*ಅಕ್ಷಯ್ ಕುಮಾರ್ ಪಲ್ಲಮಜಲು
ಪ್ರತಿಯೊಂದು ಹೆಣ್ಣು ತನ್ನ ಜೀವನದಲ್ಲಿ ಬೆಟ್ಟದಷ್ಟು ಆಸೆಗಳನ್ನು ಇಟ್ಟುಕೊಂಡಿರುತ್ತಾಾಳೆ. ಅಪ್ಪ ಅಮ್ಮ, ಬಂಧುಬಳಗ ಎಲ್ಲರ ಜೊತೆಗೆ ಪ್ರೀತಿಯಿಂದ ಮತ್ತು ತಾಳ್ಮೆೆಯಿಂದ ನಡೆದುಕೊಳ್ಳುವ ಜೀವ ಹೆಣ್ಣು ಮಾತ್ರ. ಏಕೆಂದರೆ ಅವಳು ಮಾತೃರೂಪಿಣಿ. ಜಗತ್ತಿಿನಲ್ಲಿ ಹೆಣ್ಣಿಿಗೆ ನೀಡುವ ಗೌರವ ಅಗಾಧ. ಪ್ರತಿ ಮನೆಯಲ್ಲೂ ಹೆಣ್ಣು ಎಂಬ ಜೀವ ಇದ್ದಾಾಗ ಮಾತ್ರ ಆ ಮನೆ ಪರಿಪೂರ್ಣ ಕುಟುಂಬ. ಕೇವಲ ಅಡುಗೆ ಅಥವ ನಮ್ಮ ಸೇವೆ ಮಾಡಲು ಮಾತ್ರವಲ್ಲ, ನಮ್ಮ ಜೀವಕ್ಕೆೆ ಜೀವ ಕೊಡುವ, ಪ್ರತಿದಿನ ಪ್ರತಿ ಕ್ಷಣ ನಮ್ಮಗಾಗಿ ಕಾಯುವ ಜೀವ ಒಂದು ಇದ್ದರೆ ಅದು ಹೆಣ್ಣು ಮಾತ್ರ.
ಹೆತ್ತವರು ಬಯಸುವುದು ತನ್ನ ಮಗಳು ಒಂದು ಒಳ್ಳೆೆಯ ಕಡೆ ಮದುವೆಯಾಗಿ, ಸುಖದಿಂದ ಬಾಳಲಿ ಎಂದು. ಆ ಹೆಣ್ಣು ಮಗಳು ಸಹ ಅದನ್ನೇ ಬಯಸುತ್ತಾಾಳೆ. ಹೆಣ್ಣಿಿನ ಜೀವನದಲ್ಲಿ ಒಂದು ಪ್ರಮುಖ ಘಟ್ಟ ಮದುವೆ. ಅನೇಕರು ತಾನು ಇಷ್ಟಪಟ್ಟವರ ಜೊತೆಗೆ ಮದುವೆಯಾಗಿ ಜೀವನ ನಡೆಸುತ್ತಾಾರೆ. ಇನ್ನೂ ಕೆಲವು ಹೆಣ್ಣು ಮಕ್ಕಳು ಹೊಸದಾಗಿ ಪರಿಚಯವಾದ ಗಂಡನ ಜೊತೆಗೆ ಸಂಸಾರ ನಡೆಸುತ್ತಾಾರೆ. ಹಾಗೆಂದ ಮಾತ್ರಕ್ಕೆೆ ಪ್ರೀತಿಸಿ ಮದುವೆಯಾದ ಎಲ್ಲ ಸಂಸಾರಗಳೂ ಸರಿ ಇದೆ ಎಂದಲ್ಲ. ಗುರುತು ಪರಿಚಯವಿಲ್ಲದ ವ್ಯಕ್ತಿಿಯ ಜೊತೆಗೆ ಮದುವೆಯಾದ ಎಲ್ಲ ಸಂಸಾರಗಳು ಏನೂ ಕೆಟ್ಟು ಹೋಗಿದೆ ಎಂದಲ್ಲ. ಆದರೆ ಕೇಲವೊಂದು ಆಯ್ಕೆೆಯಲ್ಲಿ ತಪ್ಪುುಗಳು ಇರುತ್ತಾಾದೆ. ಹಿರಿಯ ಮಾತಿನಂತೆ ನಮ್ಮ ಹಣೆಬರಹದಲ್ಲಿ ಯಾರು ಎಂದು ನಿಶ್ಚಯವಾಗಿತ್ತಾಾದೆ ಅವರೇ ಸಿಗುತ್ತಾಾರೆ.
ಅದೊಂದು ದಿನ ಆ ಹೆಣ್ಣಿಿನ ಮದುವೆ ನಿಶ್ಚಿಿಯವಾಗಿತ್ತು. ವಯಸ್ಸು 18 ತುಂಬಿತ್ತಷ್ಟೆೆ. ಮನೆಯಲ್ಲಿ ಸಂಭ್ರಮದ ವಾತಾವರಣ. ಹುಡುಗ ತುಂಬಾ ಒಳ್ಳೆೆಯವ. ಮದುವೆ ನಡೆಸಿಕೊಡಬೇಕಾದ ತಾಯಿಗೆ ನಡೆಯಲು ಸಾಧ್ಯವಿಲ್ಲದ ಸ್ಥಿಿತಿ. ಜವಾಬ್ದಾಾರಿಯನ್ನು ನಿಭಾಯಿಸಬೇಕಾದ ತಂದೆಯೇ ಇಲ್ಲ. ಆ ತಾಯಿಗೆ ಎಂಟು ಜನ ಮಕ್ಕಳು. ನಾಲ್ಕು ಮಕ್ಕಳಿಗೆ ಮದುವೆ ಮಾಡುವ ಹೊತ್ತಿಿಗೆ ಆ ತಾಯಿಗೆ ಸಾಕಾಯಿತು. ಉಳಿದವರು ಎರಡು ಗಂಡು, ಎರಡು ಹೆಣ್ಣು, ಈ ಎರಡು ಗಂಡು ಮಕ್ಕಳಲ್ಲಿ ಒಬ್ಬ ಮಾನಸಿಕ ಅಸ್ವಸ್ಥ , ಅವರೆಲ್ಲ ಹೊಣೆಯನ್ನು ಉಳಿದ ಇನ್ನೊೊಬ್ಬ ಕಿರಿಯ ಮಗ ನೋಡಿಕೊಳ್ಳಬೇಕಿತ್ತು. ಎಂಟು ಮಂದಿಯಲ್ಲಿ ದೊಡ್ಡ ಮಗ ವಿಪರೀತ್ತ ಕುಡಿತ, ಮನೆಗೆ ಬರುತ್ತಿಿರಲಿಲ್ಲ. ಎರಡು ತಂಗಿಯರ ಜೀವನವನ್ನು ಈ ಕಿರಿಯ ಅಣ್ಣನೇ ನಿಭಾಯಿಸಬೇಕಿತ್ತು. ಮೊದಲ ತಂಗಿಯ ಮದುವೆಯ ನಿಶ್ಚಯವಾಗಿತ್ತು. ಎಲ್ಲರೂ ಸಂಭ್ರಮದಿಂದ ಇದ್ದರು. ನೆಂಟರು, ಬಂಧುಗಳು ಎಲ್ಲರೂ ಈ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಹುಡುಗಿಯ ಅಣ್ಣನಿಗೆ ಸಹಾಯಕರಾಗಿ ಅಕ್ಕಂದಿರ ಗಂಡದಿರು ಇದ್ದರು. ಮದುವೆ ತುಂಬಾ ಚೆನ್ನಾಾಗಿಯೇ ನಡೆಯಿತು.
ಮದುವೆಯಾಗಿ ಸುಖ ಸಂಸಾರವನ್ನು ನಡೆಸುವ ಹೊತ್ತಿಿಗೆ ಅತ್ತೆೆ ಮನೆಯ ವ್ಯಥೆ ಶುರುವಾಗಿತ್ತು. ಆದರೆ ಅವಳ ಗಂಡ ಎಂದಿಗೂ ಅವಳನ್ನು ಕೈ ಬಿಡಲಿಲ್ಲ. ಆಸ್ತಿಿಯ ಜಗಳ ಇನ್ನೊೊಂದು ಕಡೆ. ಮದುವೆಯಾಗಿ ಎಂಟು ವರ್ಷವಾದರು ಒಂದು ಮಗುವನ್ನು ಹೆತ್ತಿಿಲ್ಲ ಎಂಬ ಅವಮಾನ. ಅವಳ ಜೀವನ ಕಣ್ಣೀರಿನಿಂದ ತುಂಬಿತು. ಗಂಡನ ಮನೆಯ ಕಿರಿಕಿರಿ ಮಾತ್ರವಲ್ಲ ತಾಯಿ ಸಂಬಂಧಿಕರ ಚುಚ್ಚು ಮಾತುಗಳು. ಎಲ್ಲ ಹೆಣ್ಣಿಿಗೂ ಆಸೆ ಇರುತ್ತದೆ. ನಾನು ತಾಯಿ ಆಗಬೇಕು. ನನಗೂ ಒಂದು ಕರುಳ ಕುಡಿಬೇಕು ಎಂದು. ಆದರೆ ಆ ದೇವರ ಅವಳಿಗೆ ಆ ಭಾಗ್ಯವನ್ನು ಕರುಣಿಸಲಿಲ್ಲ. ಇದ್ದ-ಬದ್ದ ದೇವರನ್ನು ಅರ್ಚಸಿ ಪೂಜಿಸಿ ಆಯಿತು. ಅದೇ ತಲೆ ನೋವಿನಲ್ಲಿ ನೊಂದಳು.
ಹೊರಗೆ ನಡೆಯುವ ಯಾವ ಕಾರ್ಯಕ್ರಮಕ್ಕೂ ಹೋಗದಂತೆ ಮಾಡಿತು ಈ ಬಂಜೆತನ. ಮದುವೆಯ ಹಾದಿಯಾಲಿ ಸುಂದರ ಬದಕನ್ನು ಕಟ್ಟಬೇಕಾದ ಆ ಹೆಣ್ಣು, ಜೀವನ ಪೂರ್ತಿ ಕೊರಗುವಂತೆ ಆಯಿತು. ಒಂದು ಕಡೆ ಮಕ್ಕಳಿಲ್ಲ ಎಂಬ ನೋವು, ಇನ್ನೊೊಂದು ಕಡೆಯಲಿ ದೇಹಕ್ಕೆೆ ತಗಲಿದ ರೋಗ. ಗಂಡ ದುಡಿಯುವನಾದರೂ, ಬಂದ ಎಲ್ಲಾಾ ಆದಾಯ ತನ್ನ ರೋಗಕ್ಕೆೆ ಖರ್ಚು ಆಗುತ್ತಿಿತ್ತು. ಇದರ ನಡುವೆ ಮಕ್ಕಳಿಲ್ಲ ಎಂಬ ಚುಚ್ಚು ಮಾತುಗಳು. ಎಲ್ಲವನ್ನು ತಡೆದುಕೊಳ್ಳುವ ಶಕ್ತಿಿ ಅವಳಲ್ಲಿ ಇರಲಿಲ್ಲ. ಜೀವ ಹೋಗುವ ಕಾಲ ಬಂದಿತ್ತು. ಗಂಡ ಮಾಡುವಷ್ಟು ಸೇವೆಯನ್ನು ಮಾಡಿದ ಕೊನೆಗೆ ಅವನಿಗೂ ಸಾಕಾಯಿತು. ಒಂದು ದಿನ ಆ ಹೆಣ್ಣು ಜೀವ ದೇಹವನ್ನು ತೊರೆಯಿತು, ನೋವಿನಿಂದಲೇ ವಿದಾಯ.
ಮಾಂಗಲ್ಯ ಕಟ್ಟಿಿಸಿಕೊಂಡ ಕೈಯಿಂದಲೇ ಕೊಳ್ಳಿಿ ಇಡಿಸಿಕೊಳ್ಳುವ ಪರಿಸ್ಥಿಿತಿ ಬಂತು. ಆಕೆ ಮುತ್ತೈದೆ ಆಗಿ ಸತ್ತಳು. ಮಕ್ಕಳ ಜೊತೆಗೆ, ಗಂಡನ ಜೊತೆಗೆ ಬದುಕಿ ಬಾಳಬೇಕಾದ ಆ ಜೀವ ಈ ಭೂಮಿಯ ಋಣ ಮುಗಿಸಿ ನಿಶ್ಶಬ್ದವಾಗಿ ಹೊರಟು ಹೋದಳು, ಕಾಣದ ಇನ್ನೊೊಂದು ಲೋಕಕ್ಕೆೆ.