ಜಿ.ನಾಗೇಂದ್ರ ಕಾವೂರು
ಫಿಲಡೆಲ್ಫಿಯಾ ನಗರದಲ್ಲಿ ಅಮೆರಿಕದ ಸ್ವಾತಂತ್ರ್ಯ ಘೋಷಣೆಯಾಗಿತ್ತು. ಆ ನಗರದ ಪ್ರವಾಸ ಅವಿಸ್ಮರಣೀಯ.
ವಿಶ್ವದ ದೊಡ್ಡಣ್ಣ ಎಂದೇ ಕರೆಯಲ್ಪಡುವ ಅಮೆರಿಕಾ ಸಂಯುಕ್ತ ಸಂಸ್ಥಾನ ದಲ್ಲಿ ಪ್ರವಾಸ ಮಾಡಬೇಕೆನ್ನುವ ಹಂಬಲ ಬಹಳಷ್ಟು ಜನರಿಗಿರುತ್ತದೆ. ಅಮೆರಿಕದ ೫೦ ರಾಜ್ಯಗಳ ಪೈಕಿ ಒಂದೆರಡನ್ನಾದರೂ ನೋಡಿದರೆ ಜನ್ಮ ಸಾರ್ಥಕವಾಗುತ್ತದೆನ್ನುವ ಆಸೆಯಿರುತ್ತದೆ. ನನ್ನ ಹಿರಿಯ ಮಗ ರಾಜೇಂದ್ರ ಆಚಾರ್ಯ ಉದ್ಯೋಗ ನಿಮಿತ್ತ ಅಮೆರಿಕದಲ್ಲಿದ್ದ ಸಮಯದಲ್ಲಿ ೪೫ ದಿನಗಳ
ಪ್ರವಾಸದಲ್ಲಿ ೧೪ ರಾಜ್ಯಗಳಲ್ಲಿ ಪ್ರವಾಸ ಮಾಡುವ ಅವಕಾಶ ದೊರಕಿತ್ತು. ವಾಷಿಂಗ್ಟನ್ ಡಿ.ಸಿ. ನೋಡಿದ ನಂತರ ನಮ್ಮ ಪ್ರಯಾಣ ಫಿಲಡೆಲಿಯಾ ನಗರದ ಕಡೆ ಸಾಗಿತು.
ಫಿಲಡೆಲಿಯಾ ನಗರ ಪೆನ್ಸಿಲ್ವೇನಿಯಾದ ಅತಿ ದೊಡ್ಡ ನಗರ ಹಾಗೂ ಅಮೆರಿ ಕಾದ ಆರನೇ ಅತಿದೊಡ್ಡ ನಗರ. ಜಗತ್ತಿನ ಅತಿದೊಡ್ಡ ಸಿಹಿನೀರಿನ ಬಂದರು ಹಾಗೂ ಅತ್ಯಂತ ಜನ ನಿಬಿಡ ಬಂದರಾಗಿದ್ದು ಕೈಗಾರಿಕಾ ಉತ್ಪಾದ ನೆಯು ಕೈಗಾರಿಕಾ ಕ್ರಾಂತಿಯಲ್ಲಿ ಆರಂಕ ನಾಯಕತ್ವವನ್ನು ಪ್ರತಿನಿಧಿಸುತ್ತದೆ. ಈ ನಗರದಲ್ಲಿ ಹಲವು ಇತರೆ ಆಕರ್ಷಣೆಗಳಿದ್ದರೂ ಪ್ರವಾಸಿಗರು ಐತಿಹಾಸಿಕ ಪ್ರಾಮುಖ್ಯತೆಯ ಇಂಡಿಪೆಂಡೆನ್ಸ್ ಹಾಲ್ ಹಾಗೂ ಲಿಬರ್ಟಿ ಬೆಲ್ ವೀಕ್ಷಿಸಲು ಮರೆಯುವುದಿಲ್ಲ.
ಇಂಡಿಪೆಂಡೆನ್ಸ್ ಹಾಲ್
೧೭೩೨-೧೭೫೩ ರ ನಡುವೆ ಕೆಂಪು ಇಟ್ಟಿಗೆಗಳನ್ನು ಬಳಸಿ ನಿರ್ಮಿಸಲಾದ ಐತಿಹಾಸಿಕ ನಾಗರಿಕ ಕಟ್ಟಡ ಇಂಡಿಪೆಂಡೆನ್ಸ್ ಹಾಲ್. ವಿಶ್ವ ಪರಂಪರೆಯ ತಾಣವೆಂದು ಗುರುತಿಸಲಾಗಿರುವ ಈ ಕಟ್ಟಡವನ್ನು ಜಾರ್ಜಿ ಯನ್ ಶೈಲಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಎತ್ತರವಾದ ಚೂಪು ಗೋಪುರ ಹಾಗೂ ಬೆಲ್ ಟವರ್‌ನ್ನು ಹೊಂದಿರುವ ಕಟ್ಟಡವು ತಳಭಾಗದಿಂದ ಚೂಪು ಗೋಪುರದ ತುದಿವರೆಗೆ ೧೬೮ ಅಡಿ ಎತ್ತರವಿದ್ದು, ನೋಡುಗರಲ್ಲಿ ಅಚ್ಚರಿ ಮೂಡಿಸುತ್ತದೆ.
೧೭೭೬ ರಲ್ಲಿ ಯುನೈಟೆಡ್ ಸ್ಟೇಟ್ಸ ನ ಸ್ವಾತಂತ್ರ್ಯ ಘೋಷಣೆ ಹಾಗೂ ಸಂವಿ ಧಾನದ ಕರುಡನ್ನು ರಚಿಸಲು ಮತ್ತು ಸಹಿ ಮಾಡಲಾದ ಕೇಂದ್ರವೆಂಬ ಖ್ಯಾತಿ ಪಡೆದ ಇಂಡಿಪೆಂಡೆನ್ಸ್ ಹಾಲ್ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ.
ಸ್ವಾತಂತ್ರ್ಯ ಘೋಷಣೆಗೆ ಅಮೆರಿಕದ ೫೬ ಸಂಸ್ಥಾಪಕ ಪಿತಾಮಹರು ಸಹಿ ಮಾಡಿರುವುದು ಗಮನಾರ್ಹ ಸಂಗತಿಯಾಗಿದೆ. ಇಂಡಿಪೆಂಡೆನ್ಸ್ ಹಾಲ್ ಕಟ್ಟಡದಲ್ಲಿ ಸಂಯುಕ್ತ ರಾಜ್ಯಗಳ ಪ್ರಥಮ ಉಚ್ಛ ನ್ಯಾಯಾಲಯ ಕಾರ್ಯನಿರ್ವಹಿಸಿತು. ಅಂದು ನ್ಯಾಯಾಲಯದಲ್ಲಿ ಉಪಯೋಗಿಸಲಾದ ಪೀಠೋಪಕರಣಗಳು, ಲೇಖನಿ, ಪುಸ್ತಗಳನ್ನು ಇಂದಿಗೂ ಅದೇ ಸ್ಥಿತಿಯಲ್ಲಿ ಕಾಪಿಡಲಾಗಿದೆ. ವೀಕ್ಷಕರಿಗೆ ಮುಕ್ತಪ್ರವೇಶವನ್ನು ಕಲ್ಪಿಸಲಾಗಿದ್ದು ಸ್ವಯಂಪ್ರೇರಿತ ಗೈಡ್ ಗಳು ವಿವರಗಳನ್ನು ನೀಡುತ್ತಾರೆ.
ಲಿಬರ್ಟಿ ಬೆಲ್
ಯುನೆಸ್ಕೋ ರಾಷ್ಟ್ರೀಯ ಸ್ಮಾರಕವಾದ ನ್ಯಾಷನಲ್ ಹಿಸ್ಟಾರಿಕ್ ಪಾಕ್ ನಲ್ಲಿ ಪ್ರದರ್ಶನ ಕ್ಕಿಡಲಾಗಿರುವ ಲಿಬರ್ಟಿ ಬೆಲ್ ಅಮೆರಿಕನ್ ಸ್ವಾತಂತ್ರ್ಯದ ಸಾಂಪ್ರದಾಯಿಕ ಚಿಹ್ನೆ ಯಾಗಿದೆ.
೧೭೫೨ ರಲ್ಲಿ ಕಂಚು ಲೋಹದಿಂದ ತಯಾರಿಸಲಾದ ೪ ಅಡಿ ಎತ್ತರ, ೧೨ ಅಡಿಗಳ ಸುತ್ತಳತೆಯ ಈ ಗಂಟೆಯ ತೂಕ ೯೪೦ ಕೆ.ಜಿ.ಬೆಲ್ಲನ್ನು ಸ್ಥಾಪಿಸಿದ ಆರಂಕ ವರ್ಷಗಳಲ್ಲಿ ಶಾಸಕರನ್ನು ಅಧಿವೇಶನ ಗಳಿಗೆ ಕರೆಯಲು, ಸಾರ್ವಜನಿಕ ಸಭೆಗಳು ಹಾಗೂ ಘೋಷಣೆ ಗಳ ಬಗ್ಗೆ ನಾಗರಿಕರನ್ನು ಎಚ್ಚರಿಸಲು ಈ ಗಂಟೆಯನ್ನು ಬಾರಿಸುವ ಪರಿಪಾಠ ವಿತ್ತಂತೆ.
ಇದು ‘Pಟ್ಚ್ಝZಜಿಞ ಔಐಆಉS Seಟ್ಠಜeಟ್ಠಠಿ Z ಠಿeಛಿ ಔZb ಠಿಟ Z ಠಿeಛಿ ಐeZಚಿಜಿಠಿZಠಿo Seಛ್ಟಿಛಿಟ್ಛ‘ ಎಂಬ ಸಂದೇಶ ವನ್ನೊಳಗೊಂಡಿದೆ. ಸ್ಥಾಪಿಸಿದ ಆರಂಕ ದಿನಗಳಲ್ಲಿ ಗಂಟೆಯನ್ನು ಬಾರಿಸುವಾಗ ಬಿರುಕು ಬಿಟ್ಟಿದ್ದು ಎರಡು ಬಾರಿ ಎರಕ ಹೊಯ್ಯಲಾಗಿತ್ತಂತೆ. ವಿಶಿಷ್ಟವಾಗಿ ಬಿರುಕು ಬಿಟ್ಟಿರುವ ಲಿಬರ್ಟಿ ಬೆಲ್‌ನ್ನು ೧೮೫೦- ೧೯೭೬ ರವರೆಗೂ ಇಂಡಿಪೆಂಡೆನ್ಸ್ ಹಾಲ್ ಕಟ್ಟಡದ ನೆಲ ಅಂತಸ್ತಿನಲ್ಲಿ ಪ್ರದರ್ಶಕ್ಕೆ ಇಡಲಾಗಿತ್ತು. ವೀಕ್ಷಕರ ಅನುಕೂಲಕ್ಕಾಗಿ ಪ್ರಸ್ತುತ ಲಿಬರ್ಟಿ ಬೆಲ್ ಸೆಂಟರ್‌ನ ರಸ್ತೆಗೆ ಅಡ್ಡಲಾಗಿ ಪ್ರದರ್ಶನಕ್ಕಿಡ ಅಲಾಗಿದೆ.
ಆಕರ್ಷಕ ಕುದುರೆ ಗಾಡಿಗಳು
ಫಿಲಡೆಲ್ಫಿಯಾ ದಲ್ಲಿ ಕುದುರೆ ಗಾಡಿಗಳು ಸಾಕಷ್ಟಿವೆ. ವಿಶಿಷ್ಟ ವಿನ್ಯಾಸದ ಉಡುಪುಗಳನ್ನು ದರಿಸಿರುವ ಮಹಿಳೆಯರು ಕುದುರೆ ಗಾಡಿಗಳನ್ನು ಓಡಿಸುತ್ತಾರೆ. ಗಾಡಿಗಳನ್ನು ಓಡಿಸಲು ಉಪಯೋಗಿಸುವ ಕುದುರೆಗಳು ದಷ್ಟಪುಷ್ಟವಾಗಿದ್ದು, ನಮ್ಮಲ್ಲಿರುವ ಕುದುರೆಗಳಿಗಿಂತಲೂ ಹೆಚ್ಚು ಎತ್ತರವಾಗಿರುತ್ತವೆ. ಆಕರ್ಷಕ ವಿನ್ಯಾಸದ ನಾಲಕ್ಕು ಗಾಲಿಗಳ ಕುದುರೆ ಗಾಡಿಯಲ್ಲಿ ಪ್ರಯಾಣಿ ಸುತ್ತಾ ನಗರದ ಸೌಂದರ್ಯವನ್ನು, ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಿ ಆನಂದಿಸಬಹುದು.
ಫಿಲಡೆಲ್ಫಿಯಾದ ಕುದುರೆ ಗಾಡಿಯ ಪ್ರಯಾಣ ಸದಾಕಾಲ ನೆನಪಿನಲ್ಲಿ ಉಳಿಯುತ್ತದೆ. ಹಿಸ್ಟಾರಿಕಲ್ ಟೂರ್ಸ್, ವಾಕಿಂಗ್ ಟೂರ್ಸ್ , ಸಿಟಿ ಟೂರ್ಸ್, ಕಲ್ಚರಲ್ ಟೂರ್ಸ್ ಹೀಗೆ ಫಿಲಡೆಲಿಯಾವನ್ನು ವೀಕ್ಷಿಸಲು ಹಲವು ಬಗೆಯ ಟೂರ್ ಪ್ಯಾಕೇಜ್ ಗಳು ಲಭ್ಯವಿದ್ದು, ಪ್ರವಾಸಿಗರು ತಮ್ಮ ಅನುಕೂಲಕ್ಕೆ ತಕ್ಕಂತ ಪ್ರವಾಸವನ್ನು ಆಯ್ಕೆ ಮಾಡಿಕೊಂಡು ನಗರವನ್ನು ವೀಕ್ಷಿಸಬಹುದು.
ಹಾಪ್ ಆನ್ ಹಾಫ್ ಆಫ್ ಬಸ್
ಮಿತವ್ಯಯದಲ್ಲಿ ನಗರವನ್ನು ವೀಕ್ಷಿಸಬಯಸುವ ಪ್ರವಾಸಿಗರಿಗೆಂದೇ ಮೀಸಲಾದ ಹಾಪ್ ಆನ್- ಹಾಫ್ ಆಫ್ ಬಸ್ ಪ್ರಯಾಣದ
ಟಿಕೆಟ್ ಖರೀದಿಸಿ ಪ್ರವಾಸಿ ತಾಣಗಳನ್ನು ವೀಕ್ಷಿಸಬಹುದು. ಬಸ್ಸಿನಲ್ಲಿ ನೀಡುವ ಪ್ರವಾಸಿ ತಾಣಗಳ ಪಟ್ಟಿಯನ್ನು ಅನುಸರಿಸಿ ನಾವು ನೋಡ ಬೇಕಾದ ಪ್ರವಾಸಿ ತಾಣದ ನಿಲುಗಡೆಯಲ್ಲಿ ಇಳಿದು, ವೀಕ್ಷಿಸಿದ ನಂತರ ಬರುವ ಮತ್ತೊಂದು ಬಸ್ಸನ್ನು ಹಿಡಿದು ಮುಂದಿನ ಪ್ರವಾಸಿ ತಾಣದ ನಿಲುಗಡೆಯಲ್ಲಿ ಇಳಿಯಬಹುದು. ಒಮ್ಮೆ ಟಿಕೆಟ್ ಖರೀದಿಸಿದರೆ ಸಾಕು ಬೆಳಿಗ್ಗೆಯಿಂದ ಸಂಜೆ ವರೆಗೂ ಇಡೀ ದಿನ ನಗರವನ್ನು ವೀಕ್ಷಿಸಬಹುದು.
ಪ್ರಪಂಚದ ಹಲವು ಪ್ರಮುಖ ಭಾಷೆಗಳ ಆಡಿಯೋ ಗೈಡ್ ವ್ಯವಸ್ಥೆಯನ್ನು ಪ್ರತೀ ಸೀಟಿನ ಹಿಂಭಾಗದಲ್ಲಿ ಅಳವಡಿಸಲಾಗಿದ್ದು, ನಮಗೆ ಬೇಕಾದ ಭಾಷೆಯನ್ನು ಆರಿಸಿಕೊಂಡು, ಬಸ್ಸಿನ ಉಚಿತವಾಗಿ ನೀಡಲಾಗುವ ಇಯರ್ ಫೋನ್ ಬಳಸಿ ಪ್ರವಾಸಿ ತಾಣಗಳ ವಿವರಗಳನ್ನು ತಿಳಿದುಕೊಳ್ಳಬಹುದು.