Saturday, 14th December 2024

2020 ಅತಂತ್ರ ಬದುಕಿಗೆ ತಂತ್ರಜ್ಞಾನದ ಆಸರೆ

ಬಡೆಕ್ಕಿಲ ಪ್ರದೀಪ

ಟೆಕ್ ಟಾಕ್‌

ಬದಲಾವಣೆಗೆ, ಬವಣೆಗೆ ದಾರಿ ಮಾಡಿಕೊಟ್ಟ ವರ್ಷ 2020. ದಿನಸಿಗಾಗಿ ಬವಣೆ ಒಂದೆಡೆ, ದಿನ ದೂಡುವುದಕ್ಕೆ ಬವಣೆ ಇನ್ನೊಂದೆಡೆ. ಕನಸಿಗೆ ತಡೆ ಒಂದೆಡೆ, ಮನಸಿದ್ದವರಿಗೆ ತಡೆಯಿಲ್ಲದ ಎಡೆ ಇನ್ನೊಂದೆಡೆ.

ಕೋವಿಡ್19ನ ಪ್ರಭಾವಕ್ಕೊಳಗಾಗಿ ಇಡೀ ವಿಶ್ವವೇ ಮಕಾಡೆ ಮಲಗುವ ಸ್ಥಿತಿಗೆ ಬಂದ ಕಾರಣ ಎಡೆ ಬದಲಾವಣೆಯ ಗಾಳಿ ಬೀಸಲೇಬೇಕಾದ ಹಾಗೂ ಈ ಬದಲಾವಣೆಯ ಅನಿವಾರ್ಯತೆಯಿಂದ ತೊಂದರೆ, ಬವಣೆಯ ಹಾದಿ ತುಳಿದವರ ನಡುವೆ ತಂತ್ರe
ನದಲ್ಲಿ ಹಾಗೂ ತಂತ್ರeನವನ್ನು ನಿತ್ಯ ಜೀವನದಲ್ಲಿ ಬಳಸಿಕೊಳ್ಳುವುದರಲ್ಲಿ ದೊಡ್ಡ ಮಟ್ಟಿನ ಉತ್ತೇಜನ ಸಿಕ್ಕಿದೆ.

ಮಾರ್ಚ್ ವೇಳೆಗೆ ನಮ್ಮ ಗಮನಕ್ಕೆ ಬಂದ ಕೋವಿಡ್19ನ ಪ್ರಭಾವ ನಂತರದ ದಿನಗಳಲ್ಲಿ ನಾವು ಮಾಡುವ ಪ್ರತಿಯೊಂದು ಕಾರ್ಯಕ್ಕೂ ಒಂದಿಂದು ರೀತಿಯಲ್ಲಿ ಮೂಗು ತೂರಿಸಿತು ಅಂದರೆ ತಪ್ಪಾಗದು. ಈ ಒಂಬತ್ತು ತಿಂಗಳುಗಳಲ್ಲಿ ತಂತ್ರಜ್ಞಾನ ತಂದಿರುವ ಬದಲಾವಣೆಗಳ ಸಣ್ಣ ಝಲಕ್ ಇಲ್ಲಿದೆ.

ಆನ್‌ಲೈನ್ ಲೋಕದ ಅನಾವರಣ  
ಆನ್‌ಲೈನ್ ಲೋಕ ದೊಡ್ಡ ರೀತಿಯಲ್ಲಿ ಅನಾವರಣಗೊಂಡ ವರ್ಷ 2020. ಮನೆಯ ಕುಳಿತರೆ ಕೆಲಸ ಮುಂದುವರೆಯದೆಂದು ಅರಿತ ಕಂಪೆನಿಗಳು, ಸರಕಾರಗಳು, ಎಲ್ಲವನ್ನು ಲೈನಿಗೆ ತರುವುದಕ್ಕೆ ಆನ್‌ಲೈನ್ ಮೊರೆ ಹೋಗಬೇಕಾದ ಅನಿವಾರ್ಯತೆಯನ್ನು ಅರಿತುಕೊಂಡಾಗ ಏಪ್ರಿಲ್ ಕೊನೆಯಾಗಿತ್ತು.

ಅದಾಗಲೇ ಹಲವು ಅವಶ್ಯಕ ಸೇವೆಯೊದಗಿಸುವ ಉದ್ಯಮಗಳು ಆನ್‌ಲೈನ್ ಹಾದಿ ಹಿಡಿದಾಗಿತ್ತು. ನಂತರದ ದಿನಗಳಲ್ಲಿ ಹೆಚ್ಚಿನೆಲ್ಲ ಕಂಪೆನಿಗಳು ಅದೇ ಹಾದಿ ಹಿಡಿಯಬೇಕಾಯಿತು. ಇದರೊಂದಿಗೆ ಕ್ಲಾಸ್ ರೂಮುಗಳೂ ಮೊಬೈಲ್ ಇತ್ಯಾದಿ ಪರದೆ ಗಳೊಳಗೆ ಹೊಕ್ಕಬೇಕಾದ ಪರಿಸ್ಥಿತಿಯೂ ಬಂತು. ಶಾಲೆಗಳ ಬಾಗಿಲು ತೆರೆಯದಿದ್ದರೂ, ಪುಸ್ತಕಗಳ ಪುಟಗಳನ್ನೇ ತಿಂಗಳುಗಟ್ಟಲೆ ತೆರೆಯದ ಮಕ್ಕಳು ಮೊಬೈಲ, ಕಂಪ್ಯೂಟರ್ ಪರದೆಯ ಮೂಲಕ ಕಲಿಯುವ ಪರಿಸ್ಥಿತಿ ಬಂದೊದಗಿತು.

ಇದರಿಂದಾಗಿ ವರ್ಷದ ಎರಡನೇ ಭಾಗದ ಮೊದಲಾರ್ಧದಲ್ಲಿ ಲ್ಯಾಪ್‌ಟಾಪ್ (ಹೊಸದು ಹಾಗೂ ಹಳೇದು), ಮೊಬೈಲುಗಳಿಗೆ ಅಭೂತಪೂರ್ವ ಬೇಡಿಕೆ ಬಂದೊದಗಿತು. ಬೈಜೂಸ್ ನಂತಹ ಕ್ಲಾಸ್‌ರೂಮ್‌ಗಳಿಗೆ 200 ಶೇಕಡಾ ಬೆಳವಣಿಗೆಯ ಅವಕಾಶ, ವೇದಾಂತುವಿಗೆ 100 ಮಿಲಿಯನ್ ಡಾಲರ್‌ನ ಹೂಡಿಕೆ ಸಿಕ್ಕದ್ದೂ ಆಯ್ತು. ಹಾಗಾಗಿ ವರ್ಕ್ ಫ್ರಮ್ ಹೋಮ್ ಅನ್ನುವುದು ಬಂದಿ
ದ್ದರಿಂದಾಗಿ ಮನೆಯೇ ಮಂತ್ರಾಲಯ, ವಿದ್ಯಾಲಯ, ಕಾರ್ಯಾಲಯ, ಹೀಗೆ ಎಲ್ಲವುಗಳಿಗೂ ಮನೆಯೇ ಮನೆ ಯಾಯಿತು!

ಮನೆಯಲ್ಲೇ ಕೂತು ಮೀಟಿಂಗ್
ಮನೆ ಬಿಟ್ಟು ಹೊರ ಹೋಗುವುದು ಅಸಾಧ್ಯವೆನಿಸಿದಾಗ, ಮನೆಯ ಕುಳಿತು ಎಲ್ಲವನ್ನೂ ಮಾಡಬೇಕಾದ ಪರಿಸ್ಥಿತಿ ಬಂದಾಗ ಏರುಗತಿಗೆ ಹೋಗಿದ್ದು ಝೂಮ, ಗೂಗಲ್ ಮೀಟ, ಮೈಕ್ರೊಸಾಫ್ಟ್ ಟೀಮ್ಸ್‌ನಂತಹ ಆನ್‌ಲೈನ್ ಮೀಟಿಂಗ್ ರೂಮ್‌ಗಳ ಬಳಕೆ, ಜೊತೆಗೆ ಸ್ಕೈಪ್, ವಾಟ್ಸಾಪ್, ಫೇಸ್‌ಬುಕ್ ಮೆಸೆಂಜರ್‌ನಂತಹ ಆಪ್‌ಗಳ ವಿಡಿಯೋ ಕಾಲಿಂಗ್ ಬಳಕೆ ಕೂಡ ಎಂದಿಗಿಂತ ಹೆಚ್ಚಿನ ಬಳಕೆ ಕಂಡಿತು.

ಲಾಕ್‌ಡೌನ್ ವರ್ಷದಲ್ಲಿ ಅತಿ ಹೆಚ್ಚು ಡೌನ್‌ಲೋಡ್ ಆದ ಆಪ್‌ಗಳಲ್ಲಿ ಝೂಮ್ ಹಾಗೂ ಗೂಗಲ್ ಮೀಟ್ ಇದ್ದು, ಝೂಮ್ ಕಳೆದ ಡಿಸೆಂಬರ್‌ನಲ್ಲಿ 1 ಕೋಟಿ ನಿತ್ಯ ಬಳಕೆದಾರರಿದ್ದು, ಎಪ್ರಿಲ್ ವೇಳೆಗೆ ೩೦ ಕೋಟಿಗೇರಿದೆ. ಅಪರೂಪಕ್ಕೊಮ್ಮೆ ಆನ್‌ಲೈನ್ ಮೀಟಿಂಗ್ ಕಾಣುತ್ತಿದ್ದ ಕಛೇರಿಗಳೂ, ವಿಡಿಯೋ ಕಾಲ್‌ಗಳನ್ನು ಕಾಣುತ್ತಿದ್ದ ಮನೆಗಳೂ ಬದಲಾದ ವಿದ್ಯಮಾನದಲ್ಲಿ ವಿಡಿಯೋ ಕಾಲಿಂಗ್‌ಅನ್ನು ಹೆಚ್ಚು ಬಳಸತೊಡಗಿದವು.

ಗ್ಯಾಜೆಟ್‌ಗಳ ವರ್ಚುವಲ್ ಲಾಂಚ್
ಎಲ್ಲವೂ ಆನ್‌ಲೈನ್‌ನಲ್ಲಿ ಆಗುತ್ತಿರುವ ಸಂದರ್ಭ, ಒಬ್ಬರ ನ್ನೊಬ್ಬರು ಭೇಟಿಯಾಗುವುದು, ಒಂದೆಡೆಯಿಂದ ಇನ್ನೊಂ
ದೆಡೆ ಹೋಗುವುದೂ ಕನಸಿನ ಮಾತಾಗಿ ಪರಿವರ್ತಿತವಾದ ಸಮಯದಲ್ಲಿ, ಎಲ್ಲರನ್ನು ಒಂದೆಡೆ ಸೇರಿಸಿದ ಗ್ಯಾಜೆಟ್‌ಗಳ ಹೊಸ ಅವತರಣಿಕೆಗಳ ಲಾಂಚ್‌ಗೆ ಕಂಪೆನಿಗಳು ವರ್ಚುವಲ್ ಲಾಂಚ್ ಮಾರ್ಗವನ್ನು ಕಂಡವು.

ನೋಕಿಯಾ, ಷೌಮಿ ಸ್ಯಾಮ್ಸಂಗ್, ವಿವೋ, ಒಪೋ, ಇತ್ಯಾದಿಯಿಂದ ತೊಡಗಿ ಎ ಕಂಪೆನಿಗಳಿಗೂ ಇದೊಂದೇ ದಾರಿ ಉಳಿದಿದ್ದ ರಿಂದ, ಗ್ರ್ಯಾಂಡ್ ಕಾರ್ಯಕ್ರಮಗಳ ಬದಲಿಗೆ ಅವುಗಳ ಆನ್‌ಲೈನ್ ಅವತರಣಿಕೆಗಳಿಗೇ ದಾರಿ ಯುಳಿದಿದ್ದು, ಕೆಲವೊಂದು ಈವೆಂಟ್‌ಗಳು ಗಮನ ಸೆಳೆದವು. ಅಕ್ಟೋಬರ್‌ನಲ್ಲಿ ೮ಟಿ ಲಾಂಚ್ ಮಾಡಿದ ವನ್‌ಪ್ಲಸ್ ಗ್ರಾಹಕರೇ ಪೋನನ್ನು ವರ್ಚುವಲ್ ಆಗಿ ಅನ್ಬಾಕ್ಸ್ ಮಾಡುವಂತೆ ಮಾಡಿದ್ದು ಗಮನಾರ್ಹ. ಆಪಲ್ ಕೂಡ ತನ್ನ ಐಫೋನ್ ರೇಂಜ್‌ನ 12ನೇ ಅವತರಣಿಕೆ ಹಾಗೂ, ವಾಚ್ 6, ಐಪ್ಯಾಡ್ ಏರ್ ಹೀಗೆ ಎಲ್ಲವುಗಳ ಹೊಸ ರೂಪಕ್ಕೂ ಆನ್ ಲೈನ್ ಲಾಂಚ್ ಮಾಡಿಸುವ ದಾರಿ ಕಂಡುಕೊಂಡದ್ದು ಪರಿಸ್ಥಿತಿಯ ಅನಿವಾರ್ಯತೆಯನ್ನು ಎತ್ತಿತೋರಿಸಿದರೂ, ಅದನ್ನು ಉತ್ತಮವಾಗಿ ಬಳಸಿ ಕೊಂಡದ್ದು ಗಮನ ಸೆಳೆಯಿತು.

ಡಿಜಿಟಲ್ ಪಾವತಿಗೆ ಹೆಚ್ಚಿದ ಒತ್ತು ಆನ್‌ಲೈನ್ ಪಾವತಿಗೆ ಹೆಚ್ಚು ಒತ್ತು ನೀಡುವ ಮೂಲಕ, ಸಾಮಾಜಿಕ ಅಂತರವನ್ನು ಕಾಪಾಡಿಕೊಂಡೇ ದೈನಂದಿನ ಜೀವನ ಮುಂದುವರಿಸಲು ದಾರಿ ಕಂಡುಕೊಂಡಿದ್ದರಿಂದಾಗಿ ವಿಶ್ವದೆಡೆ ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯಲು ದಾರಿ ಮಾಡಿಕೊಟ್ಟಿದೆ. ಅದರಲ್ಲೂ ಈ ಟ್ರೆಂಡ್ ಹೀಗೆ ಮುಂದುವರೆದು 2023ರ ವೇಳೆಗೆ  ಭಾರತದಲ್ಲಿ ಕಾಸಿನ ವ್ಯವಹಾರ ಕ್ಯಾಶಿನಿಂದ ಕಾರ್ಡ್ ಹಾಗೂ ಇತರೇ ಡಿಜಿಟಲ್ ರೂಪಕ್ಕೆ ಎಷ್ಟರ ಮಟ್ಟಿಗೆ ತಿರುಗಲಿದೆಯೆಂದರೆ, ಸುಮಾರು 20 ಲಕ್ಷ ಕೋಟಿಯಷ್ಟು ವ್ಯವಹಾರ ಸಂಪೂರ್ಣ ಡಿಜಿಟಲ್ ಆಗಲಿದೆ ಎನ್ನುವ ಭವಿಷ್ಯವಾಣಿಯನ್ನು ನುಡಿದಿzರೆ
ತಂತ್ರಜ್ಞಾನ ತಜ್ಞರು.

ಒಟಿಟಿ ಕ್ರಾಂತಿ
ಸಿನಿಮಾ ನೋಡಲು ಥಿಯೇಟರ್‌ಗೆ ಹೋಗುವವರನ್ನು ಮನೆಯಲ್ಲಿ ಕುಳ್ಳಿರಿಸಿದ, ಶೂಟಿಂಗ್ ಮಾಡಲು ಅಸಾಧ್ಯವೆನಿಸಿದ ವೇಳೆ ಹಳೇ ಎಪಿಸೋಡುಗಳನ್ನು ತೋರಿಸಲು ಶುರುವಿಟ್ಟುಕೊಂಡ ಮನರಂಜನಾ ಚ್ಯಾನಲ್ ಗಳನ್ನು ಬಿಟ್ಟು ಒಂದೆಡೆ ಸಿನಿಮಾ ಚ್ಯಾನಲ್‌ಗಳತ್ತ ಹೋದ ವೀಕ್ಷಕರ ಗಮನ ದೊಡ್ಡ ಮಟ್ಟಿನಲ್ಲಿ ಓಟಿಟಿಗಳ (ಅಂದರೆ ನೆಟ್ಲಿಕ್ಸ್, ಪ್ರೈಮ ವಿಡಿಯೋ, ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಇತ್ಯಾದಿ) ಕಡೆ ಮುಖ ಮಾಡುವಂತಾದ ವರ್ಷ 2020.

ಇನ್ನು ಕೆಲ ವರ್ಷಗಳಲ್ಲಿ ಮನೆಯೊಳಗೇ, ಅದರಲ್ಲೂ ಮೊಬೈಲ್‌ನ ಅಥವಾ ಅಂತಹಾ ಪುಟಾಣಿ ಸಾಧನಗಳನ್ನು ಬಳಸುವತ್ತ ಜನ ಜಾಸ್ತಿ ವಾಲುತ್ತಾರೆ ಎನ್ನುವ ಭವಿಷ್ಯವಾಣಿಯನ್ನು ನಿರೀಕ್ಷೆಗೂ ಹೆಚ್ಚಿನ ವೇಗದಲ್ಲಿ ನಿಜಗಾಣಿಸುವಂತೆ ಮಾಡಲು ಲಾಕ್‌ಡೌನ್ ಕಾರಣವಾಯಿತು. ದೊಡ್ಡ ದೊಡ್ಡ ಸ್ಟಾರ್‌ಗಳ ಚಿತ್ರಗಳಲ್ಲಿ ಹಲವು ಗ ಪೆಟ್ಟಿಗೆಯೊಳಗೇ ಉಳಿದುಕೊಂಡಿದ್ದರೆ, ಕೆಲವು ಈ ಓಟಿಟಿಗಳಲ್ಲಿ ಲಾಂಚ್ ಆಗಿ ಇನ್ನಷ್ಟು ಜನರನ್ನು ಸೆಳೆದಿದ್ದು ಏಪ್ರಿಲ್ ಒಂದೇ ತಿಂಗಳಲ್ಲಿ 50 ಲಕ್ಷ ಹೊಸ ಪೇಡ್ ಚಂದಾದಾರರನ್ನೂ ಸೇರಿಸಿ ಜುಲೈ ವೇಳೆಗೆ, ಅಂದರೆ ನಾಲ್ಕು ತಿಂಗಳಲ್ಲಿ 31 ಶೇಕಡಾ ಏರಿಕೆ ಕಾಣುವ ಮೂಲಕ 2.9 ಕೋಟಿ ಗೇರಿಸಿತು.

ಮುಂದಿನ ದಿನಗಳಲ್ಲಿ ಈ ರೀತಿ ಮನೆಯಲ್ಲೇ ಮನರಂಜನೆ ಒದಗಿಸುವ ಮೂಲಕ, ಆ ನಿಟ್ಟಿನಲ್ಲಿ ಆದಾಯವನ್ನೂ ಗಳಿಸುವ
ಮೂಲಕ, ಒಟಿಟಿ ಒಂದು ಕ್ರಾಂತಿಯನ್ನೇ ಮಾಡಲಿದೆ. ಇದಕ್ಕೆ ಲಾಕ್‌ಡೌನ್ ದಿನಗಳು ಉತ್ಕರ್ಷವನ್ನು ಒದಗಿಸಿಕೊಟ್ಟವು ಎಂಬುದು ಇತಿಹಾಸದಲ್ಲಿ ದಾಖಲಾಗಲಿದೆ.