Friday, 13th December 2024

ಬುಕ್ ರ್ಯಾಕ್

ಬ್ಲೂ ಹೈವೇಸ್
ವಿಲಿಯಂ ಲೀಸ್‌ಟ್‌ ಅಮೆರಿಕದಾದ್ಯಂತ ಸಂಚರಿಸಿದ ಪ್ರವಾಸಕಥನವೇ ‘ಬ್ಲೂ ಹೈವೇಸ್- ಎ ಜರ್ನಿ ಇಂಟು ಅಮೆರಿಕಾ’. ಅಮೆರಿಕ ದೊಡ್ಡ ದೇಶ. ಇಲ್ಲಿನ ವಿವಿಧ ರಾಜ್ಯಗಳ ಅಂತರಂಗ ವಿಭಿನ್ನ. ಒಂದೊಂದೇ ರಾಜ್ಯದಲ್ಲಿ ಬೇರೆ ಬೇರೆ ಮಾಧ್ಯಮಗಳ ಮೂಲಕ ಸಂಚರಿಸುತ್ತಾಾ, ಅಲ್ಲಿನ ಒಳನಾಡಿನ ಊರುಗಳಲ್ಲಿ ತಂಗುತ್ತಾ, ವಿಶೇಷ ಎನಿಸುವ ಅನುಭವವನ್ನು ಹೊಂದಿದ ಲೇಖಕರು, ಅವುಗಳನ್ನು ಅಕ್ಷರ ರೂಪದಲ್ಲಿ ಹಿಡಿದಿರುವ ರೀತಿ ವಿಶಿಷ್ಟ ಎನಿಸುತ್ತದೆ. ಸ್ಥಳೀಯ ಜನರೊಂದಿಗೆ ಒಡನಾಡುತ್ತಾ, ಅವರ ಒಳತೋಟಿಗಳನ್ನು ಗ್ರಹಿಸಿ, ತಮ್ಮ ಅನುಭವಗಳ ಮೂಲಕ ಈ ಪುಸ್ತಕದಲ್ಲಿ ದಾಖಲಿಸಿದ್ದಾರೆ.