Wednesday, 11th December 2024

ರವಿಶಂಕರ್‌ ಈಗ ಸೀರಿಯಲ್ ಸೆಟ್ ಚಂದ್ರಪ್ಪ

ಆರುಮುಗ ರವಿಶಂಕರ್ ಹೊಸ ಗೆಟಪ್‌‌ನಲ್ಲಿ ಮತ್ತೆ ನಮ್ಮ ಮುಂದೆ ಬರಲು ಸಿದ್ಧವಾಗಿದ್ದಾರೆ. ಈ ಹಿಂದೆ ಖಳನಾಗಿ, ಹಾಸ್ಯ ನಟ ನಾಗಿ ರಂಜಿಸಿದ ರವಿಶಂಕರ್ ಈ ಬಾರಿ ‘ತಲ್ವಾರ್ ಪೇಟೆ’ಯಲ್ಲಿ, ಸೀರಿಯಲ್ ಸೆಟ್ ಚಂದ್ರಪ್ಪನಾಗಿ ನಮ್ಮ ಮುಂದೆ ಬರಲಿದ್ದಾರೆ.

ನಾಗಬ್ರಹ್ಮ ಕ್ರಿಯೇಷನ್ಸ್’ನಲ್ಲಿ ನಿರ್ಮಾಣವಾಗುತ್ತಿರುವ ಅದ್ಧೂರಿ ಚಿತ್ರ ‘ತಲ್ವಾರ್‌ಪೇಟೆ’ ಚಿತ್ರ ಸದ್ದಿಲ್ಲದೆ ಸೆಟ್ಟೇರಿದ್ದು, ಚಿತ್ರದ
ಚಿತ್ರೀಕರಣ ಭರದಿಂದ ಸಾಗಿದೆ. ವಸಿಷ್ಠ ಸಿಂಹ ನಾಯಕರಾಗಿ ನಟಿಸುತ್ತಿರುವ ಈ ಚಿತ್ರದಲ್ಲಿ ಬಹುದೊಡ್ಡ ತಾರಾಬಳಗವಿದೆ. ಈಗ ಕಲಾವಿದರ ಬಳಗಕ್ಕೆ ನಟ ರವಿಶಂಕರ್ ಸೀರಿಯಲ್ ಸೆಟ್ ಚಂದ್ರಪ್ಪನಾಗಿ ಭರ್ಜರಿ ಎಂಟ್ರಿ ಕೊಡುತ್ತಿದ್ದಾರೆ.

ನಾಯಕಿಯಾಗಿ ಸೋನಾಲ್ ನಟಿಸುತ್ತಿದ್ದಾರೆ. ಚತುರ್ಭಾಷಾ ಕಲಾವಿದ ಹರೀಶ್ ಉತ್ತಮನ್, ಯಶ್ವಂತ್ ಶೆಟ್ಟಿ, ಆಶಾಲತಾ, ಲಿಂಗ ರಾಜ್ ಬಲವಾಡಿ, ಸುರೇಶ್ ಚಂದ್ರ ಪ್ರದೀಪ್ ಪೂಜಾರಿ, ರಜನಿಕಾಂತ್, ಮನು ಮುಂತಾದವರ ತಾರಾ ಬಳಗವಿದೆ.

ನವೆಂಬರ್ 28 ರಂದು ರವಿಶಂಕರ್ ಅವರ ಹುಟ್ಟುಹಬ್ಬವಿದ್ದು, ಅದಕ್ಕಾಗಿ ಚಿತ್ರತಂಡ ಪೋಸ್ಟರ್ ಬಿಡುಗಡೆ ಮಾಡಿದ್ದು, ಶುಭ ಕೋರಿದೆ. ಕೆ.ಲಕ್ಷ್ಮಣ್ ಹಾಗೂ ಶ್ರೀರಾಮ್ ನಿರ್ದೇಶನದಲ್ಲಿ ‘ತಲ್ವಾರ್‌ಪೇಟೆ’ ಮೂಡಿ ಬರುತ್ತಿದೆ. ಇವರಿಬ್ಬರು ಜಂಟಿಯಾಗಿ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ.

ಎಂ.ಯು.ನಂದಕುಮಾರ್ ಛಾಯಾಗ್ರಹಣ, ಶ್ರೀಕಾಂತ್ ಸಂಕಲನ, ಡಿಫರೆಂಟ್ ಡ್ಯಾನಿ, ರಾಮ್ ಲಕ್ಷ್ಮಣ್ ಸಾಹಸ ನಿರ್ದೇಶನ, ಮುರಳಿ, ಮೋಹನ್, ಧನು, ಗೀತಾ ನೃತ್ಯ ನಿರ್ದೇಶನ ಹಾಗೂ ರಘು ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ಜಯಂತ್ ಕಾಯ್ಕಿಣಿ ಈ ಚಿತ್ರದ ಹಾಡುಗಳನ್ನು ರಚಿಸಿದ್ದು, ಹರ್ಷವರ್ಧನ್ ರಾಜ್ ಸಂಗೀತ ನೀಡುತ್ತಿದ್ದಾರೆ.