Saturday, 14th December 2024

ಊಟಿಯಲ್ಲಿ ಕರ್ನಾಟಕದ ಛಾಪು

*ಡಾ. ಉಮಾಮಹೇಶ್ವರಿ ಎನ್

ಊಟಿಗೂ ಮೈಸೂರಿಗೂ ಬಹು ಹಿಂದಿನಿಂದಲೂ ಅವಿನಾಭಾವ ಸಂಬಂಧ. ಹಿಂದೆ ಮೈಸೂರು ಅರಸರ ಆಳ್ವಿಕೆಗೆ ಒಳಪಟ್ಟಿದ್ದ ಊಟಿ ಪ್ರದೇಶದಲ್ಲಿ, ಇಂದಿಗೂ ಹಲವು ಸ್ಥಳಗಳು, ಕಟ್ಟಡಗಳು ಕರ್ನಾಟಕದ ನಂಟು ಹೊಂದಿವೆ. ಅಂತಹವುಗಳಲ್ಲಿ ಒಂದು ಫರ್ನ್‌ಹಿಲ್ ಅರಮನೆ.

ತಮಿಳುನಾಡಿನ ಊಟಿ ಸ್ವರ್ಗಸಮಾನ ಪ್ರಕೃತಿಸೌಂದರ್ಯ ಹೊಂದಿರುವ ಗಿರಿಧಾಮ. ಬ್ರಿಿಟಿಷರ ಕಾಲದಲ್ಲಿ ಬೇಸಿಗೆಯ ವಿರಾಮ ತಾಣವಾಗಿದ್ದ ಈ ಜಾಗದಲ್ಲಿ ಕರ್ನಾಟಕಕ್ಕೆೆ ಸಂಬಂಧಿಸಿದ ಎರಡು ಆಕರ್ಷಕ ತಾಣಗಳನ್ನು ಈ ಬಾರಿ ವೀಕ್ಷಿಸಿದೆ. ಮೊದಲನೆಯದು ಮೈಸೂರಿನ ರಾಜಕುಟುಂಬದ ಸುಪರ್ದಿಯಲ್ಲಿರುವ ಫರ್ನ್ ಹಿಲ್ ಅರಮನೆ, ಈಗ ಒಂದು ತಾರಾ ಹೋಟೆಲ್. ಎರಡನೆಯದು ಅದರ ಬಗಲಲ್ಲೇ ಇರುವ ಕರ್ನಾಟಕ ಸಿರಿ ಹಾರ್ಟಿಕಲ್ಚರ್ ಉದ್ಯಾಾನವನ.

ಫರ್ನ್ ಹಿಲ್ ಅರಮನೆ
ಫರ್ನ್ ಹಿಲ್ ಎಂಬುದು ನೀಲಗಿರಿಬೆಟ್ಟಗಳ ಮಧ್ಯದಲ್ಲಿರುವ ಒಂದು ಬೆಟ್ಟದ ಹೆಸರು. ಇಲ್ಲಿ 1844 ರಲ್ಲಿ ಬ್ರಿಿಟಿಷರಿಂದ ಬಂಗಲೆಯಂತೆ ನಿರ್ಮಾಣಗೊಂಡ ಫರ್ನ್‌ಹಿಲ್ ಅರಮನೆ 1860ರ ವರೆಗೆ ಬೇರೆ ಬೇರೆ ಮಾಲೀಕರ ಸುಪರ್ದಿಯಲ್ಲಿತ್ತು. 1860 ರಿಂದ ಕೆಲವು ಸಮಯ ಊಟಿಯ ಪ್ರಸಿದ್ಧ ಕ್ಲಬ್ ಆಗಿ ಮಾರ್ಪಟ್ಟಿಿತ್ತು. ಮದ್ರಾಾಸಿನಲ್ಲಿ ಕೆಲಸ ಮಾಡುತ್ತಿಿದ್ದ ಬ್ರಿಿಟಿಷರು ಬೇಸಿಗೆಯ ಸೆಕೆಯಿಂದ ತಪ್ಪಿಿಸಿಕೊಳ್ಳಲು ಇಲ್ಲಿ ಬಂದು ವಾಸ್ತವ್ಯ ಹೂಡುತ್ತಿಿದ್ದರು. ಕಾಲಕ್ರಮೇಣ ಇದು ಮೈಸೂರು ಅರಸರ ಕುಟುಂಬಕ್ಕೆೆ ಹಸ್ತಾಾಂತರವಾಯಿತು. ಈಗಲೂ ಅವರ ಕುಟುಂಬದ ಸೊತ್ತಾಾಗಿದೆ.

ಸುಮಾರು 50 ಎಕರೆಗಳಷ್ಟು ವಿಶಾಲವಾದ ಸ್ಥಳದಲ್ಲಿರುವ ಈ ಜಾಗದ ಪ್ರಾಾಚೀನ ಮಹಲಿನ ಸುತ್ತ ಇರುವ ಹುಲ್ಲುಹಾಸು, ಮರಗಿಡಗಳು, ಇಳಿಜಾರಿನಲ್ಲಿ ಕಾಣಿಸುವ ಕಾಡುಗಳು, ಚಹಾ ತೋಟಗಳು ದೂರದಿಂದ ಕಾಣಿಸುವ ಗುಡ್ಡಬೆಟ್ಟಗಳು ಎಲ್ಲವೂ ಸುಂದರ. ಇಳಿಜಾರಾದ ಛಾವಣಿಯನ್ನು ಹೊಂದಿದ ಅರಮನೆಯ ಒಳಗೆ ಇರುವ ಪೀಠೋಪಕರಣಗಳೆಲ್ಲವೂ ಪುರಾತನವಾಗಿದ್ದು ಅತೀವ ಸೌಂದರ್ಯದಿಂದ ಕಂಗೊಳಿಸುತ್ತಿಿವೆ. ಕಾಫಿ ಕುಡಿಯಲೆಂದು ರೆಸ್ಟೋೋರೆಂಟ್ ಇರುವ ಕೊಠಡಿಯಲ್ಲಿ ಕುಳಿತು ಒಳಗಿನ ನೋಟಗಳನ್ನೆೆಲ್ಲ ಕಣ್ತುಂಬಿಕೊಂಡು ಮುಂದಿನ ವರ್ಷದ ರಜೆಯಲ್ಲಿ ಅಲ್ಲೇ ಒಂದು ದಿನವಾದರೂ ವಾಸ್ತವ್ಯ ಹೂಡಬೇಕೆಂದು ಆಸೆ ಹೊಂದಿದ್ದು ಸುಳ್ಳಲ್ಲ. ಕಾಡುಕೋಣ, ಕಾಡೆಮ್ಮೆೆಗಳು ಇಲ್ಲಿ ಸಂಚರಿಸುವುದರಿಂದ ಹೊರಗೆ ಓಡಾಡುವಾಗ ಜಾಗ್ರತೆಯಾಗಿರಬೇಕೆಂದು ಫಲಕ ಇತ್ತು.

ಕರ್ನಾಟಕ ಸಿರಿ ಉದ್ಯಾಾನ
1964ರಲ್ಲಿ ಮೈಸೂರಿನ ಅರಸರು ಕರ್ನಾಟಕ ಸರಕಾರಕ್ಕೆೆ ಹಸ್ತಾಾಂತರಿಸಿದ ಜಾಗದಲ್ಲಿ ಕರ್ನಾಟಕ ತೋಟಗಾರಿಕಾ ಇಲಾಖೆಯ ಕೈಚಳಕದಿಂದ ಅತಿ ಸುಂದರವಾದ ಉದ್ಯಾಾನ ಫರ್ನ್ ಹಿಲ್ ಪ್ರದೇಶದಲ್ಲಿ ತಲೆ ಎತ್ತಿಿದೆ. 38 ಎಕರೆ ವಿಸ್ತಾಾರವಾದ ಪ್ರದೇಶದಲ್ಲಿ ನಿರ್ಮಿಸಿರುವ ಉದ್ಯಾಾನದ ಒಂದು ಭಾಗ ಸಾರ್ವಜನಿಕ ವೀಕ್ಷಣೆಗೆ ಕಳೆದ ವರ್ಷ ಲಭ್ಯವಾಯಿತು. ಬೆಟ್ಟದ ಇಳಿಜಾರಿನ ಮೇಲ್ಭಾಾಗದಲ್ಲಿರುವ ಉದ್ಯಾಾನವು ತನ್ನದೇ ಆಕರ್ಷಣೆಗಳನ್ನು ಹೊಂದಿದೆ. ಇಳಿಜಾರಿನ ಕೆಳಭಾಗದಲ್ಲಿ ಇನ್ನೂ ಕೆಲಸಕಾರ್ಯಗಳು ಪೂರ್ಣಗೊಂಡಿಲ್ಲ. ವೀಕ್ಷಕರು ಹತ್ತಿಿ ನಡೆದಾಡಬಹುದಂತಹ ತೂಗುಸೇತುವೆ ಹಾಗೂ ನೀರಿನ ಕಾರಂಜಿ ಜಲಾಶಯಗಳ ನಿರ್ಮಾಣ ಇನ್ನೂ ನಡೆಯುತ್ತಿಿವೆ.

ಈಗ ವೀಕ್ಷಣೆಗೆ ಸಿಗುವ ಮೊದಲ ವಿಭಾಗ ಟೋಪಿಯರಿ ಉದ್ಯಾಾನವನ. ಗಿಡಗಳನ್ನು ವಿವಿಧ ವಿಧಗಳಲ್ಲಿ ಕತ್ತರಿಸಿ ಆಕರ್ಷಕ ರೂಪ ನೀಡಿ ಬೆಳೆಸಿರುವ ಉದ್ಯಾಾನವೇ ಇದು. ಬೃಹದಾಕಾರದ ಜೋಡಿ ನವಿಲು ಹಾಗೂ ಟೆಡ್ಡಿಿ ಬೇರ್‌ಗಳ ಹಸುರು ರೂಪಗಳು ಎಲ್ಲರನ್ನೂ ಸೆಳೆಯುತ್ತಿಿದ್ದವು. ಮೇಲಿರುವ ಬಕೆಟಿನಿಂದ ಕೆಳಗೆ ಸುರಿಯುತ್ತಿಿರುವ ವರ್ಣರಂಜಿತ ಜಲಧಾರೆಯಂತೆ ಜೋಡಿಸಿದ ಹೂಗಿಡಗಳು ಇನ್ನೊೊಂದೆಡೆ. ಇಟಾಲಿಯನ್ ಗಾರ್ಡನ್, ಆಂಫಿಥಿಯೇಟರ್, ಗ್ಲಾಾಸ್‌ಹೌಸ್‌ನ ಒಳಗಿರುವ ಗಿಡಗಳು, ಚಕ್ರವ್ಯೂೆಹದ ರೀತಿಯಲ್ಲಿ ಬೆಳೆಸಿರುವ ಗಿಡಗಳ ಮಧ್ಯದಲ್ಲಿ ಆಡುವ ಅವಕಾಶ, ಚಹಾ ತೋಟದ ಸೌಂದರ್ಯ, ಗುಲಾಬಿ ತೋಟ. ಉದ್ಯಾಾನವನದಲ್ಲಿ ಏನೆಲ್ಲ ಕಂಡು ಖುಷಿ ಪಡಬಹುದೋ ಅವೆಲ್ಲವೂ ಇದ್ದವು. ಜೊತೆಗೆ ಗಿಡಗಳನ್ನು ಬೆಳೆಸಿ ವೀಕ್ಷಕರಿಗೆ ಕೊಡುವ ನರ್ಸರಿಯೂ ಸಾಕಷ್ಟು ದೊಡ್ಡದಾಗಿತ್ತು. ಮೂವತ್ತು ರೂಪಾಯಿಗಳ ಪ್ರವೇಶ ಶುಲ್ಕ. ಕ್ಯಾಾಮೆರಾ ಶುಲ್ಕ ಪ್ರತ್ಯೇಕ. ಎಷ್ಟು ಸುತ್ತಿಿದರೂ ನೋಡಿಮುಗಿಯದ ಸೌಂದರ್ಯ ಹೊಂದಿದ ಈ ಜಾಗದಲ್ಲಿ ಜನದಟ್ಟಣೆ ಕಡಿಮೆ. ಇದೇ ಆವರಣದಲ್ಲಿ ಕರ್ನಾಟಕ ಸರಕಾರದ ‘ಮಯೂರ ಸುದರ್ಶನ’ ಎಂಬ ತಂಗುದಾಣವೂ ಇದೆ.

ಬೇಸಗೆಯಲ್ಲೂ ತಂಪು ಪ್ರದೇಶ
ಫರ್ನ್‌ಹಿಲ್ ಅರಮನೆಯು ಕೆಲವು ಕಾಲ ಮೈಸೂರು ಅರಸರ ಬೇಸಿಗೆ ತಂಗುದಾಣವೂ ಆಗಿತ್ತು. ಆದರೆ ಇದನ್ನು ಹೆಚ್ಚು ಬಳಸಿಕೊಂಡವರು ಬ್ರಿಿಟಿಷರು. ಮದರಾಸಿನ ಸೆಕೆಯ ಬೇಗೆಗೆ ಅವರು ಕಂಡು ಕೊಂಡ ಪರಿಹಾರವೇ ಊಟಿ, ಕೊಡೈಕೆನಾಲ್ ಮೊದಲಾದ ಬೆಟ್ಟಗಳು. ಬಿರು ಬೇಸಗೆಯಲ್ಲೂ ಈ ಪ್ರದೇಶ ಸಾಕಷ್ಟು ತಂಪಾಗಿ, ವಾಯುಮಾಲಿನ್ಯರಹಿತವಾಗಿರುತ್ತದೆ. ಫರ್ನ್‌ಹಿಲ್ ಅರಮನೆಯು ಸ್ವಿಿಸ್ ಷಾಲೆಯನ್ನು ಹೋಲುತ್ತದೆ ಮತ್ತು ಸುತ್ತಲಿನ ಸೂಜಿಪರ್ಣ ಕಾಡಿನಿಂದಾಗಿ ಅಲ್ಪೈನ್ ನೋಟವನ್ನು ಹೊಂದಿದೆ. ಐವತ್ತು ಚದರ ಎಕರೆ ಹಸಿರು ಹಾಸಿನ ನಡುವೆ ಇರುವ ಈ ಅರಮನೆಯಿಂದ ಕಾಣುವ ಸುತ್ತಲಿನ ಪ್ರಕೃತಿ ದೃಶ್ಯ ಸುಂದರ, ಮೋಹಕ. ಕ್ಯಾಾಪ್ಟನ್ ಎಫ್. ಕಾಟನ್ ಎಂಬಾತ ಮೊದಲಿಗೆ 1844ರಲ್ಲಿ ನಿರ್ಮಿಸಿದ ಬಂಗೆಲೆಯು ಕ್ರಮೇಣ ವಿಸ್ತರಣೆಗೊಂಡು ಅರಮನೆಯು ಸ್ವರೂಪ ಪಡೆಯಿತು. ಇಂದು ಇಲ್ಲಿ ಐಷಾರಾಮಿ ಹೋಟೆಲ್ ಕಾರ್ಯನಿರ್ವಹಿಸುತ್ತಿಿದೆ.