Wednesday, 11th December 2024

ನಾನು ಪ್ರೀತಿಸುತ್ತಿರುವೆ…ರೊಮ್ಯಾಂಟಿಕ್ ಸಾಂಗ್ ರಿಲೀಸ್‌

ಈ ಲಾಕ್‌ಡೌನ್ ಅವಽಯಲ್ಲಿ ಸಂಗೀತ ಪ್ರಿಯರನ್ನು ಪ್ರೇಮ ಲೋಕಕ್ಕೆ ಕೊಂಡೊಯ್ಯುವ ನಾನು.. ನಾನು.. ಪ್ರೀತಿಸುತ್ತಿರುವೆ
ಆಲ್ಬಂ ಹಾಡು ಬಿಡುಗಡೆಯಾಗಿದೆ. ಪ್ರೀತಿಗೆ ಹೃದಯವಂತಿಕೆ ಮುಖ್ಯವೆ ಹೊರತು ಸೌಂದರ್ಯವಲ್ಲ ಎಂಬುದನ್ನು ಈ ಹಾಡಿನ ಮೂಲಕ ಹೇಳಿದ್ದಾರೆ ನಿರ್ದೇಶಕ ಕಲಿಗೌಡ.

ಈ ಹಿಂದೆ ತನಿಖೆ ಚಿತ್ರವನ್ನು ನಿರ್ದೇಶಿಸಿ ಯಶಸ್ವಿಯಾದ ಕಲಿಗೌಡ, ಆಲ್ಬಂ ಸಾಂಗ್ ಮೂಲಕ ಪ್ರೀತಿಯ ಕಥೆ ಹೇಳಿದ್ದಾರೆ. ಹಾಡಿನುದ್ದಕ್ಕೂ ಪ್ರೀತಿಯನ್ನು ಸಾರುವ ಸಾಲುಗಳನ್ನು ಪೋಣಿಸುವ ಮೂಲಕ ಮಧುರವಾದ ಸಾಹಿತ್ಯವನ್ನು ರಚಿಸಿದ್ದಾರೆ. ಹಲವು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿರುವ ನಟಿ ಮೇಘಾಶ್ರೀ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದು, ಮುದ್ದಾಗಿ ಕಂಗೊಳಿಸಿ ದ್ದಾರೆ. ಇವರೊಂದಿಗೆ ಅರುಣ್ ಚಂದ್ರಪ್ಪ ಡ್ಯುಯೆಟ್ ಹಾಡಿದ್ದಾರೆ.

ಡೈಮಂಡ್ ಟ್ರೀ ಪ್ರೊಡಕ್ಷನ್‌ನಲ್ಲಿ ಹಾಡು ನಿಮಾಣವಾಗಿದ್ದು, ಮಮತಾಶ್ರೀ ಬಂಡವಾಳ ಹೂಡಿದ್ದಾರೆ. ಆಲ್ಬಂ ಹಾಡಿಗಳಿ ಗಾಗಿಯೇ ಡಿಎಂಎಫ್ ಆಡಿಯೋಸ್ ಸ್ಥಾಪಿಸಲಾಗಿದ್ದು, ಹೊಸಬರಿಗೆ ಪ್ರೋತ್ಸಾಹ ನೀಡುವ ಕಾರ್ಯ ಮಾಡಲಾಗುತ್ತಿದೆ. ಹಾಗಾಗಿ ಆಲ್ಬಂ ಸಾಂಗ್ ನಿರ್ಮಾಣ ಮಾಡುವ ಹೊಸಬರಿಗೆ ಇದು ವೇದಿಕೆಯಾಗಲಿದೆ.

ಹಾಡು ಮೆಚ್ಚಿದ ಉಪ್ಪಿ
ನಾನು..ನಾನು.. ಪ್ರೀತಿಸುತ್ತಿರುವೆ ಹಾಡನ್ನು ರಿಯಲ್ ಸ್ಟಾರ್ ಉಪೇಂದ್ರ ಬಿಡುಗಡೆ ಮಾಡಿದ್ದು, ಹಾಡನ್ನು ನೋಡಿ ಮೆಚ್ಚಿದ್ದಾರೆ. ಮಧುರವಾದ ಗೀತೆ ಪ್ರೇಮಲೋಕಕ್ಕೆ ಕೋಡೊಯ್ಯುತ್ತದೆ ಎಂದು ತಲೆದೂಗಿದ ಉಪ್ಪಿ, ಹೊಸಬರ ಹೊಸ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.