Friday, 13th December 2024

ಕಾರ್ಮಿಕರ ಸಂಕಷ್ಟಕ್ಕೆ ಮಿಡಿದ ಸ್ನೇಹರ್ಷಿ

ಚಂದನವನದಲ್ಲಿ ಹೊಸ ಹೊಸ ಪ್ರತಿಭೆಗಳು ಬರುತ್ತಿವೆ. ಹೀಗೆ ಬಂದವರು ಹೊಸ ಹೊಸ ಪ್ರಯತ್ನ ಮಾಡುತ್ತಿದ್ದಾರೆ. ಹೀಗೆ ಮೂಡಿ ಬಂದ ಸಿನಿಮಾವೇ ಸ್ನೇಹರ್ಷಿ.

ನವನಟ ಕಿರಣ್ ನಾರಾಯಣ್ ಚಿತ್ರವನ್ನು ನಿರ್ಮಿಸಿ, ನಿರ್ದೆಶಿಸುತ್ತಿದ್ದಾರೆ. ನಾಯಕನಾಗಿಯೂ ನಟಿಸಿದ್ದಾರೆ. ಸ್ನೇಹರ್ಷಿ ಕಾರ್ಮಿಕರ ಕುರಿತಾದ ಚಿತ್ರ. ಚಿತ್ರದಲ್ಲಿ ಕಾರ್ಮಿಕರ ಸಂಕಷ್ಟ, ಅವರ ಬಗ್ಗೆ ಬೇಕಾಗಿರುವ ಕಾಳಜಿಯ ಬಗ್ಗೆ ಸಾರಿ ಹೇಳುತ್ತದೆ.
ಕೆಳಹಂತದ ಕಾರ್ಮಿಕರು ಪಡುತ್ತಿರುವ ಪಾಡು ಏನು? ಅದಕ್ಕೆ ಪರಿಹಾರ ಹೇಗೆ ಎಂಬುದರ ಬಗ್ಗೆ ಚಿತ್ರದಲ್ಲಿ ಉತ್ತರ ಕಂಡು ಕೊಳ್ಳುವ ಪ್ರಯತ್ನ ಮಾಡಲಾಗಿದೆ.

ಹಲವು ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿದ್ದ ಕಿರಣ್ ನಾರಾಯಣ್, ತಮ್ಮ ನೆರೆಹೊರೆಯಲ್ಲಿ ಕಂಡು ಕೇಳಿದ ಅನುಭವಗಳನ್ನು ಸಿನಿಮಾ ರೂಪದಲ್ಲಿ ತೆರೆಗೆ ತರಲು ಸಜ್ಜಾಗಿದ್ದಾರೆ. ಈಗಾಗಲೇ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ.

ಮೊದಲ ಹಂತವಾಗಿ ಚಿತ್ರದ ಹಾಡು ಬಿಡುಗಡೆಯಾಗಿದೆ. ಮೊದಲ ಹೆಜ್ಜೆಗೆ ಎಂಬ ಹಾಡು ಇದಾಗಿದ್ದು, ಕಿರಣ್ ನಾರಾಯಣ್ ಸಖತ್ತಾಗೆ ಹೆಜ್ಜೆ ಹಾಕಿದ್ದಾರೆ. ರಾಜು.ಎನ್.ಕೆ ಗೌಡ ಸಾಹಿತ್ಯದಲ್ಲಿ ಹಾಡು ಮೂಡಿಬಂದಿದ್ದು, ಆಕಾಶ್ ಸಂಗೀತ ನೀಡಿದ್ದಾರೆ. ನವೀನ್ ಸಜ್ಜು ಅವರ ಮಧುರ ದನಿಯಲ್ಲಿ ಹಾಡು ಮೂಡಿಬಂದಿದೆ. ಭಜರಂಗಿ ಮೋಹನ್ ಅವರ ನೃತ್ಯ ನಿರ್ದೇಶನವಿದೆ.
ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಈ ಹಾಡು ಒಂದು ಮಿಲಿಯನ್‌ಗೂ ಹೆಚ್ಚು ವೀಕ್ಷಣೆ ಕಂಡಿದೆ.