Friday, 13th December 2024

ನರ ರೋಗವಿದ್ದರೂ ಸಾಧನೆಗೆ ಬರವಿಲ್ಲ

ವಿಕ್ರಮ್ ಜೋಷಿ

ಹುಟ್ಟಿನಿಂದಲೇ ನರರೋಗ ಪೀಡಿತನಾಗಿದ್ದ ಈತ, ಜೀವನ ಪರ್ಯಂತ ಮಲಗಿದಲ್ಲೇ ಇರಬೇಕು ಎಂದಿದ್ದರು ವೈದ್ಯರು. ಆದರೆ ಪೋಷಕರು ಈತನನ್ನು ಸಾಮಾನ್ಯ ಹುಡುಗನಂತೆ ಬೆಳೆಸಿದರು. ಹವ್ಯಾಸವಾಗಿ ಈತ ಆಯ್ದುಕೊಂಡದ್ದು ದೇಹ ದಾರ್ಢ್ಯ ಬೆಳೆಸುವ ಚಟುವಟಿಕೆಯನ್ನು. ಸತತ ಪರಿಶ್ರಮದ ನಂತರ, ತನ್ನ ವರ್ಕ್‌ಔಟ್ ವಿಡಿಯೋವನ್ನು ವೈರಲ್ ಮಾಡಿದಾಗ, ಸಮಾಜವೇ ಇವನ ಸಾಧನೆಯನ್ನು ಕೊಂಡಾಡಿತು. ಇಂದು ಈತ ಬಹಳಷ್ಟು ಯುವಕರಿಗೆ ಸ್ಫೂರ್ತಿ ತುಂಬುವ ದೇಹ ದಾರ್ಢ್ಯಪಟು ಎನಿಸಿದ್ದಾನೆ.

ಕೆಲವರದ್ದು ಹುಟ್ಟಿದಾಕ್ಷಣವೇ ಬದುಕು ಹೀಗೆಯೇ, ಹಾಗೇಯೆ ಅಂತ ನಿರ್ಧಾರ ಆಗಿಬಿಡುತ್ತದೆ. ಅದನ್ನು ಅವರ ಮನಸ್ಸಲ್ಲಿ ಅಚ್ಚು ಹಾಕಿಸಿ ಕೊನೆಗೆ ಅದೇ ರೂಪವನ್ನು ಕೊಡುತ್ತೇವೆ – ನಾವು. ಹುಟ್ಟಿದಾಗ ನಮ್ಮ ಬದುಕು ಬಿಳಿ ಬೋರ್ಡಿನಂತಿರುತ್ತದೆ. ಅಲ್ಲಿ ಬರೆದದ್ದೇ ಭವಿಷ್ಯ ಆಗುತ್ತದೆ. ಸ್ಟೀವ್ ಎಲೆಕ್ಸಿಯದ್ದು ಭಿನ್ನವಾಗಿರಲಿಲ್ಲ. ಹುಟ್ಟಿದಾಗಿನಿಂದಲೇ ಇವರಿಗೆ ಸೆಲೆಬ್ರಲ್ ಪಾಲ್ಸಿ ಎನ್ನುವ ಸೆಂಟ್ರಲ್ ನರ್ವ್ ಸಿಸ್ಟಮ್‌ಗೆ ಸಂಬಂಧಿಸಿದ ರೋಗ. ಇದರಿಂದ ಬದುಕಿನಲ್ಲಿ ಎಂದೂ ನಡೆದಾಡುವುದಿಲ್ಲ ಎಂದು ವೈದ್ಯರು ಭವಿಷ್ಯವಾಣಿಯನ್ನು ಹೇಳಿ ಬಿಡುತ್ತಾರೆ. ಅಷ್ಟೇ ಅಲ್ಲ ಆತನನ್ನು ಯಾವುದಾದರೂ ಕೇರಿಂಗ್ ಸೆಂಟರ್‌ಗೆ ಕಳುಹಿಸಿಬಿಡಿ ಎನ್ನುವ ಸಲಹೆಯ ಬೇರೆ ಇವರ ಕೊಡುಗೆ. ವೈದ್ಯರು ಹೇಳಿದ ಮೇಲೆ ಮುಗಿಯಿತು, ಅದನ್ನು ಪಾಲಿಸದೇ ಇರುವವರು ಕಡಿಮೆ. ಆದರೆ ಅದೃಷ್ಟವಶಾತ್ ಸ್ಟೀವ್ ಪಾಲಕರು ಹಾಗೆ ಮಾಡಲಿಲ್ಲ.

ಅವರು ಡಾಕ್ಟರ್ ಮಾತನ್ನು ಕೇಳಿದ್ದರೆ ಆಜೀವ ಪರ್ಯಂತ ಸ್ಟೀವ್ ಮಂಚದ ಮೇಲೆಯೇ ಮಲಗಿರುತ್ತಿದ್ದ. ಅವನ ಪಾಲಕರು ಡಾಕ್ಟರ್ ಹೇಳಿದ್ದನ್ನು ನಂಬುವುದಿಲ್ಲ. ನಂಬಿಕೆ ಎಷ್ಟು ಮುಖ್ಯ ನೋಡಿ. ಕೆಲವೊಮ್ಮೆ ನಂಬದೇ ಇರುವುದೂ ಬಹಳ ಅವಶ್ಯಕ. ಸ್ಟೀವ್ ಎಲ್ಲರಂತೆ ಸ್ವತಂತ್ರವಾಗಿ ಬದುಕಲು ಪಾಲಕರು ಸಹಾಯ ಮಾಡುತ್ತಾರೆ. ಆತನನ್ನು ನಡೆಸುತ್ತಾರೆ. ಜಿಂಕೆಯಂತೆ ಓಡದಿ ದ್ದರೂ ಆಮೆಯಂತೆ ನಿಧಾನವಾಗಿ ನಡೆಯುವುದನ್ನು ಆತ ಕಲಿತ. ಬೇರೆ ಮಕ್ಕಳ ರೀತಿ ಶಾಲೆಯ ಮೆಟ್ಟಿಲನ್ನು ಹತ್ತಿದ. ಓದಲು ಕಲಿತ. ಪರೀಕ್ಷೆ, ತರಬೇತಿ ಹೀಗೆ ಎಲ್ಲವೂ ನಡೆದು, ಕೊನೆಗೆ ಒಂದು ಕೆಲಸವೂ ಸಿಗುತ್ತದೆ. ಕ್ಷಮತೆ ಎನ್ನುವುದು ನಮ್ಮ ಪರಿಶ್ರಮದ ಫಲ. ಸ್ಟೀವ್ ಪ್ರಯತ್ನ ಪಟ್ಟು ಸಮಾಜದಲ್ಲಿ ಒಬ್ಬ ಜವಾಬ್ದಾರಿ ನಾಗರಿಕನಾದ. ಮತ್ತೇನು ಸಾಧಿಸಬೇಕು? ಮಂಚದ ಮೇಲೆ ಇನ್ನೊಬ್ಬರ ಮೇಲೆ ಅವಲಂಬಿತವಾಗಿರಬೇಕಿದ್ದವನು ಇಂದು ಸ್ವತಂತ್ರವಾಗಿ ಬದುಕುತ್ತಿದ್ದಾನೆ.

ವ್ಯಾಯಾಮದ ಕಠಿಣ ಪರಿಶ್ರಮ ಆದರೆ ಸ್ಟೀವ್ ಇಷ್ಟಕ್ಕೇ ನಿಲ್ಲುವುದಿಲ್ಲ. ಅವನು ಹೊಸ ಕನಸುಗಳನ್ನು ಕಾಣುತ್ತಾನೆ. ಈ ಜೀವನ ದಲ್ಲಿ, ಯಾರೇ ಆಗಲಿ ಕನಸು ಕಾಣುವುದು ಮುಖ್ಯ ತಾನೆ! 2011ರಲ್ಲಿ ಸ್ಟೀವ್‌ಗೆ ತನ್ನ ದೇಹದ ಸಾಮರ್ಥ್ಯವನ್ನು ಇನ್ನಷ್ಟು ವೃದ್ಧಿ ಪಡಿಸುವ ಮನಸ್ಸಾಗುತ್ತದೆ. ವ್ಯಾಯಾಮದಿಂದ ಇನ್ನಷ್ಟು ಶಕ್ತಿ ತನಗೆ ಸಿಗಬಹುದು ಎಂಬ ಆಶಾಭಾವ ಹುಟ್ಟುತ್ತದೆ. ಆತ ವ್ಯಾಯಾಮ ಶಾಲೆಗೆ ಹೋಗುತ್ತಾನೆ. ನಿಲ್ಲುವುದೇ ಕಷ್ಟ, ಇನ್ನೆಲ್ಲಿ ಕಸರತ್ತು!

ಆದರೆ ಸ್ಟೀವ್ ಯಾರನ್ನೂ ಗಮನಿಸದೇ, ಆಗದು ಎನ್ನುವುದನ್ನು ಹತ್ತಿರ ಬರಲು ಕೊಡದೆ ನಿರಂತರ ಅಭ್ಯಾಸ ಮಾಡುತ್ತಾನೆ.
ಒಂದಲ್ಲ, ಎರಡಲ್ಲ, ತಿಂಗಳು ದಾಟಿತು, ವರ್ಷ ದಾಟಿತು. ಮೂರು ವರ್ಷಗಳ ಕಾಲ ಸತತ ಪ್ರಯತ್ನ ಆತ ತನ್ನ ದೇಹಕ್ಕೆ ಒಂದು ಸುಂದರ ರೂಪವನ್ನು ತಂದುಕೊಳ್ಳುತ್ತಾನೆ, ಶಕ್ತಿ ಹೆಚ್ಚುತ್ತದೆ. ನಾವೆಲ್ಲ ಒಂದು ವಾರ ಜಿಮ್‌ಗೆ ಹೋಗಿ ಅಮೇಲೆ ಅದು, ಇದು ಪರೀಕ್ಷೆ, ಪ್ರವಾಸ, ಕೆಲಸ ಅಂತ ಒಂದು ಸೋಗು ಮಾಡಿ ಬಿಟ್ಟು ಬಿಡುತ್ತೇವೆ. ಇಂತಹ ಮನೋಭಾವದವರು ಸ್ಟೀವ್’ನ ಛಲ, ಏಕಾಗ್ರತೆಯನ್ನು ನೋಡಿ ಕಲಿಯಬೇಕು, ಸ್ಪೂರ್ತಿ ಪಡೆಯಬೇಕು. ನನ್ನ ಹತ್ತಿರ ಇದೆಲ್ಲ ಯಾಕೆ ಆಗುವುದಿಲ್ಲ? ಎಂದು ಇಂದು ನಾನೇ ನನಗೆ ಪ್ರಶ್ನೆ ಹಾಕಿದ್ದೇನೆ.

ಕೇವಲ ವ್ಯಾಯಾಮ ಮಾಡುವುದಷ್ಟೇ ಅಲ್ಲ, ತನ್ನ ತರಬೇತಿದಾರನ ಮುಖಾಂತರ ಸ್ಪರ್ಧೆಗಳಲ್ಲಿ ಭಾಗವಹಿಸುವ ಮಾರ್ಗದರ್ಶನ ವನ್ನು ಪಡೆಯುತ್ತಾನೆ.ಇನ್ನೂ ಮುಂದಕ್ಕೆ ಹೋಗಿ ಆತ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸು ತ್ತಾನೆ. ಇಂತಹ ಬಹಳಷ್ಟು ಸ್ಪರ್ಧೆಯಲ್ಲಿ ಗೆದ್ದಿದ್ದಾನೆ ಕೂಡ. ಕಷ್ಟಗಳಿಗೆ ಕೆಲಸವಿಲ್ಲ, ಬಂದು ಒಕ್ಕರಿಸುತ್ತವೆ. ಅದರ ಜತೆ ಕೂತರೆ, ಆ ಕಷ್ಟಗಳು ತರುವ ಬೇಸರವನ್ನು ಮನಸ್ಸಿಗೆ ಆವಾಹಿಸಿಕೊಂಡು ಮುದುಡಿದರೆ, ನಾವೂ ಹಾಗೆಯೇ ಇರುತ್ತೇವೆ, ಮುಂದೆ ಹೋಗಲು ಆಗು ವುದೇ ಇಲ್ಲ. ಜೀವನದಲ್ಲಿ ಆಗಾಗ ಎದುರಾಗುವ ಕಷ್ಟಗಳನ್ನು ಮೊದಲು ಮಾತಾಡಿಸಲೇ ಬಾರದು, ಅವುಗಳಿಗೆ ಹೆಚ್ಚು ಪ್ರಾಮು ಖ್ಯತೆ ಕೊಡಬಾರದು, ನಮ್ಮಷ್ಟಕ್ಕೆ ನಾವು ಕೆಲಸ ಮಾಡುತ್ತಾ ಇರಬೇಕು. ಸ್ಟೀವ್ ತನ್ನ ಹುಟ್ಟಿನಿಂದ ಬಂದ ತೊಂದರೆಯ ಬಗ್ಗೆ ಗಮನ ಕೊಟ್ಟಿದ್ದರೆ ಆತ ನಿಲ್ಲುತ್ತಲೂ ಇರಲಿಲ್ಲ. ತನ್ನ ಕಷ್ಟವನ್ನು ಕಾಲಿನ ಅಡಿ ಹಾಕಿ, ಎದ್ದು ನಿಂತಿದ್ದರಿಂದಲೇ ಇಂದು ಜಗತ್ತಿಗೆ ಸ್ಪೂರ್ತಿ ಎನಿಸಿದ್ದಾನೆ.

ಇನ್‌ಸ್ಟಾ ಗ್ರಾಾಂ ಸ್ಟಾರ್
ನರ ರೋಗಗಳಿಂದ ಬಳಲುತ್ತಿದ್ದರೂ, ನಿಲ್ಲುವುದೇ ಕಷ್ಟ ಎಂದು ವೈದ್ಯರು ಹೇಳಿದ್ದರೂ, ಸತತ ಪರಿಶ್ರಮದಿಂದ ಬಾಡಿ ಬಿಲ್ಡಿಿಂಗ್ ಮಾಡಿ, ಎಲ್ಲರಿಗೆ ಸ್ಫೂರ್ತಿ ತುಂಬಿದ ಸ್ಟೀವ್ ಎಲೆಕ್ಸಿ ಅಮೆರಿಕದ ವರ್ಜೀನಿಯಾ ಪ್ರದೇಶದವನು. 2016ರಲ್ಲಿ ಆತ ದೇಹ ದಾರ್ಢ್ಯ ಕಸರತ್ತು ಮಾಡುವ ವಿಡಿಯೋವನ್ನು ವೈರಲ್ ಮಾಡುತ್ತಾನೆ. ಅದನ್ನು ಕಂಡ ಜನರು ಬಹಳವಾಗಿ ಪ್ರಶಂಸಿಸಿದರು, ತಾವೂ ಅವನಿಂದ ಸ್ಫೂರ್ತಿ ಪಡೆದರು. ಆತನ ಇನ್ಸ್ಟಾಗ್ರಾಾಂ ಖಾತೆಗೆ 15,000 ಕ್ಕಿಿಂತಲೂ ಹೆಚ್ಚಿನ ಫಾಲೋವರ್‌ಸ್‌ ಇದ್ದಾರೆ. 2011ರಿಂದ ಈತನಿಗೆ ಕ್ರಿಸ್ ಲೋವೆಲೆಟ್ ಎಂಬಾತ ತರಬೇತಿ ನೀಡುತ್ತಿದ್ದಾನೆ.