Friday, 13th December 2024

ಕಾಲುಗಳೇ ಇವರ ಕೈಗಳು

ಸುರೇಶ ಗುದಗನವರ

ಕಲಾವಿದರ ಕೈಚಳಕ ನೋಡಿ ಕಲಾ ಪ್ರೇಮಿಗಳು ಬೆರಗಾಗುತ್ತಾರೆ. ಅವರು ಕಲಾಕೃತಿಗಳು ಎಂಥವರ ಮನಸ್ಸಾನ್ನಾ ದ್ರೂ ಸೂರೆಗೊಳ್ಳುತ್ತವೆ. ಆದರೆ ಈ ಕಲಾವಿದೆಗೆ ಕೈಗಳೇ ಇಲ್ಲ! ಕೈಗಳಿಲ್ಲದಿದ್ದರೇನಂತೆ, ಹಲ್ಲುಗಳ ನಡುವೆ, ಕಾಲ್ಬೆರಳ ನಡುವೆ ಕುಂಚವನ್ನಿಟ್ಟುಕೊಂಡು ಅತ್ಯದ್ಭುತ ಚಿತ್ರಗಳನ್ನು ಇವರು ಬಿಡಿಸಿ ದ್ದಾರೆ.

ಕಾಲು ಮತ್ತು ಬಾಯಿಯಿಂದ ಸುಂದರ ಚಿತ್ರ ರಚಿಸುವ ಸರಿತಾ ದ್ವಿವೇದಿಯವರು ಗುಜರಾತನ ಅಲಹಾಬಾದನವರು. ತಂದೆ ವಿ. ಕೆ. ದ್ವಿವೇದಿಯವರು ನಿವೃತ್ತ ಸೇನಾಽಕಾರಿ, ತಾಯಿ ವಿಮಲಾ ದ್ವಿವೇದಿ ಗೃಹಿಣಿ. ಬಾಲ್ಯದ ದಿನಗಳು ಸಂತೋಷದಿಂದ ಕೂಡಿದ್ದವು. ಆದರೆ ಆಕೆಗೆ ನಾಲ್ಕು ವರ್ಷವಾಗಿದ್ದಾಗ, ಅದೊಂದು ರಕ್ಷಾಬಂಧನ ದಿನದಂದು ಸರಿತಾ ಸಂಬಂಧಿಕರ ಮನೆಗೆ ಹೋಗಿದ್ದಳು.

ರೇಸ್‌ನಲ್ಲಿ ಆಡುತ್ತಿದ್ದಾಗ ಹನ್ನೊಂದು ಸಾವಿರ ವೋಲ್ಟ್ ವಿದ್ಯುತ್ ತಂತಿ ಅವಳ ಮೇಲೆ ಬಿದ್ದಿತು. ತಕ್ಷಣ ಆಸ್ಪತ್ರೆಗೆ ಸೇರಿಸಲಾಯಿತು. ಜೀವ ಉಳಿಸುವ ಸಲುವಾಗಿ ಅವಳ ಎರಡೂ ಕೈಗಳು ಹಾಗೂ ಬಲಗಾಲವನ್ನು ಕತ್ತರಿಸ ಬೇಕಾಯಿತು. ಹೆತ್ತವರು ಸರಿತಾಳ ಭವಿಷ್ಯದ ಬಗ್ಗೆ ಆತಂಕಗೊಂಡರು. ತಾಯಿ ವಿಮಲಾ ಸರಿತಾಳನ್ನು ಸಮಾಧಾನ ಪಡಿಸಿ ಧೈರ್ಯ ತುಂಬುತ್ತಾರೆ ಮತ್ತು ಕಾಲ್ಬೆರಳುಗಳಿಂದ ಬರೆಯಲು ಪ್ರೇರೆಪಿಸುತ್ತಾಳೆ. ಕ್ರಮೇಣ ಸರಿತಾ ಬಾಯಿ ಮತ್ತು ಕಾಲ್ಬೆರಳುಗಳಿಂದ ಪೆನ್ಸಿಲ್‌ನ್ನು ಬಳಸಲು ಕಲಿಯುತ್ತಾಳೆ. ಬಣ್ಣದ ಕುಂಚವನ್ನು ಬಳಸಲು ಕಲಿತು, ನಂತರ ತನ್ನ ಜೀವನವನ್ನೇ ಬದಲಾಯಿಸಿಕೊಂಡಳು. ಅವಳಿಗೆ ಕೃತಕ ಕಾಲುಗಳನ್ನು ಜೋಡಿಸಲಾಯಿತು.

ಸರಿತಾ ೮ನೆಯ ವಯಸ್ಸಿನಲ್ಲಿರುವಾಗ ಕಾನ್ಪುರದ ಆರ್ಮಿ ಸ್ಕೂಲ್‌ಗೆ ಸೇರಿದಳು. ಅವಳು ನೆಯ ತರಗತಿಯನ್ನು ಪುಲ್ಗಾಂವದ ಕೇಂದ್ರಿಯ ಶಾಲೆಯಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾದಳು. ಸರಿತಾ ಕಾರ್ಡ್ ತಯಾರಿಕೆ ಮತ್ತು ರಂಗೋಲಿ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದುಕೊಳ್ಳುತ್ತಿದ್ದಳು. ನಂತರ ಅವರು ಅಲಹಬಾದ ವಿಶ್ವವಿದ್ಯಾಲಯದಿಂದ ಲಲಿತ ಕಲೆಯಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದರು. ಚಿತ್ರಕಲಾ ಶಿಕ್ಷಕ ಇಂದೂ ಪಾಂಡೆ ಹಾಗೂ ಅಲಹಾಬಾದ ವಿಶ್ವವಿದ್ಯಾಲಯದ ಲಲಿತಕಲಾ ವಿಭಾಗದ ಮುಖ್ಯಸ್ಥ ಅಜಯ ಜೇಟ್ಲಿ ಅವರನ್ನು ಪ್ರೋತ್ಸಾಹಿಸಿದರು.

ಅವರು ಜವಾಹರ ಬಾಲ ಭವನದಲ್ಲಿಯ ಚಿತ್ರಕಲೆ ತರಗತಿಗಳಿಗೆ ಸೇರ್ಪಡೆಯಾದರು. ಅಲ್ಲಿಯ ಶಿಕ್ಷಕರು ಸರಿತಾಳ ಪ್ರತಿಭೆಯನ್ನು ಗುರುತಿಸಿ ಕಾನ್ಪುರ್ ವಲಯ ಚಿತ್ರಕಲೆ ಸ್ಪರ್ಧೆಯಲ್ಲಿ ಭಾಗವಹಿಸಲು ಸಲಹೆ ನೀಡಿದರು. ಅಲ್ಲಿಂದ ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಚಿತ್ರಕಲೆ ಸ್ಪರ್ಧೆಗೆ ಆಯ್ಕೆಯಾದರು. ಬಾಲಶ್ರೀ ಸನ್ಮಾನ್‌ಗೆ ಆಯ್ಕೆ ಯಾದರು. ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು ಬಾಲಶ್ರೀ ಸನ್ಮಾನ್ ಪ್ರಶಸ್ತಿ ನೀಡಿ ಗೌರವಿಸಿದರು. ಅವರು ಜೇಡಿ ಮಣ್ಣಿನಿಂದ ಮಾಡೆಲಿಂಗ್, ಮೆಹಂದಿ ಹಚ್ಚುವದು ಮತ್ತು ಕರಕುಶಲ ವಸ್ತುಗಳ ತಯಾರಿಕೆ ಮಾಡುವ ಕೌಶಲ ಬೆಳೆಸಿಕೊಂಡಿದ್ದಾರೆ.

ಕೊಳೆಗೇರಿ ಮಕ್ಕಳಿಗೆ ತರಬೇತಿ

ಸರಿತಾ ಅವರು ಕೊಳೆಗೇರಿ ಮಕ್ಕಳಿಗಾಗಿ ಚಿತ್ರಕಲೆಯ ತರಬೇತಿಯನ್ನು ನೀಡಿದ್ದಾರೆ. ತಮ್ಮ ವಿದ್ಯಾರ್ಥಿವೇತನ ಮತ್ತು ವಿವಿಧ ಬಹುಮಾನಗಳ ಮೊತ್ತವನ್ನು ಈ ಮಕ್ಕಳಿಗಾಗಿ ಖರ್ಚು ಮಾಡಿದ್ದಾರೆ. ಪಾದಚಾರಿ ಮಾರ್ಗದ ಬದಿಯಲ್ಲಿ ಅವರು ತರಗತಿಗಳನ್ನು ನಡೆಸಿದ್ದು,ಇದರಲ್ಲಿ ಇಪ್ಪತ್ತೈದು ಕೊಳಗೇರಿ ಮಕ್ಕಳು ಚಿತ್ರಕಲೆಯನ್ನು ಕಲಿತಿ ರುವುದು ವಿಶೇಷ.

ಕಾಲ್ಬೆರಳುಗಳ ಕೌಶಲ
ಸರಿತಾ ತನ್ನ ಪಾದದಿಂದ ಹಲ್ಲುಜ್ಜುವುದು, ಆಹಾರವನ್ನು ಸೇವಿಸುವುದು, ಬರೆಯುವುದು ಮತ್ತು ಚಿತ್ರಿಸುವುದು ಮುಂತಾದ ದೈನಂದಿನ ಚಟುವಟಿಕೆಗಳನ್ನು ಯಾರ ಸಹಾಯವಿಲ್ಲದೇ ನಿರ್ವಹಿಸುತ್ತಾರೆ. ಎಡಕಾಲು ಮತ್ತು ಬಾಯಿಂದ ಚಿತ್ರಗಳಿಗೆ ಬಣ್ಣ ಹಚ್ಚುತ್ತಾರೆ. ಎಡಗಾಲಿ ನಲ್ಲಿ ಪೇಂಟ್‌ಬ್ರಷ್ ಮತ್ತು ಇನ್ನೊಂದನ್ನು ಬಾಯಿಯಲ್ಲಿ ಹಿಡಿದುಕೊಂಡು ಮಧುಭನಿ ಚಿತ್ರಕಲೆಗೆ ಅಂತಿಮ ಸ್ಪರ್ಶ ನೀಡುತ್ತಾರೆ.

ಗೌರವಗಳು
*ಬಾಲಶ್ರೀ ಪ್ರಶಸ್ತಿ – ಎರಡು ಬಾರಿ
*ವಿಕಲಾಂಗ ವ್ಯಕ್ತಿಗಳ ಸಬಲೀಕರಣಕ್ಕಾಗಿ ರಾಷ್ಟ್ರೀಯ ಪ್ರಶಸ್ತಿ
*ಗಾಡ್ಪ್ರೇ ಫಿಲಿ- ರಾಷ್ಟ್ರೀಯ ಧೈರ್ಯ ಪ್ರಶಸ್ತಿ
*ಭಾರತ ಸರ್ಕಾರ ನೀಡುವ ಮೈಂಡ್ ಆಫ್ ಸ್ಟೀಲ್ ಗೌರವ
*ಈಜಿಪ್ತ್‌ಕಛೇರಿಯಿಂದ ಬೆಳ್ಳಿ ಪದಕ

*ಎನ್.ಸಿ.ಇ.ಆರ್.ಟಿ. ಆರನೆಯ ತರಗತಿಯ ಹಿಂದಿ ಪಠ್ಯ ಪುಸ್ತಕದಲ್ಲಿ ಇವರ ಸಾಧನೆಯ ಪಠ್ಯ