Saturday, 14th December 2024

ಮಾತೊಂದು ಸಂಕೇತ

* ಸಿ ವಿ ಶೇಷಾದ್ರಿ ಹೊಳವನಹಳ್ಳಿ 9449305402

ಯಾರ ಜೊತೆಗೇ ಆಗಲಿ ಮಾತಾಡಿ ಮಾತಾಡಿ.
ನಂಟು ಬಿಚ್ಚಿಿ ಗಂಟು ಬಿಚ್ಚಿಿ, ಬಾಗಿಲು ತೆರೆದು ಕಣ್ತೆೆರೆದು. ತೇಲುತಿರುವ ನಗುವಿನ ನೋವಿನಾಳ ಗೊತ್ತಾಾಗಲು, ಬೀಸಿ ಬಚ್ಚಿಿಟ್ಟುಕೊಂಡ ಗಾಳಿಯ ಜ್ವಾಾಲಾ ಜಂಜಾಟ ಜಗಜ್ಜಾಾಹೀರಾಗಲು. ದುಃಖವಿರಲಿ, ಸಂತಸವಿರಲಿ. ಮಾತಾಡಿ.
ದುಃಖವಿದ್ದರೆ ನೆಂದ ಮಾತುಗಳಿಗೆ ತೂಕ ಜಾಸ್ತಿಿ. ಸಂತಸವಿದ್ದರೆ ಆಡಿದ ಮಾತುಗಳನು ಕೈಗೆ ಎತ್ತಿಿಕೊಳ್ಳಬಹುದು. ಇನ್ನೊೊಬ್ಬರ ಕೈ ಮೇಲೆ ಬಿಡಬಹುದು. ಹರಿದು ಹೋಗಿಬಿಡಲಿ ಅಥವಾ ಅಲ್ಲೇ ಹಿಂಗಲಿ ತೆಗೆದು ಬಿಡಿ ಬಾಯಿ. ಕಣ್ಣಲ್ಲಿ ಕಣ್ಣಿಿಟ್ಟು ಮಾತಾಡಿ. ಸಂದೇಹಗಳ ಸಾಗರದಲಿ ಸೂರ್ಯೋೋದಯವಾಗಲಿ.

ಕೊಟ್ಟಿಿದ್ದು ಕರಗುವುದು. ಪಡೆದಿದ್ದು ಒಡೆಯುವುದು. ಆಡಿದ್ದು ಉಳಿಯುವುದು. ಮಾತಾಡಿ ಮಾತಾಡಿ.
ಗಾಡಿ ತಪ್ಪಿಿಸಿಕೊಳ್ಳಲಿ. ಸಾಮಾನು ಕಳುವಾಗಿ ಕೈ ಖಾಲಿಯಾಗಲಿ. ಅವರವರ ಹುಚ್ಚು ಅವರವರಿಗಿರಲಿ. ನೋವಿನ ವಿನಿಮಯಕ್ಕೊೊಂದು ದಾರಿ ಬೇಕು. ಕಲ್ಲೆೆಸೆಸಿಕೊಂಡು ಸಹಿಸಿ ಸಹಿಸಿ ನಾಲಗೆ ಕಳೆದುಕೊಂಡ, ಒಳಗೊಳಗೆ ಹಲ್ಲು ಕಚ್ಚಿಿ ಹಲ್ಲು ಕಳೆದುಕೊಂಡ, ಅಸಹಾಯಕತೆ ಮಾತು ಕಳೆದುಕೊಂಡು ಕೂತಿದೆ. ಮಾತಾಡಿ ಮಾತಾಡಿ.

ಸಾಂಕ್ರಾಾಮಿಕ ರೋಗ ಊರಿಗೆ ಬಂದಾಗ, ಊರು ಬಿಡುವಾಗ, ಲಗೇಜು ತಲೆ ಮೇಲಿಡಿಸಿಕೊಳ್ಳಲು ಯಾರನ್ನಾಾದರೂ ಕೂಗಬೇಡವೇ..? ಈಗ ಮಾತಾಡಲಿಲ್ಲವೆಂದರೆ ಯಾವಾಗ ಮಾತಾಡುವಿರಿ..? ನಿಮ್ಮ ಬಾಗಿಲಿಗೆ ಬೆಂಕಿಯಿಟ್ಟಾಾಗಲೇ..? ಪಕ್ಕದ ಮನೆ ನಾಯಿ ನಿಮ್ಮ ಚಪ್ಪಲಿ ಕಚ್ಚಿಿಕೊಂಡು ಹೋದಾಗಲೇ..? ಊರೆಲ್ಲ ಕೊಳ್ಳೆೆ ಹೊಡೆದ ಮೇಲೆ ಮಾತಾಡುತ್ತೀರಾ..? ಮನೆಗೆಲ್ಲ ಕೊಳ್ಳಿಿ ಇಟ್ಟ ಮೇಲೆ ಮಾತಾಡುತ್ತೀರಾ..?

ಸಾಮಾನಿಗೆ ದುಡ್ಡು ಖರ್ಚಾಗುತ್ತದೆ. ಸತ್ಯಕ್ಕೆೆ ಮಾತು ಖರ್ಚಾಗುತ್ತದೆ. ಚಿಣ್ಣಿಿಯಾಡಿದರೆ ಹೋಗುವುದು ಕಣ್ಣು. ಗೋಲಿಯಾಡಿದರೆ ಬಿಡಬೇಕು ಗೇಣು. ಮಾತಾಡಿದರೆ ಬಿಡಬೇಕು ಏನು..? ಮಾತೇ ಸಂಬಂಧ ಚೆನ್ನಾಾಗಿ ಬೈಯಿರಿ. ಮಾತೇ ಶ್ರೀಗಂಧ ಚೆನ್ನಾಾಗಿ ತೇಯಿರಿ. ಮಾತೇ ಆಸ್ತಿಿ. ಎಸೆದಷ್ಟೂ ಗಳಿಸಿರಿ.

ಬೆಂಕಿ ನಂದಿಸುವ ನೀರು, ಹೂವ ಬಾಡಿಸದ ನಾರು, ತೃಪ್ತಿಿಯ ತೇರು. ಮಾಡಿರಿ ಶುರು. ಬರುವರು ಒಬ್ಬೊೊಬ್ಬರೆ.
ಮಾತೇ ಮನೆ. ತೊಳೆದಷ್ಟೂ ಹೊಳೆಯುವುದು. ಮಾತೇ ಗೊನೆ. ಗಿಡವನೆ ಬಾಗಿಸುವುದು. ಮಾತಲಿದೆ ಎದುರಾಳಿಯ ಧಾಳಿ. ಭರವಸೆಯ ಬೇಲಿ. ಮಾತು ಎಲ್ಲ ನೆಲದ ನೋವು. ಅದು ಎಲ್ಲ ಬಿಲದ ಹಾವು. ಮುಳ್ಳಿಿನ ಗಿಡದ ಗೂಡುಗಳಲಿ ಮರಿ ಮಾಡುವ ಕಾವು. ವಿಷ ಸರ್ಪಗಳ ಸೋಲಿಸಿದ ಗಂಧದ ಗೆಲುವು.
ಮಾತೊಂದು ಸಂಕೇತ. ಅಲ್ಲಿದೆ ಹೃದಯ ಹೃದಯಗಳ ಶುಶ್ರೂಷೆ. ಮಾತೊಂದು ಸಂಗೀತ. ಅಲ್ಲಿದೆ ಲಿಪಿಯಿರುವ ಇಲ್ಲದ ವಿಶ್ವ ಭಾಷೆ.