊೊಂಡರು. ಶಾಸ್ತ್ರೀಜಿ ಆಗಿನ್ನೂ ಹದಿಹರಯದ ಹುಡುಗ. ಪೊಲೀಸರು ಶಾಸ್ತ್ರೀಜಿಯವರನ್ನು ಬಂಧಿಸಿದರೂ ಚಿಕ್ಕ ಹುಡುಗ ಎಂದು ಬುದ್ದಿವಾದ ಹೇಳಿ ಮನೆಗೆ ಕಳುಹಿಸಿಕೊಟ್ಟಿದ್ದರು.
1964ರಲ್ಲಿ ಎರಡು ದಶಕಗಳ ಕಾಲ ಭಾರತವನ್ನು ಮುನ್ನಡೆಸಿದ್ದ ಪಂಡಿತ್ ಜವಾಹರಲಾಲ್ ನೆಹರೂ ಯುಗಾಂತ್ಯವಾಗಿತ್ತು. ಆ ಕ್ಷಣಕ್ಕೆ ನೆಹರೂ ನಂತರ ಯಾರು? ಎನ್ನುವ ಬಹು ದೊಡ್ಡ ಪ್ರಶ್ನೆ ದೇಶದ ಮುಂದಿತ್ತು. ದೇಶ ಹೊಸ ನಾಯಕನ ನಿರೀಕ್ಷಣೆಯಲ್ಲಿತ್ತು.

ಆಗ ಪ್ರಧಾನ ಮಂತ್ರಿಯಾದವರು ಲಾಲ್ ಬಹದ್ದೂರ್ ಶಾಸ್ತ್ರೀಜಿ. ಹೋಮ್‌ಲೆಸ್ ಹೋಮ್ ಮಿನಿಸ್ಟರ್ ಶಾಸ್ತ್ರೀಜಿಯವರು ಏಕಾಏಕಿ ಪ್ರಧಾನಿ ಹುದ್ದೆಗೆ ಏರಿದವರಲ್ಲ. ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತ ರಾಗಿ ಹಂತ ಹಂತವಾಗಿ ಬೆಳೆದು ಬಂದವರು. ನೆಹರೂರವರು ಪ್ರಧಾನ ಮಂತ್ರಿಗಳಾಗಿದ್ದಾಗ ಶಾಸ್ತ್ರೀಜಿಯವರು ಉತ್ತರ ಪ್ರದೇಶದ ಕಾಂಗ್ರೆಸ್‌ನ ಸಂಸದೀಯ ಕಾರ್ಯದರ್ಶಿ ಗಳಾಗಿದ್ದರು. ನಂತರ ಉತ್ತರ ಪ್ರದೇಶದ ಸಾರಿಗೆ ಸಚಿವರಾದರು. 1951ರಲ್ಲಿ ಅಖಿಲ ಭಾರತ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಆದರೆ ಶಾಸ್ತ್ರೀಜಿ ರೈಲ್ವೆ ಮಂತ್ರಿಗಳಾಗಿ, ಗೃಹ ಮಂತ್ರಿಗಳಾಗಿ ನಂತರ ಪ್ರಧಾಮಂತ್ರಿಗಳಾಗಿ ದೇಶವನ್ನು ಮುನ್ನಡೆಸಿದ ಪರಿ ನಿಜಕ್ಕೂ ಅದ್ಭುತ. ಕೇಂದ್ರ ಸಚಿವರಾದಾಗಲೂ ಮತ್ತು ಪ್ರಧಾನಮಂತ್ರಿಯಾದಾಗಲೂ ಶಾಸ್ತ್ರೀಜಿಯವರು ಬಡವರಾಗಿಯೇ ಉಳಿದಿದ್ದರು. ಕೇಂದ್ರದಲ್ಲಿ ಗೃಹ ಸಚಿವ ರಾಗಿದ್ದರೂ ಶಾಸ್ತ್ರೀಜಿಯವರಿಗೆ ತಮ್ಮದು ಎಂಬ ಒಂದು ಸ್ವಂತ ಮನೆಯಿರಲಿಲ್ಲ. ಹಾಗಾಗಿ ಎಲ್ಲರೂ ಅವರನ್ನು ‘ಹೋಮ್‌ಲೆಸ್ ಹೋಮ್ ಮಿನಿಸ್ಟರ್’ ಎಂದೇ ಕರೆಯುತ್ತಿದ್ದರು.

ಶಾಸ್ತೀಜಿ ಪ್ರಧಾನಮಂತ್ರಿಗಳಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ಅವರಿಗೆ ಎರಡು ಪ್ರಮುಖ ಸವಾಲುಗಳು ಎದುರಾದವು. ಮೊದಲನೆಯದು ಆಹಾರ ಸಮಸ್ಯೆ. ಎರಡನೆಯದು ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧ. ಆ ಎರಡೂ ಸಮಸ್ಯೆಗಳನ್ನು ಶಾಸ್ತ್ರೀಜಿ ಏಕಕಾಲಕ್ಕೆ ಯಶಸ್ವಿಯಾಗಿ ಎದುರಿಸಿ ದ್ದರು. 1965ರ ಯುದ್ಧದ ಸಮಯದಲ್ಲಿ ಭಾರತದಲ್ಲಿ ಆಹಾರದ ಕೊರತೆ ಎದುರಾಯಿತು. ವಾಸ್ತವದಲ್ಲಿ ಭಾರತ ಅಮೆರಿಕಾದಿಂದ ಗೋಧಿಯನ್ನು ಆಮದು ಮಾಡಿಕೊಳ್ಳುತ್ತಿತ್ತು.

ಯುದ್ಧದ ಸಮಯದಲ್ಲಿ ಅಮೆರಿಕದ ಅಧ್ಯಕ್ಷ ಜಾನ್ಸನ್ ಪಾಕಿಸ್ತಾನದೊಂದಿ ಗಿನ ಯುದ್ಧವನ್ನು ನಿಲ್ಲಿಸುವಂತೆ ತೀವ್ರ ಒತ್ತಡ ಹಾಕಿದರು. ಆದರೆ ಶಾಸ್ತ್ರೀಜಿ ಆ ಬೆದರಿಕೆ ಸ್ವರೂಪದ ಒತ್ತಡಕ್ಕೆ ಬಗ್ಗಲಿಲ್ಲ. ಆಗ ಅಮೆರಿಕ ಅಧ್ಯಕ್ಷರು ಭಾರತಕ್ಕೆ ಗೋಧಿ ಕಳುಹಿಸುವುದನ್ನು ನಿಲ್ಲಿಸಿಬಿಟ್ಟರು. ಆದರೆ ಶಾಸ್ತ್ರೀಜಿ ಯವರು ಎದೆಗುಂದಲಿಲ್ಲ. ‘ನೀವು ಕಳುಹಿಸುವ ಗೋಧಿಯನ್ನ ನಮ್ಮ ದೇಶದ ಹಂದಿಗಳೂ ತಿನ್ನುವುದಿಲ್ಲ. ನಿಮ್ಮ ಗೊಡ್ಡು ಬೆದರಿಕೆಗೆ ನಾವು ಬಗ್ಗುವುದೂ ಇಲ್ಲ’ ಎಂಬ ದಿಟ್ಟ ಉತ್ತರ ನೀಡಿದರು. ದೇಶದ ಆಹಾರ ಸಮಸ್ಯೆಯನ್ನು ನೀಗಿಸಲು ವಾರಕ್ಕೆ ಒಂದು ದಿನ ಒಂದು ಹೊತ್ತು ಉಪವಾಸ ಮಾಡುವಂತೆ ದೇಶದ ಜನರಿಗೆ ಕರೆ ನೀಡಿದರು. ‘ಒಂದು ಹೊತ್ತು ಊಟವಿಲ್ಲದಿದ್ದರೂ ಚಿಂತೆಯಿಲ್ಲ. ಆದರೆ ದೇಶದ ಗೌರವ ಮತ್ತು ಸ್ವಾಭಿಮಾನವನ್ನು ಬಿಟ್ಟು ಮತ್ತೊೊಂದು ದೇಶದ ಬಳಿ ಭಿಕ್ಷೆ ಬೇಡುವುದಿಲ್ಲ’ ಎಂಬ ಕಠಿಣ ನಿಲುವು ತೆಗೆದುಕೊಂಡರು.

ಸೈನಿಕರಿಗೆ ರೈತರಿಗೆ ಜಯವಾಗಲಿ ಪ್ರಧಾನಿಗಳ ಕರೆಗೆ ಇಡೀ ದೇಶದಲ್ಲಿ ಅಭೂತಪೂರ್ವ ಸ್ಪಂದನೆ ದೊರೆ ಯಿತು. ಕೋಟ್ಯಾಾಂತರ ಜನ ಪ್ರತಿ ಸೋಮವಾರ ಉಪವಾಸ ಮಾಡಲು ಪ್ರಾರಂಭಿಸಿದರು. ಸ್ವತಃ ಪ್ರಧಾನಿ ಗಳೇ ತಮ್ಮ ಹೆಂಡತಿ ಲಲಿತಾ ಶಾಸ್ತ್ರೀಜಿಯವರಿಗೆ ಪ್ರತಿ ಸೋಮವಾರ ಸಂಜೆ ಅಡುಗೆ ಮಾಡಬಾರ ದೆಂದೂ, ಇಡೀ ಕುಟುಂಬ ಉಪವಾಸ ಮಾಡಬೇಕೆಂದೂ ತಾಕೀತು ಮಾಡಿದರು.

ಪಾಕಿಸ್ತಾನದೊಂದಿಗಿನ ಯುದ್ಧ ಮತ್ತು ದೇಶದಲ್ಲಿನ ಆಹಾರ ಕೊರತೆ ಈ ಎರಡನ್ನೂ ಶಾಸ್ತ್ರೀಜಿಯವರು ನಿರ್ವಹಿಸಿದ ರೀತಿ ದೇಶದ ಜನರಿಗೆ ಮೆಚ್ಚುಗೆಯಾಗಿತ್ತು. ಯುದ್ಧದ ನಡುವೆಯೇ ಅದೊಂದು ದಿನ
ಶಾಸ್ತ್ರೀಜಿಯವರು ತಮ್ಮ ಕ್ಷೇತ್ರ ಅಲಹಾಬಾದ್‌ಗೆ ತೆರಳಿದ್ದರು. ಅಲ್ಲಿನ ಹಳ್ಳಿಯೊಂದರಲ್ಲಿ ಭಾಷಣ ಮಾಡುತ್ತಾ ನಿರೀಕ್ಷಿತವಾಗಿ ‘ಜೈ ಜವಾನ್, ಜೈ ಕಿಸಾನ್’ ಎಂಬ ಘೋಷಣೆಯನ್ನು ಮೊಳಗಿಸಿದರು. ಅಲ್ಲಿದ್ದ ಜನ ರೋಮಾಂಚನಗೊಂಡು ಒಕ್ಕೊರಲಿನಿಂದ ದೀರ್ಘ ಕರತಾಡನದ ಮೂಲಕ ಆ ಘೋಷಣೆಯನ್ನು
ಸ್ವೀಕರಿಸಿದರು. ಶಾಸ್ತ್ರೀಜಿಯವರ ಆ ಘೋಷಣೆ ಅಂದಿನ ಪರಿಸ್ಥಿತಿಗೆ ಹಿಡಿದ ಕನ್ನಡಿಯಂತಿತ್ತು. ಮುಂದೆ ಅದು ದೇಶದ ಮೂಲೆ ಮೂಲೆಯಲ್ಲೂ ಅನುರಣಿಸಿತೊಡಗಿತು. ದೇಶದ ಘನತೆ ಮತ್ತು ಗೌರವದ ಪ್ರತೀಕವಾಯಿತು.
1965ರ ಭಾರತ-ಪಾಕೀಸ್ತಾನ ಯುದ್ಧದ ಸಮಯದಲ್ಲಿ ಶಾಸ್ತ್ರೀಜಿಯವರು ತೋರಿದ ಧೈರ್ಯ, ಮನಸ್ಥೈರ್ಯ ನಿಜಕ್ಕೂ ಅದ್ಭುತ. ಆಗಸ್‌ಟ್‌ 31, 1965. ಅಂದು ರಾತ್ರಿ ಭಾರತದ ರಕ್ಷಣಾಪಡೆಯ ಮುಖ್ಯಸ್ಥರು ‘ಪಾಕಿಸ್ತಾನಿ ಸೈನ್ಯ ಛಾಂಬ್ ಸೆಕ್ಟರ್’ನಲ್ಲಿ ಅಂತಾರಾಷ್ಟ್ರೀಯ ಗಡಿಯನ್ನು ದಾಟಿ ಬರುತ್ತಿದೆ.

ಈಗ ನಾವು ಅವರನ್ನು ತಡೆಯದಿದ್ದರೆ ಜಮ್ಮು-ಕಾಶ್ಮೀರ ಭಾರತದಿಂದ ಬೇರ್ಪಡುವ ಎಲ್ಲ ಸಾಧ್ಯತೆಗಳೂ ಇವೆ. ಈಗೇನು ಮಾಡುವುದು’ ಎಂಬ ಪ್ರಶ್ನೆಯನ್ನು ಪ್ರಧಾನಿಗಳ ಮುಂದೆ ಇಟ್ಟಿದ್ದರು. ಅದಕ್ಕೆ ಶಾಸ್ತ್ರಿಜಿಯವರು ‘ಕೂಡಲೆ ಸೇನಾದಾಳಿ ಮಾಡಿ. ಪಾಕಿಸ್ತಾನಿ ಸೈನ್ಯವನ್ನು ಹಿಮ್ಮೆಟ್ಟಿಸಿ. ವಾಯುಪಡೆಯ ವಿಮಾನಗಳಿಂದಲೂ ದಾಳಿ ನಡೆಸಿ. ಒಮ್ಮೆ ಆಕ್ರಮಣ ಪ್ರಾರಂಭಗೊಂಡರೆ ಲಾಹೋರ್‌ವರೆಗೂ ಮುನ್ನುಗ್ಗಿ. ಛಾಂಬ್ ಕೈಜಾರುವ ಮೊದಲು ಲಾಹೋರ್‌ನನ್ನು ವಶಪಡಿಸಿಕೊಳ್ಳಿ. ಜಗತ್ತಿಗೆ ಉತ್ತರ ಕೊಡುವ ಜವಾಬ್ದಾರಿ ನನ್ನದು. ಹೋರಾಟ ನಿಮ್ಮದು’ ಎಂಬ ಖಡಕ್ ಆದೇಶ ನೀಡಿದರು.

ನೇರ ದಿಟ್ಟ ಹೆಜ್ಜೆ

ಪ್ರಧಾನಿಗೆ ಆ ಸಮಯದಲ್ಲಿ ಭಾರತದ ರಕ್ಷಣೆಯಷ್ಟೇ ಮುಖ್ಯವಾಗಿತ್ತು. ಹಾಗಾಗಿ ಸಂಪುಟ ಸಭೆ ಕರೆಯಲಿಲ್ಲ, ಯಾರನ್ನೂ ಕೇಳಲಿಲ್ಲ. ವಿಶ್ವಸಂಸ್ಥೆಯ ಕದ ತಟ್ಟಲಿಲ್ಲ. ಅಂತಾರಾಷ್ಟ್ರೀಯ ಒತ್ತಡಗಳ ಬಗ್ಗೆಯೂ ಚಿಂತಿಸಲಿಲ್ಲ. ವಿಶ್ವದ ನಾಯಕರು ಏನನ್ನುತ್ತಾರೋ ಎಂದು ಯೋಚಿಸಲಿಲ್ಲ. ಏಳು ನಿಮಿಷದಲ್ಲಿ ಎದೆ ಝಲ್ಲೆನೆಸುವ ದಿಟ್ಟ ನಿರ್ಧಾರವೊಂದನ್ನು ತೆಗೆದುಕೊಂಡರು. ಶಾಸ್ತ್ರಿಜಿಯವರ ಈ ನಿರ್ಣಯವನ್ನು ಕಂಡು ಅವರ ಸಂಪುಟ ಸಹೋದ್ಯೋಗಿಗಳಷ್ಟೇ ಅಲ್ಲ, ಸೇನಾ ಮುಖ್ಯಸ್ಥರೂ ಆಶ್ಚರ್ಯಗೊಂಡಿದ್ದರು. ಯುದ್ಧದ
ಸಮಯದಲ್ಲಿ ಶಾಸ್ತ್ರೀಜಿಯವರು ಸೈನಿಕರನ್ನು ಹುರಿದುಂಬಿಸಿ ಆಡುತ್ತಿದ್ದ ಮಾತುಗಳು, ಭಾಷಣಗಳು, ತೆಗೆದುಕೊಳ್ಳುತ್ತಿದ್ದ ನಿರ್ಧಾಗಳು ಸೈನ್ಯಕ್ಕೆ ಭೀಮಬಲವನ್ನು ತಂದುಕೊಟ್ಟಿದ್ದವು.

ಶತ್ರುಗಳ ಎದೆಯಲ್ಲಿ ನಡುಕ ಹುಟ್ಟಿಸಿದ್ದವು. ಶಾಸ್ತ್ರೀಜಿಯವರ ದಿಟ್ಟ ನಿರ್ಧಾರ ಮತ್ತು ಸೈನ್ಯಕ್ಕೆ ನೀಡಿದ ಪರಮಾಧಿಕಾರದ ಪರಿಣಾಮ ಭಾರತ ಪಾಕಿಸ್ತಾನವನ್ನು ಬಗ್ಗು ಬಡಿದಿತ್ತು. ಆ ಯುದ್ಧದಲ್ಲಿ ಭಾರತ ಜಯಭೇರಿ ಬಾರಿಸಿತ್ತು. ಭಾರತೀಯ ಸೈನ್ಯ ಲಾಹೋರ್‌ನ ಹೆಬ್ಬಾಗಿಲಿಗೆ ಬಂದು ನಿಂತಿತ್ತು. ಮುಂದಿನ ಕೆಲವೇ ಗಂಟೆಗಳಲ್ಲಿ
ಪಾಕಿಸ್ತಾನದ ಪ್ರಮುಖ ನಗರಗಳು ಭಾರತದ ಕೈವಶವಾಗುವುದರಲ್ಲಿತ್ತು. ಅಷ್ಟರಲ್ಲಿ ಪಾಕಿಸ್ತಾನವು, ಅಮೆರಿಕಾ, ರಷ್ಯಾ ಮತ್ತು ವಿಶ್ವಸಂಸ್ಥೆಯ ಮುಂದೆ ಮಂಡಿಯೂರಿ ಕುಳಿತು ಯುದ್ಧ ನಿಲ್ಲಿಸಲು ಭಾರತಕ್ಕೆ ಸೂಚಿಸುವಂತೆ ಗೋಗರೆಯಲಾರಂಭಿಸಿತು. ಹಾಗಾಗಿ ವಿಶ್ವಸಂಸ್ಥೆ ಮಧ್ಯ ಪ್ರವೇಶಿಸಿತು.

ಶಾಂತಿ ಸಂಧಾನದ ದಿನವೇ ಸಾವು

ತಾಷ್ಕೆೆಂಟ್‌ನಲ್ಲಿ ಸತತ ಏಳು ದಿನಗಳ ಕಾಲ ನಡೆದ ಶೃಂಗಸಭೆಯಲ್ಲಿ ಶಾಂತಿ ಸಂಧಾನಕ್ಕೆ ಉಭಯ ನಾಯಕ ರಿಂದ ಸಹಿ ಬಿತ್ತು. ಅದೇ ದಿನ ಮಧ್ಯರಾತ್ರಿ ಶಾಸ್ತ್ರೀಜಿಯವರ ಸಾವಿನ ಸುದ್ದಿ ಬರಸಿಡಿಲಿನಂತೆ ಭಾರತಕ್ಕೆ ಬಡಿಯಿತು. ಅಲ್ಲಿಗೆ ದೇಶದ ಇತಿಹಾಸದಲ್ಲಿ ಅತ್ಯಂತ ಮೌಲ್ಯಯುತವಾದ ಅಧ್ಯಾಯವೊಂದು ಕೊನೆ ಗೊಂಡಿತು.

ನಿಜ! ಶಾಸ್ತ್ರಿಜಿಯವರು ನಿಧನರಾಗಿ ಐದು ದಶಕಗಳೇ ಕಳೆದಿವೆ. ಆದರೂ ಇಂದಿಗೂ ಅವರ ಸಾವು ನಿಗೂಢ ವಾಗಿಯೇ ಉಳಿದು ಬಿಟ್ಟಿದೆ. ಇಂದಿಗೂ ಈ ದೇಶದ ಜನ ಶಾಸ್ತ್ರಿಯವರ ಹೆಸರನ್ನು ಕೇಳಿದರೆ ಸಾಕು, 1966ರ ಆ ದಿನ ಏನಾಗಿದ್ದಿರಬಹುದು? ಶಾಸ್ತ್ರೀಜಿಯವರ ಸಾವು ಹೇಗಾಗಿದ್ದಿರಬಹುದು? ಅದರ ಹಿಂದೆ ಯಾರಿದ್ದಿರಬ ಹುದು? ಎಂದು ಯೋಚಿಸುತ್ತಾರೆ.

ಶಾಸ್ತ್ರೀಜಿಯವರ ಸಾವು ದೇಶದ ಜನರ ಮನಸ್ಸಿನಲ್ಲಿ ಅಷ್ಟು ಆಳವಾಗಿ ಬೇರೂರಿಬಿಟ್ಟಿದೆ. ಅದು ಕೇವಲ ಶಾಸ್ತ್ರೀಜಿಯವರು ಪ್ರಧಾನಿಯಾಗಿದ್ದರು ಎನ್ನುವ ಕಾರಣಕ್ಕಲ್ಲ. ಅದು ಅವರಲ್ಲಿದ್ದ ಮೇರು ವ್ಯಕ್ತಿತ್ವಕ್ಕೆ. ಅವರಲ್ಲಿದ್ದ ಪ್ರಾಮಾಣಿಕತೆ, ಸರಳತೆ ಮತ್ತು ಸಜ್ಜನಿಕೆಗೆ. ಎಂತಹ ಕಠಿಣ ಸಂದರ್ಭವನ್ನೂ ಎದುರಿಸುವ
ಅದ್ಭುತ ಸಾಮರ್ಥ್ಯ ಶಾಸ್ತ್ರೀಜಿಯವರಿಗಿತ್ತು. ಅವರೆಂದೂ ಅನ್ಯಾಯವನ್ನು ಸಹಿಸಿದವರಲ್ಲ, ಸ್ವಾರ್ಥಕ್ಕೆ ಬಲಿಯಾದವರಲ್ಲ, ತಾವು ನಂಬಿದ್ದ ತತ್ವ ಮತ್ತು ಸಿದ್ಧಾಾಂತದಿಂದ ದೂರ ಸರಿದವರಲ್ಲ. ಅವರ ಬದುಕಿನ ಒಂದೊಂದು ಘಟನೆಗಳೂ ಅವರ ಉದಾತ್ತ ಚಿಂತನೆಗಳು ಮತ್ತು ಆದರ್ಶಗಳಿಗೆ ಹಿಡಿದ ಕನ್ನಡಿಯಂತೆ ನಮ್ಮ
ಮುಂದಿವೆ.

ಮೊನ್ನೆ ಮೊನ್ನೆ ಶಾಸ್ತ್ರೀಜಿಯವರ ಕುರಿತ ಕೃತಿ ‘ತಾಷ್ಕೆೆಂಟ್ ಡೈರಿ’ ಬಿಡುಗಡೆಯಾದಾಗ ಜನ ಹಠಕ್ಕೆ ಬಿದ್ದವ ರಂತೆ ಅದನ್ನು ಕೊಂಡು ಓದಿದರು. ಕೆಲವೇ ದಿನಗಳಲ್ಲಿ ಸಾವಿರಾರು ಪ್ರತಿಗಳು ಬಿಸಿದೋಸೆಯಂತೆ ಖರ್ಚಾಗಿಹೋಯಿತು. ಕರೋನಾ ಕಾರ್ಮೋಡವಿದ್ದರೂ ಲೆಕ್ಕಿಸದೆ ನಾಡಿನ ಮೂಲೆ ಮೂಲೆಯಿಂದ ಯುವಕರು, ವಯೋವೃದ್ಧರೂ ಸೇರಿದಂತೆ ಅಪಾರ ಸಂಖ್ಯೆಯ ಜನ ಶಾಸ್ತ್ರೀಜಿಯವರ ಬದುಕಿನ ಸಿಂಹಾವ ಲೋಕನ ಮಾಡಿದರು, ಇನ್ನೂ ಮಾಡುತ್ತಲೇ ಇದ್ದಾಾರೆ. ಅದರ ಅರ್ಥ ಬಲು ಸರಳ.

ಶಾಸ್ತ್ರೀಜಿಯವರು ಮರಣಹೊಂದಿ ಐದು ದಶಕಗಳು ಕಳೆದರೂ ಈ ದೇಶದ ಜನ ಅವರ ಮೇಲಿಟ್ಟಿರುವ ಪ್ರೀತಿ, ಅಭಿಮಾನ, ಆದರ ಮತ್ತು ಗೌರವ ಒಂದಿಷ್ಟೂ ಕಡಿಮೆಯಾಗಿಲ್ಲ. ಶಾಸ್ತ್ರೀಜಿಯವರು ಕೋಟ್ಯಂತರ ಭಾರತೀ ಯರ ಹೃದಯಗಳಲ್ಲಿ ಇಂದಿಗೂ ಜೀವಂತವಾಗಿದ್ದಾರೆ.

ಇದೇ ಶುಕ್ರವಾರ, ಆ ಮಹಾನ್ ದೇಶಭಕ್ತನ ಜನ್ಮದಿನ. ಅವರ ಸಿದ್ಧಾಾಂತ ಮತ್ತು ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದೇ ನಾವು ಆ ಮೇರು ವ್ಯಕ್ತಿತ್ವಕ್ಕೆ ಸಲ್ಲಿಸುವ ನಿಜವಾದ ಗೌರವ. ಜೈ ಜವಾನ್! ಜೈ ಕಿಸಾನ್!

ಶಾಸ್ತ್ರೀಜಿಯವರದ್ದು ಮೇರು ವ್ಯಕ್ತಿತ್ವ. ಅವರೊಬ್ಬ ಅಸಾಧಾರಣ ಜನನಾಯಕ. ಸಹನೆ, ಸಹಾನುಭೂತಿಯ ಪ್ರತಿರೂಪ. ದೃಢ ನಿಶ್ಚಯದ ಮೂರ್ತರೂಪ. ಅವರು ಭಾರತ ದೇಶದ ಸಾಂಸ್ಕೃತಿಕ ರಾಯಭಾರಿಯಾಗಿ ಇಲ್ಲಿನ ಸಾವಿರಾರು ವರ್ಷಗಳ ಪರಂಪರೆ, ಸಂಪ್ರದಾಯ ಮತ್ತು ಮೌಲ್ಯಗಳನ್ನು ಪ್ರತಿನಿಧಿಸಿದ್ದರು. ಬಹುಶಃ ಅವರು ಇನ್ನಷ್ಟು ವರ್ಷ ಬದುಕಿದ್ದರೆ ಭಾರತದ ಭವಿಷ್ಯವನ್ನೇ ಬದಲಿಸಿಬಿಡುತ್ತಿದ್ದರು.
– ದಲೈ ಲಾಮಾಟಿಬೆಟಿಯನ್ ಧರ್ಮಗುರು

ನೀವು ಕಳುಹಿಸುವ ಗೋಧಿಯನ್ನ ನಮ್ಮ ದೇಶದ ಹಂದಿಗಳೂ ತಿನ್ನುವುದಿಲ್ಲ. ನಿಮ್ಮ ಗೊಡ್ಡು ಬೆದರಿಕೆಗೆ ನಾವು ಬಗ್ಗುವುದೂ ಇಲ್ಲ. – ಶಾಸ್ತ್ರಿಯವರು ಅಮೆರಿಕಕ್ಕೆ ನೀಡಿದ ಉತ್ತರ ಶಾಸ್ತ್ರೀಜಿಯವರಿಗೆ ಮಾನದಂಡ ಗಳನ್ನು ಪೂರೈಸುವುದರಲ್ಲಿ ನಂಬಿಕೆ ಇರಲಿಲ್ಲ. ಬದಲಾಗಿ ಅವುಗಳನ್ನು ಸೃಷ್ಟಿಸುತ್ತಿದ್ದರು. ಅವರು ಸರಳತೆ,
ಸೌಜನ್ಯ, ಸಚ್ಚಾರಿತ್ರ್ಯ, ಸ್ವಾಭಿಮಾನ, ನ್ಯಾಯ ಮತ್ತು ನಿಷ್ಟುರತೆಯ ಸಂಕೇತವಾಗಿದ್ದರು. ಧೈರ್ಯಶಾಲಿ
ಯೋಧನಂತೆ ಮುಂದೆ ನಿಂತು ದೇಶವನ್ನು ಮುನ್ನಡೆಸಿದರು. ಪ್ರಸ್ತುತ ಪರಿಸ್ಥಿತಿಯಲ್ಲಿ ದೇಶದ ಮನೆಮನೆ ಯಲ್ಲೂ ಒಬ್ಬ ಶಾಸ್ತ್ರೀಜಿ ಹುಟ್ಟಬೇಕು. ಆಗ ಮಾತ್ರ ದೇಶದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ. – ಅನಿಲ್ ಶಾಸ್ತ್ರಿ ಲಾಲ್ ಬಹದ್ದೂರ್

ಶಾಸ್ತ್ರಿಯವರ ಸುಪುತ್ರ ರಾಜಕಾರಣಿಗಳು ಹೀಗಿರುತ್ತಾರೆಂದರೆ ನಂಬಲಿಕ್ಕೇ ಸಾಧ್ಯವಿಲ್ಲ, ಹಾಗೆ ಬಾಳಿದವರು
ಮಾನ್ಯ ಲಾಲ್ ಬಹದ್ದೂರ್ ಶಾಸ್ತ್ರಿಗಳು. ನಾಯಕತ್ವಕ್ಕೆ ಮಾದರಿಯಾದವರು. ಅವರ ಸರಳತೆ, ನಿಸ್ಪಹತೆ, ಧೀಮಂತಿಕೆ, ರಾಷ್ಟ್ರನಿಷ್ಠೆ ಪ್ರಶ್ನಾತೀತವಾದವು. ಇಂಥ ಅನುಕರಣೀಯ ಮಾದರಿಯನ್ನು ನಮಗೆ ಒದಗಿಸಿದ ಆ ಮಹಾ ವ್ಯಕ್ತಿಯ ಚಿತ್ರವನ್ನು ‘ತಾಷ್ಕೆೆಂಟ್ ಡೈರಿ’ ಹೃದ್ಯವಾಗಿ ನಿರೂಪಿಸಿದೆ.  -ಡಾ.ಎಸ್.ಎಸ್.ವೆಂಕಟೇಶಮೂರ್ತಿ

ಲಾಲ್ ಬಹದ್ದೂರ್ ಶಾಸ್ತ್ರಿಯವರ ಧ್ಯೇಯ, ಆದರ್ಶಗಳು, ಕಾರ್ಯವೈಖರಿ ಮತ್ತು ರಾಷ್ಟ್ರದ ಹಿತಚಿಂತನೆ ಇಂದಿನ ಪ್ರತಿಯೊಬ್ಬ ರಾಜಕಾರಣಿಗೂ ಮಾದರಿ. -ಡಾ ಪ್ರಧಾನ್ ಗುರುದತ್ತ ಭಾಷಾತಜ್ಞ ಮತ್ತು ಭಾಷಾ ವಿಜ್ಞಾನಿ

ವರದಕ್ಷಿಣೆಯ ರೂಪದಲ್ಲಿ ಚರಕ

1927ರಲ್ಲಿ ಶಾಸ್ತ್ರೀಜಿಯವರು ಮಿರ್‌ಜಾಪುರ್‌ನ ಲಲಿತಾದೇವಿಯವರನ್ನು ವಿವಾಹವಾದರು. ಆ ಕಾಲದ
ಮದುವೆಗಳಲ್ಲಿ ವರದಕ್ಷಿಣೆ ಸಾಮಾನ್ಯವಾಗಿತ್ತು. ಶಾಸ್ತ್ರೀಜಿಯವರ ಮದುವೆಯಲ್ಲಿ ವಧುವಿನ ಕಡೆಯವರು ಬೇಡವೆಂದರೂ ವರದಕ್ಷಿಣೆ ನೀಡಲು ಮುಂದಾಗಿದ್ದರು. ಆದರೆ ಶಾಸ್ತ್ರೀಜಿಯವರು ಅದನ್ನು ಸ್ವೀಕರಿಸಲು ನಿರಾಕರಿಸಿದ್ದರು. ಆದರೆ ಮನೆಯವರು ಮತ್ತು ಹಿರಿಯರು ತೀರಾ ಒತ್ತಾಯ ಮಾಡಿದಾಗ ಅನಿವಾರ್ಯವಾಗಿ ವರದಕ್ಷಿಣೆ ಪಡೆಯಲು ಒಪ್ಪಿದರು. ಅವರು ಪಡೆದ ಆ ವರದಕ್ಷಿಣೆ ಏನು ಗೊತ್ತೇ? ಒಂದು ಚರಕ, ಸ್ವಲ್ಪ ನೂಲು, ಒಂದಷ್ಟು ಹತ್ತಿ.