Saturday, 14th December 2024

ಓರಾಂಗುಟಾನ್ ಸ್ನೇಹ

ವಿರೇಶ ಬಂಗಾರಶೆಟ್ಟರ ಕುಷ್ಟಗಿ

ನನ್ನ ಮುಂದಿನ ಪ್ರವಾಸ ಇಂಡೋನೇಷಿಯಾದ ಬ್ರೊನಿಯೋ ಓರಾಂಗುಟಾನ್ ಸಂರಕ್ಷಣೆ ಕೇಂದ್ರಕ್ಕೆ ಹೋಗುವದಾಗಿದೆ. ಅಲ್ಲಿ ಒಂದು ವಾರ ಕಾಲ ಓರಾಂಗುಟಾನ್ ಸೇವೆ ಮಾಡಲು, ಅವುಗಳನ್ನು ಅರಿಯಲು ಅವುಗಳೊಂದಿಗೆ ಒಡನಾಡಲು ಮನಸ್ಸು ತವಕಿಸುತ್ತಿದೆ. ಈ ಕರೋನಾ ಕಾಟ ಇರದಿದ್ದರೆ ಈಗಾಗಲೇ ನಾನು ಹೋಗಿ ಬರುತ್ತಿದ್ದೆ.

ಅಲ್ಲಿಯ ಸಂರಕ್ಷಣಾ ಕೇಂದ್ರ ದೊಂದಿಗೆ ಮಾತಾನಾಡಿ ಟಿಕೆಟ್ ಬುಕ್ ಮಾಡುವುದೊಂದೇ ಬಾಕಿ ಇತ್ತು. ಅಷ್ಟರೊಳಗೆ ಕರೋನಾ ನನ್ನ ಆಸೆಗೆ ತಣ್ಣೀರೆರಚಿತು. ಪ್ರವಾಸಿಗರು ಅಲ್ಲಿ ಈ ವಿಶಿಷ್ಟ ಪ್ರಾಣಿಗಳ ಸೇವೆ ಮಾಡಲು ಅವಕಾಶವಿದ್ದು, ಅದಕ್ಕಾಗಿ ವಿಶ್ವದ
ವಿವಿಧ ಭಾಗಗಳಿಂದ ಅಲ್ಲಿಗೆ ಧಾವಿಸುತ್ತಾರೆ.

ಅವುಗಳಿಗೆ ಬೇಕಾದ ಪರಿಸರ ನಿರ್ಮಾಣ ಕಾಮಗಾರಿಗೆ ಸಹಾಯ ಮಾಡುವದು, ಅವುಗಳಿಗೆ ಆಹಾರ ಒದಗಿಸುವದು. ಜೊತೆಗೆ
ಅವುಗಳ ಜೀವನ ಶೈಲಿ ಹತ್ತಿರದಿಂದ ತಿಳಿದುಕೊಳ್ಳುವ ಭಾಗ್ಯವೂ ಸಿಕ್ಕಂತಾಗುತ್ತದೆ. ಇದೊಂದು ರೀತಿಯಲ್ಲಿ ಬಯಸದೇ ಬಂದ ಭಾಗ್ಯ. ನನ್ನ ಪ್ರಕಾರ ಪ್ರವಾಸ ಎಂದರೆ ಅಲ್ಲಿ ಇಲ್ಲಿ ತಿರುಗಾಡಿ ಸುಸ್ತಾಗುವದಲ್ಲ! ಕಾಡಿನ ಪರಿಸರ ಮಧ್ಯೆ ಠಿಕಾಣಿ ಹೂಡಿ, ಅಲ್ಲಿನ ಜೀವ ವೈವಿಧ್ಯ , ಪರಿಸರ ತಿಳಿದುಕೊಳ್ಳುವದು ನನ್ನ ಹವ್ಯಾಸ.

ಅಂಥ ಅವಕಾಶಕ್ಕಾಗಿ ಹುಡುಕುವಾಗ ಬ್ರೊನಿಯೋದ ಆ ಸಂಸ್ಥೆ ನನಗೆ ಒದಗಿಸಿ ಕೊಟ್ಟಿತ್ರು. ಕರೋನಾ ಕಡಿಮೆ ಆಗುವದನ್ನೇ ಕಾಯುತ್ತಿದ್ದೇನೆ. ಅಲ್ಲಿಗೆ ಧಾವಿಸಿ ಓರಾಂಗುಟಾನ್ ಗಳೊಂದಿಗೆ ಕಾಲ ಕಳೆಯುವದೇ ನನ್ನ ಪ್ರವಾಸದ ಆಶಯ!