Wednesday, 11th December 2024

ಗೂಗಲ್ ತಂದಿದೆ ಎರಡು ಮೊಬೈಲ್ !

ವಸಂತ ಜಿ.ಭಟ್‌

ಟೆಕ್‌ ಫ್ಯೂಚರ್‌

ಅಂತರ್ಜಾಲ ದೈತ್ಯ ಗೂಗಲ್ ಸಂಸ್ಥೆಯು ಈಗ ಎರಡು ಹೊಸ ಮೊಬೈಲ್‌ಗಳನ್ನು ಪರಿಚಯಿಸುತ್ತಿದೆ. ಇವುಗಳ ವಿಶೇಷವೆಂದರೆ ಉತ್ತಮ ಕ್ಯಾಮೆರಾ ಮತ್ತು ಇತ್ತೀಚೆಗಿನ ಅಂದ್ರೋಯಿಡ್ ಅವತರಣಿಕೆ.

ಗೂಗಲ್‌ನ ತಂತ್ರಾಂಶ ಕ್ಷೇತ್ರದ ಯಶಸ್ಸಿಗೆ ಹೋಲಿಸಿದರೆ ಯಂತ್ರಾಂಶಗಳಲ್ಲಿ ಗೆದ್ದಿದ್ದು ಬಹಳ ಕಡಿಮೆ. ಹಲವು ಬಾರಿ ಮೊಬೈಲ್, ಕನ್ನಡಕ, ಕೈ ಗಡಿಯಾರ ಮತ್ತಿತರ ಉಪಕರಣಗಳನ್ನು ಸಿದ್ಧಪಡಿಸಲು ಹೋಗಿ ಕೈ ಸುಟ್ಟುಕೊಂಡಿದೆ. ಇತ್ತೀಚಿನ ಕೆಲ ವರ್ಷಗಳಲ್ಲಿ ಅಷ್ಟೊಂದು ಲಾಭ ತಂದುಕೊಡದಿದ್ದರೂ ನಿಧಾನವಾಗಿ ಬಳಕೆದಾರನಿಗೆ ಇಷ್ಟವಾಗುತ್ತಿರುವ ಗೂಗಲ್ ಯಂತ್ರಾಂಶವೆಂದರೆ ಅದು ಪಿಕ್ಸೆಲ್ ಸರಣಿಯ ಮೊಬೈಲ್‌ಗಳು.

ನೋಡಲು ಆಕರ್ಷಕ ವಿನ್ಯಾಸ, ಮೂಲ ಸ್ವರೂಪದ ಅನ್ ದ್ರೋಯಿಡ್ ಆಪರೇಟಿಂಗ್ ಸಿಸ್ಟಮ್, ಎಲ್ಲಾ ಮೊಬೈಲ್ ಗಿಂತ ಮೊದಲು ಅಪ್ಡೇಟ್ ಪಡೆಯುವ ಹೆಚ್ಚುಗಾರಿಕೆ, ಇದೇ ವೈಷ್ಟ್ಯಶಿತೆಗಳನ್ನು ಹೊಂದಿರುವ ಸ್ಯಾಮ್ಸಂಗ್ ಅಥವಾ ಒನ್ ಪ್ಲಸ್ ಮೊಬೈಲ್‌ಗಳಿಗಿಂತ ಕಡಿಮೆ ಬೆಲೆ, ಇವೆಲ್ಲವೂ ವರ್ಷ ದಿಂದ ವರ್ಷಕ್ಕೆ ಗೂಗಲ್ ಪಿಕ್ಸೆಲ್ ಮೊಬೈಲ್‌ಗಳ ಮಾರಾಟವನ್ನು ಹೆಚ್ಚಿಸುತ್ತಾ ಹೋಗುತ್ತಿದೆ.

ಇದೇ ವರ್ಷದ ಆಗಸ್ಟ್ 20 ರಂದು ಭಾರತವನ್ನು ಪ್ರವೇಶಿಸಿದ ಗೂಗಲ್ ಪಿಕ್ಸೆಲ್ 4ಎ 5ಜಿ ಮತ್ತು ಸೆಪ್ಟೆಂಬರ್ 10 ರಂದು ಜಗತ್ತಿನಾ ದ್ಯಂತ (ಭಾರತವನ್ನು ಹೊರತು ಪಡಿಸಿ) ಬಿಡುಗಡೆಯಾದ ಗೂಗಲ್ ಪಿಕ್ಸೆಲ್ 5 ಈ ವರ್ಷ ಗೂಗಲ್ ಮಾರುಕಟ್ಟೆಗೆ ಬಿಡುತ್ತಿರುವ ಎರಡು ಮೊಬೈಲ್‌ಗಳು. ಸಾಮಾನ್ಯವಾಗಿ ಗೂಗಲ್ ಜಗತ್ತಿನ ಮುಂದುವರೆದ ದೇಶಗಳಲ್ಲಿ ತನ್ನ ಮೊಬೈಲ್‌ಗಳನ್ನು ಬಿಡುಗಡೆ ಮಾಡಿ ಬಳಕೆದಾರನ ಅಭಿಪ್ರಾಯವನ್ನು ಸಂಗ್ರಹಿಸಿ, ಅವಶ್ಯಕ ಎನ್ನಿಸುವಂತಹ ಬದಲಾವಣೆಗಳನ್ನು ಮಾಡಿ ನಂತರ ಭಾರತ ದಂತಹ ರಾಷ್ಟ್ರಗಳಲ್ಲಿ ಬಿಡುಗಡೆ ಮಾಡುತ್ತದೆ. ಬ್ರಾಂಡ್‌ಗಿಂತ ಬೆಲೆ ಮತ್ತು ವೈಶಿಷ್ಟ್ಯತೆಗಳಿಗೆ ಈ ದೇಶಗಳು ಪ್ರಾಮುಖ್ಯತೆ ಕೊಡು ವುದೇ ಇದಕ್ಕೆ ಮುಖ್ಯ ಕಾರಣ.

ಗೂಗಲ್ ಪಿಕ್ಸೆಲ್ 4 5ಜಿ ಮತ್ತು ಗೂಗಲ್ ಪಿಕ್ಸೆಲ್ 5 ಎರಡು ಸಹ 5 ಜಿ ಸೌಲಭ್ಯವನ್ನು ಹೊಂದಿರುವ ಮೊಬೈಲ್ಗಳು. ಸದ್ಯ 5ಜಿ ಲಭ್ಯವಿಲ್ಲದಿದ್ದರೂ, 5 ಜಿ ಲಭ್ಯವಿದ್ದಾಗ ಈ ಮೊಬೈಲ್‌ಗಳು ಆ ಸಿಗ್ನಲ್‌ಅನ್ನು ಬಳಸಿಕೊಂಡು ವೇಗದ ಅಂತರ್ಜಾಲದ ಅನುಭವ ವನ್ನು ನೀಡಬಹುದು. ಎರಡು ಮೊಬೈಲ್ ನಲ್ಲೂ ಬಳಕೆಯಾಗಿರುವ ಕ್ವಾಲ್ಕಾಮ್ ಸ್ನಾಪ್ ಡ್ರಾಗನ್ 765 ಜಿ ಚಿಪ್ ಈ ವೇಗದ ಅಂತರ್ಜಾಲಕ್ಕೆ ಅವಶ್ಯಕವಾದಂತಹ ಯಂತ್ರಾಂಶವನ್ನು ನೀಡುತ್ತದೆ. ಕ್ವಾಲ್ಕಾಮ್‌ನ ಇತರ ಸರಣಿಯ ಚಿಪ್‌ಗಳಿಗೆ ಹೋಲಿಸಿದರೆ ಇದು ಅಷ್ಟೊಂದು ವೇಗದ ಚಿಪ್ ಅಲ್ಲದಿದ್ದರೂ ಹೆಚ್ಚಿನ ಬಳಕೆದಾರರಿಗೆ ಅದು ಅನುಭವಕ್ಕೆ ಬರುವುದಿಲ್ಲ. ಎರಡೂ ಮೊಬೈಲ್ ಗಳ ಪರದೆಯು ಒಂದೇ ರೀತಿಯ ವಿನ್ಯಾಸವನ್ನು ಹೊಂದಿದ್ದು, ಪಿಕ್ಸೆಲ್ 5, 4ಎ 5ಜಿ ಗಿಂತಲೂ ಚಿಕ್ಕದಾದಂತಹ ಪರದೆಯನ್ನು ಹೊಂದಿದೆ. ಗೂಗಲ್ ಪಿಕ್ಸೆಲ್ 5ಜಿ 80 ಹೆರ್ಟ್ ವೇಗದಲ್ಲಿ ತನ್ನ ಪರದೆಯನ್ನು ರಿಫ್ರೆಶ್ ಮಾಡಿದರೆ 4ಎ 5ಜಿ 60 ಹೆರ್ಟ್ಜ್ ನ ಪರದೆ ರಿಫ್ರೆಶ್ ರೇಟ್ ಅನ್ನು ಹೊಂದಿದೆ. ಪರದೆಯ ರಿಫ್ರೆಶ್ ರೇಟ್ ಅಂದರೆ ಪ್ರತಿ ಕ್ಷಣಕ್ಕೆ ಪರದೆ ಎಷ್ಟು ಬಾರಿ ಹೊಸ ಚಿತ್ರಗಳನ್ನು ತೋರಿಸುವ ಶಕ್ತಿ ಹೊಂದಿದೆ ಎಂದರ್ಥ.

ಹೆಚ್ಚಿನ ರಿಫ್ರೆಶ್ ರೇಟ್ ಇರುವ ಮೊಬೈಲ್ ವೇಗದಿಂದ ಕಾರ್ಯ ನಿರ್ವಹಿಸುತ್ತದೆ. ಗೇಮಿಂಗ್ ಅಥವಾ ಹೆಚ್ ಡಿ ವೀಡಿಯೋ ಗಳನ್ನು ನೋಡುವವರಾಗಿದ್ದಾರೆ ಪಿಕ್ಸೆಲ್ 5 ಹೇಳಿ ಮಾಡಿಸಿದಂತಹ ಮೊಬೈಲ್. ಪಿಕ್ಸೆಲ್ 4 ಎ, 3885 ಎಂಹೆಚ್ ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದರೆ ಪಿಕ್ಸೆಲ್ 5, 4080 ಎಂಹೆಚ್ ನ ದೀರ್ಘ ಬ್ಯಾಟರಿಯನ್ನು ಹೊಂದಿದೆ. ಪಿಕ್ಸೆಲ್ 5 ತಂತಿ ರಹಿತ ಚಾಜಿಂಗ್ ಸೌಲಭ್ಯವನ್ನು ಹೊಂದಿದ್ದು ಪಿಕ್ಸೆಲ್ 4ಎ ನಲ್ಲಿ ಇದು ಲಭ್ಯವಿಲ್ಲ. ಪಿಕ್ಸೆಲ್ 5 ನ ವಿಶೇಷತೆಯೆಂದರೆ ಅದರಲ್ಲಿರುವ ತಂತಿ ರಹಿತ ರಿವರ್ಸ್ ಚಾಜಿಂಗ್‌ನಿಂದ, ಮೊಬೈಲ್ ನಲ್ಲಿರುವ ಚಾರ್ಜ್ ಮುಖಾಂತರ ಯಾವುದೇ ತಂತಿ ಇಲ್ಲದೆಯೇ ಇತರ ಉಪಕರಣಗಳನ್ನು ಚಾರ್ಜ್ ಮಾಡಬಹುದು.

ಉದಾಹರಣೆಗೆ ಗೂಗಲ್ ಈಯರ್ ಬಡ್ಸ್ ಅಥವಾ ಆಪಲ್ ಈಯರ್ ಫೋಡ್‌ಗಳನ್ನು ಪಿಕ್ಸೆಲ್ 5 ಜಿ ಮೊಬೈಲ್ ಮೂಲಕ ಚಾರ್ಜ್
ಮಾಡಬಹುದು. ಈ ಮೊಬೈಲ್‌ಗಳ ಆಂತರಿಕ ಸಂಗ್ರಹ 128 ಜಿಬಿ. ಪಿಕ್ಸೆಲ್ 5,8 ಜಿಬಿ ರಾಮ್ ಅನ್ನು ಹೊಂದಿದ್ದರೆ, 4ಎ 6 ಜಿಬಿ ರಾಮ್ ಅನ್ನು ಹೊಂದಿದೆ. ಪಿಕ್ಸೆಲ್ 5, ಐಪಿ ವಿ8 ದರ್ಜೆಯ ನೀರಿನ ರಕ್ಷಣೆಯನ್ನು ಹೊಂದಿದ್ದು ಪಿಕ್ಸೆಲ್ 4 ಎ ಯಾವುದೇ ನೀರಿನ ರಕ್ಷಣೆಯನ್ನು ಹೊಂದಿಲ್ಲ. ಇತ್ತೀಚಿನ ದಿನಗಳಲ್ಲಿ ಕಡಿಮೆ ಬೆಲೆಯ ಮೊಬೈಲ್ ಸಹ ಸ್ವಲ್ಪ ಹೊತ್ತು ನೀರಿನಿಂದ ರಕ್ಷಣೆ ಕೊಡು ತ್ತಿರುವಾಗ ಗೂಗಲ್ ಪಿಕ್ಸೆಲ್ 4ಎ ನಲ್ಲಿ ಯಾವುದೇ ರಕ್ಷಣೆ ನೀಡದಿರುವುದು ಕೆಲವು ಬಳಕೆದಾರರಿಗೆ ಇಷ್ಟವಾಗದೆ ಇರಬಹುದು.

ಈ ಮೊಬೈಲ್‌ಗಳು ಅನ್‌ದ್ರೋಯಿಡ್ 11 ಅನ್ನು ಹೊಂದಿರುವ ಮೊದಲ ಅನ್‌ದ್ರೋಯಿಡ್ ಮೊಬೈಲ್‌ಗಳಾಗಿವೆ. ಪಿಕ್ಸೆಲ್
5 ನಲ್ಲಿ ಹೆಡ್ ಫೋನ್ ಜಾಕ್ ಲಭ್ಯವಿಲ್ಲ, ಹಾಡುಗಳನ್ನು ಕೇಳಲು ಬ್ಲೂ ಟೂತ್ ಹೆಡ್ ಫೋನ್ ಗಳನ್ನು ಬಳಸುವುದು ಅನಿ
ವಾರ್ಯ. ಪಿಕ್ಸೆಲ್ 4 ಎ ಹೆಡ್ ಫೋನ್ ಜಾಕ್ ಅನ್ನು ಹೊಂದಿದೆ. ಪಿಕ್ಸೆಲ್ 5 ಅಲ್ಲಿ ಬಳಕೆಯಾಗಿರುವ ಎಲ್ಲಾ ಆಲ್ಯುಮೀನು
ಯಮ್, ಎಲೆಕ್ರ್ಟೋನಿಕ್ ತ್ಯಾಜ್ಯದಿಂದ ಹೊರತೆಗೆದು ಮರುಬಳಕೆಗೆ ಯೋಗ್ಯವಾದ ಅಲ್ಯೂಮಿನಿಯಂ ಆಗಿದೆ.

ಮೊದಲೇ ಹೇಳಿದಂತೆ ಮೊಬೈಲ್‌ಗಳು, ಗೂಗಲ್ ಸಂಸ್ಥೆಗೆ ಅಷ್ಟಾಗಿ ಲಾಭ ತಂದು ಕೊಡದಿದ್ದರೂ ಜಗತ್ತಿನ ಅರ್ಧಕ್ಕಿಂತಲೂ ಹೆಚ್ಚಿನ ಮೊಬೈಲ್‌ಗಳು ಕಾರ್ಯ ನಿರ್ವಹಿಸುವ ಅನ್‌ದ್ರೋಯಿಡ್ ಆಪರೇಟಿಂಗ್ ಸಿಸ್ಟಮ್ ಹೊಂದಿರುವ ಗೂಗಲ್ ತನ್ನದೇ ಸ್ವಂತ ಮೊಬೈಲ್ ಹೊಂದುವ ಉದ್ದೇಶದಿಂದ ಶುರುವಾದ ಪಿಕ್ಸೆಲ್ ಇಂದು ನಿಧಾನವಾಗಿ ಮುನ್ನಲೆಗೆ ಬರುತ್ತಿದೆ. ಭಾರತದಲ್ಲೂ ಹಂತ ಹಂತವಾಗಿ ತನ್ನ ಮಾರುಕಟ್ಟೆ ಪಾಲನ್ನು ಹೆಚ್ಚಿಸಿಕೊಳ್ಳುತ್ತಿರುವ ಗೂಗಲ್ ಪಿಕ್ಸೆಲ್, ಮುಂದೊಂದು ದಿನ ಯಶಸ್ಸನ್ನು ಪಡೆದೀತು.