ಶಿವಲಿಂಗವೊಂದು ಪ್ರತಿ ದಿನ ಮೂರು ಬಾರಿ ಬಣ್ಣ ಬದಲಿಸುತ್ತದೆ ಎಂದರೆ ನಿಮಗೆ ಅಚ್ಚರಿಯೆ? ನಿಜ, ಹಂಪೆಯ ವಿರೂಪಾಕ್ಷ ದೇಗುಲದಲ್ಲಿರುವ ಲಿಂಗವು ಅಂತಹ ವೈಶಿಷ್ಟ್ಯ ಹೊಂದಿದೆ. ಉತ್ತರ ಕರ್ನಾಟಕದ ಈ ಭಾಗದ ಜನರಿಗೆ ಇಂದಿಗೂ ಯಾತ್ರಾಾ ಸ್ಥಳವಾಗಿರುವ ಹಂಪೆಯ ವಿರೂಪಾಕ್ಷನು ಪಂಪಾಪತಿ ಎಂದೇ ಪ್ರಸಿದ್ಧ. ವಿಶ್ವ ಪರಂಪರೆ ತಾಣದ ಭಾಗವಾಗಿರುವ ಈ ದೇಗುಲವು ಪುರಾತನ ಕಾಲದಿಂದಲೇ ಇಲ್ಲಿತ್ತು ಎಂದು ತಿಳಿಯಲಾಗಿದ್ದು, 15ನೆಯ ಶತಮಾನದಲ್ಲಿ ವಿಜಯನಗರ ಅರಸರು ಬಹುವಾಗಿ ಅಭಿವೃದ್ಧಿಿಪಡಿಸಿದರು. ವಿರೂಪಾಕ್ಷ ದೇಗುಲವು ತುಂಗಾ ನದಿಯ ಪಕ್ಕದಲ್ಲಿದ್ದು, ಇಂದಿಗೂ ಸಾಕಷ್ಟು ಸುಸ್ಥಿಿತಿಯಲ್ಲಿದೆ. ಇಲ್ಲಿನ ಗೋಪುರಗಳು, ಶಿಲಾ ಮಂಟಪ, ಕೆತ್ತನೆ ಹೊಂದಿದ ಕಲ್ಲಿನ ಸ್ಥಂಭಗಳು, ಅಡುಗೆ ಮನೆಯಲ್ಲಿ ಲಭ್ಯವಿರುವ ನೀರಿನ ಕಾಲುವೆಗಳು ಹೆಸರುವಾಸಿ ಎನಿಸಿವೆ.