Friday, 13th December 2024

ಮೊಟ್ಟೆಯ ಕಥೆ ಹೇಳಿದ ಶೆಟ್ರು ವೃಷಭ ವಾಹನದಲ್ಲಿ ಬಂದ್ರು

ಪ್ರಶಾಂತ್‌ ಟಿ.ಆರ್‌

ಒಂದು ಮೊಟ್ಟೆಯ ಕಥೆ ಹೇಳಿ ನಗಿಸಿದ ರಾಜ್ ಬಿ ಶೆಟ್ಟಿ, ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಿ, ಮಾಯಾಬಜಾರ್‌ನಲ್ಲೂ ಮೋಡಿ ಮಾಡಿದರು. ಬಳಿಕ ಕಂಗೆಡಿಸಿದ ಕರೋನಾದಿಂದ ಎಲ್ಲರಂತೆ ಮನೆಯಲ್ಲಿಯೇ ಉಳಿದು ಈಗ ಹೊಸ ಅವತಾರದಲ್ಲಿ ತೆರೆಗೆ ಬರಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈ ವರ್ಷ ಗರುಡ ಗಮನ ವೃಷಭ ವಾಹನದಲ್ಲಿ ಭರ್ಜರಿಯಾಗೇ ಎಂಟ್ರಿಕೊಡಲಿದ್ದಾರೆ. ಈಗಾಗಲೇ ಚಿತ್ರದ ಚಿತ್ರೀಕರಣವೂ ಮುಗಿದಿದ್ದು ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ವಿ.ಸಿನಿಮಾಸ್‌ನೊಂದಿಗೆ ಮಾತನಾಡಿದ ರಾಜ್.ಬಿ.ಶೆಟ್ಟಿ ಗರುಡ ಗಮನ ವೃಷಭ ವಾಹನದ ಬಗ್ಗೆ ಹೇಳಿದ್ದು ಹೀಗೆ.

ವಿ.ಸಿನಿಮಾಸ್ : ಶೆಟ್ಟರೆ ಚಿತ್ರದ ಶೀರ್ಷಿಕೆಯಲ್ಲಿಯೇ ಕುತೂಹಲವಿದೆ? ಇದು ಪೌರಾಣಿಕ ಕಥೆಯೇ ಎಂದೆನಿಸು ತ್ತದೆ? ಪೋಸ್ಟರ್ ನೋಡಿದರೆ ಪ್ರಸ್ತುತ
ಕಾಲಘಟ್ಟದ ಕಥೆಯೇ ಅನ್ನಿಸುತ್ತದೆ? ಏನಿದು ಗರುಡ ಗಮನ ವೃಷಭ ವಾಹನ?
ರಾಜ್ ಶೆಟ್ಟಿ : ಗರುಡ ವಿಷ್ಣುವಿನ ಅವತಾರವನ್ನು, ವೃಷಭ ಶಿವನ ಅವತಾರವನ್ನು ಸೂಚಿಸುತ್ತದೆ. ಚಿತ್ರದಲ್ಲಿ ರಿಷಬ್‌ಶೆಟ್ಟಿ ಗರುಡನಾಗಿ, ನಾನು ವೃಷಭ ಎಂದರೆ ಶಿವನಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಒಬ್ಬ ಸೃಷ್ಟಿ ಕರ್ತನಾದರೆ ಮತ್ತೊಬ್ಬ ಲಯಕಾರಕ. ಹಾಗಾದರೆ ಲಯಕಾರಕನಾಗಿದ್ದು ಯಾಕೆ? ಎಂಬುದೇ ಸಸ್ಪೆನ್ಸ್, ಅದನ್ನು ತೆರೆಯಲ್ಲಿಯೇ ನೋಡಬೇಕು. ಶೀರ್ಷಿಕೆಗೆ ತಕ್ಕಂತೆ ಚಿತ್ರದಲ್ಲಿ ಬಹಳಷ್ಟು ಟ್ವಿಸ್ಟ್‌ಗಳಿವೆ. ಅವೆಲ್ಲವನ್ನೂ ತೆರೆಯಲ್ಲಿ ನೋಡುತ್ತಿದ್ದರೆ ಸಿನಿಮಾ ಥ್ರಿಲ್ ನೀಡುತ್ತದೆ. ಹೊಸ ಅನುಭವ ಕೊಡುತ್ತದೆ.

ವಿ. ಸಿ : ನಿಮ್ಮ ಚಿತ್ರಗಳುಎಂದ ಮೇಲೆ ಅಲ್ಲಿ ಏನಾದರೂ ಒಂದು ವಿಷೇಷತೆ ಇರುತ್ತದೆ? ಈ ಸಿನಿಮಾದಲ್ಲಿ ಯಾವ ವಿಶೇಷತೆಯನ್ನು ಕಾಣಬಹುದು?
ರಾಜ್ ಶೆಟ್ಟಿ : ಅದನ್ನು ಚಿತ್ರದಲ್ಲಿ ನೋಡಿ ನೀವೆ ಹೇಳಬೇಕು. ಚಿತ್ರಕ್ಕೆ ಸೆನ್ಸಾರ್ ಆಗಿದ್ದು, ಪ್ಯೂರ್ ಎ ಸರ್ಟಿಫಿಕೇಟ್ ಸಿಕ್ಕಿದೆ. ಅಂದಮೇಲೆ ಇದು ಸಂಪೂರ್ಣ ಕುಟುಂಬ ಕುಳಿತು ನೋಡುವ ಚಿತ್ರ ಎಂಬುದು ಈಗಾಗಲೇ ಖಾತ್ರಿ ಯಾಗಿದೆ. ಪ್ರೇಕ್ಷಕರಿಗೆ ಏನಾದರೂ ಒಂದು ವಿಷೇಷತೆ ನೀಡಲೇಬೇಕು ಎಂದು ಚಿತ್ರ ನಿರ್ದೇಶಿಸುತ್ತೇವೆ. ನಟಿಸು ತ್ತೇವೆ. ಈ ಚಿತ್ರವೂ ಕೂಡ ಹಾಗೆ. ಅಂದುಕೊಂಡಂತೆ ಚಿತ್ರ ಪೂರ್ಣಗೊಳಿಸಿದ ತೃಪ್ತಿ ನಮಗಿದೆ.

ವಿ.ಸಿ: ಚಿತ್ರದ ಕುರಿತು ಒನ್ ಸ್ಟೋರಿ ಹೇಳುವುದಾದರೆ ?
ರಾಜ್ ಶೆಟ್ಟಿ : ಇದು ಮೂವತ್ತು ವರ್ಷದ ಹಿಂದಿನ ಕಾಲಘಟ್ಟದ ಕಥೆ. ಇಲ್ಲಿ ಇಬ್ಬರು ನಾಯಕರು. ಮೊದಲ ಹೇಳಿದಂತೆ ಒಬ್ಬ ಸೃಷಿಕರ್ತನಾದರೆ ಮತ್ತೊಬ್ಬ ಲಯಕಾರಕ. ಹಾಗಂತ ಇಲ್ಲಿ ಯಾರೂ ಖಳನಾಯಕರಿಲ್ಲ. ಆದರೆ ಸಂದರ್ಭ ಹೇಗೆ ಮನುಷ್ಯನನ್ನು ಬದಲಾ ಯಿಸುತ್ತದೆ ಎಂಬುದೇ ಚಿತ್ರದ ಸ್ಟೋರಿ. ಅದನ್ನು ಎಲ್ಲರೂ ಮೆಚ್ಚುವಂತೆ ತೆರೆಯಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದೇವೆ.

ವಿ.ಸಿ: ಈ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಅವರೊಂದಿಗೆ ಡ್ಯುಯೆಟ್ ಹಾಡುವ ನಟಿ ಯಾರು ?
ರಾಜ್ ಶೆಟ್ಟಿ : ಅದು ಇನ್ನೂ ಸಸ್ಪೆನ್ಸ್. ನನ್ನೊಂದಿಗೆ ಅಭಿನಯಿಸುವ ನಟಿ ಯಾರು ಎಂಬುದನ್ನು ಎಲ್ಲಿಯೂ ಬಹಿರಂಗ ಪಡಿಸಿಲ್ಲ. ಅದನ್ನು ಚಿತ್ರದಲ್ಲಿಯೇ ನೋಡ ಬೇಕು. ಉಳಿದಂತೆ ಪ್ರಕಾಶ್ ತುಮ್ಮಿನಾಡ್, ವಿನತ್ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ.

ವಿ.ಸಿ: ವೃಷಭ ವಾಹನ ಏರಿ ಯಾವಾಗ ತೆರೆಗೆ ಬರುತ್ತೀರ?
ರಾಜ್ ಶೆಟ್ಟಿ : ಈಗಾಗಲೇ ಚಿತ್ರೀಕರಣ ಮುಗಿಸಿ ತೆರೆಗೆ ಬರಲು ಕಾಯುತ್ತಿದ್ದೇವೆ. ಈಗಲೇ ಸಿನಿಮಾ ಬಿಡುಗ ಡೆಯ ಬಗ್ಗೆ ಏನು ಹೇಳಲು ಸಾಧ್ಯವಾಗುವುದಿಲ್ಲ. ಯಾಕೆಂದರೆ ಕರೋನಾದಿಂದ ಸಂದರ್ಭ ಹಾಗಿದೆ. ಒಂದಂತು ಸತ್ಯ, ಚಿತ್ರಮಂದಿರಗಳು ತೆರೆದು ಸಂಪೂರ್ಣ ಆಸನದ ಸಾಮರ್ಥ್ಯದಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಿದಾಗ ಸಿನಿಮಾವನ್ನು ತೆರೆಗೆ ತರುತ್ತೇವೆ.