ಟೆಕ್ ಸೈನ್ಸ್
ಎಲ್.ಪಿ.ಕುಲಕರ್ಣಿ
ಅತ್ಯಾಧುನಿಕ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯ ಅಂಶಗಳನ್ನು ಉಪಯೋಗಿಸಿಕೊಂಡು ತಯಾರಾಗಲಿರುವ ಕೃತಕ ಚರ್ಮವು, ಹೆಚ್ಚು ಉಪಯೋಗಕಾರಿ ಎನಿಸುವ ಸಂಶೋಧನೆಯಾಗಲಿದೆ.
ಜಗತ್ತಿನಲ್ಲಿ ಬೆಂಕಿ ಅವಘಡಕ್ಕೆ ಸಿಲುಕಿ ಸಹಸ್ರಾರು ಜನ ಸುಟ್ಟುಹೋಗಿ ಕೆಲವರ ಸಾವುಗಳು ಸಂಭವಿಸಿದರೆ, ಬದುಕುಳಿದರ ಚರ್ಮ ಹಾನಿಗೊಳಗಾಗುತ್ತದೆ.
ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ ಬೆಂಕಿಯ ಅವಘಡಕ್ಕೆ ಸಿಲುಕಿ ಪ್ರತಿ ವರ್ಷ ಒಂದುವರೆ ಲಕ್ಷಕ್ಕೂ ಹೆಚ್ಚು ಜನ ಸಾವಿಗೀಡಾಗುತ್ತಿದ್ದಾರೆ. ಅರವತ್ತರಿಂದ ಎಪ್ಪತ್ತು ಸಾವಿರ ಜನ ಬದುಕುಳಿದರೂ ಮುಖದ ಚರ್ಮದ ಹಾನಿ ಅವರನ್ನು ಕಾಡುತ್ತದೆ. ಮುಖದ ಚರ್ಮ ಸುಟ್ಟವರಿಗೆ ಮತ್ತೆ ಕೊಂಚ ಸರಿಪಡಿಸಲು ಪ್ಲಾಸ್ಟಿಕ್ ಸರ್ಜರಿಯಂತಹ ಚಿಕಿತ್ಸೆ ಇದ್ದರೂ ಮೊದಲಿನಂತೆ ಚರ್ಮವನ್ನು ಸರಿಪಡಿಸಲು ಆಗುವುದಿಲ್ಲ.
ಇಂತಹ ಸಮಸ್ಯೆಯನ್ನು ಹೋಗಲಾಡಿಸಲು ಕೃತಕವಾಗೇ ಚರ್ಮವನ್ನು ತಯಾರಿಸಿ ಸುಟ್ಟ ವ್ಯಕ್ತಿಗಳ ದೇಹದ ಭಾಗ ಗಳಿಗೆ ಲೇಪಿಸಿದರೆ ಹೇಗಿರುತ್ತದಲ್ಲವೇ? ಅದನ್ನೇ ಇಂದು ವಿeನಿಗಳು ಮಾಡಲು ಹೊರಟಿದ್ದಾರೆ. ಈ ನಿಟ್ಟಿನಲ್ಲಿ ಸಂಶೋ ಧಕರು ಎಲೆಕ್ಟ್ರಾನಿಕ್ ಕೃತಕ ಚರ್ಮವನ್ನು ಅಭಿವೃದ್ಧಿಪಡಿಸಿದ್ದಾರೆ. ಅದು ನಿಜವಾದ ಚರ್ಮದಂತೆಯೇ ನೋವಿಗೆ ಪ್ರತಿಕ್ರಿಯಿಸುತ್ತದೆ. ಆಸ್ಟ್ರೇಲಿಯಾದ ತಜ್ಞರ ತಂಡವು ಅಭಿವೃದ್ಧಿಪಡಿಸಿದ ಮೂಲಮಾದರಿಯ ಸಾಧನವು ಮಾನವನ ಚರ್ಮವು ನೋವನ್ನು ಗ್ರಹಿಸುವ ವಿಧಾನವನ್ನು ವಿದ್ಯುನ್ಮಾನವಾಗಿ ಪುನರಾವರ್ತಿಸುತ್ತದೆ.
ಸಾಧನವು ದೇಹದ ತಕ್ಷಣದ ಪ್ರತಿಕ್ರಿಯೆಯನ್ನು ಅನುಕರಿಸುತ್ತದೆ ಮತ್ತು ನರ ಸಂಕೇತಗಳು ಮೆದುಳಿಗೆ ಚಲಿಸುವ ಅದೇ ಬೆಳಕಿನ ವೇಗದಿಂದ ನೋವಿನ ಸಂವೇದನೆಗಳಿಗೆ ಪ್ರತಿಕ್ರಿಯಿಸುತ್ತದೆ. ಇದರಿಂದ ಮುಂದಿನ ಪೀಳಿಗೆಯ ಬಯೋ ಮೆಡಿಕಲ್ ತಂತ್ರಜ್ಞಾನಗಳು ಮತ್ತು ಬುದ್ಧಿವಂತ ರೊಬೊಟಿಕ್ಸ್ ಕಡೆಗೆ ಈ ನೋವು-ಸಂವೇದನೆಯ ಮೂಲಮಾದರಿಯು ಗಮನಾರ್ಹವಾದ ಪ್ರಗತಿಯಾಗುತ್ತದೆ ಎಂದು ಪ್ರಮುಖ ಸಂಶೋಧಕ ಪ್ರೊಫೆಸರ್ ಮಧು ಭಾಸ್ಕರನ್ ಹೇಳುತ್ತಾರೆ.
ಚರ್ಮವು ನಮ್ಮ ದೇಹದ ಪ್ರಮುಖ ಸಂವೇದನಾ ಅಂಗವಾಗಿದೆ, ಸಂಕೀರ್ಣವಾದ ವೈಶಿಷ್ಟ್ಯಗಳೊಂದಿಗೆ ಏನಾದರೂ ನೋವುಂಟಾದಾಗ ಕ್ಷಿಪ್ರ-ಬೆಂಕಿಯ ಎಚ್ಚರಿಕೆ ಸಂಕೇತಗಳನ್ನು ಕಳುಹಿಸಲು ವಿನ್ಯಾಸಗೊಳಿಸಲಾಗಿದೆ ಎಂದು ಭಾಸ್ಕರನ್ ಹೇಳುತ್ತಾರೆ. ಇದುವರೆಗೆ ಯಾವುದೇ ಎಲೆಕ್ಟ್ರಾನಿಕ್ ತಂತ್ರಜ್ಞಾನಗಳು ವಾಸ್ತವಿಕ ವಾಗಿ ಮಾನವನ ನೋವಿನ ಭಾವನೆಯನ್ನು ಅನುಕರಿಸಲು ಸಾಧ್ಯವಾಗಿರಲಿಲ್ಲ. ಸದ್ಯ ತಯಾರಿಸಿದ ಈ ಚರ್ಮವು ಅತ್ಯಾಧುನಿಕ ಪ್ರತಿಕ್ರಿಯೆ ವ್ಯವಸ್ಥೆಗಳ ಭವಿಷ್ಯದ ಅಭಿವೃದ್ಧಿಯಲ್ಲಿ ಒಂದು ನಿರ್ಣಾಯಕ ಹೆಜ್ಜೆಯಾಗಿದೆ. ಸ್ಮಾರ್ಟ್ ಪ್ರಾಸ್ಥೆಟಿಕ್ಸ್ ಮತ್ತು ಬುದ್ಧಿವಂತ ರೊಬೊಟಿಕ್ಸ್ ಮಹತ್ವವನ್ನು ಜನಸಾಮಾನ್ಯರಿಗೆ ಮನದಟ್ಟು ಮಾಡಬೇಕಾಗಿದೆ.