Wednesday, 11th December 2024

ಗಜಲ್

* ಡಾ ಗೋವಿಂದ ಹೆಗಡೆ

ಸುರಂಗಕ್ಕೊೊಂದು ಕೊನೆಯಿದ್ದೇ ಇದೆ ನಂಬಿಕೆ ಇರಲಿ
ಕತ್ತಲ ಕೊನೆಯಲ್ಲಿ ಬೆಳಕಿದ್ದೇ ಇದೆ ನಂಬಿಕೆ ಇರಲಿ

ಹೆಜ್ಜೆೆ ಹೆಜ್ಜೆೆಗೆ ಮುಳ್ಳುಗಳ ಬಿತ್ತುತ್ತ ನಡೆದರೇ ಅವರು
ಇರಿವ ಮೊನೆಗಳಿಗೆ ಸೋಲಿದ್ದೇ ಇದೆ ನಂಬಿಕೆ ಇರಲಿ

ಎದೆಗಳ ನಡುವೆ ಕಂದಕವನ್ನು ತೋಡುವವರು ಎಷ್ಟು
ಸೇತುವೆ ಕಟ್ಟುವ ಕೈಗೆ ಗೆಲುವಿದ್ದೇ ಇದೆ ನಂಬಿಕೆ ಇರಲಿ

ಬಣ್ಣದ ವೇಷಗಳು ಎಷ್ಟೊೊಂದು ಮೆರೆಯುತ್ತಿವೆ ಇಲ್ಲಿ
ನಿಜವು ಬಯಲಾಗುವ ಕ್ಷಣವಿದ್ದೇ ಇದೆ ನಂಬಿಕೆ ಇರಲಿ

ಎದೆಯ ಹಾಡ ನುಡಿಸುವಾಗ ತಪ್ಪುುವುದೇಕೆ ತಾಳ
ಕೊನೆಗೂ ಒಲವಿಗೆ ಜಯವಿದ್ದೇ ಇದೆ ನಂಬಿಕೆ ಇರಲಿ
(ಪ್ರತಿ ಎರಡು ಲೈನ್‌ಗೆ ಸ್ಪೇಸ್)