Saturday, 14th December 2024

ನನ್ನದೊಂದು ಪುಟ್ಟ ಮನವಿ

ಅಂಬ್ರೀಶ್‌ ಎಸ್‌.ಹೈಯ್ಯಾಳ್‌

ಹಾಯ್ ಹೇಗಿದ್ದೀಯಾ?
ನೀನು ಚೆನ್ನಾಗಿಯೇ ಇರ್ತಿಯಾ ಬಿಡು. ಬೀದಿ ಬದಿ ಫುಡ್ ತಿಂದು ಅದೆಷ್ಟು ದಪ್ಪಕಿದ್ದಿಯಾ ನೋಡು. ಯೋಗ ಮಾಡಿ ತುಸು ಸಣ್ಣ ಗಾಗು. ಹೀಗೆ ಪೇಸ್ ಬುಕ್ಕಿನ ನಿನ್ನ ಫೊಫೈಲ್ ನೋಡಿಯೆ ನಾನು ಯಾಮಾರಿದ್ದು. ಹೃದಯ ಸೋತಿದ್ದು.

ಅಂದು ಫೇಸ್‌ಬುಕ್‌ನ್ನು ಸುಮ್ಮನೆ ಸ್ಕ್ರೋಲ್ ಮಾಡುತಿದ್ದಾಗ ಕಂಡಿತೊಂದು ಸುಂದರ ಮೊಗ, ಅದುವೇ ನಿನ್ನದು. ನನ್ನ ಬೆರಳು ಗಳು ಅಲ್ಲಿಯೆ ನಿಂತು ಬಿಟ್ಟವು. ಈ ಹುಡುಗಿ ಯಾರಿರಬಹುದೆಂದು ನಿನ್ನ ಜಾತಕ ಹರವಿಟ್ಟುಕೊಂಡು ಕುಳಿತೆ. ಅದೆಷ್ಟು ಮುದ್ದು ಮುಖ, ಹಾಲು ಗೆನ್ನೆ, ಸಿಂಪ್ಲಿ ಕ್ಯೂಟ್ ನೀನು. ಇಷ್ಟೆೆ ಆಗಿದ್ದರೆ ನೀನು ಇಷ್ಟವಾಗುತ್ತಿರಲಿಲ್ಲವೇನೊ…. ಜೊತೆಗೆ ನೀನು ಕವಯಿತ್ರಿ ಬೇರೆ. ಅದರಲ್ಲು ಪ್ರೇಮ ಕವಯಿತ್ರಿ. ನಿನ್ನ ಕನಸಿನ ರಾಜಕುಮಾರನ ಬಗೆಗೆ ಅದೆಂತ ವರ್ಣನೆ ನಿನ್ನದು!

ನಿನ್ನ ಅಮೂರ್ತ ಜೀವದ ಇನಿಯನ ಬಗೆಗೆ ಬರೆವ ಕವಿತೆಗಳೆಲ್ಲವೂ ನನ್ನನೆ ಧ್ಯಾನಿಸಿ ಬರೆಯಿತ್ತಿರಬೇಕೆಂದು ನನಗನಿಸುತಿತ್ತು. ಎಲ್ಲವೂ ನನ್ನ ಅಭಿರುಚಿಗೆ ತಕ್ಕ ಹಾಗೆ ಸಮನಾಗಿರುವ ನಿನಗೆ ಹೇಗೆ ಸ್ನೇಹದ ವಿನಂತಿ ಕಳಿಸದೆ ಇರಲಿ! ಹೆಬ್ಬೆರಳಿನ ಟಪಕ್ ಶಬ್ದದ ಜೊತೆಗೆ ನನ್ನ ಹೃದಯವು ತುಪುಕ್ ಅಂತ ನಿನ್ನ ಮನದಿಲಿಳಿಯಿತು. ಫೇಸ್‌ಬುಕ್ ಬರೀ ಫ್ರೆಂಡ್ ರಿಕ್ವೆಸ್ಟ್’ಗೆ ಸಿಮೀತವಾಗಿದ್ದರೂ, ನನ್ನ ಪಾಲಿಗೆ ಅದು ಪ್ರೇಮ ನೀವೆದನೆಯೆ ಆಗಿತ್ತು….ನಿನ್ನ ಫೋಟೋ ನೋಡಿ ಒಡಮೂಡಿನ ನನ್ನ ಒಡಲಿನ ಭಾವತೀವ್ರತೆ ಯನ್ನು ಅದುಮಿಟ್ಟುಕೊಳ್ಳಲು ಸಾಧ್ಯವಾಗಲಿಲ್ಲ.

ಹಾಗಾಗಿಯೇ ಮೆಸೆಂಜರ್‌ನಲ್ಲಿ ತಣ್ಣಗೆ ನಿನಗೆ ಒಂದೆರಡು ಸಂದೇಶ ಕಳಿಸಿದೆ. ಆ ಸಂದೇಶಗಳ ಮೂಲಕ ನಿನ್ನ ಒಲಿಸಿಕೊಳ್ಳಲು ಶುರು ಮಾಡಿದೆ. ಚಂದಕ್ಕಿಂತ ಚಂದವೆಂದು ನಿನ್ನ ಹೊಗಳುತ್ತಿದ್ದೆ. ನೀನು ನನಗೆ ಇಷ್ಟವೆಂದು ಮನವೊಲಿಸಿದೆ. ಇದ್ಯಾವುದಕ್ಕು ನೀನು ಕೋಪಿಸಿಕೊಳ್ಳದೆ, ಸಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತಲೇ ಹೋದೆ. ಆಗ ನನಗೆಷ್ಟು ಖುಷಿಯಾಗುತ್ತಿತ್ತು ಗೊತ್ತಾ!

ನನ್ಯಾವುದೋ ಬೇರೊಂದು ಸುಂದರ ಲೋಕಕ್ಕೆ ಸರಿದು ಹೋಗುತ್ತಿದ್ದೆ. ನಿನ್ನ ಒಂದೇ ಒಂದು ಸಣ್ಣ ಮೇಸೇಜನ್ನು ಅದೆಷ್ಟು ಸಲ ಓದಿಕೊಳ್ಳುತಿದ್ದೆನೊ ನನಗೆ ಗೊತ್ತಿಲ್ಲ. ಆದರೆ ನಿನ್ನ ಮೇಲೆ ನನಗೆ ಒಂಚೂರು ಮುನಿಸಿತ್ತು. ಅದೇ ಪಾನಿಪುರಿ, ಬೇಲ್ ಪುರಿ ಅಂತ ಹೊರಗಿನ ಹೈಜಿನ್ ಫುಡ್ ತಿಂದು ಎಷ್ಟು ಉಬ್ಬಿದ್ದಿಯಾ ನೋಡು!

ಅವೆಲ್ಲ ತಿನ್ನಬೇಡ್ವೆ ಅಂತ ಪರಿಪರಿಯಾಗಿ ಬೇಡಿಕೊಂಡರು ಬಿಡ್ತೀಯಾ ನೀನು. ನಿನಗೆ ಯಾವುದೇ ಹುಡುಗನ ಮ್ಯಾರೇಜ್ ಅಪ್ಲಿಕೇಶನ್ ಬಂದರು ಅದರಲ್ಲಿ ನಾನೊಂದು ಅರ್ಜಿ ಹಾಕಿದ್ದೇನೆ! ಮರಿಬೇಡ್ವೆ ಪ್ಲೀಸ್…