Wednesday, 11th December 2024

ಕಲಾಕ್ಷೇತ್ರದ ಬಹುಮುಖಿ

ರಸಿಕಾ ಮುರುಳ್ಯ

ಸಾಧನೆಯ ಹಾದಿಗೆ ಮೆಟ್ಟಿಲೇರಿ ನಿಂತು, ಕಲಾ ಸಂಸ್ಕೃತಿಯ ರಂಗವನ್ನೇರಿ ವೇದಿಕೆಗಳಲ್ಲಿ ರಂಜಿಸುತ್ತಿರುವ ಪ್ರತಿಭೆ. ಸ್ನಾತಕೋತ್ತರ ಪದವೀಧರ, ತನ್ನ ಛಲದಿಂದ ಸಣ್ಣ ವಯಸ್ಸಿನ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಬಂದಿರುವ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಾಲ್ಕೂರು ಗ್ರಾಮದ ನಿವಾಸಿ ಚಂದ್ರಹಾಸ ಬಳಂಜ.

ಜೀವನದಲ್ಲಿ ಏನಾದರೂ ಸಾಧಿಸಬೇಕು ಛಲ ಬಿಡದೇ ಏಕ ರೂಪದ ದಾರಿಯಲ್ಲಿ ಸಾಗಿ ದಾಗ ನಮ್ಮ ಸಾಧನೆಯ ಹಾದಿ ಮತ್ತು ಯಶಸ್ಸಿನ ಪಥವನ್ನು ಕಂಡುಕೊಳ್ಳಬಹುದು. ಹಾಗೆಯೇ ಚಂದ್ರಹಾಸ ಅವರು ತಮ್ಮ ಜೀವನದಲ್ಲಿ ಸಾಂಸ್ಕೃತಿಕ ಕ್ಷೇತ್ರದಲ್ಲಿ ಗಣನೀಯ ಸಾಧನೆಯನ್ನು ಮಾಡಿದವರು. ಚಂದ್ರಹಾಸ ಅವರು ತಮ್ಮ ಹದಿಹರೆಯದ ವಯಸ್ಸಿ ನಲ್ಲಿ ಮುಖಕ್ಕೆ ಬಣ್ಣ ಹಚ್ಚಿದ ವರು. ಕಲಾದೇವತೆಯ ಮುಕುಟದಂತೆ ಪ್ರಜ್ವಲಿಸುವ ಕನಸನ್ನು ಕಂಡವರು. ನಾಟಕ, ನೃತ್ಯ, ಸಂಗೀತ ಇನ್ನು ಬಹುಮುಖ ಹಾದಿಯಲ್ಲಿ ನಡೆದವರು.

ಬಾಲ್ಯದಿಂದಲೇ ಸಾಂಸ್ಕೃತಿಕ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದು, ರಾಜ್ಯಾದಂತ 500ಕ್ಕೂ ಹೆಚ್ಚು ಕಾರ್ಯಕ್ರಮ ಗಳನ್ನು ನೀಡಿದ್ದಾರೆ. ಚಂದ್ರಹಾಸ ಅವರು ಒಬ್ಬ ಉತ್ತಮ ಬರಹಗಾರ ಮತ್ತು ಓದುಗರು ಹೌದು. ತಮ್ಮ ಬರವಣಿಗೆಯ ಮೂಲಕ ಅನೇಕ ಓದುಗರನ್ನು ತಮ್ಮತ್ತ ಸೆಳೆಯು ಶಕ್ತಿ ಇವರಲ್ಲಿದೆ.

ಹಲವಾರು ಕವನ, ಕತೆ, ಲೇಖನಗಳು, ಪತ್ರಿಕೆ, ನಿಯತಕಾಲಿಕೆ ಹಾಗೂ ಆಕಾಶವಾಣಿ ಮಂಗಳೂರಿನಲ್ಲೂ ಇವರ  ಕಾರ್ಯಕ್ರಮ ಗಳು ನೀಡಿದ್ದಾರೆ. ಪ್ರೀತಿ ಇರಲಿ – ಇದು ಒಲವಿನ ಬಣ್ಣದ ಲೋಕ ಹಾಗೂ ಅಂತ್ಯ – ಆರಂಭಕ್ಕೊಂದು ಮುನ್ನುಡಿ ಕವನ ಸಂಕಲನ ಬಿಡುಗಡೆ ಮಾಡಿದ್ದು, ಪ್ರಸ್ತುತ ಲೈಫಗ ಚೆನ್ನಾಗಿದೆ -ಅಲ್ವಾ? ಪುಸ್ತಕ ಬಿಡುಗಡೆ ಹಂತದಲ್ಲಿದೆ. ಸಂಗೀತ ದಲ್ಲೂ ಹೆಚ್ಚು ಒಲವು ಇದ್ದು, ಹಾಡುಗಾರನಾಗಿ ಯುವಜನ ಮೇಳ ಸ್ಪರ್ಧೆ ಗಳಲ್ಲಿ ಜಾನಪದ ಹಾಡು, ಗೀಗೀ ಪದ, ಲವಾಣಿಗಳಲ್ಲಿ ಜಿಲ್ಲಾ ರಾಜ್ಯ ಮಟ್ಟದ ಪ್ರಶಸ್ತಿಯನ್ನು ಪಡೆದಿರುತ್ತಾರೆ.

ನೃತ್ಯಗಾರರಾಗಿ ಜನಪದ ನೃತ್ಯ, ಕಂಸಾಳೆ, ಕೋಲಾಟ, ವೀರಗಾಸೆ, ಮುಂತಾದ ನೃತ್ಯಗಳಲ್ಲಿ ರಾಜ್ಯಮಟ್ಟದ ಪ್ರಶಸ್ತಿ ಪಡೆದಿzರೆ. ಅದಲ್ಲದೆ ನಟನೆಯಲ್ಲೂ ಸೈ ಎನಿಸಿಕೊಂಡಿದ್ದಾರೆ. ನಟನಾಗಿ ರಾಜ್ಯ ಪ್ರಶಸ್ತಿ ಪಡೆದ ಕಿರುಚಿತ್ರ ವ್ಯಸನ ವೇ ಟು ಮಸಣ ದಲ್ಲಿ ಮುಖ್ಯ ಪಾತ್ರ ನಿರ್ವಹಣೆ ಮಾಡಿದ್ದಾರೆ. ಬೀದಿ ನಾಟಕ ಪ್ರಹಸನ ದಲ್ಲಿ ರಾಜ್ಯ ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಪಡೆದಿದ್ದಾರೆ. ಹಲವಾರು ನಾಟಕ, ಬೀದಿ ನಾಟಕಗಳಲ್ಲಿ ಬಣ್ಣ ಹಚ್ಚಿ ನಾಟಕಗಳಿಗೆ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ.

ಪ್ರತಿಯೊಂದರಲ್ಲೂ ಆಸಕ್ತಿ ಹೊಂದಿರುವ ಜೇನುಗೂಡು ಚಂದ್ರಹಾಸ ಬಳಂಜ, ಕಾರ್ಯಕ್ರಮ ಸಂಯೋಜಕರಾಗಿ ಹಲವಾರು ಕಾರ್ಯಕ್ರಮಗಳನ್ನು ಮಾಡಿದ್ದು, ನಿರೂಪಕರಾಗಿ ಹಾಗೂ ತೀರ್ಪುಗಾರರಾಗಿ ಕರ್ತವ್ಯ ನಿರ್ವಹಿಸಿzರೆ. ಸಂಘ -ಸಂಸ್ಥೆಗಳಲ್ಲಿ
ತನ್ನನ್ನು ತಾನು ತೊಡಗಿಸಿಕೊಂಡು ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಸೂರ್ಪ ಮಿನಿಟ, ತಕಧಿಮಿತ, ಕಾಮಿಡಿ ಕಂಪನಿಯಂತಹ ರಿಯಾಲಿಟಿ ಶೋಗಳಿಗೆ
ಕ್ರಿಯೇಟಿವ್ ಟೀಮ್ ನಲ್ಲೂ ಕೆಲಸ ಮಾಡಿದ್ದಾರೆ. ಸಾಧನೆಯ ಮೆಟ್ಟಿಲೇರಿ ಬಂದ ಇವರಿಗೆ ಕರ್ನಾಟಕ ಸರಕಾರವು 2017ರಲ್ಲಿ ದಕ್ಷಿಣ ಕನ್ನಡ ಯುವ ಸಾಧಕ ಪ್ರಶಸ್ತಿ ನೀಡಿ ಗೌರವಿಸಿದೆ. ಸಾಹಿತ್ಯ ಕ್ಷೇತ್ರದಲ್ಲಿ ಜಿಲ್ಲಾ ಮಟ್ಟದ ಪ್ರಭಾಕರ ನೀರುಮಾರ್ಗ ಯುವ ಸಾಹಿತ್ಯ ಪ್ರಶಸ್ತಿ ಹಾಗೂ ಸಾಂಸ್ಕೃತಿಕ ಸಾಧನೆಗೆ ಯುವ ಸಾಂಸ್ಕೃತಿಕ ಸಾಧಕ ಪ್ರಶಸ್ತಿ, ಯುವ ಸಾಂಸ್ಕೃತಿಕ ಚೇತನ ಪ್ರಶಸ್ತಿ ಮತ್ತು ಸಾಧನ ಶ್ರೀ ಪ್ರಶಸ್ತಿ, ಡಾ.ಎ.ಪಿ.ಜಿ ಅಬ್ದುಲ್ ಕಲಾಂ ಸ್ವಸ್ತಿಕ್ ಸಂಭ್ರಮ ಪುರಸ್ಕಾರ ಪಡೆದಿರುತ್ತಾರೆ.

ಇವರ ಸಾಧನೆಯು ಬಹಳಷ್ಟು ಎತ್ತರಕ್ಕೆ ಬೆಳೆ ಯಲಿ. ಮುಗ್ದ ನಗುವಿನ ಇನ್ನಷ್ಟು ಜನರಿಗೆ ಸ್ಪೂರ್ತಿಯಾಗಲಿ. ಯುವಕ ಶಕ್ತಿಗಳಿ ಪ್ರೇರಣೆಯನ್ನು ನೀಡುವ ಕೆಲಸವನ್ನು ಚಂದ್ರಹಾಸ ಅವರು ಮಾಡುತ್ತಿದ್ದಾರೆ