Friday, 13th December 2024

ಮಯೂರಿ ಪಟೇಲ್

ವೃತ್ತಿಯ ಜವಾಬ್ದಾಾರಿಯನ್ನು ನಿಭಾಯಿಸುತ್ತಲೇ, ಪ್ರವಾಸವನ್ನೂ ಮಾಡುತ್ತಾ, ಅದರ ಅನುಭವವನ್ನು ಜನಪ್ರಿಿಯ ಬ್ಲಾಾಗ್‌ಗಳಲ್ಲೂ ದಾಖಲಿಸುತ್ತಿರುವ ಮಯೂರಿ ಪಟೇಲ್ ವಿಶಿಷ್ಟ ರೀತಿಯ ಪ್ರವಾಸಿಗರು. ಸಾಹಸಮಯ ಪ್ರವಾಸ ಮತ್ತು ವೃತ್ತಿಯ ನಡುವೆ ಅಪೂರ್ವ ಸಮನ್ವಯ ಸಾಧಿಸಿರುವ ಮಯೂರಿ ಪಟೇಲ್, 2011ರಿಂದ ಬ್ಲಾಾಗ್ ಬರೆಯುತ್ತಿದ್ದಾರೆ. ರಾಜಸ್ಥಾಾನದಿಂದ ಪ್ರವಾಸ ಆರಂಭಿಸಿದ ಮಯೂರಿ ಅವರಿಗೆ ಪರ್ವಗಳಲ್ಲಿ ಪಯಣಿಸುವುದು ಎಂದರೆ ಬಹಳ ಇಷ್ಟ. ಭಾರತದಾದ್ಯಂತ ಮತ್ತು ವಿದೇಶಗಳಲ್ಲೂ ಪ್ರವಾಸ ಮಾಡಿದ್ದಾಾರೆ. ಪ್ರವಾಸದಲ್ಲಿ ತುಸು ಫ್ಲೆೆಕ್ಸಿಿಬಿಲಿಟಿ ಇರಬೇಕು ಎನ್ನುವ ಮಯೂರಿ, ಪ್ರವಾಸದ ವಿವರಗಳನ್ನು ಬದಲಿಸುತ್ತಾಾ ಪಯಣಿಸಿದರೆ ಮಜಾ ಜಾಸ್ತಿಿ ಎನ್ನುತ್ತಾಾರೆ.